ಮದುವೆ ಬಗ್ಗೆ ಮೌನ ಮುರಿದ ಶ್ರದ್ಧಾ ಕಪೂರ್ ; ತನಗಿಂತ 3 ವರ್ಷ ಚಿಕ್ಕವನ ಜೊತೆ ಸಪ್ತಪದಿ ತುಳಿಯಲು ರೆಡಿಯಾದ ಸುಂದರಿ?

ಸಾಮಾನ್ಯಕ್ಕೆ ವಯಸ್ಸಿಗೆ ಬಂದ ಯುವಕ ಯುವತಿಯರು ಎಲ್ಲಿಯೇ ಹೋಗಲಿ ಅಲ್ಲಿ ಮೊದಲು ಎದುರಾಗುವುದು ಮದುವೆಯ ಕುರಿತ ಪ್ರಶ್ನೆಯೇ. ಇನ್ನು ಸೆಲೆಬ್ರೆಟಿಗಳ ಪಾಡಂತೂ ಇದಕ್ಕಿಂತ ಭಿನ್ನ. ಯಾವ ಸಿನಿಮಾ ಕಾರ್ಯಕ್ರಮಕ್ಕೆ ಹೋಗಲಿ, ಸಭೆ-ಸಮಾರಂಭಕ್ಕೆ ತೆರಳಲಿ, ಪಾರ್ಟಿಗೆ ಹೋಗಲಿ.. ಸಿಕ್ಕ-ಸಿಕ್ಕಲ್ಲಿ ಕೇವಲ ಮದುವೆಯ ಕುರಿತು ಪ್ರಶ್ನೆಗಳನ್ನೇ ಕೇಳಿ ಕೊಡಬಾರದ ಟಾರ್ಚರ್ ಕೊಡಲು ಶುರು ಮಾಡ್ತಾರೆ.ಅದರಲ್ಲಿಯೂ ವಯಸ್ಸು 35 ದಾಟಿದರೆ ಮುಗೀತು.

ಮದುವೆಯ ವಿಚಾರವನ್ನೇ ದೊಡ್ಡದಾಗಿ ಮಾಡುತ್ತಾರೆ. ಇಲ್ಲ ಸಲ್ಲದ ಮಾತುಗಳನ್ನಾಡಲು ಶುರುಮಾಡುತ್ತಾರೆ. ಹೀಗಾಗಿಯೇ ಮದುವೆ ಬೇಡ ಎಂದು ತೀರ್ಮಾನ ಮಾಡಿರುವವರು ಕೂಡ ಇವರ ಈ ಕಿರುಕುಳದಿಂದ ತಪ್ಪಿಸಿಕೊಳ್ಳಲಾದರೂ ಮದುವೆಗೆ ರೆಡಿಯಾಗಿ ಬಿಡುತ್ತಾರೆ. ಇದಕ್ಕೆ ಶ್ರದ್ದಾ ಕಪೂರ್ ಸದ್ಯದ ಉದಾಹರಣೆ.

Shraddha Kapoor Breaks the Internet with 4 Words The Wittiest Marriage Reveal Ever

ಹೌದು, ಶಕ್ತಿ ಕಪೂರ್ ಮಗಳಾದರೂ ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದವರು ಶ್ರದ್ಧಾ ಕಪೂರ್. ನಿಜಾ .. ಸ್ಟಾರ್ ಗಳ ಮಕ್ಕಳಿಗೆ ಚಿತ್ರರಂಗದ ಬಾಗಿಲು ಮೊದಲೇ ತೆರೆದಿರುತ್ತೆ. ಅವಕಾಶ ಸುಲಭವಾಗಿಯೂ ಸಿಗುತ್ತೆ. ಶ್ರದ್ಧಾ ವಿಚಾರದಲ್ಲಿ ಆಗಿದ್ದು ಇದೆ. ಆದರೆ, ಆ ನಂತರ ಶ್ರದ್ಧಾ ಬೆಳೆದಿದ್ದು ತಮ್ಮ ಸಾಮರ್ಥ್ಯದಿಂದಲೇ.

''ಆಶಿಕಿ-02'' ಚಿತ್ರದ ಮೂಲಕ ಪ್ರೇಕ್ಷಕರ ಹೃದಯ ಗೆದ್ದು, ಆ ನಂತರ.. ''ಏಕ್ ವಿಲನ್''.. ''ಹೈದರ್''.. ''ಎಬಿಸಿಡಿ 2''.. ''ಚೀಚೋರೆ''.. ''ಭಾಘಿ''.. ''ಸ್ತ್ರೀ'', ಹೀಗೆ ಒಂದಾದ ಮೇಲೊಂದು ಸಿನಿಮಾಗಳ ಮೂಲಕ ಪ್ರೇಕ್ಷಕರ ಹೃದಯಕ್ಕೆ ಹತ್ತಿರವಾದ ಶ್ರದ್ಧಾ ಕಪೂರ್‌ಗೆ ಈಗ 38 ವರ್ಷ. ಆದರೆ, ಇನ್ನೂ ಮದುವೆಯಾಗಿಲ್ಲ. ಈ ಹಿನ್ನೆಲೆ ಹಲವರು ಇವರ ಮದುವೆಯ ಚಿಂತೆ ಮಾಡಲು ಶುರು ಮಾಡಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಅಭಿಮಾನಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ನೇರವಾಗಿಯೇ ಶ್ರದ್ಧಾಗೆ ಪ್ರಶ್ನೆ ಕೇಳಿದ್ದಾರೆ. ಮದುವೆ ಮಾಡಿಕೊಳ್ತೀರಾ, ಇಲ್ವಾ..? ಎಂದಿದ್ದಾರೆ. ಈ ಪ್ರಶ್ನೆಗೆ ಶ್ರದ್ಧಾ ಕಪೂರ್ ಉತ್ತರ ನೀಡಿದ್ದಾರೆ.

ಹೌದು, ಅಸಲಿಗೆ ಶ್ರದ್ಧಾ ಕಪೂರ್ ಒಡೆತನದ 'ಪಾಲ್ಮೊನಾಸ್' ಎಂಬ ಆಭರಣದ ಬ್ರಾಂಡ್‌ ಇದೆ. ಪ್ರೇಮಿಗಳ ದಿನ ಹತ್ತಿರ ಬರುತ್ತಿರುವ ಹಿನ್ನೆಲೆ ಶ್ರದ್ಧಾ ತಮ್ಮ ಈ ಆಭರಣ ಬ್ರ್ಯಾಂಡ್‌ನ ಪ್ರಚಾರಾರ್ಥ ವಿಡಿಯೋವೊಂದನ್ನು ನಿನ್ನೆ (ಜನವರಿ 6) ಹಂಚಿಕೊಂಡಿದ್ದರು. ಈ ವಿಡಿಯೋವನ್ನು ನೋಡುತ್ತಿದ್ದಂತೆಯೇ ಅಭಿಮಾನಿಯೊಬ್ಬರು ಮದುವೆ ಯಾವತ್ತು ಮಾಡಿಕೊಳ್ತೀರಾ ಶ್ರದ್ಧಾ ಕಪೂರ್ ಅವರೇ ಎಂದು ಪ್ರಶ್ನೆಯನ್ನು ಮಾಡಿದ್ದಾರೆ. ಇದಕ್ಕೆ ಹಿಂಜರಿಯದೇ ಶ್ರದ್ಧಾ ತಮ್ಮದೇ ಶೈಲಿಯಲ್ಲಿ ನಾನು ಮದುವೆಯಾಗುತ್ತೇನೆ ಎಂದು ಹೇಳಿದ್ದಾರೆ.

