ಸೈಫ್ ಅಲಿ ಖಾನ್ ಮೇಲಿನ ಹಲ್ಲೆ ಮತ್ತು ಶಾರುಖ್ ಖಾನ್‌ಗೆ ಇರುವ ಸಂಬಂಧವೇನು? ಕಿಂಗ್ ಖಾನ್ ಮನೆಗೆ ಹೋಗಿದ್ದೇಕೆ ಪೊಲೀಸರು..?
ಕಳ್ಳತನ, ವಂಚನೆ ಪ್ರಕರಣಗಳು ಈಗೀಗ ಹೆಚ್ಚಾಗುತ್ತಲೇ ಇವೆ. ಶಾಕಿಂಗ್ ಸಮಾಚಾರ ಅಂದರೆ ದೊಡ್ಡ ದೊಡ್ಡವರ ಹೆಸರನ್ನೇಳಿಕೊಂಡು ದೊಡ್ಡ ದೊಡ್ಡವರಿಗೆ ಪಂಗನಾಮ ಹಾಕುತ್ತಿದ್ದ ಕಿರಾತಕರು ಈಗ ದೊಡ್ಡ ದೊಡ್ಡವರ ಮನೆಯ ಬಾಗಿಲನ್ನೇ ಮುರಿದು ಒಳಹೊಕ್ಕುತ್ತಿದ್ದಾರೆ. ಹಣಕ್ಕಾಗಿ ಬೇಡಿಕೆಯನ್ನು ಇಡುವುದಲ್ಲದೇ ಕೊಲೆ ಮಾಡಲು ಕೂಡ ಮುಂದಾಗುತ್ತಿದ್ದಾರೆ. ಇದಕ್ಕೆ ಸೈಫ್ ಅಲಿ ಖಾನ್ ಮೇಲೆ ನಡೆದ ಹಲ್ಲೆ ಸದ್ಯದ ತಾಜಾ ಉದಾಹರಣೆ.
ಹೌದು, ಸೈಫ್ ಅಲಿ ಖಾನ್ ಮೇಲಿನ ಹಲ್ಲೆ ಅನೇಕರ ನಿದ್ದೆಗೆ ಕೊಳ್ಳಿ ಇಟ್ಟಿದೆ. ಯಾಕೆಂದರೆ.. ಸೈಫ್ ಅಲಿ ಖಾನ್ ಮನೆ ಸಾಮಾನ್ಯವಾದದ್ದಲ್ಲ. 100 ಕೋಟಿಯ ಐಶಾರಾಮಿ ಮನೆ ಅದು. ಈಜುಕೊಳದಿಂದ ಹಿಡಿದು ಮನೆಯಲ್ಲಿ ಖಾಸಗಿ ಚಿತ್ರಮಂದಿರ ಇದೆ. ಇನ್ನು, ಐದು ಬೆಡ್‌ರೂಮ್ ಇರುವ ಈ ಮನೆ ಸದ್ಗುರು ಶರಣ್ ಎಂಬ ಅಪಾರ್ಟ್‌ಮೆಂಟ್‌ನಲ್ಲಿದೆ. ಇಲ್ಲಿ ಸೈಫ್ ಅಲಿ ಖಾನ್ ಅವರದ್ದೇ ನಾಲ್ಕು ಫ್ಲೋರ್‌ನ ಮನೆ ಇದೆ.

