ಆ 'ಇಂಜೆಕ್ಷನ್' ಪಡೆದ ಬಳಿಕ ಹುಡುಗರು ನಟಿ ಶೆಫಾಲಿ ಸಾವು, ಸ್ನೇಹಿತೆ ಹೇಳಿದ್ದೇನು ?

ಸೆಲೆಬ್ರೆಟಿಗಳಿಗೆ ತಮ್ಮ ಸೌಂದರ್ಯ ಕೊಂಚ ಡಲ್ ಹೊಡೀತಿದೆ ಅಂತ ಗೊತ್ತಾದರೆ ಸಾಕು ತಕ್ಷಣವೇ ಸರ್ಜರಿಗಳ ಮೊರೆ ಹೋಗುತ್ತಾರೆ. ಲಕ್ಷಾಂತರ ರೂಪಾಯಿಗಳನ್ನು ನೀರಿನಂತೆ ಖರ್ಚು ಮಾಡಿ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ. ಇದಕ್ಕೆ ಚಿತ್ರರಂಗದಲ್ಲಿ ಹಲವಾರು ಉದಾಹರಣೆಗಳಿವೆ. ದೊಡ್ಡ ದೊಡ್ಡ ನಾಯಕಿಯರು ಈ ಪ್ರಯತ್ನ ಮಾಡಿದ್ದಾರೆ. ಆದರೆ ಕೆಲ ಒಮ್ಮೆ ಈ ಸೌಂದರ್ಯ ಹೆಚ್ಚಿಸಿಕೊಳ್ಳುವ ಹುಚ್ಚು ಪ್ರಾಣವನ್ನೇ ಬಲಿ ಪಡೆಯುತ್ತದೆ.

ಇದಕ್ಕೆ ಹುಡುಗರು ಖ್ಯಾತಿಯ ಶೆಫಾಲಿ ಜರಿವಾಲಾ ಸದ್ಯದ ತಾಜಾ ನಿದರ್ಶನ ಎನ್ನುವ ಅಭಿಪ್ರಾಯ ಸದ್ಯ ಎಲ್ಲೆಡೆ ವ್ಯಕ್ತವಾಗುತ್ತಿದೆ. ಯಾಕೆಂದರೆ.. ಶೆಫಾಲಿಯ ಸಾವಿನ ಕುರಿತು ತನಿಖೆಯನ್ನು ಮಾಡುತ್ತಿರುವ ಪೊಲೀಸರಿಗೆ ಶೆಫಾಲಿಯ ಮನೆಯಲ್ಲಿ ವಯಸ್ಸಾಗುವುದನ್ನು ತಡೆಯುವ { ಆ್ಯಂಟಿ ಏಜಿಂಗ್ } ಮಾತ್ರೆಗಳು ಸಿಕ್ಕಿವೆ. ಚರ್ಮದ ಹೊಳಪು ಹೆಚ್ಚಿಸುವ ಮಾತ್ರೆಗಳು ಸಿಕ್ಕಿವೆ. ವಿಟಮಿನ್ ಮಾತ್ರೆಗಳಿರುವ ಎರಡಿ ಪೆಟ್ಟಿಗೆಗಳು ಕೂಡ ಸಿಕ್ಕಿವೆ ಎಂದು ವರದಿಯಾಗಿದೆ.

Shocking Revelation Shefali Jariwala s Friend Confirms Vitamin C IV Drip Hours Before Her Death

ಇದರ ನಡುವೆ ಇದೀಗ ಶೆಫಾಲಿ ಅವರ ಆಪ್ತ ಸ್ನೇಹಿತೆ ಪೂಜಾ ಘಾಯ್ ಮತ್ತೊಂದು ವಿಚಾರ ಬಹಿರಂಗಗೊಳಿಸಿದ್ದಾರೆ. ಶೆಫಾಲಿ ತನ್ನ ಸೌಂದರ್ಯಕ್ಕೋಸ್ಕರ ವಿಟಮಿನ್ ಸಿ IV ಇಂಜೆಕ್ಷನ್‌ ಪಡೆಯುತ್ತಿದ್ದರು ಎಂದು ಹೇಳಿದ್ದಾರೆ.

ವಿಕಿ ಲಾಲ್ವಾನಿ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಶೆಫಾಲಿ ಅವರ ಸ್ನೇಹಿತೆ ಪೂಜಾ ಘಾಯ್, ಶೆಫಾಲಿ ಸಾಯುವ ದಿನ ವಿಟಮಿನ್ ಸಿ IV ಇಂಜೆಕ್ಷನ್ ತೆಗೆದುಕೊಂಡಿದ್ದರು ಎಂದು ಹೇಳಿದ್ದಾರೆ. ವಯಸ್ಸಾಗದಂತೆ ತಡೆಯಲು ನನ್ನನ್ನೂ ಒಳಗೊಂಡು ಹಲವಾರು ಜನ ನಾವು ವಿಟಮಿನ್ ಸಿ IV ಇಂಜೆಕ್ಷನ್ ತೆಗೆದುಕೊಳ್ಳುತ್ತೇವೆ ಎಂದಿರುವ ಪೂಜಾ ಘಾಯ್, ಕೊರೊನಾ ನಂತರ ವಿಟಮಿನ್ ಸಿ IV ಇಂಜೆಕ್ಷನ್ ತೆಗೆದುಕೊಳ್ಳುವರ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಇನ್ನು ಇದೇ ವಿಟಮಿನ್ ಸಿ IV ಸಂಬಂಧಿಸಿದಂತೆ ನನ್ನೆದುರೇ ಪೊಲೀಸರು ಶೆಫಾಲಿಗೆ ವಿಟಮಿನ್ ಸಿ IV ನೀಡಿದ್ದ ವ್ಯಕ್ತಿಯನ್ನು ಕರೆದು ವಿಚಾರಣೆ ಮಾಡಿದ್ದರು, ತೆಗೆದುಕೊಳ್ಳುತ್ತಿದ್ದ ಔಷದಿಗಳನ್ನೆಲ್ಲ ಪರಿಶೀಲಿಸಿದ್ದರು ಎಂದು ಕೂಡ ಪೂಜಾ ಘಾಯ್ ಇದೇ ಸಂದರ್ಶನದಲ್ಲಿ ಹೇಳಿದ್ದಾರೆ.

ಮುಂದುವರೆದು ಚಿತ್ರರಂಗದಲ್ಲಿ ವಯಸ್ಸಾಗುವುದನ್ನು ತಡೆಯುವ { ಆ್ಯಂಟಿ ಏಜಿಂಗ್ } ಮಾತ್ರೆಗಳನ್ನು, ಚುಚ್ಚುಮುದ್ದುಗಳನ್ನು ಹಲವಾರು ಜನ ತೆಗೆದುಕೊಳ್ಳುತ್ತಾರೆ ಎಂದು ಹೇಳಿರುವ ಪೂಜಾ ಘಾಯ್, ವಿಟಮಿನ್ ಸಿ ಈಗೀಗ ತುಂಬಾನೇ ಸಾಮಾನ್ಯವಾಗಿದೆ, ದುಬೈನ ಬೀದಿಗಳಲ್ಲಿ ವಿಟಮಿನ್ ಸಿ ಸುಲಭವಾಗಿ ಸಿಗುತ್ತೆ ಎಂದು ಹೇಳಿದ್ದಾರೆ. ಶೆಫಾಲಿಗೆ ತಾನು ಸದಾ ಸುಂದರವಾಗಿ ಕಾಣಬೇಕೆಂಬ ಬಯಕೆ ಇತ್ತು ಎಂದು ಹೇಳಿದ್ದಾರೆ.

shocking-revelation-shefali-jariwalas-friend-confirms-vitamin-c-iv-drip-hours-before-her-demise

ಇನ್ನುಳಿದಂತೆ ಚರ್ಮದ ಹೊಳಪನ್ನು ಹೆಚ್ಚಿಸುವ 'ಗ್ಲುಟಾಥಿಯೋನ್‌' ಸೇರಿ ಇನ್ನೂ ಹಲವು ಔಷಧಿಗಳನ್ನು ಕಳೆದ ಹತ್ತು ವರ್ಷಗಳಿಂದ ಶೆಫಾಲಿ ಜರಿವಾಲ್ ತೆಗೆದುಕೊಳ್ಳುತ್ತಿದ್ದರು ಎಂದು 'ಟೈಮ್ಸ್ ಆಫ್ ಇಂಡಿಯಾ' ವರದಿಯನ್ನು ಮಾಡಿದೆ. ಇನ್ನು ಸತ್ಯನಾರಾಯಣ ಪೂಜೆಗಾಗಿ ಶೆಫಾಲಿ ಉಪವಾಸ ಇದ್ದರು ಎಂದು ಪೊಲೀಸರು ತಿಳಿಸಿದ್ದು ಉಪವಾಸ ಇದ್ದಾಗ ಕೂಡ ಶೆಫಾಲಿ ಈ ಔಷಧಿಗಳನ್ನು ಸೇವಿಸಿದ್ದರು, ವಿಟಮಿನ್ ಸಿ ಇಂಜೆಕ್ಷನ್ ತೆಗೆದುಕೊಂಡಿದ್ದರು, ಶೆಫಾಲಿ ಅವರ ಈ ನಡೆ ಅವರ ಪ್ರಾಣವನ್ನೇ ಬಲಿ ಪಡೆಯಿತು, ರಾತ್ರಿ 10 ರಿಂದ 11 ಗಂಟೆಯ ನಡುವೆ ಶೆಫಾಲಿ ಮನೆಯಲ್ಲಿ ಕುಸಿದು ಬಿದ್ದಿದ್ದು ಆ ನಂತರ ಅವರ ಪತಿ ಪರಾಗ್ ತ್ಯಾಗಿ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿದರು ಆದರೆ ಅಷ್ಟರಲ್ಲಿ ಶೆಫಾಲಿ ಪ್ರಾಣ ಪಕ್ಷಿ ಹಾರಿ ಹೋಗಿತ್ತು ಎಂದು ಕೂಡ ವರದಿಗಳಲ್ಲಿ ಉಲ್ಲೇಖಿಸಲಾಗಿದೆ.

ಶೆಫಾಲಿ ಅವರ ಸಾವಿಗೆ ನಿಖರವಾದ ಕಾರಣವೇನು ಎನ್ನುವುದು ಇನ್ನು ಬಹಿರಂಗವಾಗದಿದ್ದರೂ, ಸದ್ಯ ಔಷಧಿ ಅಥವಾ ಚಿಕಿತ್ಸೆಗಳಿಂದ ಹೃದಯಾಘಾತ ಆಗಿರಬಹುದು ಎನ್ನುವ ಮಾತು ಕೇಳಿ ಬರುತ್ತಿದೆ.

More from Filmibeat

English summary
Was a Vitamin C IV drip a factor in Shefali Jariwala's untimely demise? Friend Pooja Ghai's revelation adds a new layer to the investigation. Read the latest.
Read more about: death hudugaru
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X