ಭೀಕರ ರಸ್ತೆ ಅಪಘಾತ, ಸ್ಥಳದಲ್ಲಿಯೇ ಕೊನೆಯುಸಿರೆಳೆದ 37 ವರ್ಷದ ಖ್ಯಾತ ಗಾಯಕ

ಮನುಷ್ಯನ ಬದುಕು ನೀರಿನ ಮೇಲಿನ ಗುಳ್ಳೆಯಂತೆ .. ಹಗ್ಗದ ಮೇಲಿನ ನಡಿಗೆಯಂತೆ .. ಯಾವಾಗ ಇಲ್ಲಿ ಏನಾಗುತ್ತೆ ಎಂದು ಹೇಳುವುದು ಕಷ್ಟ. ಇವತ್ತು ಇದ್ದಂಗೆ ನಾಳೆ ಇರಲ್ಲ. ಈಗಿದ್ದಂಗೆ.. ಇನ್ನೆರಡು ಸೆಕೆಂಡ್‌ನಲ್ಲಿ ಇರಲ್ಲ. ಅಂಥಾ ಮಾಯಾಜಾಲ ಈ ಬದುಕು. ಮನುಷ್ಯ ಯಾವಾಗ ಜನ್ಮ ಪಡೆಯಬಹುದು ಎಂದು ಹೇಳಬಹುದು. ಆದರೆ ಮನುಷ್ಯನ ಅಂತ್ಯ ಹೇಗೆ ಆಗುತ್ತೆ ಎಂದು ಹೇಳುವುದು ಅಸಾಧ್ಯ.

ಸಾವು ಯಾರನ್ನು ಹೇಳಿ ಕೇಳಿ ಬರುವುದಿಲ್ಲ. ಈ ಸಾವಿಗೆ ಲಿಂಗ, ಜಾತಿ, ಧರ್ಮದ ಭೇದ ಭಾವ ಕೂಡ ಇಲ್ಲ. ಸಾವು ಯಾವಾಗ ಬೇಕಾದರೂ ಯಾರನ್ನ ಬೇಕಾದರು ಕರೆಯಬಹುದು. ಇದಕ್ಕೆ ಹರ್ಮನ್ ಸಿಧು ಅವರ ಅಕಾಲಿಕ ನಿಧನ ಮತ್ತೊಂದು ಉದಾಹರಣೆ.

shock-punjabi-star-harman-sidhu-dies-at-37-in-devastating-road-crash

ಹೌದು, ಹರ್ಮನ್ ಸಿಧು.. ಪಂಜಾಬ್‌ನ ಜನಪ್ರಿಯ ಗಾಯಕ. ಮಿಸ್ ಪೂಜಾ ಜೊತೆ ಇವರು ಹಾಡಿದ್ದ "ಪೇಪರ್ ಜಾ ಪ್ಯಾರ್ " ವ್ಯಾಪಕ ಜನಮನ್ನಣೆಗೆ ಪಾತ್ರವಾಗಿತ್ತು.

''ಕೋಯಿ ಚಕ್ಕರ್ ನಾಯ್''.. ''ಬೇಬೆ ಬಾಪು".. ''ಬಬ್ಬರ್ ಶೇರ್''.. ''ಮುಲ್ತಾನ್ VS ರಷ್ಯಾ''.. ''ಮೇಲಾ''.."ಖೇತಿ".. "ಮೊಬೈಲ್‌".."ಪೈ ಗಯಾ ಪ್ಯಾರ್''..''ಸಾರಿ ರಾತ್ ಪರ್ಹದಿ''.. ''ಥಾಕೆವನ್ ಜತ್ತನ್ ಡಾ''.. ''ಪಿಂಡ್''..

ಹೀಗೆ ಹಲವು ಹಾಡುಗಳ ಮೂಲಕ ಪಂಜಾಬ್ ಎಲ್ಲೆಡೆ ಮನೆ ಮಾತಾಗಿದ್ದ ಹರ್ಮನ್ ಮಾನ್ಸಾದಿಂದ ತಮ್ಮ ಸ್ವಗ್ರಾಮ ಖಿಯಾಲಾನತ್ತ ಪ್ರಯಾಣ ಮಾಡುತ್ತಿದ್ದರು.

shock-punjabi-star-harman-sidhu-dies-at-37-in-devastating-road-crash

ಆದರೆ. ಮಾರ್ಗ ಮಧ್ಯದಲ್ಲಿ ವಿಧಿ ಹೊಂಚು ಹಾಕಿ ಕುಂತಿತ್ತು. ಮಾನ್ಸಾ-ಪಟಿಯಾಲಾ ರಸ್ತೆಯಲ್ಲಿ ಬರುತ್ತಿದ್ದಾಗ ಹರ್ಮನ್ ಅವರ ಕಾರು ಟ್ರಕ್ ಗೆ ಡಿಕ್ಕಿ ಹೊಡೆಯಿತು. ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿ ಹೋಗಿತ್ತು. ಹರ್ಮನ್ ಪ್ರಾಣ ಪಕ್ಷಿ ಸ್ಥಳದಲ್ಲಿಯೇ ಹಾರಿ ಹೋಯ್ತು.

ಹರ್ಮನ್ ಸಿಧು ಅವರ ಈ ಅಕಾಲಿಕ ನಿಧನದಿಂದ ಪಂಜಾಬ್ ಚಿತ್ರರಂಗಕ್ಕೆ ಸದ್ಯ ಬರಸಿಡಿಲಿನಂತೆ ಬಡೆದಿದ್ದು, ಹಲವರು ಸಂತಾಪ ಸೂಚಿಸಿದ್ದಾರೆ. ಪತ್ನಿ ಮತ್ತು ಮಗಳನ್ನು ಹರ್ಮನ್ ಅಗಲಿದ್ದಾರೆ.

More from Filmibeat

English summary
Devastating news for Punjabi music fans: Harman Sidhu, just 37, was killed in a shocking road crash. Read about the accident and Sidhu's legacy.
Read more about: singer road accident music
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X