»   » 'ಬಾಹುಬಲಿ' ಪ್ರಭಾಸ್ ಚಿತ್ರದಲ್ಲಿ ನಟಿಸಲು ಶ್ರದ್ಧಾ ಇಟ್ಟ ಬೇಡಿಕೆಗೆ ಚಿತ್ರತಂಡವೇ ಶಾಕ್!

'ಬಾಹುಬಲಿ' ಪ್ರಭಾಸ್ ಚಿತ್ರದಲ್ಲಿ ನಟಿಸಲು ಶ್ರದ್ಧಾ ಇಟ್ಟ ಬೇಡಿಕೆಗೆ ಚಿತ್ರತಂಡವೇ ಶಾಕ್!

Posted By:
Subscribe to Filmibeat Kannada

'ಬಾಹುಬಲಿ-2' ನಂತರ ಪ್ರಭಾಸ್ ವಿಶ್ವ ಮಟ್ಟದ ಜನಪ್ರಿಯ ನಟನಾಗಿ ಪರಿಚಿತರಾಗಿದ್ದಾರೆ. ಅಲ್ಲದೇ ಬಾಲಿವುಡ್ ನ ಹಲವು ನಿರ್ದೇಶಕರು ಪ್ರಭಾಸ್ ನಾಯಕ ನಟನೆಯ ಸಿನಿಮಾ ಮಾಡಬೇಕೆಂದು ಮುಗಿಬಿದ್ದಿದ್ದಾರೆ.

ಟಾಲಿವುಡ್ ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ 'ಸಾಹೋ' ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಯಾಗಿದ್ದು ಸಿನಿ ಪ್ರೇಮಿಗಳಲ್ಲಿ ಕುತೂಹಲ ಕೆರಳಿಸಿದೆ. ಆದರೆ ಈ ಚಿತ್ರದಲ್ಲಿ ಪ್ರಭಾಸ್ ಜೊತೆ ನಾಯಕಿಯಾಗಿ ಅಭಿನಯಿಸಲು ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಗೆ ಆಫರ್ ನೀಡಿದ್ದಕ್ಕೆ ಯಾರು ನಿರೀಕ್ಷಿಸದ ಶಾಕಿಂಗ್ ಉತ್ತರವನ್ನು ನೀಡಿದ್ದಾರೆ. ಕೇವಲ ಶ್ರದ್ಧಾ ಕಪೂರ್ ಮಾತ್ರವಲ್ಲದೇ ದಿಶಾ ಪಟಾನಿ ಅವರಿಗೂ ಆಫರ್ ನೀಡಲಾಗಿತ್ತಂತೆ. ಆದ್ರೆ ಶ್ರದ್ಧಾ ನೀಡಿದ ಉತ್ತರ ಏನು? ಮುಂದೆ ಓದಿ..

'ಸಾಹೋ'ದಲ್ಲಿ ಪ್ರಭಾಸ್ ಗೆ ಬಾಲಿವುಡ್ ನಟಿ

ಡಿಎನ್ಎ ವರದಿ ಪ್ರಕಾರ, " 'ಸಾಹೋ' ಚಿತ್ರದ ತಯಾರಕರಿಗೆ ಪ್ರಭಾಸ್ ಎದುರು ನಾಯಕಿಯಾಗಿ ಬಾಲಿವುಡ್ ನಟಿಯರಿಂದ ಆಕ್ಟ್ ಮಾಡಿಸಬೇಕೆಂಬ ಬಯಕೆ ಇದೆಯಂತೆ. ಭಾರತದಾದ್ಯಂತ ಚಿತ್ರದ ಆಕರ್ಷಣೆಗಾಗಿ ಬಾಲಿವುಡ್ ನ ಬ್ಯೂಟಿಫುಲ್ ಮತ್ತು ಭಾವನಾತ್ಮಕವಾಗಿ ಅಭಿನಯಿಸುವ ಭಾರತೀಯ ನಟಿಯ ಹುಡುಕಾಟದಲ್ಲಿತಂತೆ".

