Success Credit ; ಶ್ರದ್ಧಾ ಕಪೂರ್ VS ರಾಜ್ ಕುಮಾರ್ ರಾವ್ - ''ಸ್ತ್ರೀ 2'' ಯಾರ ಗೆಲುವು...?

ಅದು ಯಾವುದೇ ಸಿನಿಮಾ ಇರಲಿ, ಯಾವ ಭಾಷೆಯದ್ದೇ ಆಗಿರಲಿ, ಒಂದು ಸಿನಿಮಾ ಯಾರೋ ಒಬ್ಬರಿಂದ ಆಗುವಂಥಾದ್ದಲ್ಲ. ಒಂದು ಸಿನಿಮಾದ ಹಿಂದೆ ನಾಯಕ-ನಾಯಕಿಯರಿಂದ ಹಿಡಿದು ನಿರ್ದೇಶಕ ಮತ್ತು ತಂತ್ರಜ್ಞರನ್ನೊಳಗೊಂಡಂತೆ ಲೈಟ್ ಬಾಯ್‌ಗಳ ತನಕ ನೂರಾರು ಮಂದಿರ ಶ್ರಮ ಇರುತ್ತೆ. ಅದೆಷ್ಟೋ ವಿಭಾಗಗಳ ಅದೆಷ್ಟೋ ಜನರ ಬೆವರಿನ ಹನಿಗಳು ಒಂದು ಚಿತ್ರದ ಹಿಂದೆ ಇರುತ್ತವೆ. ಆದರೆ ಇದನ್ನು ಅರಿಯದೇ ಅನೇಕರು ಚಿತ್ರ ಗೆದ್ದಾಗ ಅದಕ್ಕೆ ಒಬ್ಬರನ್ನೇ ಹೊಣೆಯಾಗಿಸುತ್ತಾರೆ. ಅದೇ ಸೋತಾಗ ಆ ಸೋಲನ್ನು ನಿರ್ದೇಶಕ ಮತ್ತು ತಂತ್ರಜ್ಞರ ಹೆಗಲ ಮೇಲೆ ಹಾಕಿ ಕೈ ತೊಳೆದುಕೊಳ್ಳುತ್ತಾರೆ. ಇದಕ್ಕೆ ಸ್ತ್ರೀ 2 ಸದ್ಯದ ಉದಾಹರಣೆ.

ಹೌದು, ಸ್ತ್ರೀ 2 ಭಾರತದ ಗಲ್ಲಾಪೆಟ್ಟಿಗೆಯಲ್ಲಿ ಹಣದ ಹೊಳೆ ಹರಿಸುತ್ತಿದೆ. ಸೋತು ಸುಣ್ಣವಾಗಿದ್ದ ಬಾಲಿವುಡ್‌ನ ಈ ಚಿತ್ರ ಅನಾಮತ್ತಾಗಿ ಮೇಲಕ್ಕೇತ್ತಿದೆ. ಶ್ರದ್ಧಾ ಕಪೂರ್ ಅವರನ್ನು ಒಂದು ವರ್ಗ ಹಾಡಿ ಹೊಗಳುತ್ತಿದೆ. ಸ್ತ್ರೀ 2 ಶ್ರದ್ಧಾ ಕಪೂರ್ ಅಭಿನಯದ ಸಿನಿಮಾ ಎಂಬಂತೆ ಎಲ್ಲಡೆ ಬಿಂಬಿಸಲಾಗಿದೆ. ಆದರೆ, ವಾಸ್ತವದಲ್ಲಿ ಸ್ತ್ರೀ 2ದಲ್ಲಿ ಶ್ರದ್ಧಾ ಕಪೂರ್ ನಿರ್ವಹಿಸಿರುವುದು ಕೇವಲ ಅತಿಥಿ ಪಾತ್ರವನ್ನಷ್ಟೇ. ಹೆಚ್ಚೆಂದರೆ ಇಡೀ ಚಿತ್ರದಲ್ಲಿ ಶ್ರದ್ಧಾ ಕಪೂರ್ ತೆರೆ ಮೇಲೆ ಕಾಣಿಸುವುದು ಅರ್ಧ ಘಂಟೆ ಮಾತ್ರ.

shraddha-kapoor-or-rajkummar-rao-whos-the-true-star-of-stree-2-fans-are-divided-as-the-film-capt

ಆದರೂ ಇವತ್ತು ಸ್ತ್ರೀ ಅಂದರೆ ಅದು ಕೇವಲ ಶ್ರದ್ಧಾ ಕಪೂರ್ ಎಂಬಂತೆ ಅವರದ್ದೇ ಉತ್ಸವ ಹೊರಟಿದೆ. ಈ ಮೆರವಣಿಗೆ ಹೊರಡಿಸಲು ಅನೇಕ ದಿನಗಳ ಕಾಲ ಮಣ್ಣು ಹೊತ್ತ ಚಿತ್ರದ ಪ್ರಮುಖ ಪಾತ್ರಧಾರಿಗಳು ಮತ್ತು ಆಕರ್ಷಣೆಯ ಕೇಂದ್ರ ಬಿಂದುವಾದ ರಾಜ್ ಕುಮಾರ್ ರಾವ್ ಮತ್ತು ಅಪರಶಕ್ತಿ ಖುರಾನಾ ಅವರ ಮನಸುಗಳು ನೋಯದಿರುತ್ತಾವಾ..? ಅವರಿಗೆ ನೋವಾಗದೇ ಇದ್ದರೂ ಇವರ ಅಭಿಮಾನಿಗಳಿಗಂತೂ ನೋವಾಗಿದೆ.

ಹೀಗಾಗಿಯೇ ಸ್ತ್ರೀ 2 ಚಿತ್ರದ ಈ ಅಭೂತಪೂರ್ವ ಗೆಲುವಿಗೆ ನಿಜವಾದ ಕಾರಣ ಯಾರು ಎನ್ನುವ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ. ರಾಜ್ ಕುಮಾರ್ ರಾವ್ ಮತ್ತು ಶ್ರದ್ಧಾ ಕಪೂರ್ ಅಭಿಮಾನಿ ಬಣದ ನಡುವೆ ವಾದ-ವಿವಾದ ಶುರುವಾಗಿದೆ.

Should we really considering Stree 2 a shraddha kapoor film?
byu/Acrobatic_Neck_5866 inBollyBlindsNGossip

ಸ್ತ್ರೀ 2 ಚಿತ್ರದ ಗೆಲುವು ಶ್ರದ್ಧಾ ಕಪೂರ್ ಅವರದ್ದೇ ಗೆಲುವು ಎಂಬ ವಾದವನ್ನು ಒಂದು ವರ್ಗ ಮಾಡಿದರೆ, ಮತ್ತೊಂದು ವರ್ಗ ರಾಜ್ ಕುಮಾರ್ ರಾವ್ ಅವರ ಅಭಿನಯ ಇಡೀ ಚಿತ್ರದ ಬೆನ್ನೆಲುಬು. ಹೀಗಾಗಿ ಇದು ರಾಜ್ ಕುಮಾರ್ ರಾವ್ ಅವರ ಗೆಲುವು ಎಂಬ ಪ್ರತಿವಾದವನ್ನು ಮಾಡುತ್ತಿದೆ. ತಮ್ಮ ಪ್ರಚಾರವನ್ನು ಮಾಡುವ ತಂಡವನ್ನು ಸ್ತ್ರೀ 2 ಚಿತ್ರದ ವಿಚಾರದಲ್ಲಿ ಶ್ರದ್ಧಾ ಕಪೂರ್ ತುಂಬಾ ಚೆನ್ನಾಗಿ ಬಳಿಸಿಕೊಂಡಿದ್ದಾರೆ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಇದು ರಾಜ್ ಕುಮಾರ್ ರಾವ್ ಅವರ ವೈಫಲ್ಯ ಅಲ್ಲ ರಾಜ್ ಕುಮಾರ್ ರಾವ್ ಅವರ PR ತಂಡದ ವೈಫಲ್ಯ ಎನ್ನುತ್ತಿದ್ದಾರೆ.

