»   » 'ಶೋಲೆ' ಖ್ಯಾತಿಯ ನಟ ರಾಜ್ ಕಿಶೋರ್ ನಿಧನ

'ಶೋಲೆ' ಖ್ಯಾತಿಯ ನಟ ರಾಜ್ ಕಿಶೋರ್ ನಿಧನ

Posted By:
Subscribe to Filmibeat Kannada

1975ರ ಸೂಪರ್ ಹಿಟ್ 'ಶೋಲೆ' ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಮತ್ತು ಧರ್ಮೇಂದ್ರ ಜೊತೆಯಲ್ಲಿ ಖೈದಿಗಳ ಪೈಕಿ ಒಬ್ಬರಾಗಿದ್ದ ರಾಜ್ ಕಿಶೋರ್ (85) ಹೃದಯಾಘಾತದಿಂದ ಶುಕ್ರವಾರ ಬೆಳಿಗ್ಗೆ ನಿಧನರಾಗಿದ್ದಾರೆ.

ಕೆಲ ದಿನಗಳಿಂದ ಉದರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ರಾಜ್ ಕಿಶೋರ್ ಕಳೆದ ರಾತ್ರಿ ಹೃದಯಾಘಾತವಾಗಿ ಗುರಗಾಂವ್ ನಲ್ಲಿರುವ ತಮ್ಮ ನಿವಾಸದಲ್ಲಿ ಮೃತಪಟ್ಟರು ಎಂಬುದಾಗಿ ಸಿನಿಮಾ ಮತ್ತು ಟಿವಿ ಕಲಾವಿದರ ಸಂಘದ ಸದಸ್ಯ ನೂಪುರ್ ಅಲಂಕರ್ ಸ್ಪಷ್ಟಪಡಿಸಿದ್ದಾರೆ.

ಪತ್ನಿ ಹಾಗೂ ಒಬ್ಬ ಮಗನನನ್ನು ರಾಜ್ ಕಿಶೋರ್ ಅಗಲಿದ್ದಾರೆ. ಸಹನಟ ಅಗಲಿಕೆ ಬಾಲಿವುಡ್ ಸಂತಾಪ ಸೂಚಿಸಿದ್ದು, ಹಲವು ನಟ-ನಟಿಯರು ಟ್ವಿಟ್ಟರ್ ನಲ್ಲಿ ಕಂಬನಿ ಮಿಡಿದಿದ್ದಾರೆ.

Sholay Actor Raj Kishore Passes Away

ಶೋಲೆ ಮಾತ್ರವಲ್ಲದೆ, ಪಡೊಸನ್ ( 1968) ದೀವಾರ್ (1975) ರಾಮ್ ಔರ್ ಶ್ಯಾಮ್ ( 1967) ಹರೇ ರಾಮ ಹರೇ ಕೃಷ್ಣ ( 1971) ಅಸಮಾನ್ (1984) ಬಾಂಬೆ ಟು ಗೋವಾ ( 1972) ಕರಣ್ ಅರ್ಜುನ್ (1995) ಸೇರಿದಂತೆ ಹಲವು ಚಿತ್ರಗಳಲ್ಲಿ ರಾಜ್ ಕಿಶೋರ್ ಅಭಿನಯಿಸಿದ್ದರು.

English summary
Raj Kishore, who played the role of one of the prisoners in the iconic film ‘Sholay’ passed away at the age of 85 at the wee hours of Friday morning after suffering from a heart attack.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X