'ಶೋಲೆ' ರೀ-ರಿಲೀಸ್ ಟ್ರೈಲರ್ ಬಂದೇಬಿಡ್ತು; ವೀರು, ಜೈ, ಗಬ್ಬರ್ ಸಿಂಗ್ ಆರ್ಭಟ ಹೇಗಿದೆ?

ಬಾಲಿವುಡ್‌ ಐಕಾನಿಕ್ ಸಿನಿಮಾ 'ಶೋಲೆ' ಅಭಿಮಾನಿಗಳಿಗೆ ಇದೊಂದು ಹಬ್ಬದ ಸುದ್ದಿ. ರಮೇಶ್ ಸಿಪ್ಪಿ ನಿರ್ದೇಶನದ, ಅಮಿತಾಭ್ ಬಚ್ಚನ್ ಮತ್ತು ಧರ್ಮೇಂದ್ರ ಅಭಿನಯದ ಈ ಸೂಪರ್ ಹಿಟ್ ಚಿತ್ರ ಈಗ ಹೊಸ ರೂಪದಲ್ಲಿ ತೆರೆಗೆ ಬರಲು ಸಿದ್ಧವಾಗಿದೆ. ಹೌದು 'ಶೋಲೆ- ದಿ ಫೈನಲ್ ಕಟ್' ಎಂಬ ಹೆಸರಿನಲ್ಲಿ ಈ ಚಿತ್ರದ 4K ವರ್ಷನ್ ಟ್ರೈಲರ್ ಇದೀಗ ಬಿಡುಗಡೆಯಾಗಿದೆ. ಈ ಸುದ್ದಿ ಕೇಳಿ ಇಡೀ ಸಿನಿಮಾ ಇಂಡಸ್ಟ್ರಿ ಕುತೂಹಲದಿಂದ ಕಾಯುತ್ತಿದೆ.

1975ರ ಈ ಕ್ಲಾಸಿಕ್ ಚಿತ್ರವನ್ನು ಹೈ ರೆಸಲ್ಯೂಶನ್ನ 4K ರೂಪದಲ್ಲಿ ನೋಡುವ ಅವಕಾಶ ಸಿಕ್ಕಿದೆ. 50 ವರ್ಷಗಳ ಬಳಿಕ ಮತ್ತೆ ತೆರೆಮೇಲೆ ವೀರು(ಧರ್ಮೇಂದ್ರ) ಹಾಗೂ ಜೈ(ಅಮಿತಾಬ್) ದರ್ಬಾರ್ ನೋಡಲು ಸಿನಿರಸಿಕರು ಸಿದ್ಧರಾಗಿದ್ದಾರೆ. ಜೊತೆಗೆ ಗಬ್ಬರ್ ಸಿಂಗ್(ಅಮ್ಜದ್ ಖಾನ್) ಕ್ರೌರ್ಯ ಕೂಡ ಕಣ್ತುಂಬಿಕೊಳ್ಳಬಹುದು. ದಶಕಗಳ ಬಳಿಕ ಸಿನಿಮಾ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ.

Sholay The Final Cut 4K Version trailer out now Iconic Classic Returns After 50 Years

ಹಳೇ ಸಿನಿಮಾಗಳನ್ನು ಹೊಸ ತಂತ್ರಜ್ಞಾನದಲ್ಲಿ ಹೊಸ ರೂಪದಲ್ಲಿ ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ. ಹಿಟ್ ಸಿನಿಮಾಗಳು ಹೊಸ ರೂಪದಲ್ಲಿ ಮತ್ತೆ ಪ್ರೇಕ್ಷಕರ ಮುಂದೆ ಬರ್ತಿವೆ. ಈ ಬಾರಿ ಶೋಲೆ ಹೊಸ ಆವೃತ್ತಿಯಲ್ಲಿ ದೃಶ್ಯಗಳು ಹಿಂದೆಂದಿಗಿಂತಲೂ ಹೆಚ್ಚು ಸ್ಪಷ್ಟವಾಗಿ ಮತ್ತು ರೋಮಾಂಚಕವಾಗಿ ಕಾಣಲಿವೆ. ಅದೇ ರೀತಿ ಚಿತ್ರದ ಹಿನ್ನೆಲೆ ಸಂಗೀತ ಮತ್ತು ಸೌಂಡ್ ಎಫೆಕ್ಟ್‌ ಅನ್ನು ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಉತ್ತಮಗೊಳಿಸಲಾಗಿದೆ. ಆಕ್ಷನ್ ದೃಶ್ಯಗಳು ಮತ್ತಷ್ಟು ರೋಮಾಂಚನಕಾರಿಯಾಗಿ ಇರಲಿದೆ. ಸದ್ಯ ಟ್ರೈಲರ್‌ನಲ್ಲಿ ಅದು ಗೊತ್ತಾಗುತ್ತಿದೆ.