ಚಿತ್ರತಂಡದ ಮೊದಲ ಆಯ್ಕೆ ಶ್ರದ್ಧಾ ಕಪೂರ್

ಶ್ರದ್ಧಾ ಕಪೂರ್, 'ಸಾಹೋ' ಗೆ ಚಿತ್ರತಂಡ ಮೊದಲು ಆಯ್ಕೆ ಮಾಡಿದ ನಟಿಯಂತೆ. ಶ್ರದ್ಧಾ ಅವರನ್ನು ಅಪ್ರೋಚ್ ಮಾಡಿ ಚಿತ್ರದ ಬಗ್ಗೆ ಹೇಳಿದಕ್ಕೆ ಆಶ್ಚರ್ಯಗೊಂಡು ಅತಿ ಹೆಚ್ಚು ಖುಷಿ ಪಟ್ಟರಂತೆ.

ಶ್ರದ್ಧಾ ಉತ್ತರ ಕೇಳಿ ಹಿಂದಿರಿಗಿದ ಚಿತ್ರತಂಡ

'ಸಾಹೋ' ಚಿತ್ರದಲ್ಲಿ ನಟಿಸಲು ಶ್ರದ್ಧಾ ಹೆಚ್ಚು ಉತ್ಸುಹರಾಗಿದ್ದರಂತೆ. ಆದರೆ ನಟಿ ಡಿಮ್ಯಾಂಡ್ ಮಾಡಿದ ಸಂಭಾವನೆ ಕೇಳಿ ಚಿತ್ರತಂಡ ಅವರ ಮನೆಯಿಂದ ಅತೀವೇಗದಲ್ಲಿ ಹಿಂದಿರಿಗಿದರಂತೆ. ಹಾಗಿದ್ರೆ ಶ್ರದ್ಧಾ ಕೇಳಿದ ಸಂಭಾವನೆ ಎಷ್ಟು? ಮುಂದೆ ಓದಿ..

'ಸಾಹೋ'ದಲ್ಲಿ ನಟಿಸಲು ಶ್ರದ್ಧಾ ಕೇಳಿದ ಸಂಭಾವನೆ..

'ಆಶಿಕಿ-2' ಖ್ಯಾತಿಯ ಶ್ರದ್ಧಾ ಕಪೂರ್ 'ಸಾಹೋ' ಚಿತ್ರದಲ್ಲಿ ಪ್ರಭಾಸ್ ಎದುರು ಅಭಿನಯಿಸಲು ಬರೋಬರಿ 8 ಕೋಟಿ ರೂ ಡಿಮ್ಯಾಂಡ್ ಮಾಡಿದರಂತೆ. ಇದರಿಂದ ಶಾಕ್ ಆದ ಚಿತ್ರ ನಿರ್ಮಾಣಕಾರರು ತೆಲುಗು ಸಿನಿಮಾಗಳಲ್ಲಿ ನಟಿಯರಿಗೆ ಈ ಮೊತ್ತ ಕೊಡುವುದಿಲ್ಲ ಎಂದು ಹೇಳಿದರಂತೆ.

ಸ್ಕ್ರಿಪ್ಟ್ ಇಷ್ಟಪಟ್ಟ ಶ್ರದ್ಧಾ

ಶ್ರದ್ಧಾ ಕಪೂರ್ ಚಿತ್ರದ ಸ್ಕ್ರಿಪ್ಟ್ ಕೇಳಿ, "ನನಗೆ ಸ್ಕ್ರಿಪ್ಟ್ ತುಂಬಾ ಇಷ್ಟವಾಗಿದೆ, ಪ್ರಭಾಸ್ ಜೊತೆ ನಟಿಸುವ ಆಸೆ ನನಗೂ ಇದೆ' ಎಂದಿದ್ದರು. ಆದರೆ ಸಂಭಾವನೆ ವಿಷಯದಿಂದ 'ಸಾಹೋ' ಚಿತ್ರ ನಿರ್ಮಾಣಕಾರರು ಶ್ರದ್ಧಾ ಅವರನ್ನು ನಾಯಕಿ ಆಗಿ ಹಾಕಿಕೊಳ್ಳುವ ಆಸೆಯನ್ನು ಕೈಬಿಟ್ಟಿದ್ದಾರೆ.

