ಶೋಲೆ 'ಕಾಲಿಯಾ' ಪಾತ್ರಧಾರಿ ವಿಜು ಖೊಟೆ ನಿಧನ

ಬಾಲಿವುಡ್ ನಟ ವಿಜು ಕೊಟೆ ಇಂದು (ಸಪ್ಟೆಂಬರ್ 30) ಮುಂಬೈನಲ್ಲಿ ವಿಧಿವಶರಾಗಿದ್ದಾರೆ. 'ಶೋಲೆ' ಸಿನಿಮಾದ 'ಕಲಿಯಾ' ಪಾತ್ರದ ಮೂಲಕ ವಿಜು ಕೊಟೆ ದೊಡ್ಡ ಹೆಸರು ಮಾಡಿದ್ದರು.

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ವಿಜು ಕೊಟೆ ತಮ್ಮ ಮುಂಬೈನ ನಿವಾಸದಲ್ಲಿ ಬೆಳಗ್ಗೆ 6 ಗಂಟೆ 55 ನಿಮಿಷಕ್ಕೆ ಕೊನೆಯೂಸಿರೆಳೆದಿದ್ದಾರೆ. ವಿಜು ಕೊಟೆರಿಗೆ 77 ವರ್ಷ ವಯಸ್ಸಾಗಿತ್ತು.

ರಂಗಭೂಮಿ ನಟನಾಗಿದ್ದ ವಿಜು ಕೊಟೆ ಅನೇಕ ಸಿನಿಮಾಗಳಲ್ಲಿ ನಟಿಸಿದರು. ಅದರಲ್ಲಿಯೂ ಅಮಿತಾಭ್ ಬಚ್ಚನ್ ಹಾಗೂ ಧರ್ಮೇಂದ್ರ ನಟಿಸಿದ್ದ 'ಶೋಲೋ' ಸಿನಿಮಾ ವಿಜು ಕೊಟೆರಿಗೆ ದೊಡ್ಡ ಹೆಸರು ನೀಡಿತ್ತು. ಈ ಸಿನಿಮಾದ 'ಕಲಿಯಾ' ಪಾತ್ರದ ಮೂಲಕ ಜನಪ್ರಿಯತೆ ಪಡೆದರು.

Sholay Kaalia fame actor Viju Khote passes away

'ಅಂದಾಜ್ ಅಪ್ನಾ ಅಪ್ನಾ' ಸಿನಿಮಾದ ರಾಬರ್ಟ್ ಪಾತ್ರ ಕೂಡ ಜನರ ಮನಸ್ಸಿನಲ್ಲಿ ಉಳಿಯಿತು. ಇದರೊಂದಿಗೆ, 'ನಾಗಿನಾ ಮತ್ತು ಚೀನಾ ಗೇಟ್', 'ಕುರ್ಬಾನಿ', 'ಕಾರ್ಜ್' ಸಿನಿಮಾಗಳು ವಿಜು ಕೊಟೆ ನಟನೆಯಲ್ಲಿ ಬಂದ ಪ್ರಮುಖ ಸಿನಿಮಾಗಳಾಗಿವೆ.

ಒಟ್ಟಾರೆ, 300 ಅಧಿಕ ಹಿಂದಿ ಮತ್ತು ಮರಾಠಿ ಚಿತ್ರಗಳಲ್ಲಿ ನಟನೆ ಮಾಡಿದ್ದರು. ಇದರ ಜೊತೆಗೆ ಸಾಕಷ್ಟು ನಾಟಕಗಳು, ಕಿರುತೆರೆ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು.

ವಿಜು ಕೊಟೆ ನಟಿ ಶೋಭಾ ಕೊಟೆ ಅವರ ಸಹೋದರಾಗಿದ್ದಾರೆ. ಇವರ ತಂದೆ ನಂದು ಕೊಟೆ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ.

More from Filmibeat

English summary
Sholay Kaalia fame actor Viju Khote passes away Today (September 30th) in Mumbai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X