'ಮಮ್ಮ' ಎಂದಿದ್ದಕ್ಕೆ ಕಮಲ್ ಪುತ್ರಿ ಶ್ರುತಿ ಹಾಸನ್ ಕೆಂಡಾಮಂಡಲ; ವಿಡಿಯೋ ವೈರಲ್

ಸಾರ್ವಜನಿಕ ಸ್ಥಳಗಳಲ್ಲಿ ಕೆಲವೊಮ್ಮೆ ಸೆಲೆಬ್ರೆಟಿಗಳಿಗೆ ಕಹಿ ಅನುಭವವಾಗುತ್ತದೆ. ಅದರಲ್ಲೂ ಪಾಪರಾಜಿಗಳ(ಛಾಯಾಗ್ರಾಹಕರು) ವರ್ತನೆಯಿಂದ ಕೆಲವರು ಬೇಸತ್ತು ಅಲ್ಲೇ ಆಕ್ರೋಶ ವ್ಯಕ್ತಪಡಿಸುವುದು ಇದೆ. ಇನ್ನು ಹಣ ಕೊಟ್ಟು ತಾವು ಹೋದಲ್ಲಿ ಬಂದಲ್ಲಿ ಪಾಪರಾಜಿಗಳನ್ನು ಆಹ್ವಾನಿಸುವವರು ಇದ್ದಾರೆ. ತಮ್ಮ ಫೋಟೊ, ವಿಡಿಯೋ ವೈರಲ್ ಆಗುವಂತೆ ಮಾಡಿ ಸದಾ ಸುದ್ದಿಯಲ್ಲಿರುವ ಬಯಸುತ್ತಾರೆ.

ಮುಂಬೈನಲ್ಲಿ ನಟಿ ಶ್ರುತಿ ಹಾಸನ್ ಅವರಿಗೆ ಇದೇ ರೀತಿ ಕಹಿ ಅನುಭವ ಆಗಿದೆ. ತಮ್ಮನ್ನನು 'ಮಮ್ಮಾ'(ಅಮ್ಮ) ಎಂದು ಕರೆದಿದ್ದಕ್ಕೆ ಬೇಸರಗೊಂಡು ಪ್ರತಿಕ್ರಿಯಿಸಿದ್ದಾರೆ. ಅರೇ ಇದರಲ್ಲಿ ತಪ್ಪೇನಿದೆ ಎನ್ನುವಂತೆ ಪಾಪರಾಜಿಗಳು ಕ್ಯಾರೆ ಎಂದಿಲ್ಲ. ಸದ್ಯ ವಿಡಿಯೋ ವೈರಲ್ ಆಗ್ತಿದ್ದು "ಹೌದು ತಪ್ಪೇನಿದೆ" ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

Shruti Haasan Slams Paparazzi Over Mamma Remark in Mumbai Viral Video

ಸೆಲೆಬ್ರೆಟಿಗಳು ಕಂಡ ಕೂಡಲೇ ಸರ್, ಮೇಡಂ ಇಲ್ನೋಡಿ, ಆ ಕಡೆ ತಿರುಗಿ ಈ ಕಡೆ ತಿರುಗಿ ಅಂತೆಲ್ಲಾ ಪಾಪರಾಜಿಗಳು ಕ್ಯಾಮರಾಗೆ ಪೋಸ್ ಕೊಡುವಂತೆ ಕೇಳುತ್ತಾರೆ. ಕೂಡಲೇ ಕೆಲವರು ನಿಂತು ಅವರು ಹೇಳಿದಂತೆ ಪೋಸ್ ಕೊಟ್ಟು ಮುಂದೆ ಹೋಗುತ್ತಾರೆ. ಕೆಲವರು ಮಾತ್ರ ಅಸಹನೆಯಿಂದ ಹೊರಟುಬಿಡುವುದು ಇದೆ. ಇನ್ನು ನಟಿಯರ ಹಿಂದೆ ದುಂಬಾಲು ಬಿದ್ದು ಪಾಪಾರಾಜಿಗಳು ಫೋಟೊ, ವಿಡಿಯೋ ಕ್ಲಿಕ್ಕಿಸುವುದು ಇದೆ.

ಇದೇ ರೀತಿ ಇತ್ತೀಚೆಗೆ ಮುಂಬೈನಲ್ಲಿ ಶ್ರುತಿ ಹಾಸನ್ ಕಂಡ ಕೂಡಲೇ ಪಾಪರಾಜಿಗಳು ಮುತ್ತಿಕೊಂಡಿದ್ದಾರೆ. 'ಮಮ್ಮ' ಇಲ್ನೋಡಿ, ಆ ಕಡೆ ತಿರುಗಿ ಅಂತ ಕೇಳಿದ್ದಾರೆ. ಕೂಡಲೇ ಯಾರು 'ಮಮ್ಮ', ನಿಮ್ಮ 'ಮಮ್ಮ'ನಾ, ಏನ್ ತಲೆ ಕೆಟ್ಟಿದ್ಯಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರೇ 'ಅಮ್ಮ' ಎನ್ನುವುದರಲ್ಲಿ ತಪ್ಪೇನಿದೆ ಎನ್ನುವಂತೆ ಪಾಪರಾಜಿಗಳು ಪ್ರತಿಕ್ರಿಯಿಸಿದ್ದಾರೆ. ದಕ್ಷಿಣದಲ್ಲಿ ಮಹಿಳೆಯರಿಗೆ ಗೌರವ ಕೊಡಲು ಅಮ್ಮ ಎಂದು ಕರೆಯುತ್ತಾರೆ. ಅದೇ ರೀತಿ ಹಿಂದಿಯಲ್ಲಿ ಕರೆದಿದ್ದಾರೆ, ಅದರಲ್ಲಿ ತಪ್ಪೇನಿದೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

ಇತ್ತೀಚೆಗೆ ಶ್ರುತಿ ಹಾಸನ್ ಚಿತ್ರರಂಗದಲ್ಲಿ ಅಷ್ಟೇನು ಆಕ್ಟೀವ್ ಆಗಿಲ್ಲ. ಪ್ರಭಾಸ್ ಜೊತೆ 'ಸಲಾರ್' ಚಿತ್ರದಲ್ಲಿ ನಟಿಸಿದ್ದರು. ಚಿತ್ರದ ಸೀಕ್ವೆಲ್ ಸಿನಿಮಾ ಶುರುವಾಗಬೇಕಿದೆ.

Read more about: shruti haasan hindi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X