ದಿಶಾ ಪಟಾನಿಗೂ ಆಫರ್

ದಿಶಾ ಪಟಾನಿ ತೆಲುಗು ಚಿತ್ರದ ಮೂಲಕ ತಮ್ಮ ಸಿನಿಯಾನ ಆರಂಭಿಸಿದವರು. ಆದ್ದರಿಂದ ಚಿತ್ರತಂಡಕ್ಕೆ ದಿಶಾ ಅವರು ಪ್ರಭಾಸ್ ಜೊತೆ ನಟಿಸಲು ಸಾಮಾನ್ಯವಾಗಿ ಇಂಟ್ರೆಸ್ಟ್ ಇದ್ದೇ ಇರುತ್ತದೆ ಎಂದು ತಿಳಿದಿದ್ದರಂತೆ. ಆದರೆ ದಿಶಾ ಸಹ 5 ಕೋಟಿ ಸಂಭಾವನೆ ಡಿಮ್ಯಾಂಡ್ ಮಾಡಿದ್ದಕ್ಕೆ ಚಿತ್ರತಂಡ ಇವರ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲವಂತೆ.

ಕತ್ರಿನಾ ಬಗ್ಗೆಯೂ ಹರಡಿದೆ ರೂಮರ್ಸ್

ಪ್ರಭಾಸ್ ಜೊತೆ 'ಸಾಹೋ' ಚಿತ್ರದಲ್ಲಿ ಕತ್ರಿನಾ ಕೈಫ್ ನಟಿಸಲಿದ್ದಾರೆ ಎಂದು ಈ ಹಿಂದೆ ಸುದ್ದಿ ಹರಿದಾಡಿತ್ತು. ಆದರೆ 'ಬಾಹುಬಲಿ-2' ಸಕ್ಸಸ್ ನಂತರ ಕತ್ರಿನಾ 'ಸಾಹೋ' ಚಿತ್ರವನ್ನು ರಿಜೆಕ್ಟ್ ಮಾಡಿದ್ದಾರೆ ಎಂದು ಈಗ ಸುದ್ದಿ ಹಬ್ಬಿದೆ. ಆದರೆ ಚಿತ್ರದಲ್ಲಿ ಪ್ರಭಾಸ್ ಜೊತೆ ಅಂತಿಮವಾಗಿ ರೋಮ್ಯಾನ್ಸ್ ಮಾಡುವವರು ಯಾರು ಎಂಬುದನ್ನು ಕಾದುನೋಡಬೇಕಿದೆ.

'ಸಾಹೋ' ಚಿತ್ರ

150 ಕೋಟಿ ರೂ ಬಜೆಟ್ ನಲ್ಲಿ ವಂಶಿ ಕೃಷ್ಣ ರೆಡ್ಡಿ ಮತ್ತು ಪ್ರಮೋದ್ ಉಪ್ಪಲಪತಿ ನಿರ್ಮಾಣದ 'ಸಾಹೋ' ಚಿತ್ರವನ್ನು ಸುಜೀತ್ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು 2018 ರಲ್ಲಿ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಮಾಡುವ ಯೋಜನೆಯನ್ನು ಚಿತ್ರತಂಡ ಹೊಂದಿದೆ.

English summary
Bollywood Actress Shraddha Kapoor Gave A Shocking Reply When Offered Prabhas's telugu movie 'Saaho'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada