»   » ಶ್ರುತಿ ಹಾಸನ್ ಗೆ ಕುಡುಕನ ಕಾಟ, ಕೇಸ್ ದಾಖಲು

ಶ್ರುತಿ ಹಾಸನ್ ಗೆ ಕುಡುಕನ ಕಾಟ, ಕೇಸ್ ದಾಖಲು

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಾಲಿವುಡ್ ನಟಿ ಶುತ್ರಿ ಹಾಸನ್ ಅವರು ಮತ್ತೊಮ್ಮೆ ಕಿರುಕುಳಕ್ಕೊಳಗಾದ ಪ್ರಸಂಗ ನಡೆದಿದೆ. ಅಭಿಮಾನಿ ಹೆಸರಿನಲ್ಲಿ ಹತ್ತಿರಕ್ಕೆ ಬಂದ ದುಷ್ಕರ್ಮಿಯೊಬ್ಬ ಶ್ರುತಿ ಜತೆ ಅನುಚಿತವಾಗಿ ವರ್ತಿಸಿದ ಘಟನೆ ಜರುಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಮುಸ್ಸೌರಿ ಪೊಲೀಸರು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದಾರೆ.

ಉತ್ತರಾಖಂಡ್ ರಾಜ್ಯದ ಡೆಡ್ರಾಡೂನ್ ನಲ್ಲಿ ಚಿತ್ರೀಕರಣ ನಡೆಯುವ ವೇಳೆಯಲ್ಲಿ ಅಭಿಮಾನಿಯೊಬ್ಬನಿಂದ ಶ್ರುತಿ ಅವರು ಕಿರುಕುಳ ಅನುಭವಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ತಿಗ್ಮಂಷು ಧೂಳಿಯಾ ಅವರ ನಿರ್ದೇಶನದ ಯಾರಾ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಹರ್ಯಾಣದ ಸಿರ್ಸಾ ಮೂಲದ ಈ ವ್ಯಕ್ತಿ ಮದ್ಯಪಾನ ಮಾಡಿಕೊಂಡು ಬಂದು ಶ್ರುತಿ ಹಾಸನ್ ತಂಗಿದ್ದ ಹೋಟೆಲ್ ರೂಮಿನ ಬಾಗಿಲು ಬಡಿದಿದ್ದಾನೆ. ಮಧ್ಯರಾತ್ರಿ ವೇಳೆ ಬಾಗಿಲ ಬಳಿ ನಿಂತು ಅರಚಾಡಿದ್ದಾನೆ ಎಂದು ತಿಳಿದು ಬಂದಿದೆ.

Bollywood actress Shruti harassed, case filed,

ಕಮಲ್ ಹಾಸನ್ ಹಾಗೂ ಸಾರಿಕಾ ಪುತ್ರಿ ಶ್ರುತಿ ಅವರು ಈ ರೀತಿ ಕಿರುಕುಳ ಅನುಭವಿಸುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಶ್ರುತಿ ಅವರ ಮ್ಯಾನೇಜರ್ ಗೆ ಸಮನ್ಸ್ ಜಾರಿ ಮಾಡಿದ್ದಾರೆ. ಶ್ರುತಿ ಅವರನ್ನು ಕಾಡುವ ಶಂಕಿತ ವ್ಯಕ್ತಿಗಳ ವಿವರ ಪಡೆಯಲಾಗಿದೆ. [ಶ್ರುತಿ ಮನೆಯಲ್ಲಿ ರಾತ್ರಿ ತಂಗಿದ್ದ ನಟನ್ಯಾರು?]

ಈ ಹಿಂದೆ ಸ್ಪಾಟ್ ಬಾಯ್ ಯೊಬ್ಬ ಶ್ರುತಿ ಅವರ ಮುಂಬೈನ ಬಾಂದ್ರಾ ಬಂಗಲೆಗೆ ಅತಿಕ್ರಮ ಪ್ರವೇಶ ಮಾಡಿದ ಘಟನೆ ನಡೆದಿತ್ತು.ಆದರೆ, ಸುದ್ದಿಯನ್ನು ಅಲ್ಲಗಳೆದಿದ್ದ ಸ್ಪಾಟ್ ಬಾಯ್, ನಾನು ನನ್ನ ಅಣ್ಣನಿಗೆ ಕೆಲ್ಸ ಕೇಳಲು ಹೋಗಿದ್ದೆ. ಮಧ್ಯರಾತ್ರಿ ಫ್ಲಾಟಿಗೆ ಹೋಗಿಲ್ಲ ಎಂದಿದ್ದ.[ಶೃತಿ ಮೀರಿದ ನಟಿ ಶ್ರುತಿ ಹಾಟ್ ಫೋಟೋಗಳು]

English summary
Bollywood actress Shruti Haasan once again became a victim of harassment and this time she was harassed by one of her fans. Shruti, superstar Kamal Haasan's daughter, filed a case with Mussoorie Police against the accused.
Please Wait while comments are loading...