ಐಪಿಎಲ್ ಮಿನಿ ಹರಾಜಿಗೂ ಮುನ್ನ ₹14.08 ಕೋಟಿಗೆ ಮನೆ ಮಾರಿದ ಪ್ರೀತಿ ಜಿಂಟಾ, ಗುಳಿಕೆನ್ನೆ ಸುಂದರಿಗೆ ಆದ ನಷ್ಟ ಎಷ್ಟು ?
ಚಿತ್ರರಂಗದ ತಾರೆಯರಿಗೆ ಈಗ ಬೆಳ್ಳಿತೆರೆಯ ಮೇಲೆ ಮಿಂಚುವುದು ಮಾತ್ರ ಅಲ್ಲ, ತೆರೆಯಾಚೆ ಹಣ ಗಳಿಸುವುದು ಕೂಡ ಚೆನ್ನಾಗಿ ಗೊತ್ತು. ಕಲೆಯನ್ನಷ್ಟೇ ನಂಬಿಕೊಂಡರೆ ಮುಂದೊಂದು ದಿನ ಬೆಲೆ ಇಲ್ಲದಂತಾಗುತ್ತೆ ಎನ್ನುವ ಸತ್ಯ ಅರಿತ ಇವರು ಭವಿಷ್ಯದ ದೃಷ್ಟಿಯಿಂದ ನಾನಾ ಕಡೆ ಹಣ ಹೂಡುತ್ತಾರೆ. ಆ ಪೈಕಿ ರಿಯಲ್ ಎಸ್ಟೇಟ್ ಉದ್ಯಮ ಕೂಡ ಒಂದು. ಪ್ರತಿಷ್ಠಿತ ಪ್ರದೇಶಗಳಲ್ಲಿ...
ಕೋಟ್ಯಂತರ ಹಣ ಹೂಡಿ ಮನೆ- ಫ್ಲ್ಯಾಟ್ ಖರೀದಿ ಮಾಡುವ ಇವರು ಸಮಯ-ಸಂದರ್ಭ ಕೂಡಿ ಬಂದಾಗ ತಮ್ಮ ಆಸ್ತಿಯನ್ನು ದುಪ್ಪಟ್ಟು ಬೆಲೆಗೆ ಮಾರುತ್ತಾರೆ. ಈ ಮೂಲಕ ಕೈತುಂಬಾ ಹಣ ಸಂಪಾದನೆ ಮಾಡುತ್ತಾರೆ. ಅದರಲ್ಲಿಯೂ ಬಾಲಿವುಡ್‌ನಲ್ಲಿ ಬಹುತೇಕ ಸೂಪರ್ ಸ್ಟಾರ್‌ಗಳು ಈಗ ರಿಯಲ್ ಎಸ್ಟೇಟ್ ಉದ್ಯಮಿಗಳಾಗಿದ್ದಾರೆ.

ಇದಕ್ಕೆ ಪುರಾವೆ ಎನ್ನುವಂತೆ ಶಾರುಖ್ ಖಾನ್.. ಅಮಿತಾಬ್ ಬಚ್ಚನ್.. ಅಭಿಷೇಕ್ ಬಚ್ಚನ್.. ಅಕ್ಷಯ್ ಕುಮಾರ್.. ದೀಪಿಕಾ ಪಡುಕೋಣೆ.. ಸೇರಿ ಹಲವರಿಗೆ ಆಸ್ತಿ ಖರೀದಿ ಮಾಡಿದ್ದಾರೆ. ಮಾರಿದ್ದಾರೆ. ಈ ಮೂಲಕ ಒಳ್ಳೆಯ ಲಾಭ ಮಾಡಿದ್ದಾರೆ. ಈ ಸಾಲಿಗೆ ಈಗ ಗುಳಿಕೆನ್ನೆಯ ಚೆಲುವೆ ಪ್ರೀತಿ ಜಿಂಟಾ ಕೂಡ ಸೇರಿಕೊಂಡಿದ್ದಾರೆ. ವ್ಯತ್ಯಾಸ ಏನೆಂದರೆ ಬೇರೆಯವರು ಆಸ್ತಿಯನ್ನು ಮಾರಿ ಲಾಭ ಮಾಡಿಕೊಂಡಿದ್ದಾರೆ. ಆದರೆ. ಪ್ರೀತಿ ಜಿಂಟಾ ತಮಗೆ ನಷ್ಟವಾದರೂ ಚಿಂತೆ ಇಲ್ಲ ಎಂದು ಆಸ್ತಿಯನ್ನು ಮಾರಿದ್ದಾರೆ.
