ಒಂದು ರಾತ್ರಿ ಹಾಸಿಗೆ ಹಂಚಿಕೊಳ್ಳಲು ₹20 ಲಕ್ಷ ಪಡೆಯುವ ಈ ಖ್ಯಾತ ನಟಿ ಯಾರು ?

ಮನಿ ಕಂಡರೆ ಮನುಷ್ಯತ್ವಾನೂ ಮರೆಯೋರು ಇರುವ ಕಾಲ ಇದು. ಇಂತಹ ಕಾಲದಲ್ಲಿ ಅನೇಕರು ತತ್ವ ಸಿದ್ಧಾಂತಗಳನ್ನೆಲ್ಲ ಗಂಟು ಮೂಟೆ ಕಟ್ಟಿ ಬಾವಿಗೆ ಎಸೆದಿದ್ದಾರೆ. ಅದರಲ್ಲಿಯೂ ಬಣ್ಣದ ಪ್ರಪಂಚದಲ್ಲಿ ದುಡ್ಡೇ ದೊಡ್ಡಪ್ಪ.. ಕಾಸು ಇದ್ದೋನೇ ಬಾಸು. ಇದಕ್ಕೆ ಕೈಗನ್ನಡಿ ಎಂಬಂತೆ ಅನೇಕರು ಸಾಮಾಜಿಕ ಪ್ರಜ್ಞೆ .. ಮನುಜ ಸೂಕ್ಷ್ಮತೆ .. ಮತ್ತು ಸಂವೇದನೆ ಮರೆತು ಕಾಸು ಸಿಗುತ್ತೆ....

ಅನ್ನುವ ಕಾರಣಕ್ಕೆ ಸಮಾಜಕ್ಕೆ ಅಪಾಯಕಾರಿಯಾದ ಉತ್ಪನ್ನಗಳ ಜಾಹೀರಾತುಗಳನ್ನ ಮಾಡ್ತಾರೆ. ಚಿತ್ರರಂಗವನ್ನು ಅರೆದು ಕುಡಿದವರಂತೆ ಇಲ್ಲಿ ಅನೇಕರು ವೆರೈಟಿ ವೆರೈಟಿ ವೇಷವನ್ನು ಹಾಕಿಕೊಂಡು ಓಡಾಡುತ್ತಾರೆ. ನನಗೆ ಅವರು ಗೊತ್ತು .. ಇವರು ಗೊತ್ತು ಎಂದು ಪುಂಗಿ ಊದಿ ಇಲ್ಲ ಸಲ್ಲದ ಆಸೆಗಳನ್ನು ತೋರಿಸಿ ಬಣ್ಣದ ಲೋಕದಲ್ಲಿ ಮಿಂಚಬೇಕೆಂಬ ಆಸೆಯಲ್ಲಿ ಬಂದವರಿಗೆ ನಾಮ ತೀಡಿ ಕೈಗೆ ಸಿಗದಂತೆ ಕಣ್ಮರೆಯಾಗುತ್ತಾರೆ.

A-List Actress s 20 Lakhs Escort Life EXPOSED Detective Reveals Bollywood Lie

ಇನ್ನೂ ಕೆಲವರು ದುಡ್ಡು ಸಿಗುತ್ತೆ ಎಂದು ಯಾರದ್ದೋ ಮದುವೆಗೆ ಅತಿಥಿಗಳಾಗಿ ಹೋಗುತ್ತಾರೆ. ಕೂರುವುದಕ್ಕೆ, ನಿಲ್ಲುವುದಕ್ಕೆ ಹಣ ಪಡೆಯುತ್ತಾರೆ. ಕೇಳಿದಷ್ಟು ದುಡ್ಡು ನೀಡಿದರೆ ಸಾಕು, ಹೇಳಿದ ಸಮಯಕ್ಕೆ ಸರಿಯಾಗಿ ಬಂದು ಸಭೆ-ಸಮಾರಂಭದಲ್ಲಿ ಡ್ಯಾನ್ಸ್ ಕೂಡ ಮಾಡಿ ಹೋಗುತ್ತಾರೆ. ಹಿಂದೆ ಮುಂದೆ ಯೋಚನೆ ಮಾಡದೇ ದುಡ್ಡು ತೆಗೆದುಕೊಳ್ತಾರೆ.

