ಶತ್ರುಘ್ನ ಸಿನ್ಹಾ ಮನೆ 'ರಾಮಾಯಣ'ದಲ್ಲಿ ಬಿರುಕು ? ಜಹೀರ್ ಜೊತೆ ಮದುವೆಯಾದ ಮಗಳು ಸೋನಾಕ್ಷಿ ಜೊತೆ ಮಾತಾಡ್ತಿಲ್ವಾ ಶಾಟ್‌ಗನ್ ?
ಪ್ರೀತಿಗೆ ಹುಟ್ಟೋದು ಗೊತ್ತು.. ಸಾಯೋದು ಗೊತ್ತಿಲ್ಲ.. ನಗ್ಸೋದು ಗೊತ್ತು.. ನಗು ಕಸಿಯೋದು ಗೊತ್ತಿಲ್ಲ. ಧರ್ಮ, ಬಣ್ಣ, ಭಾಷೆ, ಮೇಲು-ಕೀಳಿನ ಕಿಂಚಿತ್ತೂ ಅರಿವು ಇದಕ್ಕಿಲ್ಲ. ಕಣ್ಣಲ್ಲ್ ಹುಟ್ಟೋ ಪ್ರೀತಿಗೆ ಮನಸ್ಸೆ ಸಾಕ್ಷಿ.. ಹೃದಯವೇ ಸ್ವರ್ಗ. ಇದಕ್ಕೆ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಜೋಡಿ ಒಂದು ಉದಾಹರಣೆ.
ಹೌದು, ಅಂತರ ಧರ್ಮವಾಗಿದ್ದರೂ, ವಯಸ್ಸಿನಲ್ಲಿ ಅಂತರ ಇದ್ದರೂ.. ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು ಎಂಬಂತೆ ಯಾರಿಗೂ ಕ್ಯಾರೇ ಎನ್ನದೇ ಮದುವೆಯಾದ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಸದ್ಯ ನೆಮ್ಮದಿಯಾಗಿ ಬದುಕುತ್ತಿದ್ದಾರೆ. ಜೀವನದ ಪ್ರತಿಯೊಂದು ಕ್ಷಣಗಳನ್ನು ಖುಷಿ ಖುಷಿಯಾಗಿ ಕಳೆಯುತ್ತಿದ್ದಾರೆ.

ಆದರೆ, ಮದುವೆಯಾಗಿ ಒಂದೂವರೆ ವರ್ಷವಾದರೂ ಈ ಜೋಡಿಯನ್ನು ಒಂದು ವರ್ಗ ಬಿಡ್ತಿಲ್ಲ. ಬದಲಿಗೆ ನಿರಂತರವಾಗಿ ಟ್ರೋಲ್ ಮಾಡುತ್ತಲೇ ಬರುತ್ತಿದೆ. ಮದುವೆಗೆ ಲವ್ ಜಿಹಾದ್ ಬಣ್ಣ ಹಚ್ಚುವ ಪ್ರಯತ್ನ ಮಾಡುತ್ತಿದೆ.
ಇನ್ನು ನಿಮಗೆ ಗೊತ್ತಿರಲಿ.. ಶತ್ರುಘ್ನ ಸಿನ್ಹಾ ಅವರ ಮನೆಯ ಹೆಸರು ರಾಮಾಯಣ. ಇಷ್ಟೇ ಅಲ್ಲ ಶತ್ರುಘ್ನ ಸಿನ್ಹಾ ಅವರಿಗೆ ರಾಮ್, ಭರತ್ ಮತ್ತು ಲಕ್ಷ್ಮಣ ಹೆಸರಿನ ಮೂವರು ಸೋದರರಿದ್ದಾರೆ. ಇನ್ನೂ ಶತ್ರುಘ್ನಾ ಸಿನ್ಹಾ ತಮ್ಮ ಇಬ್ಬರು ಗಂಡು ಮಕ್ಕಳಿಗೆ ಲವ ಮತ್ತು ಕುಶ ಎಂದು ಹೆಸರಿಟಿದ್ದಾರೆ.
ಈ ಎಲ್ಲ ಕಾರಣಗಳಿಂದ ಮಗಳ ಈ ಅಂತರ ಧರ್ಮಿಯ ವಿವಾಹದಿಂದ ಶತ್ರುಘ್ನ ಸಿನ್ಹಾ ಅವರು ಖುಷಿಯಾಗಿಲ್ಲ ಎಂಬ ಮಾತು ಮೇಲಿಂದ ಮೇಲೆ ಕೇಳಿ ಬರುತ್ತಾನೇ ಇರುತ್ತೆ. ರಾಮಾಯಣದಿಂದ ತಮ್ಮ ಮಗಳು ಸೋನಾಕ್ಷಿ ಅವರನ್ನು ಶತುಘ್ನ ಸಿನ್ಹಾ ಹೊರ ಹಾಕಿದ್ದಾರೆ ಎಂಬ ವಾದವನ್ನು ಕೂಡ ಒಂದು ವರ್ಗ ಕಳೆದೊಂದುವರೆ ವರ್ಷದಿಂದ ಮಾಡುತ್ತಿದೆ. ಈ ವಾದಕ್ಕೆ ಪೂರ್ಣ ವಿರಾಮವನ್ನು ಹಾಕುವ ಪ್ರಯತ್ನವನ್ನು ಇದೇ ಮೊದಲ ಬಾರಿ ಶತ್ರುಘ್ನ ಸಿನ್ಹಾ ಈಗ ಮಾಡಿದ್ದಾರೆ. ಖಂಡ ತುಂಡ ಉತ್ತರವನ್ನು ನೀಡಿದ್ದಾರೆ.
''ನ್ಯೂಸ್18''ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಶತ್ರುಘ್ನ ಸಿನ್ಹಾ ನಮ್ಮ ನಡುವೆ ಎಲ್ಲವೂ ಸರಿ ಇದೆ, ನಾವು ತುಂಬಾನೇ ಖುಷಿಯಾಗಿದ್ದೇವೆ ಎಂದು ಹೇಳಿದ್ದಾರೆ. ಸೋನಾಕ್ಷಿಯ ಮದುವೆಯಾಗಿದೆ, ಅವರಿಬ್ಬರದ್ದು ಹೇಳಿ ಮಾಡಿಸಿದ ಜೋಡಿಯಂತೆ ಇದೆ ಎಂದಿದ್ದಾರೆ.

ಮದುವೆಯ ನಿರ್ಧಾರ ತೆಗೆದುಕೊಳ್ಳಲು ಸೋನಾಕ್ಷಿ ಮತ್ತು ಜಹೀರ್ ಇಬ್ಬರು ಸಮರ್ಥರು, ಇಬ್ಬರೂ ವಯಸ್ಕರು, ಅವರಿಗೆ ತಮ್ಮ ಜೀವನದ ನಿರ್ಧಾರ ತೆಗೆದುಕೊಳ್ಳುವ ಹಕ್ಕಿದೆ ಎಂದು ಹೇಳಿರುವ ಶತ್ರುಘ್ನ ಸಿನ್ಹಾ ಗಂಡ ಹೆಂಡ್ತಿ ಒಪ್ಪಿದ ಮೇಲೆ ಮುಗೀತು (ಜಬ್ ಮಿಯಾ ಬೀವಿ ರಾಜಿ, ತೋ ಕ್ಯಾ ಕರೇಗಾ ಕಾಜಿ) ಎಂದು ಹೇಳಿದ್ಧಾರೆ.
ಮುಂದುವರೆದು ನನ್ನ ಮಗಳು ಮತ್ತು ಅಳಿಯನಿಗೆ ನನ್ನ ಬೆಂಬಲ ಮತ್ತು ಪ್ರೀತಿ ಸದಾ ಇರುತ್ತೆ ಎಂದು ಹೇಳಿರುವ ಶತ್ರುಘ್ನ ಸಿನ್ಹಾ, ನಾನು ಅವರ ಹಿಂದೆ ಬಂಡೆಗಲ್ಲಿನಂತೆ ಸದಾ ನಿಂತಿರುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ತಂದೆ ಮತ್ತು ಮಗಳ ಸಂಬಂಧದಲ್ಲಿ ಬಿರುಕು ಮೂಡಿದೆ ಎನ್ನುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಟ್ರೋಲಿಗರ ಬಾಯನ್ನೂ ಕೂಡ ಶತ್ರುಘ್ನ ಸಿನ್ಹಾ ಮುಚ್ಚಿಸಿದ್ದಾರೆ. ಧರ್ಮ ದಂಗಲ್ ನಡೆಸುವವರಿಗೆ ಕೂಡ ಈ ಮೂಲಕ ಖಾಮೋಶ್ ಎಂದು ಉತ್ತರವನ್ನು ನೀಡಿದ್ಧಾರೆ.
ಅಂದ್ಹಾಗೇ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ 2016ರಲ್ಲಿ ಮೊದಲ ಬಾರಿ ಮುಖಾಮುಖಿಯಾಗಿದ್ದರು. ಸಲ್ಮಾನ್ ಖಾನ್ ಇವರ ಸ್ನೇಹ ಸಂಬಂಧಕ್ಕೆ ಸೇತುವೆಯಾಗಿದ್ದರು. 2017ರಲ್ಲಿ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಇಲ್ಲಿಂದ ಕದ್ದು ಮುಚ್ಚಿ ಓಡಾಡಲು ಶುರು ಮಾಡಿದ ಇಬ್ಬರು 7 ವರ್ಷ ಜೊತೆಯಲ್ಲಿದ್ದರು. 2024ರಲ್ಲಿ ಮನೆಯಲ್ಲಿಯೇ ಸರಳವಾಗಿ ಮದುವೆಯಾದರು. ಇನ್ನುಳಿದಂತೆ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ನಡುವೆ ಒಂದೂವರೆ ವರ್ಷಗಳ ಅಂತರ ಇದೆ. ಜಹೀರ್ ಅವರಿಗಿಂದ ಸೋನಾಕ್ಷಿ ಸಿನ್ಹಾ ವಯಸ್ಸಿನಲ್ಲಿ ದೊಡ್ಡವರು.


Click it and Unblock the Notifications