ಹೌದು, ಪ್ರೀತಿ ಜಿಂಟಾ .. ಅಂದಕಾಲತ್ತಿಲ್‌ನ ಮನಮೋಹಕ ಚೆಲುವೆ. ವಯಸ್ಸು 50 ಆದರೂ ಇವರ ಸೌಂದರ್ಯ ಕಳೆಗುಂದಿಲ್ಲ. ಬದಲಿಗೆ ಇವತ್ತಿನ ಹಲವು ನಾಯಕಿಯರನ್ನು ನಾಚಿಸುವಂತಹ ಒನಪು ವಯ್ಯಾರ ಇವರದ್ದು. ಆ ಕಾಲದಲ್ಲಿ ಚಿತ್ರದಲ್ಲಿ ಪಾತ್ರ ಸಿಕ್ಕರೆ ಸಾಕು ಎಂದು ಹಲವು ನಾಯಕಿಯರು ಅಂದುಕೊಳ್ಳುತ್ತಿದ್ದ ಸಮಯದಲ್ಲಿಯೇ ''ಐಪಿಎಲ್''ನಲ್ಲಿ ಕ್ರಾಂತಿ ಮಾಡುವ ಉದ್ಧೇಶದಿಂದ ''ಪಂಜಾಬ್'' ತಂಡವನ್ನು ಖರೀದಿ ಮಾಡಿದ್ದವರು ಇವರು.
ಇಂಥಾ ಪ್ರೀತಿ ಜಿಂಟಾ ಮುಂಬೈನ ಬಾಂದ್ರಾ ಪ್ರದೇಶದಲ್ಲಿನ ತಮ್ಮ ಅಪಾರ್ಟ್‌ಮೆಂಟ್‌ನ್ನು ಬರೋಬ್ಬರಿ ₹14.08 ಕೋಟಿಗೆ ಮಾರಿದ್ದಾರೆ. ಆಶ್ಚರ್ಯ ಅಂದರೆ ಅಕ್ಟೋಬರ್ 2023ರಲ್ಲಿ ರಸ್ಟೋಮ್‌ಜಿ ಗ್ರೂಪ್ ಅವರಿಂದ ಈ ಭವ್ಯವಾದ ಫ್ಲ್ಯಾಟ್ ಪಡೆಯುವ ಸಮಯದಲ್ಲಿ ಪ್ರೀತಿ ಜಿಂಟಾ ₹17 ಕೋಟಿ ಸುರಿದಿದ್ದರು.
ಆದರೆ ಈಗ ₹14.08 ಕೋಟಿಗೆ ಮಾರಿದ್ದಾರೆ. ಈ ಮೂಲಕ 3 ಕೋಟಿ ನಷ್ಟ ಮಾಡಿಕೊಂಡಿದ್ದಾರೆ. ಪ್ರೀತಿ ಜಿಂಟಾ ಅವರ ಈ ಆಸ್ತಿಯ ವಿವರ ಸಿಆರ್‌ಇ ಮ್ಯಾಟ್ರಿಕ್ಸ್ ಆಸ್ತಿ ನೊಂದಣಿಯಲ್ಲಿ ದಾಖಲಾಗಿದೆ. ಪ್ರೀತಿ ಜಿಂಟಾ ಅವರ ಈ ನಡೆ ಸದ್ಯ ಹಲವರನ್ನು ಅಚ್ಚರಿಗೆ ದೂಡಿದೆ.

ಪರಿಶ್ರಮ್ ಅಪಾರ್ಟ್‌ಮೆಂಟ್‌ನ ಹನ್ನೊಂದನೇ ಮಹಡಿಯಲ್ಲಿರುವ ಈ ಫ್ಲ್ಯಾಟ್ 1,474 ಚದರ ಅಡಿ ವಿಸ್ತೀರ್ಣ ಇದೆ. ಎರಡು ಕಾರ್‌ಗಳನ್ನು ಪಾರ್ಕ್ ಮಾಡುವ ಸೌಲಭ್ಯ ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್ ಪ್ರದೇಶದಲ್ಲಿದೆ. ವಿಶಾಲ್ ಕಲ್ಯಾಣ್ ಮಿರ್ಚಾನಂದಿ ಅವರು ಪ್ರೀತಿ ಜಿಂಟಾ ಅವರಿಂದ ಈ ಫ್ಲ್ಯಾಟ್ ಖರೀದಿ ಮಾಡಿದ್ದಾರೆ. ನವೆಂಬರ್ 21, 2025 ರಂದು ನೋಂದಣಿ ಪ್ರಕ್ರಿಯೆ ಮುಗಿದಿದ್ದು ₹16.47 ಲಕ್ಷಕ್ಕೂ ಹೆಚ್ಚು ಸ್ಟ್ಯಾಂಪ್ ಡ್ಯೂಟಿ ಮತ್ತು ₹30,000 ನೋಂದಣಿ ಶುಲ್ಕವನ್ನು ಪಾವತಿಸಲಾಗಿದೆ ಎಂದು ಸಿಆರ್‌ಇ ಮ್ಯಾಟ್ರಿಕ್ಸ್ ಆಸ್ತಿ ನೊಂದಣಿ ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ.
ಪ್ರೀತಿ ಜಿಂಟಾ 3 ಕೋಟಿ ನಷ್ಟ ಮಾಡಿಕೊಂಡು ಈ ಫ್ಲ್ಯಾಟ್‌ನ ಮಾರಿದ್ದೇಕೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲವಾದರೂ ''ಹಿಂದೂಸ್ತಾನ್ ಟೈಮ್ಸ್'' ವರದಿಯ ಪ್ರಕಾರ ಬಾಂದ್ರಾದಲ್ಲಿಯೇ ₹100 ಕೋಟಿ ಮೌಲ್ಯದ ಮತ್ತೊಂದು ಆಸ್ತಿ ಖರೀದಿಸಲು ಪ್ರೀತಿ ಜಿಂಟಾ ಮುಂದಾಗಿದ್ದಾರೆ. ಈ ವ್ಯವಹಾರದಿಂದ ಬಂದ ಹಣವನ್ನು ಗುಳಿಕೆನ್ನೆ ಸುಂದರಿ ಇಲ್ಲಿ ಹೂಡಲಿದ್ದಾರೆ.
ಅಂದ್ಹಾಗೇ 2026ರ ಐಪಿಎಲ್‌ಗ ಸಿದ್ಧತೆಗಳು ಈಗಾಗಲೇ ಶುರುವಾಗಿವೆ. ಡಿಸೆಂಬರ್ 16ರಂದು ಅಬುಧಾಬಿಯಲ್ಲಿ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. 77 ಸ್ಥಾನಗಳನ್ನು 10 ತಂಡಗಳು ಈ ಬಾರಿ ಭರ್ತಿ ಮಾಡಲಿದ್ದು ಕೋಲ್ಕತ್ತಾ ನೈಟ್ ರೈಡರ್ಸ್ ಬಳಿ 13 ಸ್ಥಾನಗಳಿವೆ. ಪ್ರೀತಿ ಜಿಂಟಾ ಒಡೆತನದ ಪಂಜಾಬ್ ಕಿಂಗ್ಸ್ ಕೇವಲ ನಾಲ್ಕು ಖಾಲಿ ಸ್ಥಾನ ಹೊಂದಿದೆ. ಇನ್ನು ಕಳೆದ ಬಾರಿ ಪಂಜಾಬ್ ಸೂಪರ್ ಕಿಂಗ್ಸ್ ಫೈನಲ್‌ವರೆಗೆ ಬಂದು ತಲುಪಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಸೋತಿತ್ತು.


Click it and Unblock the Notifications











