ಅಬ್ಬಬ್ಬಾ.. ಪ್ರಧಾನಿ ಮೋದಿಯನ್ನು ಹಿಂದಿಕ್ಕಿದ ಬಾಲಿವುಡ್ 'ಸ್ತ್ರೀ' ಶ್ರದ್ಧಾ ಕಪೂರ್
ಬಾಕ್ಸಾಫೀಸ್‌ನಲ್ಲಿ 'ಸ್ತ್ರೀ'-2 ಸಿನಿಮಾ ಧೂಳೆಬ್ಬಿಸಿದೆ. ರಾಜ್‌ಕುಮಾರ್ ರಾವ್, ಶ್ರದ್ಧಾ ಕಪೂರ್ ನಟನೆಯ ಹಾರರ್ ಕಾಮಿಡಿ ಸಿನಿಮಾ ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಕೇವಲ 4 ದಿನಕ್ಕೆ ಸಿನಿಮಾ 283 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡ ಘೋಷಿಸಿದೆ.
ಮುಂಬೈ ಬೆಡಗಿ ಶ್ರದ್ಧಾ ಕಪೂರ್ ಕ್ರೇಜ್ ಬಗ್ಗೆ ಬಿಡಿಸಿ ಹೇಳುವುದು ಬೇಕಾಗಿಲ್ಲ. ಸೂಪರ್ ಹಿಟ್ ಸಿನಿಮಾಗಳ ಮೂಲಕ ಚೆಲುವೆ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ದೊಡ್ಡಮಟ್ಟದಲ್ಲಿ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. 14 ವರ್ಷಗಳ ಹಿಂದೆ 'ತೀನ್ ಪತ್ತಿ' ಸಿನಿಮಾ ಮೂಲಕ ಆಕೆ ಬಾಲಿವುಡ್ ಪ್ರವೇಶಿಸಿದ್ದರು.

ತಂದೆ ಶಕ್ತಿ ಕಪೂರ್ ಬಾಲಿವುಡ್ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದರು. ಪೋಷಕ ನಟನಾಗಿ, ಖಳನಟನಾಗಿ ಅಬ್ಬರಿಸಿದ್ದರು. ಹಾಗಾಗಿ ಶ್ರದ್ಧಾ ಕಪೂರ್ ಚಿತ್ರರಂಗಕ್ಕೆ ಬರುವುದು ಕಷ್ಟವಾಗಲಿಲ್ಲ. ಬಂದ ಬಳಿಕ ತಮ್ಮದೇ ವಿಭಿನ್ನ ಅಭಿನಯದಿಂದ ಮೋಡಿ ಮಾಡುತ್ತಾ ಬಂದರು. ಸ್ಟಾರ್ ನಟರ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಗಿಟ್ಟಿಸಿಕೊಂಡರು. ಚಿತ್ರದಿಂದ ಚಿತ್ರಕ್ಕೆ ಜನಪ್ರಿಯತೆ ಹೆಚ್ಚಿಸಿಕೊಂಡರು.
ಕ್ರೇಜ್ ವಿಚಾರದಲ್ಲಿ ಇದೀಗ ಶ್ರದ್ಧಾ ಕಪೂರ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಂದಿಕ್ಕಿದ್ದಾರೆ. ಇನ್‌ಸ್ಟಾಗ್ರಾಮ್ ಫಾಲೋವರ್ಸ್ ವಿಚಾರದಲ್ಲಿ ಮೋದಿಯನ್ನು ಮೀರಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅತಿಹೆಚ್ಚು ಫಾಲೋವರ್ಸ್ ಹೊಂದಿರುವ ಭಾರತದ ಸೆಲೆಬ್ರೆಟಿಗಳು, ರಾಜಕೀಯ ಮುಖಂಡರ ಲಿಸ್ಟ್‌ನಲ್ಲಿ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಕ್ರಿಕೆಟಿಗ ವಿರಾಟ್ ಕೊಹ್ಲಿಗೆ 27 ಕೋಟಿ ಫಾಲೋವರ್ಸ್ ಇದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿರುವ ಪ್ರಿಯಾಂಚ ಚೋಪ್ರಾ 9.18 ಕೋಟಿ ಫಾಲೋವರ್ಸ್ ಹೊಂದಿದ್ದಾರೆ. ಇನ್ನು ಪ್ರಧಾನಿ ಮೋದಿಗೆ 9.13 ಕೋಟಿ ಫಾಲೋವರ್ಸ್ ಇದ್ದರೆ ಅವರನ್ನು ಮೀರಿಸಿ 1.14 ಕೋಟಿ ಫಾಲೋವರ್ಸ್ ಮೂಲಕ ಶ್ರದ್ಧಾ ಕಪೂರ್ 3ನೇ ಸ್ಥಾನಕ್ಕೇರಿದ್ದಾರೆ. 'ಸ್ತ್ರೀ'-2 ಬಳಿಕ ಮತ್ಯಾವುದೇ ಚಿತ್ರದಲ್ಲಿ ಆಕೆ ನಟಿಸುತ್ತಿಲ್ಲ. ಮುಂದಿನ ವರ್ಷ ಹೊಸ ಸಿನಿಮಾ ಚಿತ್ರದಲ್ಲಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.
'ಸ್ತ್ರೀ'-2 ಸಿನಿಮಾ ಸಕ್ಸಸ್ ಬೆನ್ನಲ್ಲೇ ಶ್ರದ್ಧಾ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಭಾರತದ ಸೆಲೆಬ್ರೆಟಿಗಳ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದ್ದಾರೆ. ಆದರೆ ಟ್ವಿಟ್ಟರ್‌ನಲ್ಲಿ ಮಾತ್ರ 10.12 ಕೋಟಿ ಫಾಲೋವರ್ಸ್ ಇರುವ ಪ್ರಧಾನಿ ಮೋದಿ ಮೊದಲ ಸ್ಥಾನದಲ್ಲಿ ಇದ್ದಾರೆ. ಜನಪ್ರಿಯತೆ, ಕ್ರೇಜ್‌ಗೆ ತಕ್ಕಂತೆ ನೆಟ್ಟಿಗರು ಸೆಲೆಬ್ರೆಟಿಗಳನ್ನು ಫಾಲೋ ಮಾಡುತ್ತಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಮೋದಿಯನ್ನು ಶ್ರದ್ಧಾ ಇದೀಗ ಹಿಂದಿಕ್ಕಿದ್ದಾರೆ.

