ದುರ್ಗಾ ಪೂಜೆ ಸಮಯದಲ್ಲಿ ಕಾಜೋಲ್ ಖಾಸಗಿ ಭಾಗಕ್ಕೆ ಕೈಹಾಕಿದ ಬಾಡಿಗಾರ್ಡ್, ಬೆಚ್ಚಿ ಬಿದ್ದ ಬಾಲಿವುಡ್‌ನ ಕೃಷ್ಣ ಸುಂದರಿ

ಸೆಲೆಬ್ರೆಟಿಗಳು ಸಾರ್ವಜನಿಕವಾಗಿ ಓಡಾಡುತ್ತಿದ್ದಾರೆ ಅಂದರೆ ಅಭಿಮಾನಿಗಳು ಅವರನ್ನು ಹಿಂಬಾಲಿಸೋದು.. ಸೆಲ್ಪಿ ಕೇಳೋದು.. ಮಾತನಾಡಲು ಹವಣಿಸೋದು ತುಂಬಾನೇ ಕಾಮನ್ನು. ಆದರೆ ಇದನ್ನು ಅತಿಯಾದ ಅಭಿಮಾನ ಎನ್ನಬೇಕೋ? ಅಥವಾ ಹುಚ್ಚಾಟ ಎನ್ನಬೇಕೋ ಗೊತ್ತಿಲ್ಲ. ಆದರೆ ಅಭಿಮಾನಿಗಳ ಸೆಲ್ಫಿ ಸಮಸ್ಯೆಗಳಿಂದ ತಾರೆಯರು ಪ್ರತಿ ದಿನ ಒಂದಿಲ್ಲೊಂದು ರೀತಿಯಲ್ಲಿ ನರಳುವಂತಾಗಿದೆ. ಇನ್ನೂ ಹಬ್ಬ ಹರಿದಿನ ಬಂದರೆ ಮುಗೀತು. ನೆಮ್ಮದಿಯಿಂದ..

ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆ ಮಾಡುವ ಭಾಗ್ಯ ಕೂಡ ಇವರಿಗೆ ಇರುವುದಿಲ್ಲ. ಹಬ್ಬಗಳನ್ನು ತಮ್ಮ ಮನೆ ಮಂದಿಯ ಜೊತೆ ಆಚರಿಸುವ ಅವಕಾಶ ಕೂಡ ಇರಲ್ಲ. ಆಚರಣೆಗೆ ಮುಂದಾದರೆ.. ವಿಷಯ ತಿಳಿದು ಅಲ್ಲಿ ಕೂಡ ಅಭಿಮಾನಿಗಳ ದಂಡು ಹಾಜರಿ ಹಾಕುತ್ತೆ.

SHOCKING VIRAL VIDEO Kajol s Oops Moment at Durga Pandal Was She Inappropriately Touched

ಹೀಗಾಗಿಯೇ ಕೆಲವರು ವಿಶೇಷ ದಿನದಂದು.. ಹಬ್ಬದಂದು.. ತಮ್ಮ ಮನೆಯವರ ಜೊತೆ ಕಾಲ ಕಳೆಯಲು, ಚಿತ್ರರಂಗದ ಸ್ನೇಹಿತರ ಜೊತೆ ಹಬ್ಬವನ್ನು ಆಚರಿಸಲು, ಬಾಡಿಗಾರ್ಡ್‌ಗಳನ್ನು ನಿಯೋಜನೆ ಮಾಡಿಕೊಳ್ಳುತ್ತಾರೆ. ಆದರೆ ಹೀಗೆ ನೇಮಿಸಲಾದ ಬಾಡಿಗಾರ್ಡ್‌ನಿಂದನೇ ಲೈಗಿಂ*ಕ ಕಿರುಕುಳವಾದರೆ ? ಯಾರನ್ನು ದೂಷಿಸುವುದು. ಯಾರಿಂದ ರಕ್ಷಣೆಯನ್ನು ಪಡೆಯುವುದು..? ಸದ್ಯ ಕಾಜೋಲ್ ವಿಚಾರದಲ್ಲಿ ಇಂತಹದ್ದೇ ಪ್ರಶ್ನೆ ಎದುರಾಗಿದೆ.

