ಪಹಲ್ಗಾಮ್ ದಾಳಿ ಮುನ್ನ ನನಗೆ ಉಗ್ರ ಸಿಕ್ಕಿದ್ದ, ಕುರಾನ್ ಓದಿಲ್ಲ ಎಂದಿದ್ದಕ್ಕೆ ಕಿರುಕುಳ ನೀಡಿದ್ದ ; ನಟಿ ಹೇಳಿದ ಸತ್ಯ
ಪಾಕಿಸ್ತಾನ ಬೆಳೆಸಿದ ಪಾಪಿ ಉಗ್ರರ ಆತಂಕಕ್ಕೆ ಕಡಿವಾಣ ಹಾಕಲು, ಅವರ ಅಟ್ಟಹಾಸವನ್ನು ಮಟ್ಟ ಹಾಕಲು, ಭಾರತೀಯ ವೀರ ಯೋಧರು ಕಟಿ ಬದ್ದರಾಗಿ ನಿಂತಿದ್ದಾರೆ. ಆದರೂ ಕೂಡ ಇವರ ಉಪಟಳ ಕಡಿಮೆಯಾಗಿಲ್ಲ. ಸದಾ ಒಂದಿಲ್ಲೊಂದು ವಿಚಾರವಾಗಿ ಭಾರತದ ಜೊತೆ ಕಾಲು ಕೆರೆದುಕೊಂಡು ಜಗಳಕ್ಕೆ ಬರುವ ಪಾಕಿಸ್ತಾನ, ಜಮ್ಮು ಕಾಶ್ಮೀರದ ವಿಚಾರದಲ್ಲಿ ಆಗಾಗ ಕ್ಯಾತೆ ತೆಗೆಯುತ್ತಲೇ ಇರುತ್ತೆ.
ಭಯೋತ್ಪಾದನೆಯ ಕೇಂದ್ರವಾದ ಪಾಕಿಸ್ತಾನದಲ್ಲಿ 30ರಿಂದ 40 ಸಾವಿರ ಭಯೋತ್ಪಾದಕರಿಗೆ ಆಶ್ರಯ ಕಲ್ಪಿಸಲಾಗಿದೆ ಎಂದು ಹಿಂದೊಮ್ಮೆ ಅವರ ಪ್ರಧಾನಿಯೇ ಒಪ್ಪಿಕೊಂಡಿದ್ದಾರೆ. ಇನ್ನು 2019 ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ನಡೆದ ದಾಳಿ ಯಾರು ತಾನೇ ಹೇಗೆ ಮರೆಯಲು ಸಾಧ್ಯ. ಆರು ವರ್ಷಗಳ ಹಿಂದೆ ಫೆಬ್ರವರಿ 14 ರಂದು 40 ಸಿಆರ್‌ಪಿಎಫ್ ಅಧಿಕಾರಿಗಳು ಹುತಾತ್ಮರಾಗಿದ್ದರು.

ಈ ಕರಾಳ ಘಟನೆಯನ್ನು ಭಾರತೀಯರು ಇನ್ನು ಮರೆತಿಲ್ಲ. ಹೀಗಿರುವಾಗ ಇದೀಗ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ನಡೆದಿದೆ. ಹೆಂಡತಿ ಮತ್ತು ಮಕ್ಕಳ ಮುಂದೆಯೇ ಭಾರತೀಯರ ಜೀವವನ್ನು ಬಲಿ ಪಡೆದು ಉಗ್ರರು ಕೇಕೆ ಹಾಕಿದ್ದಾರೆ. ಇವರಿಗೆ ತಕ್ಕ ಶಿಕ್ಷೆಯನ್ನು ಈ ಬಾರಿ ಕೂಡ ಸರ್ಕಾರ ಕಲಿಸಲು ಮುಂದಾಗಿದೆ. ಹಲವು ಕ್ರಮಗಳನ್ನು ಕೈಗೊಂಡಿದೆ.
ಇದರ ನಡುವೆ ಮಾಡೆಲ್ ಆಗಿ ಗುರುತಿಸಿಕೊಂಡಿರುವ ಏಕ್ತಾ ತಿವಾರಿ ಅವರು ತಮ್ಮ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಹೌದು. ಪಹಲ್ಗಾಮ್ ದಾಳಿ ನಡೆದ ನಂತರ ಭಯೋತ್ಪಾದಕರ ರೇಖಾ ಚಿತ್ರವನ್ನು ಬಿಡುಗಡೆ ಮಾಡಲಾಗಿತ್ತು. ಈ ರೇಖಾ ಚಿತ್ರಗಳನ್ನು ನೋಡಿ ಉಗ್ರನನ್ನು ಗುರುತು ಹಿಡಿದಿರುವ ಏಕ್ತಾ ತಿವಾರಿ ನನಗೂ ಕೂಡ ಈ ಉಗ್ರ ಸಿಕ್ಕಿದ್ದ ಎಂದು ಹೇಳಿದ್ದಾರೆ. ಕಿರುಕುಳ ನೀಡಿದ್ದಾ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಏಕ್ತಾ ತಿವಾರಿ ದಾಳಿ ನಡೆಯುವ ಎರಡು ದಿನದ ಹಿಂದೆ ಅಂದರೆ 'ಏಪ್ರಿಲ್ 20ರಂದು ನಾವು 20 ಜನ ಪಹಲ್ಗಾಮ್ಗೆ ಹೋಗಿದ್ದೇವು, ಆಗ ಕೆಲವರು ನಮ್ಮ ಬಳಿ ಬಂದು ಮುಸ್ಲಿಮರ ಪವಿತ್ರ ಸ್ಥಳವಾದ ಅಜ್ಮೇರ್ ಗೆ ಹೋಗಿದ್ದೀರಾ ಎಂದು ಕೇಳಿದರು ಎಂದಿರುವ ಏಕ್ತಾ ತಿವಾರಿ ಈ ಪ್ರಶ್ನೆಗೆ ನಾವು ಅಲ್ಲಿಗೆ ಹೋಗಿಲ್ಲ ಎಂದು ಹೇಳಿದ್ದೇವು ಎಂದು ಹೇಳಿದ್ದಾರೆ.
