For Quick Alerts
  ALLOW NOTIFICATIONS  
  For Daily Alerts

  'ಅಕ್ಕನಿಗಾಗಿ ಡ್ರಗ್ಸ್ ಖರೀದಿಸುತ್ತಿದ್ದೆ': ಎನ್‌ಸಿಬಿ ಮುಂದೆ ಸತ್ಯ ಬಿಚ್ಚಿಟ್ಟ ರಿಯಾ ಸಹೋದರ

  |

  ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡ್ರಗ್ಸ್ ವಿಚಾರವನ್ನು ಬೆನ್ನತ್ತಿ ಹೊರಟ ಎನ್‌ಸಿಬಿ ಅಧಿಕಾರಿಗಳಿಗೆ ಆಘಾತಕಾರಿ ಮಾಹಿತಿಗಳು ಸಿಗುತ್ತಿವೆ.

  ನಾನು ಅವತ್ತೇ ಸಾಯಬೇಕಿತ್ತು, ಸುದೀಪ್ ಬಂದು ನನ್ನನ್ನು ಬದುಕಿಸಿದ್ರು

  ಸುಶಾಂತ್ ಸಿಂಗ್ ರಜಪೂತ್ ಅವರಿಗೆ ರಿಯಾ ಚಕ್ರವರ್ತಿ ಡ್ರಗ್ ಕೊಡುತ್ತಿದ್ದರು ಎಂಬ ಆರೋಪದ ಮೇಲೆ ಎನ್‌ಸಿಬಿ ಅಧಿಕಾರಿಗಳು ತನಿಖೆ ಆರಂಭಿಸಿದ್ದರು. ಈ ತನಿಖೆಯಲ್ಲಿ ಡ್ರಗ್ ಪೆಡ್ಲರ್‌ಗಳ ಜೊತೆ ರಿಯಾ ಸಂಪರ್ಕದಲ್ಲಿರುವುದು ತಿಳಿದಿದೆ. ರಿಯಾ ವಾಟ್ಸಪ್ ಆಧಾರದಲ್ಲಿ ಮತ್ತಷ್ಟು ಆಳವಾಗಿ ತನಿಖೆಗೆ ಇಳಿದಾಗ ರಿಯಾ ಚಕ್ರವರ್ತಿ ಸಹೋದರ ಸಹ ಈ ಜಾಲದಲ್ಲಿ ಭಾಗಿಯಾಗಿರುವುದು ಬಹಿರಂಗವಾಗಿದೆ.

  ನಟಿ ರಿಯಾ ಚಕ್ರವರ್ತಿ ಮನೆ ಮೇಲೆ NCB ಅಧಿಕಾರಿಗಳ ದಾಳಿ

  ಹೀಗಾಗಿ, ರಿಯಾ ಸಹೋದರ ಶೋವಿಕ್ ಚಕ್ರವರ್ತಿಯನ್ನು ವಶಕ್ಕೆ ಪಡೆದುಕೊಂಡಿರುವ ಎನ್‌ಸಿಬಿ ಅಧಿಕಾರಿಗಳ ಬಳಿ 'ರಿಯಾ ಡ್ರಗ್ ಕಹಾನಿ' ಬಿಚ್ಚಿಟ್ಟಿದ್ದಾರೆ. ಮುಂದೆ ಓದಿ.....

  ರಿಯಾ ಸಹೋದರ ಮತ್ತು ಮ್ಯಾನೇಜರ್ ಬಂಧನ!

  ರಿಯಾ ಸಹೋದರ ಮತ್ತು ಮ್ಯಾನೇಜರ್ ಬಂಧನ!

  ಡ್ರಗ್ ಡೀಲರ್‌ಗಳ ಜೊತೆ ಸಂಪರ್ಕದಲ್ಲಿದ್ದರು ಎಂಬ ಆರೋಪದಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರ ಮ್ಯಾನೇಜರ್ ಸ್ಯಾಮುಯೆಲ್ ಮಿರಾಂಡಾ ಮತ್ತು ರಿಯಾ ಚಕ್ರವರ್ತಿ ಅವರ ಸಹೋದರ ಶೋವಿಕ್ ಇಬ್ಬರನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಇದಕ್ಕೂ ಮುಂಚೆ ರಿಯಾ ಚಕ್ರವರ್ತಿ ಮನೆ ಮೇಲೆ ಸಹ ಎನ್‌ಸಿಬಿ ದಾಳಿ ನಡೆಸಿದ್ದು ಪರಿಶೀಲಿಸಿದ್ದಾರೆ.

  ಅಕ್ಕನಿಗಾಗಿ ಡ್ರಗ್ಸ್ ಖರೀಸುತ್ತಿದ್ದೆ

  ಅಕ್ಕನಿಗಾಗಿ ಡ್ರಗ್ಸ್ ಖರೀಸುತ್ತಿದ್ದೆ

  ಶೋವಿಕ್ ಚಕ್ರವರ್ತಿಯನ್ನು ಬಂಧಿಸಿದ ಎನ್‌ಸಿಬಿ ಅಧಿಕಾರಿಗಳು ಡ್ರಗ್ಸ್ ಪೆಡ್ಲರ್ ಜೊತೆಗಿನ ಸಂಬಂಧದ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅಕ್ಕ ರಿಯಾ ಚಕ್ರವರ್ತಿಗಾಗಿ ನಾನು ಡ್ರಗ್ಸ್ ಖರೀದಿಸುತ್ತಿದ್ದೆ ಎಂದು ಅಧಿಕಾರಿಗಳ ಮುಂದೆ ಶೋವಿಕ್ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿದೆ.

  ಏಳು ದಿನಗಳ ಕಾಲ ಕಸ್ಟಡಿಗೆ!

  ಏಳು ದಿನಗಳ ಕಾಲ ಕಸ್ಟಡಿಗೆ!

  ಎನ್‌ಸಿಬಿಯಿಂದ ಬಂಧನಕ್ಕೆ ಒಳಗಾಗಿರುವ ರಿಯಾ ಚಕ್ರವರ್ತಿಯ ಸಹೋದರ ಶೋವಿಕ್ ಮತ್ತು ರಜಪೂತ್ ಮ್ಯಾನೇಜರ್ ಸ್ಯಾಮ್ಯುಯೆಲ್ ಮಿರಾಂಡಾ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ ಹೆಚ್ಚಿನ ತನಿಖೆಗಾಗಿ ಇಬ್ಬರನ್ನು 7 ದಿನಗಳ ಕಾಲ ಎನ್‌ಸಿಬಿ ಕಸ್ಟಡಿಗೆ ಪಡೆದುಕೊಂಡಿದೆ.

  ರಿಯಾ ಬಂಧನ ಸಾಧ್ಯತೆ!

  ರಿಯಾ ಬಂಧನ ಸಾಧ್ಯತೆ!

  ಸಹೋದರ ಶೋವಿಕ್ ಹೇಳಿಕೆ ಹಿನ್ನೆಲೆ ರಿಯಾ ಚಕ್ರವರ್ತಿ ಅವರನ್ನು ಎನ್‌ಸಿಬಿ ವಶಕ್ಕೆ ಪಡೆಯುವ ಸಾಧ್ಯತೆ ಹೆಚ್ಚಿದೆ. ಅದೇ ರೀತಿ ಸುಶಾಂತ್ ಮ್ಯಾನೇಜರ್ ಸಹ ರಜಪೂತ್‌ಗೆ ಡ್ರಗ್ಸ್ ಖರೀದಿಸಿದ್ದೇ ಎಂದು ಹೇಳಿರುವುದು ಸಹ ರಿಯಾಗೆ ಕಂಟಕವಾಗಲಿದೆ.

  ಡ್ರಗ್ ನಂಟು: ಸುಶಾಂತ್ ಮಾಜಿ ಮ್ಯಾನೇಜರ್ ಸ್ಯಾಮ್ಯುಯೆಲ್ ಮಿರಾಂಡಾ ಬಂಧನ

  English summary
  Rhea Chakraborty brother Showik Chakraborty confesses to NCB he used to buy drugs for his siter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X