ಬೆಳಗ್ಗೆಯಿಂದ 'ಶ್ರಾವಣ ಉಪವಾಸ' ಮಾಡಿ ರಾತ್ರಿ ಕುರಿಮಾಂಸ ತಿಂದ ಖ್ಯಾತ ನಟಿ, ಕೆರಳಿ ಕೆಂಡವಾದ ಜನ

ಹಿಂದೂ ಧರ್ಮದಲ್ಲಿ ಶ್ರಾವಣ ಮಾಸಕ್ಕೆ ಅದರದ್ದೇ ಆದ ಮಹತ್ವ ಇದೆ. ಸತ್ಕಾರ್ಯಗಳನ್ನು ಮಾಡಲು ಈ ಅವಧಿ ಸರಿಯಾದ ಸಮಯ ಎನ್ನುವ ನಂಬಿಕೆ ಹಲವರಲ್ಲಿದೆ. ಈ ಮಾಸದಲ್ಲಿ ಬರುವ ಎಲ್ಲ ಸೋಮವಾರಗಳು ಮುಕ್ತಿಯ ಸೋಪಾನಗಳು ಎನ್ನುವ ಅಭಿಪ್ರಾಯ ಕೂಡ ಬಹುತೇಕರಲ್ಲಿದೆ. ಇನ್ನು ಜಪ, ತಪ, ಧ್ಯಾನ ಮತ್ತು ದಾನಕ್ಕೆ ಈ ಮಾಸವು ಅತ್ಯಂತ ಅನುಕೂಲಕರ ಎಂದು ಹೇಳಲಾಗುತ್ತದೆ.

ಶ್ರಾವಣ ಮಾಸದಲ್ಲಿ ನಾಗ ಚತುರ್ಥಿ ಮತ್ತು ನಾಗಪಂಚಮಿ ಹಬ್ಬಗಳನ್ನು ಕೂಡ ಆಚರಿಸಲಾಗುತ್ತದೆ. ಇದಲ್ಲದೆ, ಎರಡನೇ ಶುಕ್ರವಾರದಂದು ವರಮಹಾಲಕ್ಷ್ಮಿ ಹಬ್ಬವನ್ನು ಕೂಡ ಆಚರಿಸಲಾಗುತ್ತದೆ. ಶ್ರೀಕೃಷ್ಣನ ಅವತಾರವು ಶ್ರಾವಣ ಮಾಸದಲ್ಲಿ ನಡೆದಿದೆ ಎಂದು ಕೂಡ ಹೇಳಲಾಗುತ್ತದೆ. ಇನ್ನು ಶ್ರಾವಣ ಮಾಸದಲ್ಲಿ ಉಪವಾಸ ಮಾಡಲು ಕೂಡ ಹಲವು ಪದ್ದತಿಗಳಿವೆ.

Shravan Shocker Tanushree Dutta Trolled for Mutton in Shravan Sparks Outrage amp amp Bold Reply

