'ಒಂದು ರಾತ್ರಿ ಕಾಂಪ್ರಮೈಸ್ ಆಗು' ಎಂದ ನಿರ್ಮಾಪಕನಿಗೆ ಚಳಿ ಬಿಡಿಸಿದ್ದ ನಟಿ ಶ್ರುತಿ ಮರಾಠೆ

Recommended Video

ಶೃತಿಯನ್ನು ಬಿಡದ ಮೀ.. ಟು..! | FILMIBEAT KANNADA

ಭಾರತ ಚಿತ್ರರಂಗದಲ್ಲಿ 'ಮೀಟೂ ಅಭಿಯಾನ' ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಅಭಿಯಾನದ ಪರಿಣಾಮ ಮಹಿಳೆ, ಯುವತಿಯರ ಮೇಲೆ ನಡೆದಿದ್ದ ಅನೇಕ ಲೈಂಗಿಕ ಕಿರುಕುಳ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಬಾಲಿವುಡ್, ತೆಲುಗು ಇಂಡಸ್ಟ್ರಿಯ ದೊಡ್ಡ ನಿರ್ಮಾಪಕ, ನಿರ್ದೇಶಕ, ನಟರ ಹೆಸರು ಈ ಆರೋಪದಲ್ಲಿ ಸಿಲುಕಿಕೊಂಡಿತ್ತು.

ಇದೀಗ, ಒಂದು ಹಂತಕ್ಕೆ ಮೀಟು ಅಭಿಯಾನ ಸೈಲೆಂಟ್ ಆಗಿದೆ. ಅಷ್ಟರಲ್ಲೇ ಮತ್ತೊಬ್ಬ ನಟಿ ನಿರ್ಮಾಪಕನಿಂದ ತನ್ನ ಮೇಲಾದ ಕಿರುಕುಳ ಪ್ರಯತ್ನವನ್ನ ಬಿಚ್ಚಿಟ್ಟಿದ್ದಾರೆ. ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಹೇಳಿ ಆ ನಟಿಯನ್ನ ಮಂಚಕ್ಕೆ ಕರೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹೌದು, ಮರಾಠಿ, ಹಿಂದಿ, ತಮಿಳು ಹಾಗೂ ಕನ್ನಡ ಸಿನಿಮಾದಲ್ಲಿ ನಟಿಸಿರುವ ಶ್ರುತಿ ಮರಾಠೆ, ನಿರ್ಮಾಪಕನೊಬ್ಬನ ಕರಾಳ ಮುಖವನ್ನ ಬಹಿರಂಗಪಡಿಸಿದ್ದಾರೆ. ಸಿನಿಮಾದಲ್ಲಿ ನಾಯಕಿಯನ್ನಾಗಿಸುತ್ತೇನೆ, ನನ್ನ ಜೊತೆ ಕಾಂಪ್ರಮೈಸ್ ಆಗು ಎಂದು ಬೇಡಿಕೆಯಿಟ್ಟಿದ್ದನಂತೆ. ಆನಂತರ ಏನಾಯ್ತು? ಮುಂದೆ ಓದಿ......

ಮಂಚಕ್ಕೆ ಕರೆದಿದ್ದ ಆ ನಿರ್ಮಾಪಕ ಯಾರು?

ಮಂಚಕ್ಕೆ ಕರೆದಿದ್ದ ಆ ನಿರ್ಮಾಪಕ ಯಾರು?

16 ವರ್ಷದಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿರುವ ಶ್ರುತಿ ಮರಾಠೆ ಅವರಿಗೆ ನಿರ್ಮಾಪಕನೊಬ್ಬ ಸಿನಿಮಾದಲ್ಲಿ ನಾಯಕಿ ಪಾತ್ರ ನೀಡುತ್ತೇನೆ ಆದ್ರೆ, ನೀನು ನನ್ನ ಜೊತೆ ಕಾಂಪ್ರಮೈಸ್ ಆಗಬೇಕು, ಒಂದು ರಾತ್ರಿ ನನ್ನ ಜೊತೆ ಮಲಗಬೇಕು' ಎಂದು ಕೇಳಿದ್ದನಂತೆ. ಆದ್ರೆ, ಆ ನಿರ್ಮಾಪಕ ಯಾರು ಎಂದು ಹೆಸರು ಹೇಳಿಲ್ಲ. ಮರಾಠಿ, ಕನ್ನಡ, ತಮಿಳು ಸಿನಿಮಾದಲ್ಲಿ ನಟಿಸಿರುವ ಶ್ರುತಿ ಮರಾಠೆ ಈ ವಿಷ್ಯವನ್ನೀಗ ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಆತನಿಗೆ ಚಳಿ ಬಿಡಿಸಿದ್ದ ಶ್ರುತಿ

ಆತನಿಗೆ ಚಳಿ ಬಿಡಿಸಿದ್ದ ಶ್ರುತಿ

ಆಮಿಷ ತೋರಿದ ಆ ನಿರ್ಮಾಪಕನಿಗೆ ಶ್ರುತಿ ಮರಾಠೆ ಸರಿಯಾಗಿ ತಿರುಗೇಟು ನೀಡಿದ್ರಂತೆ. ''ನಾನು ನಿನ್ನ ಜೊತೆ ಮಲಗಿದರೇ ಹೀರೋಯಿನ್ ಮಾಡ್ತಿಯಾ, ಹಾಗಾದ್ರೆ, ನಿನ್ನ ಜೊತೆ ಮುಲಗುವ ಯಾರನ್ನ ಹೀರೋ.....'' ಎಂದು ಪ್ರಶ್ನಿಸಿದ್ದರಂತೆ. ಇದರಿಂದ ಒಂದು ಕ್ಷಣ ಆ ನಿರ್ಮಾಪಕ ಕಂಗಾಲಾದನು ಎಂದು ಶ್ರುತಿ ಹೇಳಿಕೊಂಡಿದ್ದಾರೆ.

ಆಪ್ತರ ಬಳಿ ಅಳಲು ತೊಡಿಕೊಂಡ ನಟಿ

ಆಪ್ತರ ಬಳಿ ಅಳಲು ತೊಡಿಕೊಂಡ ನಟಿ

ನಂತರ ಈ ವಿಷ್ಯವನ್ನ ತನ್ನ ಆಪ್ತರ ಬಳಿ ಹೇಳಿಕೊಂಡರಂತೆ. ಈ ಪ್ರಾಜೆಕ್ಟ್ ಬಿಟ್ಟುಬಿಡು ಎಂದು ಸ್ನೇಹಿತರು ಸಲಹೆ ನೀಡಿದ ಬಳಿಕ, ಸುಮ್ಮನಾದರಂತೆ. ತಮ್ಮ ಸಿನಿ ಜರ್ನಿಯಲ್ಲಿ ತಾನು ಅನುಭವಿಸಿದ ಇಂತಹ ಕೆಲವು ಘಟನೆಗಳ ಬಗ್ಗೆಯೂ ನಟಿ ಶ್ರುತಿ ಮರಾಠೆ ಹೇಳಿಕೊಂಡಿದ್ದಾರೆ. ಧೈರ್ಯದಿಂದ ಇಂತಹ ಸಂಕಷ್ಟಗಳನ್ನ ಎದುರಿಸಿ ಮುನ್ನುಗ್ಗುವಂತಹ ಸ್ಥಿತಿಯನ್ನ ಎಲ್ಲ ಮಹಿಳೆಯರ ಹೊಂದಿರಬೇಕು ಎಂದು ಕೂಡ ಸಲಹೆ ನೀಡಿದ್ದಾರೆ.

ಕನ್ನಡದಲ್ಲೂ ನಟಿಸಿದ್ದಾರೆ ಶ್ರುತಿ ಮರಾಠೆ

ಕನ್ನಡದಲ್ಲೂ ನಟಿಸಿದ್ದಾರೆ ಶ್ರುತಿ ಮರಾಠೆ

32 ವರ್ಷದ ಶ್ರುತಿ ಮರಾಠೆ, ತಾನು 16ನೇ ವಯಸ್ಸಿನಲ್ಲಿದ್ದಾಗಲೇ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರಂತೆ. ಮರಾಠಿ, ತಮಿಳು, ಹಿಂದಿ ಹಾಗೂ ಕನ್ನಡದ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ. 2017ರಲ್ಲಿ ತೆರೆಕಂಡಿದ್ದ 'ಆಡು ಆಟ ಆಡೂ' ಎಂಬ ಕನ್ನಡ ಸಿನಿಮಾದಲ್ಲಿ ಶ್ರುತಿ ನಾಯಕಿಯಾಗಿ ಅಭಿನಯಿಸಿದ್ದಾರೆ.

More from Filmibeat

English summary
Multilingual actress shruti marathe had a stinging reply when a producer asked her to 'compromise one night'. she acted in 'aadu ata aadu' kannada movie aslo.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X