ಆ ನಂತರ ಅಷ್ಟಕ್ಕೇ ಸುಮ್ಮನಾಗದ ಅವರು ಎಷ್ಟು ಜನ ಬಂದಿದ್ದೀರಾ ? ಅಮರನಾಥ ಯಾತ್ರೆಗೆ ಹೋಗಿದ್ರಾ ಎಂದು ಕೇಳಿದರು, ನಮ್ಮ ಧರ್ಮದ ಬಗ್ಗೆಯೂ ಕೂಡ ಕೇಳಿದರು ಎಂದಿರುವ ಏಕ್ತಾ ತಿವಾರಿ ಇದೆಲ್ಲ ಕೇಳಿ ನನಗೆ ಭಯ ಆಗಲು ಶುರುವಾಯ್ತು ಹೀಗಾಗಿ ನಾನು ನಿಜಾ ಹೇಳಲಿಲ್ಲ ಎಂದು ಹೇಳಿದ್ದಾರೆ.
ಮುಂದುವರೆದು ಆ ನಂತರ ನನ್ನ ವ್ಯೆಯಕ್ತಿಕ ಜೀವನದ ಕುರಿತು ಕೂಡ ಅವರು ಪ್ರಶ್ನೆ ಕೇಳಿದರು ಎಂದಿರುವ ಏಕ್ತಾ ನಮ್ಮ ಧರ್ಮದ ಕುರಿತು ಕೂಡ ಅವರು ಕೇಳಿದರು, ಮದುವೆ ಆಗಿದ್ದು ಯಾವಾಗ ಎಂದೆಲ್ಲ ಪ್ರಶ್ನೆ ಮಾಡಿದರು ಎಂದು ಹೇಳಿದ್ದಾರೆ.
ಇಷ್ಟೇ ಅಲ್ಲದೇ ಕುರಾನ್ ಬಗ್ಗೆಯೂ ಅವರು ನನ್ನಲ್ಲಿ ಪ್ರಶ್ನೆ ಮಾಡಿದರು ಎಂದಿರುವ ಏಕ್ತಾ ತಿವಾರಿ, ನಮ್ಮನ್ನೆಲ್ಲ ಅವರು ಬೈಸರನ್ ಕಣಿವೆಗೆ ಕರೆದುಕೊಂಡು ಹೋಗಬೇಕೆಂದು ಅವರು ಅಂದುಕೊಂಡಿದ್ದರು, ಆದರೆ ನಾವು ಅಲ್ಲಿ ಹೋಗಲು ನಿರಾಕರಿಸಿದೆವು ಹೀಗಾಗಿ ಅವರಿಗೆ ಸಿಟ್ಟು ಬಂದಿತ್ತು ಎಂದು ಹೇಳಿದ್ದಾರೆ. ನಮ್ಮ ಜೊತೆ ತುಂಬಾ ಕೆಟ್ಟದಾಗಿ ಅವರು ನಡೆದುಕೊಂಡರು ಎಂದು ಆ ದಿನವನ್ನು ನೆನಪು ಮಾಡಿಕೊಂಡಿದ್ದಾರೆ.
ಇನ್ನು ನಾನು ಆ ಸಮಯದಲ್ಲಿ ರುದ್ರಾಕ್ಷಿ ಮಾಲೆಯನ್ನು ಕೂಡ ಹಾಕಿಕೊಂಡಿದ್ದೆ, ಇದರಿಂದ ಅವರ ಕೋಪ ಇನ್ನು ಹೆಚ್ಚಾಗಿತ್ತು ಎಂದಿರುವ ಏಕ್ತಾ ತಿವಾರಿ, ಆ ಸಮಯದಲ್ಲಿ ಅವರ ಶೂ ಒಳಗೆ ಕೀ ಪ್ಯಾಡ್ ಇರುವ ಮೊಬೈಲ್ ಕೂಡ ಇತ್ತು ಎಂದು ಹೇಳಿದ್ದಾರೆ. ಅಧಿಕಾರಿಗಳು ಬಿಡುಗಡೆ ಮಾಡಿದ ರೇಖಾ ಚಿತ್ರವನ್ನು ನೋಡಿದ ನಂತರವಷ್ಟೇ ನಾನು ಸಾವಿನ ಬಾಗಿಲು ಬಡಿದು ಬಂದಿರುವ ವಿಚಾರ ನನಗೆ ಗೊತ್ತಾಯ್ತು ಎಂದು ಕೂಡ ಏಕ್ತಾ ತಿವಾರಿ ಹೇಳಿದ್ದಾರೆ.


Click it and Unblock the Notifications