ಹೌದು, ಕಾಜೋಲ್ ಬಾಲಿವುಡ್‌ನ ಕೃಷ್ಣ ಸುಂದರಿ. ಕೇವಲ 17ರ ಪ್ರಾಯದಲ್ಲಿಯೇ ''ಬಾಜಿಗರ್'' ಚಿತ್ರದಲ್ಲಿ ಶಾರುಖ್ ಖಾನ್‌ಗೆ ಜೋಡಿಯಾಗಿದ್ದ ಕಾಜೋಲ್ ಆ ನಂತರ ಬಾಲಿವುಡ್‌ನ ನಂಬರ್ 1 ನಾಯಕಿಯಾಗಿದ್ದು .. ಚಿತ್ರರಂಗವನ್ನಾಳಿದ್ದು .. ಈಗ ಇತಿಹಾಸ.

ಇಂಥಾ ಕಾಜೋಲ್ ಮತ್ತು ಬಾಲಿವುಡ್‌ನ ಮತ್ತೊಬ್ಬ ಸ್ಟಾರ್ ನಾಯಕಿ ರಾಣಿ ಮುಖರ್ಜಿ ಸಂಬಂಧದಲ್ಲಿ ಸಹೋದರಿಯರು. ಮೂಲತಃ ಬೆಂಗಾಲಿನವರು. ಹೀಗಾಗಿ ಪ್ರತಿ ವರ್ಷ ಇಬ್ಬರು ಸೇರಿ ಅದ್ಧೂರಿಯಾಗಿ ದುರ್ಗಾ ಪೂಜೆಯನ್ನು ಮಾಡುತ್ತಾರೆ. ಈ ವರ್ಷ ಕೂಡ ಮಾಡಿದ್ದಾರೆ.

ಇವರ ಈ ಸಂಭ್ರಮದಲ್ಲಿ ಬಾಲಿವುಡ್‌ನ ಹಲವು ಸ್ಟಾರ್‌ಗಳು ಪ್ರತಿ ವರ್ಷ ಬಂದು ತಪ್ಪದೇ ಭಾಗವಹಿಸುತ್ತಾರೆ. ಈ ಹಿನ್ನೆಲೆ ಬಾಡಿಗಾರ್ಡ್‌ಗಳ ವ್ಯವಸ್ಥೆಯನ್ನು ಕೂಡ ಮಾಡಿರಲಾಗಿರುತ್ತೆ.

SHOCKING VIRAL VIDEO Kajol s Oops Moment at Durga Pandal Was She Inappropriately Touched

ಹೀಗೆ ನವರಾತ್ರಿ ಆಚರಿಸುವ ಸಂಪ್ರದಾಯ ಕಾಜೋಲ್ ಮತ್ತು ರಾಣಿ ಮುಖರ್ಜಿ ಎಂದಿನಂತೆ ಈ ಬಾರಿ ಕೂಡ ನವರಾತ್ರಿಯನ್ನು ಆಚರಿಸಿದರು. ಕಾಜೋಲ್ ಪ್ರತಿ ವರ್ಷದಂತೆ ನವಮಿಯಂದು ದುರ್ಗಾ ಪೂಜಾ ಪೆಂಡಾಲ್‌ನಲ್ಲಿ ಸಿಂಧೂರ್ ಖೇಲಾ ಹಬ್ಬ ಹಮ್ಮಿಕೊಂಡಿದ್ದರು.

