ಸಿಂಗಾಪೂರ್ ಏರ್ ಲೈನ್ ವಿರುದ್ಧ ಶ್ರೇಯಾ ಘೋಷಲ್ ಅಸಮಾಧಾನ
ಭಾರತದ ಖ್ಯಾತ ಗಾಯಕಿ ಶ್ರೇಯಾ ಘೋಷಲ್ ಅವರು ಸಿಂಗಾಪೂರ್ ಏರ್ ಲೈನ್ ವಿರುದ್ಧ ಅಸಮಾಧಾನಗೊಂಡಿದ್ದಾರೆ. ತನ್ನ ಸಂಗೀತ ಉಪಕರಣಗಳನ್ನ ವಿಮಾನದಲ್ಲಿ ತೆಗೆದುಕೊಂಡು ಹೋಗಲು ಅನುಮತಿ ನೀಡದಿದ್ದಕ್ಕೆ ಗಾಯಕಿ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಶ್ರೇಯಾ ಘೋಷಲ್ ''ಸಿಂಗಾಪೂರ್ ಏರ್ ಲೈನ್ ಸಿಬ್ಬಂದಿಗೆ ಸಂಗೀತಗಾರರು ಹಾಗೂ ಸಂಗೀತ ಉಪಕರಣಗಳ ಜೊತೆ ವಿಮಾನದಲ್ಲಿ ಬರುವ ಯಾರೊಬ್ಬರು ಬೇಕಾಗಿಲ್ಲ. ಥ್ಯಾಂಕ್ ಯೂ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಶ್ರೇಯಾ ಅವರ ಈ ಟ್ವೀಟ್ ಗೆ ಕ್ಷಮೆ ಕೇಳಿದ ಸಿಂಗಾಪೂರ್ ಏರ್ ಲೈನ್ ''ಈ ಬಗ್ಗೆ ನಾವು ನಿಮ್ಮನ್ನು ವಿಷಾದಿಸುತ್ತೇವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಬಹುದೇ ಮತ್ತು ಕೊನೆಯದಾಗಿ ನಮ್ಮ ಸಿಬ್ಬಂದಿ ನಿಮಗೆ ಏನು ಸಲಹೆ ನೀಡಿದರು?'' ಎಂದು ಟ್ವೀಟ್ ಮಾಡಿದ್ದಾರೆ.
ಶ್ರೇಯಾ ಘೋಷಲ್ ಅವರ ಟ್ವೀಟ್ ಗೆ ಅಭಿಮಾನಿಗಳು ಕೂಡ ಧ್ವನಿಗೂಡಿಸಿದ್ದು, ''ಶ್ರೇಯಾ ಸುಮ್ಮ ಸುಮ್ಮನೇ ಈ ರೀತಿ ಟ್ವೀಟ್ ಮಾಡಲ್ಲ. ಸಿಂಗಾಪೂರ್ ಏರ್ ಲೈನ್ ಅತ್ಯುತ್ತಮವಾದ ಸಂಸ್ಥೆ. ಆದ್ರೆ, ಅವರಿಂದ ನಾವು ಇದನ್ನ ನಿರೀಕ್ಷೆ ಮಾಡಿರಲಿಲ್ಲ'' ಎಂದು ಒಬ್ಬ ಅಭಿಮಾನಿ ಬೆಂಬಲ ವ್ಯಕ್ತಪಡಿಸಿದ್ದಾರೆ.

''ಯೋಚನೆ ಮಾಡಬೇಡ, ಇದಕ್ಕೆಲ್ಲಾ ಪರಿಹಾರ ಇದ್ದೇ ಇದೆ. ಚಿಯರ್ ಅಪ್ ಡಿಯರ್'' ಎಂದು ಮತ್ತೊಬ್ಬರು ಶ್ರೇಯಾಗೆ ಸಪೋರ್ಟ್ ಮಾಡಿದ್ದಾರೆ. 'ಇದು ನಿಜಕ್ಕೂ ಬೇಸರ' ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ.
'ಗಾಯಕರಿಗೆ, ಸಂಗೀತಗಾರರಿಗೆ ಉಪಕರಣಗಳ ಬಹಳ ಮುಖ್ಯ. ಆ ಬಗ್ಗೆ ಸರಿಯಾದ ಪರಿಶೀಲನೆ ಮಾಡಿ ಅನುವು ಮಾಡಿಕೊಡಬೇಕು. ಅದನ್ನ ಬಿಟ್ಟು ಈ ರೀತಿ ಮಾಡುವುದು ಸರಿಯಲ್ಲ'' ಎಂದು ಕೆಲವರು ಸಿಂಗಾಪೂರ್ ಏರ್ ಲೈನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Click it and Unblock the Notifications