ಈ ಹೊಸ 4K ವರ್ಷನ್ ಚಿತ್ರದ ಮೂಲ ವೈಭವವನ್ನು ಮತ್ತಷ್ಟು ಹೆಚ್ಚಿಸಲಿದೆ. ಅಮಿತಾಭ್ ಬಚ್ಚನ್ ಮತ್ತು ಧರ್ಮೇಂದ್ರ ಅವರ ಕೆಮಿಸ್ಟ್ರಿ ಇಂದಿಗೂ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಈ ಹೊಸ ಆವೃತ್ತಿಯಲ್ಲಿ ಆ ದೃಶ್ಯಗಳನ್ನು ಇನ್ನಷ್ಟು ಸ್ಪಷ್ಟವಾಗಿ, ಕಲರ್‌ಫುಲ್ ಆಗಿ ನೋಡಬಹುದು. 'ಬಸಂತಿ'ಯಾಗಿ ಹೇಮಾ ಮಾಲಿನಿ ಮೋಡಿ, 'ಠಾಕೂರ್' ಆಗಿ ಸಂಜೀವ್ ಕುಮಾರ್ ಅವರ ಗಂಭೀರ ನಟನೆ ಮತ್ತೆ ತೆರೆಯ ಮೇಲೆ ಮಿಂಚಲಿದೆ.

ಬಾಲಿವುಡ್‌ನ ದಿಗ್ಗಜರ ಈ ಸಿನಿಮಾವನ್ನು 4K ಗುಣಮಟ್ಟದಲ್ಲಿ ನೋಡುವುದು ನಿಜಕ್ಕೂ ಒಂದು ಅಪರೂಪದ ಅನುಭವ. ಈ ಚಿತ್ರ ಆ ಕಾಲದ ಒಂದು ಕ್ರಾಂತಿ. ಈಗಿನ ಯುವ ಪೀಳಿಗೆಗೆ ಈ ಸಿನೆಮಾದ ನಿಜವಾದ ಶಕ್ತಿಯನ್ನು ತೋರಿಸಲು ಇದು ಉತ್ತಮ ಅವಕಾಶ. 'ಶೋಲೆ- ದಿ ಫೈನಲ್ ಕಟ್' 4K ವರ್ಶನ್ ಚಿತ್ರವು ಭಾರತದಾದ್ಯಂತ ಡಿಸೆಂಬರ್ 12, 2025 ರಂದು ಬಿಡುಗಡೆಯಾಗಲಿದೆ. ಈ ಹೊಸ ಆವೃತ್ತಿಯಲ್ಲಿ ಮೂಲ ಚಿತ್ರದಲ್ಲಿ ಕತ್ತರಿಸಲಾದ 'ಒರಿಜಿನಲ್ ಕ್ಲೈಮ್ಯಾಕ್ಸ್' ಕೂಡ ಸೇರಿರುವ ಸಾಧ್ಯತೆಯಿದೆ.

ಭಾರತೀಯ ಚಿತ್ರರಂಗದಲ್ಲಿ ಅಪರೂಪದ ದಾಖಲೆಗಳನ್ನು ಬರೆದ ಸಿನಿಮಾ ಇದು. ಅತಿ ಹೆಚ್ಚು ಟಿಕೆಟ್ ಮಾರಾಟವಾದ, ಅತಿ ಹೆಚ್ಚು ದಿನಗಳ ಕಾಲ ಪ್ರದರ್ಶನ ಕಂಡ ಸಿನಿಮಾ ಎನ್ನುವ ದಾಖಲೆ ಈ ಚಿತ್ರದ ಹೆಸರಿನಲ್ಲಿದೆ. ಭಾರತೀಯ ಚಿತ್ರರಂಗದಲ್ಲಿ 10 ಅದ್ಭುತ ಸಿನಿಮಾಗಳ ಸಾಲಿನಲ್ಲಿ 'ಶೋಲೆ' ಇದ್ದೇ ಇರುತ್ತದೆ. ಅಂತಹ ಅಪರೂಪದ ಸಿನಿಮಾ ಮತ್ತೆ ತೆರೆಗೆ ಬರ್ತಿದೆ.

ನಿರ್ಮಾಪಕರು ಈ ಚಿತ್ರವನ್ನು ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಅಪ್‌ಗ್ರೇಡ್ ಮಾಡಿದ್ದಾರೆ. ಮೂಲ ಕಥೆಗೆ ಧಕ್ಕೆಯಾಗದಂತೆ ವಿಶುವಲ್ ಕ್ವಾಲಿಟಿಯನ್ನು ಹೆಚ್ಚಿಸಿದ್ದಾರೆ. 'ಶೋಲೆ' ಕೇವಲ ಒಂದು ಸಿನಿಮಾ ಅಲ್ಲ, ಅದು ಭಾರತೀಯ ಚಿತ್ರರಂಗದ ಒಂದು ಭಾವನೆ. ಈ ಹೊಸ ವರ್ಷನ್ ಆ ಭಾವನೆಯನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ. ಸದ್ಯಕ್ಕೆ ಟ್ರೈಲರ್ ಧೂಳೆಬ್ಬಿಸಿದೆ. ಥಿಯೇಟರ್‌ನಲ್ಲಿ ಮಜಾ ನೋಡಲು ಎಲ್ಲರೂ ರೆಡಿ ಆಗಿದ್ದಾರೆ.

More from Filmibeat

Read more about: sholay dharmendra
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X