ದೇಹದಲ್ಲಿ ಅಗತ್ಯವಾದ ಪೋಷಕಾಂಶಗಳ ಕೊರತೆಯಾಗದಂತೆ ಕಾಪಾಡಿಕೊಳ್ಳಲು ಒಣ ಹಣ್ಣುಗಳನ್ನು ಅನೇಕರು ಸೇವಿಸುತ್ತಾರೆ. ಜ್ಯೂಸ್, ಹಾಲು ಮುಂತಾದ ದ್ರವವನ್ನು ಆಗಾಗ್ಗೆ ತೆಗೆದುಕೊಳ್ಳುತ್ತಾರೆ. ಈರುಳ್ಳಿ, ಬೆಳ್ಳುಳ್ಳಿ ಮತ್ತು ಶುಂಠಿಗಳಿಂದ ಸಾಧ್ಯವಾದಷ್ಟು ಅನೇಕರು ದೂರ ಇರುವ ಪ್ರಯತ್ನವನ್ನು ಮಾಡುತ್ತಾರೆ. ಮಾಂಸಾಹಾರವನ್ನು ಸಂಪೂರ್ಣವಾಗಿ ತ್ಯಜಿಸುತ್ತಾರೆ. ಆದರೆ.. ಇಲ್ಲೊಬ್ಬ ನಾಯಕಿ ಶ್ರಾವಣ ಮಾಸದಲ್ಲಿ ಬೆಳಗ್ಗೆ ಉಪವಾಸವನ್ನು ಮಾಡಿ ಸಂಜೆ ಮಾಂಸಾಹಾರವನ್ನು ಸೇವಿಸಿದ್ದಾರೆ. ಸಾಲದಕ್ಕೆ ವಿಡಿಯೋವನ್ನು ಕೂಡ ಹಂಚಿಕೊಂಡಿದ್ದಾರೆ. ಈ ಮೂಲಕ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಹೌದು, ತನುಶ್ರೀ ದತ್ತಾ..ಒಂದು ಕಾಲದ ಪಡ್ಡೆಹುಡುಗರ ಕನಸಿನ ರಾಣಿ. ಇವರ ''ಆಶಿಕ್ ಬನಾಯಾ ಆಪ್ನೇ'' ಚಿತ್ರವನ್ನು ಅದೆಷ್ಟು ಜನ ಅದೆಷ್ಟು ಬಾರಿ ನೋಡಿದ್ದಾರೋ ಗೊತ್ತಿಲ್ಲ. ಇದೊಂದೇ ಚಿತ್ರದ ಮೂಲಕ ಖ್ಯಾತಿಯ ಶಿಖರಕ್ಕೇರಿ ಅಷ್ಟೇ ವೇಗದಲ್ಲಿ ದೊಪ್ಪನೆ ಕೆಳಗೆ ಬಿದ್ದ ತನುಶ್ರೀ ದತ್ತಾ ಕೆಲ ವರ್ಷಗಳ ಹಿಂದೆ ನಾನಾ ಪಾಟೇಕರ್ ವಿರುದ್ಧ ಮೀಟೂ ಆರೋಪವನ್ನು ಮಾಡಿದ್ದರು. ಮೊನ್ನೆ ಮೊನ್ನೆಯಷ್ಟೇ ನನ್ನ ಮನೆಯವರಿಂದನೇ ನನಗೆ ಕಿರುಕುಳ ಎಂದು ಕಣ್ಣೀರು ಹಾಕಿದ್ದರು.

ಇಂಥಾ ತನುಶ್ರೀ ದತ್ತಾ ಸದ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಬೆಳಗ್ಗೆ ಉಪವಾಸ ಮಾಡಿದೆ ಈಗ ನಾನ್ ವೆಜ್ ತಿನ್ನುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ಕುರಿತು ವಿಡಿಯೋ ಮಾಡಿರುವ ತನುಶ್ರೀ ದತ್ತಾ ಇಂದು ಶ್ರಾವಣ ಮಾಸದ ಹಿನ್ನೆಲೆ ನಾನು ಉಪವಾಸ ಮಾಡಿದ್ದೇ ಈಗ ಸಂಜೆ 7ಕ್ಕೆ ಉಪವಾಸ ಮುರಿದಿದ್ದೇನೆ ಎಂದು ಹೇಳಿದ್ದಾರೆ. ಅನ್ನ.. ಬೇಳೆ ಮತ್ತು ಕುರಿಮಾಂಸವನ್ನು ತಿಂದೆ ಎಂದು ಹೇಳಿದ್ದಾರೆ.

ಈ ರೀತಿಯ ಉಪವಾಸ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ತುಂಬಾನೇ ಉತ್ತಮ ಎಂದು ಕೂಡ ಹೇಳಿರುವ ತನುಶ್ರೀ ದತ್ತಾ ಉಪವಾಸ ಮಾನಸಿಕ ಶಕ್ತಿಯನ್ನು ಹೆಚ್ಚಿಸಿದರೆ ಮಾಂಸಾಹಾರದಲ್ಲಿನ ಪೌಷ್ಠಿಕ ಆಹಾರ ನಮ್ಮ ದೇಹಕ್ಕೆ ಬೇಕಾದ ಶಕ್ತಿಯನ್ನು ನೀಡುತ್ತೆ ಎಂದು ಹೇಳಿದ್ದಾರೆ.

ಮುಂದುವರೆದು ಉಪವಾಸ ಮಾಡುವಾಗ ನಾನು ಕೇವಲ ನೀರು ಮಾತ್ರ ಕುಡಿಯುತ್ತೇನೆ ಎಂದು ಹೇಳಿರುವ ತನುಶ್ರೀ ದತ್ತಾ ಸೂರ್ಯಾಸ್ತದ ನಂತರ ದೇವರಿಗೆ ನಾವು ನೈವೇದ್ಯವನ್ನು ತೋರಿಸಿ ಆ ನಂತರ ಕುರಿ ಮಾಂಸ ಸೇವಿಸುತ್ತೇವೆ ಎಂದು ಹೇಳಿದ್ದಾರೆ. ಇದು ನಮ್ಮ ಬಂಗಾಳದ ಸಂಸ್ಕ್ರತಿ ನಾವೆಲ್ಲರು ಇದೇ ರೀತಿ ಉಪವಾಸ ಮುರಿಯುತ್ತೇವೆ ಎಂದು ಹೇಳಿರುವ ತನುಶ್ರೀ ಒಂದೊಂದು ಕಡೆ ಒಂದೊಂದು ರೀತಿಯ ಸಂಸ್ಕ್ರತಿ ಇರುತ್ತೆ, ಪದ್ದತಿ ಮತ್ತು ಆಚರಣೆಗಳು ಇರುತ್ತಾವೆ ಹೀಗಾಗಿ ಟೀಕೆ ಮಾಡಬೇಡಿ ಸಂಪೂರ್ಣ ವಿಡಿಯೋವನ್ನು ತಾಳ್ಮೆಯಿಂದ ನೋಡಿ ಆ ನಂತರ ಕಮೆಂಟ್ ಮಾಡಿ ಎಂದು ಹೇಳಿದ್ದಾರೆ. ಆಯುರ್ವೇದದ ಪ್ರಕಾರ ಕುರಿ ಮಾಂಸ ತುಂಬಾನೇ ಒಳ್ಳೆಯದು ಹಲವಾರು ಔಷಧಿಗಳಿಗೆ ಕುರಿಮಾಂಸವನ್ನು ಉಪಯೋಗಿಸಲಾಗುತ್ತೆ ಎಂದು ಕೂಡ ತನುಶ್ರೀ ಹೇಳಿದ್ದಾರೆ.

ಸದ್ಯ ಈ ವಿಡಿಯೋ ವೈರಲ್ ಆಗಿದ್ದು ಹಲವಾರು ಜನ ತನುಶ್ರೀ ದತ್ತಾ ವಿರುದ್ದ ಕೆಂಡ ಕಾರುತ್ತಿದ್ದಾರೆ. ಬೇಕು ಬೇಕಂತಲೇ ಹಿಂದೂ ಧರ್ಮವನ್ನು ಅಪಮಾನ ಮಾಡಲು ತನುಶ್ರೀ ಈ ವಿಡಿಯೋ ಮಾಡಿದ್ದಾರೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಮತ್ತೂ ಕೆಲವರು ತನುಶ್ರೀ ದತ್ತಾ ಅವರ ದೇಹಾಕೃತಿಯ ಕುರಿತು ಅಸಹ್ಯ ಕಮೆಂಟ್‌ಗಳನ್ನು ಕೂಡ ಮಾಡಿದ್ದಾರೆ. ಅವರಿಗೆ ತನುಶ್ರೀ ದತ್ತಾ ಖಡಕ್ ಆದ ಉತ್ತರ ನೀಡಿದ್ದಾರೆ.

More from Filmibeat

English summary
Actress Tanushree Dutta defends her Shravan mutton meal, citing Bengali cultural practices & Ayurvedic benefits. Read her bold response to online criticism.
Read more about: tanushree dutta non vegetarian
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X