ಮತ್ತೂ ಕೆಲವರು ದುಡ್ಡಿನ ಆಸೆಗೆ ತಮ್ಮ ಮೈಯನ್ನೂ ಕೂಡ ಇಲ್ಲಿ ಮಾರಿಕೊಳ್ಳುತ್ತಾರೆ. ವೇಶ್ಯಾವಾಟಿಕೆ ದಂಧೆಯಲ್ಲಿ ತಮ್ಮನ್ನು ತೋಡಗಿಸಿಕೊಳ್ಳುತ್ತಾರೆ. ಬೆಳಗ್ಗೆಯೆಲ್ಲಾ ತತ್ವ ಸಿದ್ಧಾಂತಗಳ ಬೋಧನೆ ಮಾಡುವ ಇವರು ರಾತ್ರಿಯಾದರೆ ಪ್ರಭಾವಿ ವ್ಯಕ್ತಿಗಳ ಜೊತೆ ಹಾಸಿಗೆ ಹಂಚಿಕೊಳ್ಳುತ್ತಾರೆ. ಇದಕ್ಕೆ ಪುರಾವೆ ಎಂಬಂತೆ ತಾನ್ಯಾ ಪುರಿ ಬಣ್ಣದ ಲೋಕದ ಕರಾಳ ಸತ್ಯವೊಂದನ್ನು ಹೇಳಿದ್ದಾರೆ.

A-List Actress s 20 Lakhs Escort Life EXPOSED Detective Reveals Bollywood Lie

ಹೌದು ತಾನ್ಯಾ ಪುರಿ... ಭಾರತದ ಪ್ರಖ್ಯಾತ ಡಿಟೆಕ್ಟಿವ್. ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಪತ್ತೇದಾರಿ ಕೆಲಸಕ್ಕೆ ಇಳಿದ ಹೆಗ್ಗಳಿಕೆ ಇವರದ್ದು. ದೆಹಲಿಯಲ್ಲಿ ಇವರದ್ದೇ ''ಲೇಡಿ ಡಿಟೆಕ್ಟಿವ್ಸ್‌'' ಎಂಬ ಸಂಸ್ಥೆ ಇದೆ. ತಮ್ಮ ತಂದೆಯಿಂದ ಬಂದ ಈ ಕಲೆಯನ್ನು ಮುಂದುವರೆಸಿಕೊಂಡು ಬಂದ ತಾನ್ಯಾ ಹಲವರ ಜನ್ಮ ಜಾತಕವನ್ನೆಲ್ಲಾ ಇಲ್ಲಿಯವರೆಗೆ ಜಾಲಾಡಿದ್ದಾರೆ.

ಇಂಥಾ ತಾನ್ಯಾ ಪುರಿ ಸದ್ಯ ಸಿದ್ಧಾರ್ಥ್‌ ಕಣ್ಣನ್ ಅವರಿಗೆ ನೀಡಿದ ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆ ಪೈಕಿ ನಾಯಕಿಯೊಬ್ಬಳು ರಾತ್ರಿ ಸಮಯದಲ್ಲಿ ನೀಡುವ ವಿಶೇ‍ಷ ಪ್ರದರ್ಶನ ಕೂಡ ಒಂದು. ಈ ಕುರಿತು ''ಸಿದ್ಧಾರ್ಥ್ ಕಣ್ಣನ್'' ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ತಾನ್ಯಾ ಪುರಿ ಚಿತ್ರರಂಗದಲ್ಲಿ ಈಗೀಗ ಅವಕಾಶ ವಂಚಿತಗೊಂಡಿರುವ ಪ್ರಖ್ಯಾತ ನಾಯಕಿ ಇದ್ದಾರೆ. ಅವರನ್ನು ತುಂಬಾನೇ ಗೌರವಾನ್ವಿತ ಮತ್ತು ಸಭ್ಯಸ್ಥ ನಾಯಕಿ ಎಂದು ಹಲವರು ಅಂದುಕೊಂಡಿದ್ದಾರೆ. ಆದರೆ ವಾಸ್ತವದಲ್ಲಿ ಆಕೆ ವೇಶ್ಯೆ ಎಂದು ಹೇಳಿದ್ದಾರೆ.