ಇನ್ನು ಸೆಲೆಬ್ರೇಟಿಯ ಮನೆ ಅಂದರೆ ಅಲ್ಲಿ ತುಸು ಹೆಚ್ಚೇ ಭದ್ರತೆ ಇರುತ್ತೆ. ಹಾದಿಯಲ್ಲಿ ಹೋಗುವರು ಬರುವರು ಸುಲಭವಾಗಿ ಮನೆಯೊಳಗೆ ಹೋಗಲು ಸಾಧ್ಯ ಇಲ್ಲ. ಆದರೂ.. ಕಳ್ಳ ಆರಾಮಾಗಿ ಒಳ ಹೊಕ್ಕಿದ್ದಾನೆ. ಸೈಫ್ ಅಲಿ ಖಾನ್‌ಗೆ ಎಲ್ಲೆಂದರಲ್ಲಿ ಚುಚ್ಚಿದ್ದಾನೆ. ಈ ಭದ್ರತಾ ವೈಪಲ್ಯದ ಕುರಿತು ಈಗ ಚರ್ಚೆಯಾಗುತ್ತಿದೆ. ಇದರ ನಡುವೆ ಸೈಫ್ ಅಲಿ ಖಾನ್ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿದ ವ್ಯಕ್ತಿ ಬಾಲಿವುಡ್‌ನ ಬಾದ್‌ಷಾ ಶಾರುಖ್ ಖಾನ್‌ಗೆ ಸ್ಕೆಚ್ ಹಾಕಿದ್ದಾ ಎನ್ನುವ ಬ್ರೇಕಿಂಗ್ ನ್ಯೂಸ್‌ನ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಹೌದು, ಮುಂಬೈನ ಬಾಂದ್ರಾದಲ್ಲಿಯೇ ಶಾರುಖ್ ಖಾನ್ ಅವರ ಭವ್ಯವಾದ ಅರಮನೆ ಮನ್ನತ್ ಇದೆ. ಈ ಮನೆಯೊಳಗೆ ನುಗ್ಗುವ ಪ್ರಯತ್ನವನ್ನು ಹಲ್ಲೆಕೋರ ಮಾಡಿದ್ದಾನೆ. ಆದರೆ, ಮನ್ನತ್‌ನಲ್ಲಿ ಶಾರುಖ್ ಖಾನ್ ಅಪ್ಪಣೆ ಇಲ್ಲದೇ ನೊಣ ಕೂಡ ಮನೆಯೊಳಗೆ ನುಸುಳಲು ಸಾಧ್ಯ ಇಲ್ಲ. ಅಷ್ಟರ ಮಟ್ಟಿಗೆ ಮನ್ನತ್ ಸುತ್ತ ಮುತ್ತ ಭದ್ರತೆ ಇದೆ. ಹೀಗಾಗಿಯೇ ಮನ್ನತ್ ಒಳಗೆ ಹೋಗಲು ವಿಫಲನಾದ ಆರೋಪಿ ಆ ನಂತರ ಮರು ದಿನ ರಾತ್ರಿ ಸೀದಾ ಸೈಫ್ ಅಲಿ ಖಾನ್ ಅವರ ಮನೆಗೆ ನುಗ್ಗಿದ್ದಾನೆ.
ದುರಂತ ಅಂದರೆ 1200 ಕೋಟಿ ಒಡೆಯನ ಮನೆಗೆ ಬರುಹೋಗುವರ ಮೇಲೆ ನಿಗಾ ಇಡಲು ಭದ್ರತಾ ಸಿಬ್ಬಂದಿ ಇರಲಿಲ್ಲ. ಬಿಲ್ಡಿಂಗ್ ಒಳ ಹೋಗುವ ಮುನ್ನ ಅವರ ಕುಲ-ಗೋತ್ರ-ಜಾತಕವನ್ನು ಬರೆಯಲು ಬುಕ್ ಕೂಡ ಇರಲಿಲ್ಲ. ಇನ್ನೂ ಆಶ್ವರ್ಯದ ವಿಚಾರ ಅಂದರೆ ಸೈಫ್ ಅಲಿ ಖಾನ್ ಮನೆಯ ಒಳಗೆ ಮತ್ತು ಹೊರಗೆ ಸಿಸಿಟಿವಿ ಕ್ಯಾಮರಾ ಇಲ್ಲ. ಆದರೆ ಸೈಫ್ ಅಲಿ ಖಾನ್ ಅದೃಷ್ಟಕ್ಕೆ ಮೆಟ್ಟಿಲಿನ ಬಳಿ ಇದ್ದ ಒಂದು ಸಿಸಿಟಿವಿ ಕ್ಯಾಮರಾದಲ್ಲಿ ಆತನ ಮುಖ ಸೆರೆಯಾಗಿದೆ.
ಹೀಗಾಗಿ ಇದು ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್‌ಗೆ ಮಾತ್ರ ಅನ್ವಯವಾಗಲ್ಲ. ಈ ತರಹದ ನಿರ್ಲ್ಯಕ್ಷ ಮಾಡುವ ಎಲ್ಲರಿಗೆ ಇದು ಎಚ್ಚರಿಕೆಯ ಗಂಟೆ ಎಂದು ಹಿರಿಯ ತನಿಖಾಧಿಕಾರಿ ಒಬ್ಬರು ಹೇಳಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೆ ಪೂರಕವಾಗಿ ಜನವರಿ 14ರಂದು ರಾತ್ರಿ ಶಾರುಖ್ ಖಾನ್ ಮನೆಯ ಸುತ್ತ ಮುತ್ತ ಆಗುಂತಕನೊಬ್ಬ ಓಡಾಡುತ್ತಿರುವ ದೃಶ್ಯ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ.ಶಾರುಖ್ ಖಾನ್ ಅವರ ನಿವಾಸ ಮನ್ನತ್‌ಗೆ ತೆರಳಿ ಪೊಲೀಸರು ಪರಿಶೀಲನೆಯನ್ನು ಕೂಡ ನಡೆಸಿದ್ದಾರೆ


Click it and Unblock the Notifications