»   » ಶ್ರದ್ಧಾ ಕಪೂರ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರಿ ಅಂತೆ.!

ಶ್ರದ್ಧಾ ಕಪೂರ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರಿ ಅಂತೆ.!

Posted By:
Subscribe to Filmibeat Kannada

ಅರ್ಜುನ್ ಕಪೂರ್ ಗೆ 'ಹಾಫ್ ಗರ್ಲ್ ಫ್ರೆಂಡ್' ಆಗಿ ಅಭಿನಯಿಸಿದ ನಂತರ ನಟಿ ಶ್ರದ್ಧಾ ಕಪೂರ್ ಯಾವ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಬಿಟೌನ್ ಸಿನಿ ಪ್ರಿಯರಿಗೆ ಕಾಡುತ್ತಿತ್ತು. ಆ ಕ್ಯೂರಿಯಾಸಿಟಿಗೆ ಈಗ ಬ್ರೇಕ್ ಬಿದ್ದಿದೆ.

'ಹಾಫ್ ಗರ್ಲ್‌ ಫ್ರೆಂಡ್' ಚಿತ್ರದ ನಂತರ ಶ್ರದ್ಧಾ ಕಪೂರ್ 'ಹಸೀನಾ: ದಿ ಕ್ವೀನ್ ಆಫ್ ಮುಂಬೈ' ಎಂಬ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲದೇ ಚಿತ್ರದ ಪೋಸ್ಟರ್ ಸಹ ಬಿಡುಗಡೆ ಆಗಿದ್ದು, ಶ್ರದ್ಧಾ ಕಪೂರ್ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

Shraddha Kapoor Starrer Haseena: The Queen of Mumbai poster release

'ಹಸೀನಾ: ದಿ ಕ್ವೀನ್ ಆಫ್ ಮುಂಬೈ' ಚಿತ್ರ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರಿ ಹಸೀನಾ ಪಾರ್ಕರ್ ಕುರಿತ ಚಿತ್ರ. ಈ ಚಿತ್ರದಲ್ಲಿ ಶ್ರದ್ಧಾ ಕಪೂರ್ ಹಸೀನಾ ಪಾರ್ಕರ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈಗ ಬಿಡುಗಡೆ ಆಗಿರುವ ಚಿತ್ರದ ಪೋಸ್ಟರ್ ನಲ್ಲಿ ಶ್ರದ್ಧಾ ಕಪೂರ್ ಬುರ್ಕಾ ಧರಿಸಿ ಕಪ್ಪು ಬಟ್ಟೆಯನ್ನು ಮುಖಕ್ಕೆ ಸುತ್ತಿಕೊಂಡು, ವಿಪರೀತ ಕೋಪದಿಂದ ದಿಟ್ಟಿಸಿನೋಡುತ್ತಿದ್ದಾರೆ. ಈ ಲುಕ್ ನೋಡಿದರೆ ಎಂತಹವರಿಗೂ ಒಮ್ಮೆ ಶ್ರದ್ಧಾ ಪಾತ್ರದ ಬಗ್ಗೆ ಕುತೂಹಲ ಕೆರಳುತ್ತದೆ.

ಚಿತ್ರದ ಇನ್ನೊಂದು ವಿಶೇಷತೆ ಎಂದರೇ ದಾವೂದ್ ಇಬ್ರಾಹಿಂ ಪಾತ್ರದಲ್ಲಿ ಶ್ರದ್ಧಾ ಕಪೂರ್ ಸಹೋದರ ಸಿದ್ಧಾಂತ್ ಕಪೂರ್ ಬಣ್ಣ ಹಚ್ಚಿದ್ದಾರೆ. ಇದೇ ಮೊದಲ ಬಾರಿಗೆ ಅವರು ಸಹ ಸಹೋದರಿ ಶ್ರದ್ಧಾ ಅವರೊಂದಿಗೆ ನಟಿಸುತ್ತಿದ್ದಾರೆ.

'ಹಸೀನಾ: ದಿ ಕ್ವೀನ್ ಆಫ್ ಮುಂಬೈ' ಚಿತ್ರಕ್ಕೆ ಅಪೂರ್ವ ಲಖಿಯಾ ಆಕ್ಷನ್ ಕಟ್ ಹೇಳುತ್ತಿದ್ದು, ನಹಿದ್ ಖಾನ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಸಚಿನ್ ಜಿಗರ್ ಎಂಬುವರು ಸಂಗೀತ ನೀಡಿದ್ದಾರೆ. ಚಿತ್ರ ಆಗಸ್ಟ್ 18 ರಂದು ದೇಶದಾದ್ಯಂತ ತೆರೆಗೆ ಬರಲಿದೆ.

English summary
Bollywood Actress Shraddha Kapoor Starrer 'Haseena: The Queen of Mumbai' poster release. This Movie is direct by Apoorva Lakhia features Siddhanth Kapoor and Ankur Bhatia.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada