»   » 'ಸಾಹೋ' ನಾಯಕಿಯ ಸಂಭಾವನೆ ಕಂಡು ಸೌತ್ ನಟಿಯರು ಉರಿದು ಬೀಳುತ್ತಿದ್ದಾರೆ.!

'ಸಾಹೋ' ನಾಯಕಿಯ ಸಂಭಾವನೆ ಕಂಡು ಸೌತ್ ನಟಿಯರು ಉರಿದು ಬೀಳುತ್ತಿದ್ದಾರೆ.!

Posted By:
Subscribe to Filmibeat Kannada

'ಬಾಹುಬಲಿ' ಚಿತ್ರದ ನಂತರ ಪ್ರಭಾಸ್ ಅಭಿನಯದ 'ಸಾಹೋ' ಚಿತ್ರ ಹೆಚ್ಚಿನ ಕುತೂಹಲ ಹುಟ್ಟುಹಾಕಿದೆ. ಇದಕ್ಕಾಗಿ ನಟ ಪ್ರಭಾಸ್ ಪೂರ್ತಿ ಮೇಕ್ ಓವರ್ ಆಗಿದ್ದು, ಸ್ಟೈಲಿಶ್ ಅವತಾರದಲ್ಲಿ ಮಿಂಚುತ್ತಿದ್ದಾರೆ. ಇಷ್ಟು ದಿನ ಪ್ರಭಾಸ್ 'ಸಾಹೋ'ಗೆ ನಾಯಕಿಯ ಸಮಸ್ಯೆ ದೊಡ್ಡ ತಲೆನೋವಾಗಿತ್ತು.

ಇದೀಗ, ಈ ಸಮಸ್ಯೆಯಿಂದ ಹೊರಬಂದಿರುವ 'ಸಾಹೋ' ಚಿತ್ರತಂಡ ಕೊನೆಗೂ ನಾಯಕಿಯನ್ನ ಆಯ್ಕೆ ಮಾಡಿಕೊಂಡಿದೆ. ತಮಿಳು, ತೆಲುಗು, ಹಿಂದಿ ಹೀಗೆ ಎಲ್ಲ ಭಾಷೆಗಳಲ್ಲೂ ಪ್ರಭಾಸ್ ಗೆ ನಾಯಕಿಯನ್ನ ಹುಡುಕುತ್ತಿದ್ದ ಚಿತ್ರತಂಡ ಕೊನೆಗೂ ಬಾಲಿವುಡ್ ಲೋಕದಿಂದಲೇ ಹೀರೋಯಿನ್ ಕರೆತಂದಿದೆ.

ಅಂದ್ಹಾಗೆ, ಈ ನಾಯಕಿಗೆ ನೀಡುತ್ತಿರುವ ಸಂಭಾವನೆ ಎಲ್ಲರ ಹುಬ್ಬೇರುವಂತಿದೆ. ಇಷ್ಟೊಂದು ಸಂಭಾವನೆ ಯಾವ ದಕ್ಷಿಣ ಭಾರತದ ನಟಿಗೂ ನೀಡಿರಲಿಲ್ಲ. ಹಾಗಿದ್ರೆ, 'ಸಾಹೋ' ಚಿತ್ರದ ನಾಯಕಿ ಯಾರು? ಈ ನಟಿಗೆ ನೀಡುತ್ತಿರುವ ಸಂಭಾವನೆ ಎಷ್ಟು? ಮುಂದೆ ಓದಿ.....

'ಸಾಹೋ'ಗೆ ನಾಯಕಿ ಸಿಕ್ಕಾಯ್ತು

ಪ್ರಭಾಸ್ ಅಭಿನಯಿಸುತ್ತಿರುವ 'ಸಾಹೋ' ಚಿತ್ರಕ್ಕೆ ನಾಯಕಿಯ ಆಯ್ಕೆ ಅಂತಿಮವಾಗಿದೆ. ಈ ಮೂಲಕ ಅನುಷ್ಕಾ ಶೆಟ್ಟಿ ಜಾಗವನ್ನ ತುಂಬಲು ಬಾಲಿವುಡ್ ಸುಂದರಿಯ ಆಗಮನವಾಗಿದೆ.

ಪ್ರಭಾಸ್ ಹೊಸ ಲುಕ್ ನೋಡಿ ಹೃದಯ ಬಡಿತ ಹೆಚ್ಚಿಸಿಕೊಂಡ ಫ್ಯಾನ್ಸ್

ಪ್ರಭಾಸ್ ಜೊತೆ ಶ್ರದ್ಧಾ ಡ್ಯುಯೆಟ್

'ಸಾಹೋ' ಚಿತ್ರದಲ್ಲಿ ನಟ ಪ್ರಭಾಸ್ ಜೊತೆ ಬಾಲಿವುಡ್ ಸುಂದರಿ ಶ್ರದ್ಧಾ ಕಪೂರ್ ಜೋಡಿಯಾಗಲಿದ್ದಾರೆ. ಈ ಸುದ್ದಿ ಅಧಿಕೃತವೆಂದು ತೆಲುಗು ಹಾಗೂ ಹಿಂದಿ ಪತ್ರಿಕೆಗಳು ವರದಿ ಮಾಡಿವೆ.

'ಸಾಹೋ' ರಿಜೆಕ್ಟ್ ಮಾಡಿದ ಶ್ರದ್ಧಾ, 'ಬಾಹುಬಲಿ' ಪ್ರಭಾಸ್ ಬಗ್ಗೆ ಹೇಳಿದ್ದೇನು?

ಶ್ರದ್ಧಾ ಸಂಭಾವನೆ ಎಷ್ಟು?

ಶ್ರದ್ಧಾ ಕಪೂರ್ 'ಸಾಹೋ' ಚಿತ್ರದಲ್ಲಿ ನಟಿಸಲು ದೊಡ್ಡ ಮೊತ್ತವನ್ನ ಸಂಭಾವನೆಯಾಗಿ ನೀಡಲಾಗಿದೆಯಂತೆ. ಇದುವರೆಗೂ ದಕ್ಷಿಣ ಭಾರತದ ನಟಿಯರ ಪೈಕಿ ಯಾರೋಬ್ಬರಿಗೂ ಇಷ್ಟೊಂದು ಮೊತ್ತ ನೀಡಿಲ್ಲವಂತೆ. ಹೌದು, ಶ್ರದ್ಧಾಗೆ ಈ ಚಿತ್ರಕ್ಕಾಗಿ 6 ಕೋಟಿ ಸಂಭಾವನೆ ನೀಡಲಾಗುತ್ತಿದೆಯಂತೆ. ಈ ವಿಷ್ಯ ಕೇಳಿದ ಸೌತ್ ನಟಿಯರು ಉರಿದು ಬೀಳುತ್ತಿದ್ದಾರೆ.

ಶ್ರದ್ಧಾಗೂ ಮೊದಲಿದ್ದ ನಟಿಯರು

ಶ್ರದ್ಧಾ ಕಪೂರ್ ಗೂ ಮೊದಲೂ ಈ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಅಭಿನಯಿಸಬೇಕಿತ್ತು. ಆದ್ರೆ, ಕಾರಣಾಂತರಗಳಿಂದ ಈ ಚಿತ್ರದಿಂದ ಅನುಷ್ಕಾ ಹಿಂದೆ ಸರಿದರು. ನಂತರ ಕತ್ರಿನಾ ಕೈಫ್, ಪೂಜಾ ಹೆಗಡೆ, ರಕುಲ್ ಪ್ರೀತ್ ಸಿಂಗ್ ಹೆಸರು ಕೇಳಿ ಬಂದಿತಾದರೂ ಅಂತಿಮವಾಗಿರಲಿಲ್ಲ. ಈಗ ಶ್ರದ್ಧಾ ಕಪೂರ್ ಗೆ ಅವಕಾಶ ಸಿಕ್ಕಿದೆ.

ಅನುಷ್ಕಾ ಬದಲು ಪ್ರಭಾಸ್ ಗೆ ಜೋಡಿ ಆಗ್ತಾಳ ಬಾಲಿವುಡ್ ನಟಿ.!

Prabhas And Anushka Shetty In Love, Is It True ? | Filmibeat Kannada

ತೆಲುಗು-ಹಿಂದಿಯಲ್ಲಿ 'ಸಾಹೋ'

ಅಂದ್ಹಾಗೆ, ಸಾಹೋ ಚಿತ್ರ ತೆಲುಗು ಮತ್ತು ಹಿಂದಿಯಲ್ಲಿ ಏಕಕಾಲದಲ್ಲಿ ತಯಾರಾಗುತ್ತಿದೆ. ಇನ್ನು ಸಾಹೋ ಪ್ರಭಾಸ್ ಅಧಿಕೃತವಾಗಿ ಅಭಿನಯದ ಮೊದಲ ಹಿಂದಿ ಸಿನಿಮಾ ಎನ್ನಲಾಗುತ್ತಿದೆ. ಸುಜಿತ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ.

'ಸಾಹೋ'ಗೆ ಅನುಷ್ಕಾ ಬದಲು ಮೊದಲು ಅಪ್ರೋಚ್ ಮಾಡಿದ್ದ ನಟಿಯೇ ನಾಯಕಿ?

English summary
Confirmed: Shraddha Kapoor to star opposite Prabhas in Saaho. The Movie directed by sujeeth
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada