ಲಿಪ್ ಸರ್ಜರಿ ಮಾಡಿಸಿಕೊಂಡು ಮುದ್ದಾದ ಮುಖ ಹಾಳು ಮಾಡಿಕೊಂಡ ಮತ್ತೊಬ್ಬ ನಟಿ, ರೊಚ್ಚಿಗೆದ್ದ ಫ್ಯಾನ್ಸ್ !
ಸೆಲೆಬ್ರೆಟಿಗಳಿಗೆ ತಮ್ಮ ಸೌಂದರ್ಯ ಕೊಂಚ ಡಲ್ ಹೊಡೀತಿದೆ ಅಂತ ಗೊತ್ತಾದರೆ ಸಾಕು ತಕ್ಷಣವೇ ಸರ್ಜರಿಗಳ ಮೊರೆ ಹೋಗುತ್ತಾರೆ. ಲಕ್ಷಾಂತರ ರೂಪಾಯಿಗಳನ್ನು ನೀರಿನಂತೆ ಖರ್ಚು ಮಾಡಿ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ. ಇದಕ್ಕೆ ಚಿತ್ರರಂಗದಲ್ಲಿ ಹಲವಾರು ಉದಾಹರಣೆಗಳಿವೆ. ದೊಡ್ಡ ದೊಡ್ಡ ನಾಯಕಿಯರು ಈ ಪ್ರಯತ್ನ ಮಾಡಿದ್ದಾರೆ. ಆದರೆ ಕೆಲ ಒಮ್ಮೆ ಈ ಸರ್ಜರಿಗಳಿಂದ ಇದ್ದ ಸಹಜ ಸೌಂದರ್ಯ ಹಾಳಾಗುತ್ತೆ.
ಮುಖದ ಆಕಾರ ಬದಲಾಗುತ್ತೆ. ಇದಕ್ಕೆ ಅನನ್ಯ ಪಾಂಡೆ ಸದ್ಯದ ಉದಾಹರಣೆ ಎನ್ನುವುದು ಸದ್ಯಕ್ಕೆ ಅನೇಕರು ಮಾಡುತ್ತಿರುವ ವಾದ. ಹೌದು, ಅನನ್ಯಾ ಪಾಂಡೆ .. ಬಾಲಿವುಡ್‌ನ ಹಿರಿಯ ಕಲಾವಿದ ಚಂಕಿ ಪಾಂಡೆಯ ಮುದ್ದಿನ ಮಗಳು.

'ಸ್ಟೂಡೆಂಟ್ ಆಫ್ ದಿ ಇಯರ್ 2' ಚಿತ್ರದಿಂದ ತಮ್ಮ ವೃತ್ತಿ ಜೀವನ ಆರಂಭಿಸಿದ ಅನನ್ಯಾ ಪಾಂಡೆ ಇಲ್ಲಿಯವರೆಗೆ ಒಂದು ಡಜನ್ ಚಿತ್ರಗಳನ್ನು ಮಾಡಿದ್ದಾರೆ. ಆದರೆ ಆ ಪೈಕಿ ಎರಡು ಚಿತ್ರಗಳು ಗೆದ್ದಿದ್ದೇ ಹೆಚ್ಚು.
ಇಂಥಾ ಅನನ್ಯಾ ಪಾಂಡೆ ಸದ್ಯ ಕಾರ್ತಿಕ್ ಆರ್ಯನ್ ಜೊತೆ ಚಿತ್ರವೊಂದನ್ನು ಮಾಡುತ್ತಿದ್ದಾರೆ. ಆ ಚಿತ್ರದ ಹೆಸರು ''ತು ಮೇರಿ ಮೈ ತೇರಾ, ಮೈ ತೇರಾ ತು ಮೇರಿ''.
2026ರಲ್ಲಿ ಪ್ರೇಮಿಗಳ ಹಬ್ಬದ ಪ್ರಯುಕ್ತ ಬಿಡುಗಡೆಯಾಗಲಿರುವ ಈ ಚಿತ್ರದ ಚಿತ್ರೀಕರಣ ಸದ್ಯ ಭರದಿಂದ ನಡೆಯುತ್ತಿದ್ದು ಅನನ್ಯಾ ಪಾಂಡೆ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಬಿಡುವು ಸಿಕ್ಕಾಗ ಚಿತ್ರೀಕರಣದ ಸ್ಥಳದಿಂದ ತಮ್ಮ ಅಭಿಮಾನಿಗಳಿಗೆ ಫೋಟೊಗಳನ್ನು ಕೂಡ ಹಂಚಿಕೊಳ್ಳುತ್ತಿದ್ದಾರೆ.
ಹೀಗೆ ಅನನ್ಯಾ ಪಾಂಡೆ ಹಂಚಿಕೊಂಡ ಇತ್ತೀಚೆನ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಅನೇಕರ ಹುಬ್ಬೇರಿಸಿವೆ. ಅನನ್ಯಾ ಪಾಂಡೆ ಅವರ ಸುಂದರವಾದ ಕೋಮಲ ತುಟಿಗಳ ಮೇಲೆ ಎಲ್ಲರ ಕಣ್ಣು ಬಿದ್ದಿದೆ.

ಹೀಗಾಗಿಯೇ ಅನನ್ಯಾ ಪಾಂಡೆಗೆ ಅನೇಕರು ಲಿಪ್ ಸರ್ಜರಿ ಮಾಡಿಸಿಕೊಂಡಿದ್ದೀರಾ ಎನ್ನುವ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಮುದ್ದಾದ ಮುಖವನ್ನು ಹಾಳು ಮಾಡಿಕೊಂಡ ನಿಮಗೆ ಅಭಿನಂದನೆಗಳು ಎನ್ನುತ್ತಿದ್ದಾರೆ.
ಇನ್ನು ಕೆಲವರು ದಿಶಾ ಪಟಾನಿ, ಶನಯಾ ಕಪೂರ್ ಮತ್ತು ನಿಮ್ಮನ್ನು ಜೊತೆಯಲ್ಲಿ ಒಟ್ಟಿಗೆ ನಿಲ್ಲಿಸಿದರೆ ಕಂಡು ಹಿಡಿಯುವುದೇ ಕಷ್ಟ ಎನ್ನುವ ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸುತ್ತಿದ್ದಾರೆ.

ಸಹಜವಾಗಿ ತಮ್ಮ ಬಗ್ಗೆ ವ್ಯಕ್ತವಾಗುತ್ತಿರುವ ಅಭಿಪ್ರಾಯದ ಕುರಿತು ಅನನ್ಯಾ ಪಾಂಡೆ ಮಾತನಾಡಿಲ್ಲ. ಲಿಪ್ ಸರ್ಜರಿ ಮಾಡಿಸಿಕೊಂಡಿರುವುದು ನಿಜಾನಾ ? ಸುಳ್ಳಾ ? ಎನ್ನುವುದನ್ನು ಕೂಡ ಹೇಳಿಲ್ಲ. ಹೀಗಾಗಿ ಅನನ್ಯಾ ಅವರ ಈ ಮೌನವನ್ನೇ ಸಮ್ಮತಿಯ ಲಕ್ಷಣ ಎಂದುಕೊಂಡು ಅನೇಕರು ಸದ್ಯ ಅನನ್ಯಾ ವಿರುದ್ಧ ಕಿಡಿ ಕಾರುತ್ತಿದ್ದಾರೆ. ನಾಯಕಿಯರಿಗೆ ಸಹಜ ಸೌಂದರ್ಯವನ್ನು ಹಾಳು ಮಾಡಿಕೊಳ್ಳುವ ಚಟವೇಕೆ ಎನ್ನುವ ಪ್ರಶ್ನೆಯನ್ನು ಕೂಡ ಹಲವರು ಮಾಡುತ್ತಿದ್ದಾರೆ.
ಇನ್ನುಳಿದಂತೆ ಈ ಮೊದಲು ಬಾಡಿ ಶೇಮಿಂಗ್ ಕುರಿತು ಮಾತನಾಡಿದ್ದ ಅನನ್ಯಾ ಪಾಂಡೆ, ನನಗೆ 19 ವಯಸ್ಸಾದಾಗ ನನ್ನನ್ನೂ ಅನೇಕರು 'ಮ್ಯಾಚ್‌ಸ್ಟಿಕ್' ಮತ್ತು 'ಚಿಕನ್ ಲೆಗ್ಸ್' ಎಂದು ಕರೆಯುತ್ತಿದ್ದರು. ಈ ಮೂಲಕ ನನ್ನ ದೇಹಾಕೃತಿಯ ಕುರಿತು ನಿಂದನೆ ಮಾಡುತ್ತಿದ್ದರು ಎಂದು ಹೇಳಿದ್ದರು. ತಮ್ಮ ಮನದ ನೋವನ್ನು ಹೊರ ಹಾಕಿದ್ದರು.
ನನಗೆ ಈಗ 25ರ ಹರೆಯ ಈಗ ನಾನು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿರುವುದಾಗಿ ಮಾತನಾಡುತ್ತಿದ್ದಾರೆ, ಒಟ್ನಲ್ಲಿ ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚಿನ ಪ್ರಶ್ನೆಗಳು ಎದುರಾಗುತ್ತಾವೆ ಎಂದು ಕೂಡ ಅನನ್ಯಾ ಪಾಂಡೆ ಹೇಳಿದ್ದರು.
ಇನ್ನು ಚಿತ್ರದ ವಿಚಾರಕ್ಕೆ ಬಂದರೆ ಈ ವರ್ಷ ಅನನ್ಯಾ ಪಾಂಡೆ ಅಭಿನಯದ ಕೇಸರಿ 2 ಚಿತ್ರ ಬಿಡುಗಡೆಯಾಗಿದೆ. ಅಕ್ಷಯ್ ಕುಮಾರ್, ಆರ್ ಮಾಧವನ್ ಇದ್ದರೂ ಕೂಡ ಚಿತ್ರ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ಒಟ್ನಲ್ಲಿ ಸದ್ಯ ಅನನ್ಯಾ ಪಾಂಡೆ ಲಿಪ್ ಸರ್ಜರಿ ಮಾಡಿಸಿಕೊಂಡಿದ್ಧಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ತಮ್ಮ ಕುರಿತು ಕೇಳಿ ಬರುತ್ತಿರುವ ಈ ಮಾತುಗಳಿಗೆ ಅನನ್ಯಾ ಪಾಂಡೆ ಸ್ಪಷ್ಟೀಕರಣ ಕೊಡ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











