'ಥಮ್ಮ' ಚಿತ್ರದ ಸಂಗೀತ ನಿರ್ದೇಶಕನ ಮೇಲೆ ಲೈಂ*ಗಿಕ ದೌರ್ಜನ್ಯ ಆರೋಪ- ಬಂಧನ, ಬಿಡುಗಡೆ

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ನುವ ಮಾತು ಇದೆ. ಈ ಮಾತು ಚಿತ್ರರಂಗಕ್ಕೆ ಹೆಚ್ಚು ಸೂಕ್ತವಾಗುತ್ತೆ. ಯಾಕೆಂದರೆ.. ಹೊರಗಡೆಯಿಂದ ತುಂಬಾನೇ ಕಲರ್ ಫುಲ್ ಆಗಿ ಕಾಣುವ ಈ ಬಣ್ಣದ ಲೋಕದಲ್ಲಿ ನಾನಾ ಬಗೆಯ ವೇಷಭೂಷಣ ಹಾಕಿಕೊಂಡ ಹಲವಾರು ಜನ ಇದ್ದಾರೆ. ಅದರಲ್ಲಿಯೂ ನಾಯಕಿಯಾಗಿ ನೆಲೆಯೂರಬೇಕೆಂದು ಕನಸೊತ್ತು ಬರುವ ಹಲವರ ಪಾಲಿಗೆ ಚಿತ್ರರಂಗ ಕಲ್ಲು ಮುಳ್ಳಿನ ಹಾದಿಯೇ.

ಅಡಿಗಡಿಗೂ ಈ ಚಿತ್ರರಂಗದಲ್ಲಿ ಸವಾಲುಗಳಿಗೆ ಎದೆಯೊಡ್ಡಬೇಕಾಗುತ್ತದೆ. ಪಾತ್ರಕ್ಕೆ ಪಲ್ಲಂಗವೇರಬೇಕು ಎಂಬ ಷರತ್ತನ್ನು ಒಪ್ಪಿಕೊಂಡರೆ ಮಾತ್ರ ಇಲ್ಲಿ ಅವಕಾಶ ಎಂದು ದುಷ್ಟ ವ್ಯವಸ್ಥೆಯೊಂದು ಇವರಿಗೆ ಮಾನಸಿಕ ಕಿರಿಕಿರಿ ನೀಡುತ್ತದೆ. ಕೇವಲ ನಾಯಕಿಯಾಗಿ ನೆಲೆಯೂರಬೇಕೆಂದು ಕನಸೊತ್ತು ಬರುವ ಹುಡುಗಿಯರನ್ನು ಮಾತ್ರ ಈ ಗುಂಪು ಯಾಮಾರಿಸುವುದಿಲ್ಲ. ಕಾಮತೃಷೆಗೆ ಬಳಸಿಕೊಳ್ಳುವುದಿಲ್ಲ.

'

SHOCKWAVE in Bollywood Sachin-Jigar Sachin Sanghvi Arrested in Molestation Case Granted Bail

ಬದಲಿಗೆ ಚಿತ್ರರಂಗದಲ್ಲಿ ಸಾಧನೆಯ ಶಿಖರಕ್ಕೇರಬೇಕೆಂಬ ಉಮೇದಿಯಲ್ಲಿ ಚಿತ್ರರಂಗದ ಬೇರೆ ಬೇರೆ ಕ್ಷೇತ್ರಕ್ಕೆ ಬರುವ ಮಹಿಳೆಯರನ್ನು ಕೂಡ ಇವರು ಪೀಡಿಸುತ್ತಾರೆ. ಈ ಸಾಲಿಗೆ ಬಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕರ ಜೋಡಿಯಲ್ಲಿ ಒಂದಾದ ಸಚಿನ್ ಜಿಗರ್ ಕೂಡ ಸೇರುತ್ತಾರಾ..? ಗೊತ್ತಿಲ್ಲ. ಆದರೆ ಸದ್ಯ ಈ ಜೋಡಿಯಲ್ಲಿರುವ ಸಚಿನ್ ಸಂಘ್ವಿ ಅವರ ಮೇಲೆ ಲೈಂ*ಗಿಕ ದೌರ್ಜನ್ಯದ ಆರೋಪವನ್ನು 29 ವರ್ಷದ ಯುವತಿಯೊಬ್ಬರು ಮಾಡಿದ್ದಾರೆ.

ಯುವತಿ ನೀಡಿದ ದೂರಿನ ಮೇರೆಗೆ ಪೊಲೀಸರು ಸಚಿನ್ ಸಂಘ್ವಿ ಅವರನ್ನು ಬಂಧಿಸಿದ್ದಾರೆ. ಆ ನಂತರ ಸಚಿನ್ ಸಂಘ್ವಿ ಜಾಮೀನು ಪಡೆದು ಆಚೆ ಕೂಡ ಬಂದಿದ್ದಾರೆ.

29 ವರ್ಷದ ಸಂತ್ರಸ್ತ ಯುವತಿ ನೀಡಿದ ದೂರಿನ ಅನ್ವಯ ಸಚಿನ್ ಸಂಘ್ವಿ ಕಳೆದ ಫೆಬ್ರವರಿಯಲ್ಲಿ ಇನ್‌ಸ್ಟಾಗ್ರಾಮ್‌ ಮೂಲಕ ಯುವತಿಯನ್ನು ಸಂಪರ್ಕಿಸಿದ್ದರು. ಆ ನಂತರ ಪರಿಚಯ ಮಾಡಿಕೊಂಡು ತಮ್ಮ ಮ್ಯೂಸಿಕ್ ಆಲ್ಬಂನಲ್ಲಿ ಅವಕಾಶ ಕೊಡುವುದಾಗಿ ನಂಬಿಸಿ ನಂಬರ್ ಪಡೆದುಕೊಂಡಿದ್ದರು. ಆ ನಂತರ ಸ್ಟುಡಿಯೋಗೆ ಬರುವಂತೆ ಕೂಡ ಕರೆ ಮಾಡಿ ಸಚಿನ್ ಹೇಳಿದ್ದರು.

ಈ ಹಿನ್ನೆಲೆ ಸ್ಟುಡಿಯೋಗೆ ಯುವತಿ ತೆರಳಿದಾಗ ತಮ್ಮೆದುರು ಸಚಿನ್ ಮದುವೆಯಾಗುವ ಪ್ರಸ್ತಾಪ ಇಟ್ಟಿದ್ದರು, ಆ ನಂತರ ಹಲವು ಬಾರಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರು ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

SHOCKWAVE in Bollywood Sachin-Jigar Sachin Sanghvi Arrested in Molestation Case Granted Bail

ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಾದ ಮಾಡಿರುವ ಸಚಿನ್ ಸಂಘ್ವಿ ಅವರ ಪರ ವಕೀಲ ಆದಿತ್ಯ ಮಿಥೆ, ಸಚಿನ್ ಸಂಘ್ವಿ ಅವರ ವಿರುದ್ದ ಮಾಡಲಾದ ಆರೋಪಗಳೆಲ್ಲವೂ ಸುಳ್ಳು ಎಂದು ಹೇಳಿದ್ದಾರೆ. ನನ್ನ ಕಕ್ಷಿದಾರರ ವಿರುದ್ಧದ ಎಫ್‌ಐಆರ್‌ನಲ್ಲಿರುವ ಆರೋಪಗಳು ಸಂಪೂರ್ಣವಾಗಿ ಆಧಾರ ರಹಿತ ಮತ್ತು ಸತ್ಯಕ್ಕೆ ದೂರವಾಗಿವೆ ಎಂದು ಹೇಳಿರುವ ಆದಿತ್ಯ ಮಿಥೆ ಈ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದ್ದಾರೆ.

ಮುಂದುವರೆದು ಮಾಧ್ಯಮದವರಿಗೆ ಕೂಡ ಪ್ರತಿಕ್ರಿಯೆ ನೀಡಿರುವ ಸಚಿನ್ ಸಂಘ್ವಿ ಪರ ವಕೀಲರು ನನ್ನ ಕಕ್ಷಿದಾರರ ಬಂಧನ ಕಾನೂನು ಬಾಹಿರವಾಗಿತ್ತು, ಅದಕ್ಕಾಗಿಯೇ ಅವರಿಗೆ ತಕ್ಷಣ ಜಾಮೀನು ನೀಡಲಾಗಿದೆ ಎಂದು ಹೇಳಿದ್ದಾರೆ. ಎಲ್ಲಾ ಆರೋಪಗಳು ಸುಳ್ಳು. ಸತ್ಯ ಶೀಘ್ರದಲ್ಲಿಯೇ ಹೊರ ಬರುತ್ತೆ ಎಂದು ಕೂಡ ಹೇಳಿದ್ದಾರೆ.

ಅಂದ್ಹಾಗೇ ಸಚಿನ್-ಜಿಗರ್ ಬಾಲಿವುಡ್‌ನ ಪ್ರಖ್ಯಾತ ಜೋಡಿ. 2009ರಲ್ಲಿ ಸಂಗೀತ ನಿರ್ದೇಶಕರಾಗಿ ಬಾಲಿವುಡ್‌ಗೆ ಬಂದ ಇಬ್ಬರು ಸಲ್ಮಾನ್ ಖಾನ್ ಅಭಿನಯದ ''ಪಾರ್ಟ್ನರ್‌'' ಚಿತ್ರದ ಹಾಡೊಂದಕ್ಕೆ ಸಂಗೀತ ನೀಡಿದ್ದರು. ಸಂಗೀತ ನಿರ್ದೇಶಕರಾಗಿ ಈ ಜೋಡಿ ಮಾಡಿದ ಮೊದಲ ಸಂಪೂರ್ಣ ಚಿತ್ರ ಅಂದರೆ ಅದು ''ಫಾಲ್ತು''. ಇಲ್ಲಿಂದ ಒಂದಾದ ಮೇಲೊಂದರಂತೆ ಸಂಗೀತ ನಿರ್ದೇಶನ ಮಾಡಿಕೊಂಡು ಬಂದ ಇವರು ''ಶೋರ್ ಇನ್ ದಿ ಸಿಟಿ''.. ''ಎಬಿಸಿಡಿ''.. ''ಶುದ್ಧ್ ದೇಸಿ ರೊಮ್ಯಾನ್ಸ್''.. ''ಬದಲಾಪುರ್''.. ''ಎಬಿಸಿಡಿ-2''.. ಹೀಗೆ ಹಲವು ಸಂಗೀತ ನಿರ್ದೇಶನ ಮಾಡಿದ್ದಾರೆ. ತೀರಾ ಇತ್ತೀಚೆಗೆ ಬಂದ ''ಪರಮ ಸುಂದರಿ'' ಮತ್ತು ''ಥಮ್ಮ'' ಚಿತ್ರಕ್ಕೆ ಕೂಡ ಇವರದ್ದೇ ಸಂಗೀತ ನಿರ್ದೇಶನ ಇತ್ತು.

More from Filmibeat

English summary
SHOCKWAVE in Bollywood: Composer Sachin Sanghvi arrested in a high-profile molestation case. Get the full report on the charges and his quick bail.
Read more about: me too harrasment
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X