ಇನ್ನೂ ಇತ್ತ ರಾಜ್ ಕುಮಾರ್ ರಾವ್ ಮತ್ತು ಶ್ರದ್ಧಾ ಕಪೂರ್ ಅಭಿಮಾನಿಗಳು ಪರಸ್ಪರ ಕೆಸರು ಎರಚಿಕೊಳ್ಳುತ್ತಿರುವ ಸಂದರ್ಭದಲ್ಲಿ ಈ ಚಿತ್ರದ ನಿಜವಾದ ಗೆಲುವಿಗೆ ಕಾರಣ ಚಿತ್ರದ ನಿರ್ದೇಶಕ ಅಮರ್ ಕೌಶಿಕ್ ಕಾರಣ ಎಂದು ಕಂಗನಾ ರಣಾವತ್ ಹೇಳಿದ್ದಾರೆ. ಸ್ಕ್ಯಾಮ್ 1992 ಮತ್ತು ತೆಲಗಿ ವೆಬ್ ಸರಣಿಗಳ ರೂವಾರಿ ನಿರ್ದೇಶಕ ಹನ್ಸಲ್ ಮೆಹ್ತಾ ಕೂಡ ಸ್ತ್ರೀ 2 ಚಿತ್ರದ ಗೆಲುವು ನಿರ್ದೇಶಕನ ಗೆಲುವು ಅಂದಿದ್ಧಾರೆ ಬರವಣಿಗೆಯ ಗೆಲುವು ಅಂದಿದ್ದಾರೆ. ಇವರೆಲ್ಲರ ನಡುವೆ ಅಕ್ಷಯ್ ಕುಮಾರ್ ಅಭಿಮಾನಿಗಳು ಸ್ತ್ರೀ 2 ಚಿತ್ರದ ಗೆಲುವಿಗೆ ಅಕ್ಷಯ್ ಕುಮಾರ್ ಚಿತ್ರದಲ್ಲಿ ನಿರ್ವಹಿಸಿರುವ ಐದು ಹತ್ತು ನಿಮಿಷದ ಪಾತ್ರವೇ ಕಾರಣ ಎಂಬ ವಾದವನ್ನು ಮಾಡುತ್ತಿದ್ದಾರೆ ಅನ್ನುವುದು ಹಾಸ್ಯಾಸ್ಪದ ವಿಷಯ.

While Stree 2 is a feminist film. Shraddha Kapoor has definitely not “led” the film anywhere. It’s not a “female-led” by any means!
byu/Inside-Sleep3928 inBollyBlindsNGossip

ಒಟ್ನಲ್ಲಿ ಒಂದು ಚಿತ್ರ ದೊಡ್ಡ ಮಟ್ಟದಲ್ಲಿ ಗೆಲುವು ಕಾಣುತ್ತಿದ್ದಂತೆಯೇ ಇದು ಯಾರ ಗೆಲುವು ಎನ್ನುವ ಪ್ರಶ್ನೆ ಎದ್ದೇಳುತ್ತೆ. ಇನ್ನೂ ಚಿತ್ರ ಬ್ಲಾಕ್ ಬಸ್ಟರ್ ಸಾಲಿನಲ್ಲಿ ಸೇರಿಕೊಂಡರೆ ಆ ಸಿನಿಮಾದ ತಂಡಗಳು ಬಹುತೇಕ ಚೂರು ಚೂರಾಗುತ್ತವೆ. ಇದಕ್ಕೆ ಗೆಲುವಿಗೆ ನಾನು ಕಾರಣ ಅನ್ನುವ ಈಗೋ ಕ್ಲ್ಯಾಶುಗಳು ಕಾರಣ. ಸ್ತ್ರೀ 2 ಚಿತ್ರತಂಡದಲ್ಲಿಯೂ ಸದ್ಯ ಇಂತಹದ್ದೇ ಸ್ಥಿತಿ ಇದೆಯಾ ಗೊತ್ತಿಲ್ಲವಾದರೂ, ಸ್ತ್ರೀ 2 ಹಿಂದೆ ಬಿಡಿ ಬಿಡಿ ಕೆಲಸಗಳ ಬಾಬತ್ತಿದೆ. ನಿರ್ದೇಶನ, ಕ್ಯಾಮೆರಾ, ಕಲಾ ನಿರ್ದೇಶನ, ಎಡಿಟಿಂಗ್, ಸಂಗೀತ, ಸಾಹಸ ನಿರ್ದೇಶನ... ಇಂಥಾ ಅದೆಷ್ಟೋ ವಿಭಾಗಗಳ, ಅದೆಷ್ಟೋ ಜನರ ಬೆವರ ಹನಿಗಳು ತಾಕದಿದ್ದರೆ ಸ್ತ್ರೀ 2 ಮಾತ್ರವಲ್ಲ. ಯಾವ ಚಿತ್ರವೂ ತಯಾರಾಗೋದಿಲ್ಲ. ಈ ಪಾಟಿ ಗೆಲುವು ದಕ್ಕೋದಂತೂ ದೂರದ ಮಾತು ಅನ್ನುವುದು ಮಾತ್ರ ಸತ್ಯ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X