ಸದ್ಯ ಶ್ರದ್ಧಾ ಕಪೂರ್ ಅವರ ಈ ಉತ್ತರಕ್ಕೆ ಹಲವರು ಫಿದಾ ಆಗಿದ್ದಾರೆ. ಕೊನೆಗೂ ನಮ್ಮ ನೆಚ್ಚಿನ ನಾಯಕಿ ಮದುವೆಯಾಗುವ ನಿರ್ಧಾರ ಮಾಡಿದ್ದಾರಲ್ಲ ಎಂದು ಖುಷಿ ಪಡುತ್ತಿದ್ದಾರೆ. ಹೀಗಾಗಿಯೇ ಮದುವೆ ಆಗ್ತೀರಾ ಎನ್ನುವುದು ನಮಗೂ ಕೂಡ ಗೊತ್ತು, ಆದರೆ ಆ ಕಾಲ ಯಾವತ್ತು ಬರುತ್ತೆ ಎಂಬ ಮರು ಪ್ರಶ್ನೆಯನ್ನು ಹಲವರು ಮಾಡುತ್ತಿದ್ದಾರೆ. ಬೇಗನೆ ಮದುವೆ ಮಾಡಿಕೊಳ್ಳಿ ಇನ್ನೂ ತಡ ಮಾಡಬೇಡಿ ಎಂದು ಮನವಿಯನ್ನು ಕೂಡ ಮಾಡುತ್ತಿದ್ದಾರೆ.

Shraddha Kapoor Breaks the Internet with 4 Words The Wittiest Marriage Reveal Ever

ಅಂದ್ಹಾಗೇ ಶ್ರದ್ಧಾ ಕಪೂರ್ ಸಿಂಗಲ್ ಅಲ್ಲ. ಬಾಲಿವುಡ್‌ನ ಬರಹಗಾರ ರಾಹುಲ್ ಮೋದಿ ಜೊತೆ ಇವರ ಹೆಸರು ತಳುಕು ಹಾಕಿಕೊಂಡು 2-3 ವರ್ಷಗಳಾಗಿವೆ. ಈ ರಾಹುಲ್ ಮೋದಿ ಬೇರೆ ಯಾರು ಅಲ್ಲ ಇದೇ ಶ್ರದ್ಧಾ ಅಭಿನಯದ 2023ರಲ್ಲಿ ತೆರೆಗೆ ಬಂದ ''ತು ಜುಟಿ ಮೇ ಮಕ್ಕಾರ್'' ಚಿತ್ರದ ಕಥೆಗಾರ. ಈ ಚಿತ್ರದ ಸಮಯದಲ್ಲಿಯೇ ಇವರ ನಡುವೆ ಪ್ರೇಮಾಂಕುರವಾಗಿರುವ ಅನುಮಾನ ಹಲವರಿಗೆ ಇದೆ. ಇದಕ್ಕೆ ಪೂರಕವಾಗಿ ರಾಹುಲ್ ಜೊತೆ ಶ್ರದ್ಧಾ 2024ರ ನಂತರ ಹಲವಾರು ಸಂದರ್ಭಗಳಲ್ಲಿ ಜೊತೆಯಾಗಿ ಕ್ಯಾಮರಾದಲ್ಲಿ ಸೆರೆಯಾಗಿದ್ದಾರೆ.

ಇನ್ನು ಇಬ್ಬರ ನಡುವೆ 3 ವರ್ಷಗಳ ಅಂತರ ಇದೆ. ಶ್ರದ್ಧಾಗೆ ಈಗ 38ರ ಹರೆಯವಾದರೆ ರಾಹುಲ್‌ಗೆ ಈಗ 35 ವರ್ಷ. ಇನ್ನುಳಿದಂತೆ ''ಪಹಡ್‌ ಪಂಗಿರಾ''.. ''ನಾಗಿನ್''.. ''ಸ್ತ್ರೀ 3''.. ''ಭೇಡಿಯಾ 2''.. ಸೇರಿ ಕೆಲ ಚಿತ್ರಗಳು ಶ್ರದ್ಧಾ ಕಪೂರ್ ಅವರ ಕೈಯಲ್ಲಿವೆ. ಸದ್ಯ ಮದುವೆಯಾಗುವ ಮನಸು ಮಾಡಿರುವ ಶ್ರದ್ಧಾ ಯಾವಾಗ ಮದುವೆಯಾಗುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
"I will, you get married!" Shraddha Kapoor’s hilarious comeback to a fan asking about her wedding has the internet in a frenzy. Get the full scoop on her viral reply here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X