ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಗೆ ಡೆಂಘೀ ಜ್ವರ
Recommended Video

ಹೇಗಿದೆ ಡೆಂಘೀ ಜ್ವರದಿಂದ ಬಳಲುತ್ತಿರುವ ನಟಿಯ ಆರೋಗ್ಯ..! | Filmibeat Kannada
ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಜೀವನ ಚರಿತ್ರೆ ಆಧಾರಿತ ಸಿನಿಮಾದಲ್ಲಿ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅಭಿನಯಿಸುತ್ತಿರುವುದು ನಿಮಗೆಲ್ಲಾ ಗೊತ್ತೇ ಇದೆ.
ಈ ಚಿತ್ರದ ಚಿತ್ರೀಕರಣ ನಡೆಯುವಾಗಲೇ, ಶ್ರದ್ಧಾ ಕಪೂರ್ ಗೆ ಅನಾರೋಗ್ಯ ಕಾಣಿಸಿಕೊಂಡಿದೆ. ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳಿದಾಗ, ಶ್ರದ್ಧಾ ಕಪೂರ್ ಗೆ ಡೆಂಘೀ ಜ್ವರ ಬಂದಿರುವುದು ಗೊತ್ತಾಗಿದೆ.
ಡೆಂಘೀ ಜ್ವರದಿಂದ ಬಳಲುತ್ತಿರುವ ಕಾರಣ, ಎಲ್ಲಾ ಕೆಲಸ-ಕಾರ್ಯಗಳನ್ನೂ ಕ್ಯಾನ್ಸಲ್ ಮಾಡಿ ಶ್ರದ್ಧಾ ಕಪೂರ್ ಸಂಪೂರ್ಣ ವಿಶ್ರಾಂತಿ ಪಡೆಯುತ್ತಿದ್ದಾರೆ.

ಇತ್ತ ಶ್ರದ್ಧಾ ಕಪೂರ್ ಬಂದಿಲ್ಲ ಅಂದ ಮಾತ್ರಕ್ಕೆ ಸೈನಾ ನೆಹ್ವಾಲ್ ಜೀವನ ಚರಿತ್ರೆ ಆಧಾರಿತ ಚಿತ್ರದ ಶೂಟಿಂಗ್ ನಿಂತು ಹೋಗಿಲ್ಲ. ಶ್ರದ್ಧಾ ಕಪೂರ್ ಇಲ್ಲದ ಭಾಗಗಳನ್ನ ಚಿತ್ರೀಕರಿಸುವಲ್ಲಿ ನಿರ್ದೇಶಕರು ಬಿಜಿಯಾಗಿದ್ದಾರೆ.
ಸದ್ಯ ಡೆಂಘೀ ಜ್ವರದಿಂದ ಬಳಲುತ್ತಿರುವ ಶ್ರದ್ಧಾ ಕಪೂರ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಆದಷ್ಟು ಬೇಗ ಶ್ರದ್ಧಾ ಶೂಟಿಂಗ್ ಗೆ ಮರಳುವ ಸಾಧ್ಯತೆ ಇದೆ.
More from Filmibeat
English summary
Bollywood Actress Shraddha Kapoor is down with Dengue, Saina Nehwal shoot continues.
Read in English: Shraddha Kapoor Down With Dengue, Takes A Break From Work


Click it and Unblock the Notifications











