'ಕಾಫಿ ವಿತ್ ಕರಣ್' ಸ್ಥಗಿತ: ಕರಣ್ ಜೋಹರ್ ಈ ನಿರ್ಧಾರ ತೆಗೆದುಕೊಂಡಿದ್ದೇಕೆ?

ಬಾಲಿವುಡ್‌ನಲ್ಲಿ ಕರಣ್ ಜೋಹರ್ ಎನ್ನುವುದು ದೊಡ್ಡ ಹೆಸರು. ಕರಣ್ ಜೋಹರ್ ಸಿನಿಮಾ ನಟ, ನಿರ್ಮಾಪಕ, ನಿರ್ದೇಶಕ ಹೀಗೆ ಹತ್ತು ಹಲವು ಪಾತ್ರಗಳನ್ನು ನಿಭಾಯಿಸಿದ್ದಾರೆ. ಕರಣ್ ಜೋಹರ್ ಬಾಲಿವುಡ್‌ನ ಆಧಾರ ಸ್ತಂಭಗಳಲ್ಲಿ ಒಬ್ಬರು ಎಂದರೇ ತಪ್ಪಾಗಲಾರದು.

ಕರಣ್ ಜೋಹರ್ ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ದೊಡ್ಡ, ದೊಡ್ಡ ಸ್ಟಾರ್‌ಗಳನ್ನು ಹುಟ್ಟು ಹಾಕಿದ್ದಾರೆ. ಎಷ್ಟೋ ಕಲಾವಿದರ ಮೊದಲ ಹೆಜ್ಜೆಗೆ ಬುನಾದಿ ಹಾಕಿದ್ದಾರೆ. ಹಾಗಾಗಿ ಕರಣ್ ಜೋಹರ್‌ಗೆ ಬಾಲಿವುಡ್‌ನಲ್ಲಿ ಅಗ್ರ ಸ್ಥಾನ ಇದೆ. ಹಿಂದಿ ಕಿರುತೆರೆಯಲ್ಲೂ ಕೂಡ ಕರಣ್ ಜೋಹರ್ ದೊಡ್ಡ ಹೆಸರು ಮಾಡಿದ್ದಾರೆ. ಈಗ ಕರಣ್ ಜೋಹರ್ ಬಗ್ಗೆ ಹೇಳಲು ಕಾರಣ ಅಚ್ಚರಿ ಮೂಡಿಸುವ ಅವರ ಹೊಸ ನಿರ್ಧಾರ.

ಕರಣ್ ಜೋಹರ್ ಅಂದಾಕ್ಷಣ ಮೊದಲು ಅವರು ನಡೆಸಿಕೊಡುತ್ತಿದ್ದ 'ಕಾಫಿ ವಿತ್ ಕರಣ್' ಶೋ ನೆನಪಾಗುತ್ತದೆ. ಈ ಕಾರ್ಯಕ್ರಮ ಕರಣ್ ಹೆಸರಲ್ಲಿಯೇ ಮೂಡಿ ಬರುತ್ತಿತ್ತು. ಪ್ರತಿ ಸೀಸನ್‌ನಲ್ಲಿ ಹಲವು ಬಾಲಿವುಡ್‌ ಕಲಾವಿದರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಈಗ ಈ ಕಾರ್ಯಕ್ರಮ ಇನ್ನು ಮುಂದೆ ಬರುವುದಿಲ್ಲ.

'ಕಾಫಿ ವಿತ್ ಕರಣ್' ಇನ್ನು ಮುಂದೆ ಬರುವುದಿಲ್ಲ!

'ಕಾಫಿ ವಿತ್ ಕರಣ್' ಇನ್ನು ಮುಂದೆ ಬರುವುದಿಲ್ಲ!

'ಕಾಫಿ ವಿತ್ ಕರಣ್' ಶೋ ಅತ್ಯಂತ ಜನಪ್ರಿಯ ಚಾಟ್ ಶೋ ಆಗಿತ್ತು. ಈ ಕಾರ್ಯಕ್ರಮವನ್ನು ಜನ ಮುಗಿ ಬಿದ್ದು ನೋಡುತ್ತಿದ್ದರು. ಈಗ 'ಕಾಫಿ ವಿತ್ ಕರಣ್' 7ನೇ ಸೀಸನ್ ಬರಬೇಕಿತ್ತು. ಹಾಗಾಗಿ ಯಾರೆಲ್ಲಾ ಈ ಬಾರಿ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದರೆ ಎನ್ನುವ ಬಗ್ಗೆ ಬಿ ಟೌನ್‌ನಲ್ಲಿ ಚರ್ಚೆ ಶುರುವಾಗಿತ್ತು. ಆದರೆ, ಅದಕ್ಕೀಗ ತೆರೆಬಿದ್ದಿದೆ. ಈ ಕಾರ್ಯಕ್ರಮ ಮತ್ತೆ ಬರುವುದಿಲ್ಲ ಎಂದು ಕರಣ್ ಜೋಹರ್ ಪೋಸ್ಟ್ ಹಾಕಿದ್ದರೆ.

ಭಾರವಾದ ಹೃದಯದಿಂದ ಕರಣ್ ಪೋಸ್ಟ್!

ಇದ್ದಕ್ಕಿದ್ದ ಹಾಗೆ ಅಚ್ಚರಿಯ ಸುದ್ದಿಯನ್ನು ಕೊಟ್ಟಿದ್ದಾರೆ ಕರಣ್ ಜೋಹರ್. 'ಕಾಫಿ ವಿತ್ ಕರಣ್' ಕಾರ್ಯಕ್ರಮ ಸ್ಥಗಿತಗೊಂಡ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು ಹೀಗೆ. "ಹಲೋ! ಕಾಫಿ ವಿತ್ ಕರಣ್ ನನ್ನ ಮತ್ತು ನಿಮ್ಮ ಜೀವನದ ಭಾಗವಾಗಿದೆ. ಈಗ 6 ಸೀಸನ್‌ಗಳಿಂದ, ನಾವು ಪ್ರಭಾವ ಬೀರಿದ್ದೇವೆ. ಮತ್ತು ಪಾಪ್ ಸಂಸ್ಕೃತಿಯ ಇತಿಹಾಸದಲ್ಲಿ ನಮ್ಮ ಸ್ಥಾನವನ್ನು ಕಂಡುಕೊಂಡಿದ್ದೇವೆ ಎಂದು ನಾನು ಭಾವಿಸುತ್ತೇನೆ. ಆದರೆ ಭಾರವಾದ ಹೃದಯದಿಂದ 'ಕಾಫಿ ವಿತ್ ಕರಣ್' ಹಿಂತಿರುಗುವುದಿಲ್ಲ ಎಂದು ನಾನು ಘೋಷಿಸುತ್ತಿದ್ದೇನೆ."

2004ರಲ್ಲಿ ಶುರುವಾದ 'ಕಾಫಿ ವಿತ್ ಕರಣ್'!

2004ರಲ್ಲಿ ಶುರುವಾದ 'ಕಾಫಿ ವಿತ್ ಕರಣ್'!

'ಕಾಫಿ ವಿತ್ ಕರಣ್' 2004 ರಲ್ಲಿ ಸ್ಟಾರ್ ವರ್ಲ್ಡ್‌ ಚಾನೆಲ್‌ನಲ್ಲಿ ಮೊದಲ ಬಾರಿಗೆ ಪ್ರಥಮ ಪ್ರದರ್ಶನಗೊಂಡಿತು. ಈ ಕಾರ್ಯಕ್ರಮವು 2019 ರವರೆಗೆ 6 ಸೀಸನ್‌ಗಳು ಬಂದಿದೆ. ಬಾಲಿವುಡ್‌ನ ಹಲವು ತಾರೆಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಶಾರುಖ್ ಖಾನ್ ಮತ್ತು ಕಾಜೋಲ್ ಕಾರ್ಯಕ್ರಮದ ಉದ್ಘಾಟನಾ ಸಂಚಿಕೆಯ ಮೊದಲ ಅತಿಥಿಗಳಾಗಿದ್ದರು.

'ಕಾಫಿ ವಿತ್ ಕರಣ್' ಕೊನೆ ಸಂಚಿಕೆಯಲ್ಲಿ ಮಲೈಕಾ!

'ಕಾಫಿ ವಿತ್ ಕರಣ್' ಕೊನೆ ಸಂಚಿಕೆಯಲ್ಲಿ ಮಲೈಕಾ!

'ಕಾಫಿ ವಿತ್ ಕರಣ್' ಕಾರ್ಯಕ್ರಮದಲ್ಲಿ ತಾರೆಯರು ಮನ ಬಿಚ್ಚಿ ಮಾತನಾಡುತ್ತಿದ್ದರು. ತೆರೆ ಮರೆಯ ಹಲವು ವಿಚಾರಗಳನ್ನು ಕರಣ್ ಮುಂದೆ ತೆರೆದಿಡುತ್ತಿದ್ದರು. ಈ ಕಾರ್ಯಕ್ರಮದಲ್ಲಿ ದೀಪಿಕಾ ಪಡುಕೋಣೆ, ಆಲಿಯಾ ಭಟ್, ರಣ್ಬೀರ್ ಕಪೂರ್, ಆಮಿರ್ ಖಾನ್, ಅಕ್ಷಯ್ ಕುಮಾರ್, ಕರಿನಾ ಕಪೂರ್, ಪ್ರಿಯಾಂಕಾ ಚೋಪ್ರಾ, ಅನುಷ್ಕಾ ಶರ್ಮಾ ಸೇರಿದಂತೆ ಹಲವು ಕಲಾವಿದರು ಭಾಗಿ ಆಗಿದ್ದಾರೆ. ಕೊನೆಯ ಎಪಿಸೋಡ್‌ನಲ್ಲಿ ಕಿರಣ್ ಖೇರ್ ಮತ್ತು ಮಲೈಕಾ ಅರೋರಾ ಭಾಗಿಯಾಗಿದ್ದರು.

More from Filmibeat

English summary
Shocking koffee With Karan Show Stopped Karan Johar Announcement, Know More Details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X