ಈ ಹಬ್ಬದಲ್ಲಿ ಮದುವೆಯಾದ ಮಹಿಳೆಯರು ಪರಸ್ಪರ ಸಿಂಧೂರ ಹಂಚಿಕೊಂಡು ಸಂಭ್ರಮ ಪಡುತ್ತಾರೆ. ಈ ಅದ್ಧೂರಿ ಹಬ್ಬದಲ್ಲಿ ಭಾಗವಹಿಸಲು ಕಾಜೋಲ್ ಕೆಂಪು ಮತ್ತು ಬಿಳಿ ಸೀರೆಯನ್ನು ಬಂಗಾಳಿ ಶೈಲಿಯಲ್ಲಿ ಧರಿಸಿ ಬಂದಿದ್ದರು. ತಮ್ಮ ಇಡೀ ಕುಟುಂಬ ಮತ್ತು ಚಿತ್ರರಂಗದವರ ಜೊತೆ ಭಕ್ತಿಭಾವದಿಂದ ದುರ್ಗಾದೇವಿಗೆ ಪೂಜೆ ಮಾಡಿ ಸಿಂಧೂರ್ ಖೇಲಾ ಹಬ್ಬದಲ್ಲಿ ಭಾಗವಹಿಸಲು ತೆರಳುತ್ತಿದ್ದರು.

ಇದೇ ಸಮಯದಲ್ಲಿ ಅಲ್ಲಿಯೇ ಇದ್ದ ಬಾಡಿಗಾರ್ಡ್ ಮೆಟ್ಟಿಲು ಇಳಿದು ಬರುತ್ತಿದ್ದ ಕಾಜೋಲ್ ಅವರನ್ನು ತಡೆಯುವಂತೆ ಪ್ರಯತ್ನ ಮಾಡಿದ್ದಾನೆ. ಆ ನಂತರ ನಡೆದುಕೊಂಡು ಬರುತ್ತಿದ್ದ ಕಾಜೋಲ್ ಅವರ ಎದೆಯ ಭಾಗಕ್ಕೆ ಕೈ ಹಾಕಿದ್ದಾನೆ.

ಬಾಡಿಗಾರ್ಡ್‌ನಿಂದ ಈ ವರ್ತನೆಯನ್ನು ನಿರೀಕ್ಷೆ ಮಾಡದ ಕಾಜೋಲ್ ಮರು ಕ್ಷಣವೇ ದಿಗ್ಭ್ರಾಂತರಾಗಿದ್ದಾರೆ. ಆಶ್ಚರ್ಯ ಮತ್ತು ಕೋಪದಲ್ಲಿ ಬಾಡಿಗಾರ್ಡ್‌ನತ್ತ ನೋಡಿದ್ದಾರೆ. ಆ ನಂತರ ಏನಿದೆಲ್ಲಾ ಎಂದು ಕೇಳುವ ಪ್ರಯತ್ನ ಮಾಡಿದ್ದಾರೆ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ. ಹಲವಾರು ಜನ ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದು ಬಾಡಿಗಾರ್ಡ್ ವಿರುದ್ಧ ಕೆಂಡ ಕಾರುತ್ತಿದ್ದಾರೆ. ಬೇಕು ಬೇಕಂತಲೇ ಆತ ಈ ಹೀನ ಕೆಲಸ ಮಾಡಿದ್ದು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಮತ್ತೂ ಕೆಲವರು ಆ ಬಾಡಿಗಾರ್ಡ್ ಮೇಲೆ ಲೈಂಗಿಕ ದೌರ್ಜನ್ಯದಡಿ ಪ್ರಕರಣ ದಾಖಲಿಸಿಕೊಳ್ಳಬೇಕು ಪೊಲೀಸರು ಆ ವ್ಯಕ್ತಿಗೆ ಸರಿಯಾದ ಬುದ್ದಿ ಕಲಿಸಬೇಕು ಎಂದು ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.

More from Filmibeat

English summary
Bollywood star Kajol faced an uncomfortable incident at the Durga Puja pandal. See the exact moment caught on camera that sparked controversy and public outrage.
Read more about: kajol harrasment viral video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X