ಮುಂಬೈನ ರೆಡ್ ಲೈಟ್ ಏರಿಯಾದಲ್ಲಿ ಕಾಣಿಸಿಕೊಂಡ ನಟಿ ಶ್ವೇತಾ ಬಸು ಪ್ರಸಾದ್

By ಫಿಲ್ಮ್ ಡೆಸ್ಕ್

ರಾಷ್ಟ್ರ ಪ್ರಶಸ್ತಿ ವಿಜೇತೆ, ಬಹುಭಾಷಾ ನಟಿ ಶ್ವೇತಾ ಬಸು ಪ್ರಸಾದ್ ಹೆಸರು ಕೇಳಿರುತ್ತೀರಿ. ಉತ್ತರ ಭಾರತದ ಮೂಲದ ಈ ನಟಿ ಶ್ವೇತಾ 2008ರಲ್ಲಿ 'ಕೊತ್ತ ಬಂಗಾರ ಲೋಕಂ' ಸಿನಿಮಾ ಮೂಲಕ ಸೌತ್ ಇಂಡಸ್ಟ್ರಿ ಪ್ರವೇಶ ಮಾಡಿದರು. ಬಳಿಕ ಖಾಸಗಿ ಜೀವನದಲ್ಲಿ ಶ್ವೇತಾ ಸಾಕಷ್ಟು ಏಳು-ಬೀಳು ಕಂಡಿದ್ದಾರೆ.

2014ರಲ್ಲಿ ಶ್ವೇತಾ ವೇಶ್ಯಾವಾಟಿಕೆ ಜಾಲದಲ್ಲಿ ಭಾಗಿಯಾಗಿದ್ದರು ಎಂಬ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದರು. ಬಳಿಕ ಬಿಡುಗಡೆಯಾಗಿ ಜೀವನದ ಕರಾಳ ದಿನಗಳನ್ನು ಮರೆತು ಹೊಸ ಜೀವನ ಆರಂಭಿಸಿದ್ದರು. 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶ್ವೇತಾ ಒಂದು ವರ್ಷದಲ್ಲೇ ಪತಿಯಿಂದ ದೂರ ಆಗಿ ವಿಚ್ಛೇದನ ಪಡೆದು ಕಳೆದ ವರ್ಷ ಮತ್ತೆ ಸುದ್ದಿಯಾಗಿದ್ದರು. ಇದೀಗ ಕಾಮಾಟಿಪುರದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಅಷ್ಟಕ್ಕೂ ಶ್ವೇತಾ ರೆಡ್ ಲೈಟ್ ಏರಿಯಾಗಿ ಹೋಗಿದ್ದೇೆಕೆ? ಇಲ್ಲಿದೆ ಮಾಹಿತಿ..

ಮುಂಬೈ ರೆಡ್ ಲೈಟ್ ಏರಿಯಾದಲ್ಲಿ ಶ್ವೇತಾ ಬಸು

ಮುಂಬೈ ರೆಡ್ ಲೈಟ್ ಏರಿಯಾದಲ್ಲಿ ಶ್ವೇತಾ ಬಸು

ಶ್ವೇತಾ ಮುಂಬೈನ ರೆಡ್ ಲೈಟ್ ಏರಿಯಾದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಅಂದಹಾಗೆ ಶ್ವೇತಾ ಹೋಗಿರುವುದು ಸಿನಿಮಾಗಾಗಿ. ಶ್ವೇತಾ ಸದ್ಯ ಬಾಲಿವುಡ್ ನ ಖ್ಯಾತ ನಿರ್ದೇಶಕ ಮಧುರ್ ಭಂಡಾರ್ಕರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಇಂಡಿಯಾ ಲಾಕ್ ಡೌನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ತೆರೆ ಮೇಲೆ ಕಾಮಾಟಿಪುರದ ಕಥೆ

ತೆರೆ ಮೇಲೆ ಕಾಮಾಟಿಪುರದ ಕಥೆ

ಲಾಕ್ ಡೌನ್ ಸಮಯದಲ್ಲಿ ಎಲ್ಲಾ ಕ್ಷೇತ್ರಕ್ಕೂ ದೊಡ್ಡ ಸಮಸ್ಯೆಯಾಗಿತ್ತು. ಲಕ್ಷಾಂತರ ಜನರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರಿತು. ಈ ಬಗ್ಗೆ ಸಿನಿಮಾ ಮಾಡುತ್ತಿದ್ದಾರೆ ನಿರ್ದೇಶಕ ಮಧುರ್ ಭಂಡಾರ್ಕರ್. ಅದರಲ್ಲೂ ವಿಶೇಷವಾಗಿ ಸಾಂಕ್ರಾಮಿಕ ರೋಗದ ತೀವ್ರ ಸಂಕಷ್ಟಕ್ಕೆ ಒಳಗಾದ ಮತ್ತೊಂದು ವಿಭಾಗವೆಂದರೆ ಮುಂಬೈನ ರೆಡ್ ಲೈಟ್ ಏರಿಯಾ. ಲಾಕ್ ಡೌನ್ ಬಳಿಕ ಅವರು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಈ ಸಿನಿಮಾದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ ನಿರ್ದೇಶಕ ಮಧುರ್.