ಶ್ರದ್ಧಾ ನಂತರ, ಆಲಿಯಾ ಭಟ್ 8.1 ಕೋಟಿ, ಕತ್ರಿನಾ ಕೈಫ್ 8.4 ಕೋಟಿ, ದೀಪಿಕಾ ಪಡುಕೋಣೆ 7.98ಕೋಟಿ ಮತ್ತು ನೇಹಾ ಕಕ್ಕರ್ 7.87ಕೋಟಿ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಪಡೆದು ನಂತರದ ಸ್ಥಾನಗಳಲ್ಲಿ ನಿಂತಿದ್ದಾರೆ. ಅತಿ ಹೆಚ್ಚು ಇನ್‌ಸ್ಟಾಗ್ರಾಂ ಫಾಲೋವರ್ಸ್ ಹೊಂದಿರುವ ನಟರಲ್ಲಿ 6.93 ಕೋಟಿಯೊಂದಿಗೆ ಸಲ್ಮಾನ್ ಖಾನ್ ಮೊದಲಸ್ಥಾನದಲ್ಲಿದ್ದಾರೆ.
ಟ್ವಿಟ್ಟರ್ ಅಥವಾ ಎಕ್ಸ್ ವೇದಿಕೆಯಲ್ಲಿ ಪ್ರಧಾನಿ ಮೋದಿಗೆ 10.12 ಕೋಟಿ ಫಾಲೋವರ್ಸ್ ಇದ್ದಾರೆ. ಜಾಗತಿಕ ನಾಯಕರಲ್ಲಿ ಯುಎಸ್ ಅಧ್ಯಕ್ಷ ಜೋ ಬಿಡೆನ್, ದುಬೈ ದೊರೆ ಶೇಖ್ ಮೊಹಮ್ಮದ್ ಮತ್ತು ಪೋಪ್ ಫ್ರಾನ್ಸಿಸ್ ನಂತರದ ಸ್ಥಾನಗಳಲ್ಲಿ ನಿಲ್ಲುತ್ತಾರೆ. ಇನ್ನು ನಾಯಕ ರಾಹುಲ್ ಗಾಂಧಿ 2.67 ಕೋಟಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 2.76 ಕೋಟಿ ಎಕ್ಸ್ ಫಾಲೋವರ್ಸ್ ಹೊಂದಿದ್ದಾರೆ.


Click it and Unblock the Notifications