ತಿಂಗಳಿಗೆ ಕಡಿಮೆ ಅಂದರೂ ಹತ್ತು ಜನರ ಜೊತೆ ಈ ನಾಯಕಿ ಹಾಸಿಗೆ ಹಂಚಿಕೊಳ್ಳುತ್ತಾರೆ, ಅವರ ದೈಹಿಕ ಕಾಮನೆಗಳನ್ನು ಈಡೇರಿಸುತ್ತಾರೆ ಎಂದು ಹೇಳಿರುವ ತಾನ್ಯಾ ಪುರಿ ಒಂದು ರಾತ್ರಿಗೆ ಗರಿಷ್ಠ 20 ಲಕ್ಷ ಮತ್ತು ಕನಿಷ್ಠ 5 ಲಕ್ಷ ಹಣವನ್ನು ಅವರು ಪಡೆಯುತ್ತಾರೆ ಎಂದು ಹೇಳಿದ್ದಾರೆ. ಹಣದ ಮೌಲ್ಯ ನಿಮ್ಮ ಸಮಯದ ಮೇಲೆ ಅವಲಂಬಿತವಾಗಿರುತ್ತೆ.. ನಿಮ್ಮ ಜೇಬಿನ ಮೇಲೆ ನಿರ್ಧಾರವಾಗಿರುತ್ತೆ.. ನಿಮಗೆ ಯಾವ ರೀತಿಯ ಸುಖ ಅನುಭವಿಸಬೇಕು ಎನ್ನುವುದರ ಮೇಲೆ ತೀರ್ಮಾನವಾಗುತ್ತೆ ಎಂದು ಹೇಳೀರುವ ತಾನ್ಯಾ ಪುರಿ ಒಂದು ವೇಳೆ ಇಡೀ ರಾತ್ರಿ ಈ ನಾಯಕಿಯ ಜೊತೆ ನೀವು ಸಮಯ ಕಳೆಯಬೇಕೆಂದು ಬಯಸಿದರೆ 20 ಲಕ್ಷ ಹಣವನ್ನು ನೀವು ನೀಡಬೇಕಾಗುತ್ತೆ ಎಂದು ಹೇಳಿದ್ದಾರೆ.

ಹೆಚ್ಚಾಗಿ ದೂರದೂರುಗಳಿಗೆ ಇವರು ಹೋಗುತ್ತಾರೆ. ಅದರಲ್ಲಿಯೂ ವಿದೇಶಕ್ಕೆ ಈ ನಟಿ ತುಂಬಾ ಪ್ರವಾಸಕ್ಕೆ ಹೋಗುತ್ತಾರೆ ಎಂದು ಹೇಳಿರುವ ತಾನ್ಯಾ ಒಂದು ಸ್ಥಳಕ್ಕೆ ಇವರು ಹೋದರೆ ಅಲ್ಲಿನ ಐಶಾರಾಮಿ ಹೊಟೇಲ್‌ನಲ್ಲಿ ನಾಲ್ಕೈದು ದಿನ ಇರುತ್ತಾರೆ. ಹೋಟೆಲ್ ಪದೇ ಪದೇ ಬದಲಿಸುವುದಿಲ್ಲ. ಇನ್ನು ಹೋಟೆಲ್ ಐಶಾರಾಮಿಯಾದ ಕಾರಣ ಯಾರಿಗೂ ಅನುಮಾನ ಕೂಡ ಬರುವುದಿಲ್ಲ. ಸೆಲೆಬ್ರೇಟಿಯನ್ನು ನೋಡಲು ಅವರ ಕಡೆಯವರು ಅವರ ಅಭಿಮಾನಿಗಳು ಬಂದಿರಬಹುದು ಎಂದು ಹೋಟೆಲ್‌ನವರು ಅಂದುಕೊಳ್ಳುತ್ತಾರೆ. ಆದರೆ ರೂಮ್‌ ಒಳಗಡೆ ನಡೆಯುವುದೇ ಬೇರೆ ಎಂದು ಹೇಳಿದ್ಧಾರೆ.

ಅಂದ್ಹಾಗೇ ನಾನು ಈ ನಟಿಯನ್ನು ಹಿಂಬಾಲಿಸಿದ್ದು ಅವರದ್ದೇ ಪ್ರಿಯಕರನ ಒತ್ತಾಸೆಯಿಂದ ಎಂದು ಹೇಳಿರುವ ತಾನ್ಯಾ ಅದೊಂದು ದಿನ ಅವರ ಪ್ರಿಯಕರ ನಮ್ಮ ಬಳಿ ಬಂದು ನನಗೆ ಅನುಮಾನ ಇದೆ. ನೀವು ನನ್ನ ಈ ಅನುಮಾನವನ್ನು ದೂರ ಮಾಡಬೇಕು ಎಂದು ಹೇಳಿದರು. ಈ ಹಿನ್ನೆಲೆ ನಾವು ಈ ಕೇಸ್ ಸ್ವೀಕರಿಸಿ ನಟಿಯನ್ನು ಹಿಂಬಾಲಿಸಲು ಶುರು ಮಾಡಿದೆವು ಎಂದು ಹೇಳಿದ್ದಾರೆ.

ಮುಂದುವರೆದು ಆ ನಂತರ ನಟಿಯ ವಾಸ್ತವ ಕಥೆಯನ್ನು ನಾವು ಸಾಕ್ಷಿ ಸಮೇತ ಆಕೆಯ ಪ್ರಿಯಕರನಿಗೆ ಹೇಳಿದಾಗ ಆ ಪ್ರಿಯಕರ ಆಕೆಯ ಕೈಯನ್ನು ಬಿಡಲಿಲ್ಲ. ಬದಲಿಗೆ ಈಗಲೂ ಅವರಿಬ್ಬರ ಸಂಬಂಧ ಮುಂದುವರೆದಿದೆ. ಯಾಕೆಂದರೆ ಹಣ ಎಲ್ಲರ ಅವಶ್ಯಕತೆ. ಅವರು ಇಬ್ಬರು ಒಂದು ಬ್ಯುಸಿನೆಸ್ ಮಾಡುತ್ತಿದ್ದಾರೆ. ಆ ಬ್ಯುಸಿನೆಸ್‌ಗೆ ಹಣ ಬೇಕು ಎಂದು ಹೇಳಿದ್ದಾರೆ. ಇಬ್ಬರು ಲಿವ್ ಇನ್ ಸಂಬಂಧದಲ್ಲಿ ನೆಮ್ಮದಿಯಿಂದ ಇದ್ದಾರೆ ಎಂದಿದ್ದಾರೆ.

ಒಟ್ನಲ್ಲಿ ಹಣ ಎಲ್ಲರ ಅವಶ್ಯಕತೆ, ಅನಿವಾರ್ಯತೆ ನಿಜಾ. ಹಾಗಂತ ಅದನ್ನು ಹೇಗೆ ಬೇಕಾದರೆ ಹಾಗೆ ಸಂಪಾದಿಸಿಬಿಡಲು ಸಾಧ್ಯವಿಲ್ಲವಲ್ಲಾ? ಒಳ್ಳೇ ಮಾರ್ಗಗಳನ್ನು ಕಂಡು ಹಿಡಿದುಕೊಂಡು ಶ್ರಮವಹಿಸಿ ಸಂಪಾದಿಸಬೇಕು. ಹಣ ಮಾಡುವ ಧಾವಂತಕ್ಕೆ ಬಿದ್ದು ಬಣ್ಣದ ಪ್ರಪಂಚದಲ್ಲಿರುವ ನಟಿಯರು ಹೀಗೆ ಯಾವ್ಯಾವುದೋ ದಾರಿಯಲ್ಲಿ ದುಡಿದರೆ ಅದೂ ಒಂದು ಬದುಕು ಅನ್ನಿಸಿಕೊಳ್ಳುತ್ತಾ? ಉತ್ತರ ಪ್ರಜ್ಞಾವಂತ ನಾಯಕಿ ನಟಿಯರೇ ಕೊಡಬೇಕು.

More from Filmibeat

English summary
Detective Puri reveals a reputable Bollywood actress earns lakhs as an escort, with her partner knowing the truth but staying for the massive income.
Read more about: money actress detective
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X