ಲೈಂಗಿಕ ಕಾರ್ಯಕರ್ತೆ ಪಾತ್ರದಲ್ಲಿ ಶ್ವೇತಾ

ಲೈಂಗಿಕ ಕಾರ್ಯಕರ್ತೆ ಪಾತ್ರದಲ್ಲಿ ಶ್ವೇತಾ

ಚಿತ್ರದಲ್ಲಿ ಶ್ವೇತಾ ಬಸು ಲೈಂಗಿಕ ಕಾರ್ಯಕರ್ತೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಹ್ರುನಿಸ್ಸಾ ಎಂಬ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಈ ಪಾತ್ರಕ್ಕಾಗಿ, ಸಂಶೋಧನೆ ಮಾಡಲು ಶ್ವೇತಾ ಮುಂಬೈನ ರೆಡ್ ಲೈಟ್ ಪ್ರದೇಶ ಕಾಮಾಟಿಪುರಕ್ಕೆ ಭೇಟಿ ನೀಡಿದ್ದರು.

ಪಾತ್ರದ ಬಗ್ಗೆ ಶ್ವೇತಾ ಹೇಳಿದ್ದೇನು?

ಪಾತ್ರದ ಬಗ್ಗೆ ಶ್ವೇತಾ ಹೇಳಿದ್ದೇನು?

'ನಾನು ನಿರ್ವಹಿಸುವ ಪಾತ್ರಗಳು ನಿಜವೆಂದು ನಂಬುತ್ತೇನೆ. ಮತ್ತು ಅದರ ಆಳಕ್ಕೆ ಇಳಿಯಲು ಪ್ರಯತ್ನಿಸುತ್ತೇನೆ. ಹೀಗೆ ಮಾಡದಿದ್ದರೆ ಪ್ರೇಕ್ಷಕರಿಗೆ ನನ್ನ ಪಾತ್ರದೊಂದಿಗೆ ಎಂಗೇಜ್ ಆಗಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ. ಇನ್ನೂ ಕಾಲ್ ಡೌನ್ ಸಿನಿಮಾದ ಬಗ್ಗೆ ಮಾತನಾಡಿದ ಶ್ವೇತಾ, ಈ ಸಿನಿಮಾದಲ್ಲಿ ಲೈಂಗಿಕ ಕಾರ್ಯಕರ್ತೆ ಪಾತ್ರದಲ್ಲಿ ನಟಿಸುತ್ತಿದ್ದೀನಿ, ಹಾಗಾಗಿ ನಿರ್ದೇಶಕ ಮಧುರ್ ಭಂಡಾರ್ಕರ್ ಮತ್ತು ತಂಡದೊಂದಿಗೆ ಕಾಮಾಟಿಪುರಕ್ಕೆ ಹೋಗಿದ್ದೆ' ಎಂದಿದ್ದಾರೆ.

Recommended Video

ರೈತರ ಪರವಾಗಿ ನಿಂತ ಪಾಪ್ ಸ್ಟಾರ್!! | Filmibeat Kannada
ಲಾಕ್ ಡೌನ್ ಬಳಿಕ ಹೇಗಿದೆ ಕಾಮಾಟಿಪುರದ ಜೀವನ

ಲಾಕ್ ಡೌನ್ ಬಳಿಕ ಹೇಗಿದೆ ಕಾಮಾಟಿಪುರದ ಜೀವನ

'ಅಲ್ಲಿ ಅನೇಕ ಲೈಂಗಿಕ ಕಾರ್ಯಕರ್ತನ್ನು ಭೇಟಿ ಮಾಡಿದೆವು. ನನ್ನ ಭಾಷೆಯನ್ನು ನಾನು ಬದಲಾಯಿಸಿಕೊಳ್ಳಬೇಕು. ಅವರು ಹೇಗೆ ಯೋಚಿಸುತ್ತಾರೆ, ಹೇಗೆ ಇರುತ್ತಾರೆ, ಅವರ ಜೀವನದ ಬಗ್ಗೆ ತಿಳಿದುಕೊಳ್ಳಲು ಭೇಟಿಯಾಗಿದ್ದೆ. ಲಾಕ್ ಡೌನ್ ಬಳಿಕ ಅವರ ಜೀವನ ಮತ್ತು ವ್ಯವಹಾರದ ಮೇಲೆ ಬೀರಿದ ಪರಿಣಾಮದ ಬಗ್ಗೆ ಸಿನಿಮಾದ ಕಥೆ ಹೊಂದಿದೆ' ಎಂದು ಹೇಳಿದ್ದಾರೆ. ಇನ್ನು ಶೀಘ್ರದಲ್ಲೇ ಶೂಟಿಂಗ್ ಪ್ರಾರಂಭವಾಗುವುದಾಗಿ ಹೇಳಿದ್ದಾರೆ. ಲೈಂಗಿಕ ಕಾರ್ಯಕರ್ತೆಯ ಹೃದಯವಿದ್ರಾವಕ ಕಥೆಗಳನ್ನು ತೆರೆಮೇಲೆ ತರುವುದು ನನ್ನ ಸರದಿಯಾಗಿದೆ ಎಂದು ಶ್ವೇತಾ ಹೇಳಿದ್ದಾರೆ.

More from Filmibeat

English summary
Actress Shweta Basu prasad visits Mumbai red light Area to research her Character for next movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X