ನಲವತ್ತು ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಬಿಗ್ ಬಿ ಚಿತ್ರ

By Rajendra

ಬಾಲಿವುಡ್ ನ ಉತ್ಕೃಷ್ಟ ಚಿತ್ರಗಳಲ್ಲಿ ಒಂದಾಗಿರುವ 'ಶೋಲೆ' ಚಿತ್ರ 40 ವರ್ಷಳ ಬಳಿಕ ಪಾಕಿಸ್ತಾನದಲ್ಲಿ ತೆರೆಕಂಡಿದೆ. ಇದೇ ಶುಕ್ರವಾರ (ಏಪ್ರಿಲ್ 17) ತೆರೆಕಂಡ ಚಿತ್ರಕ್ಕೆ ನಿರೀಕ್ಷಿಸಿದಷ್ಟು ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಈ ಚಿತ್ರ 2D ಮತ್ತು 3D ತಂತ್ರಜ್ಞಾನದಲ್ಲಿ ತೆರೆಕಂಡಿದ್ದು ಮೊದಲ ದಿನ ನೀರಸ ಪ್ರತಿಕ್ರಿಯೆ ಸಿಕ್ಕಿದೆ.

ಬಾಲಿವುಡ್ ನಲ್ಲಿ ಸಾರ್ವಕಾಲಿಕ ದಾಖಲೆಗೆ ಪಾತ್ರವಾದ ಈ ಚಿತ್ರದ ದಾಖಲೆಯನ್ನು ಅಳಿಸುವಂತಹ ಇನ್ನೊಂದು ಬಂದಿಲ್ಲ. ಈಗಲೂ ನಂಬರ್ 1 ಸ್ಥಾನದಲ್ಲೇ ವಿರಾಜಮಾನವಾಗಿ ಕೂತಿದೆ. ಅಮಿತಾಬ್ ಬಚ್ಚನ್, ಅಂಜಾದ್ ಖಾನ್ ಅವರಿಗೆ ರಾತ್ರೋರಾತ್ರಿ ತಾರಾ ಪಟ್ಟವನ್ನು ತಂದುಕೊಟ್ಟಂತಹ ಚಿತ್ರ. [ಕಾರ್ಟೂನ್ ರೂಪದಲ್ಲಿ ಎವರ್ ಗ್ರೀನ್ ಚಿತ್ರ 'ಶೋಲೆ']

Sholay opening has been disappointingly slow in Pakistan

ಪಾಕಿಸ್ತಾನದ ಲಾಹೋರ್ ಮತ್ತು ಮುಲ್ತಾನ್ ನ ಕೇವಲ ಮೂರು ಥಿಯೇಟರ್ ಗಳಲ್ಲಿ ಶೋಲೆ ಚಿತ್ರ ಬಿಡುಗಡೆಯಾಗಿದೆ. ಪಂಜಾಬ್ ನ ಅತಿದೊಡ್ಡ ಚಿತ್ರಮಂದಿರ 'ಸಿನಿಸ್ಟಾರ್'ನ ಕಾರ್ಯಕಾರಿ ನಿರ್ದೇಶಕರಾದ ಅಲಿ ಚೌದರಿ ಈ ಚಿತ್ರವನ್ನು ಪಾಕಿಸ್ತಾನದಲ್ಲಿ ಬಿಡುಗಡೆ ಮಾಡಿದ್ದಾರೆ.

ಭಾರತೀಯ ಚಲನಚಿತ್ರ ಇತಿಹಾಸದಲ್ಲಿ ಹೊಸ ಶಕೆ ಆರಂಭಿಸಿದ ಚಿತ್ರ 'ಶೋಲೆ'. 70ರ ದಶಕದಲ್ಲಿ ಭಾರತೀಯ ಚಿತ್ರೋದ್ಯಮದ ಎಲ್ಲ ದಾಖಲೆಗಳನ್ನು ಮುರಿದ ಚಿತ್ರ ಇದಾಗಿತ್ತು. ಅಮಿತಾಬ್ ಬಚ್ಚನ್ ಅವರಿಗೆ ಆಂಗ್ರಿ ಎಂಗ್ ಮ್ಯಾನ್ ಪಟ್ಟ ತಂದುಕೊಟ್ಟಂತಹ ಚಿತ್ರ. ಹೊಸ ಹಾಗೂ ಹಳೆ ತಲೆಮಾರಿನ ಪ್ರೇಕ್ಷರಿಬ್ಬರಿಗೂ ಈ ಚಿತ್ರ ಹಾಟ್ ಫೇವರಿಟ್.

ಅಮಿತಾಬ್ ಬಚ್ಚನ್, ಧರ್ಮೇಂದ್ರ ಅವರ ವೃತ್ತಿ ಜೀವನದಲ್ಲೂ ಶೋಲೆ ಹೊಸ ಮೈಲಿಗಲ್ಲು ಸೃಷ್ಟಿಸಿದ ಚಿತ್ರ. ಅಭಿಮಾನಿಗಳ ಪಾಲಿಗಂತೂ ಈ ಚಿತ್ರ ಇಂದಿಗೂ ಹೊಚ್ಚಹೊಸದಾಗಿಯೇ ಕಾಣುತ್ತದೆ. 40 ವರ್ಷಗಳ ಬಳಿಕ ಪಾಕ್ ನಲ್ಲಿ ಬಿಡುಗಡೆಯಾಗಿದೆ. 'ಫಾಸ್ಟ್ ಅಂಡ್ ಫ್ಯೂರಿಯಸ್ 7' ನಂತಹ ಹಾಲಿವುಡ್ ಚಿತ್ರಗಳ ಜೊತೆಗೆ 'ಶೋಲೆ' ಸ್ಪರ್ಧಿಸಲು ಹೆಣಗಾಡುತ್ತಿದೆ. (ಏಜೆನ್ಸೀಸ್)

More from Filmibeat

English summary
'Sholay', the cult Bollywood classic starring Amitabh Bachchan, Dharmendra, Hema Malini and Jaya Bachchan, hits the screens in Pakistan for the first time ever 40 years after its release in India. However the movie has left local distributors and exhibitors sighing over a "slow" Friday opening.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X