ಐಶ್ವರ್ಯಾ ರೈ ಅವರ ಈ ವರ್ತನೆ ಬಗ್ಗೆ ಅಸಮಾಧಾನ ಹೊರಹಾಕಿದ ಅಮಿತಾಬ್ ಬಚ್ಚನ್ ಪುತ್ರಿ ಶ್ವೇತಾ

ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನ ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ ಅಪರೂಪಕ್ಕೊಂದು ಸಿನಿಮಾಗಳನ್ನು ಮಾಡುತ್ತ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಮಗುವಿಗೆ ಜನ್ಮ ನೀಡಿದ ಬಳಿಕ ಐಶ್ವರ್ಯಾ ಸಿನಿಮಾದಿಂದ ಸ್ವಲ್ಪ ಅಂತರ ಕಾಯ್ದುಕೊಂಡಿದ್ದಾರೆ. ಒಂದು ಕಾಲದ ಬಹುಬೇಡಿಕೆಯ ನಟಿ ಐಶ್ವರ್ಯಾ ಬಗ್ಗೆ ಅವರ ಅತ್ತಿಗೆ ಹಾಗೂ ಅಭಿಷೇಕ್ ಬಚ್ಚನ್ ಸಹೋದರಿ ಶ್ವೇತಾ ನಂದ ಹೇಳಿರುವ ಮಾತುಗಳು ಈಗ ವೈರಲ್ ಆಗುತ್ತಿದೆ.

ಈ ಹಿಂದೆ ಶ್ವೇತಾ ಕಾಫಿ ವಿತ್ ಕರಣ್ ಶೋನಲ್ಲಿ ಐಶ್ವರ್ಯಾ ರೈ ಬಗ್ಗೆ ಕೆಲವು ಇಂಟರೆಸ್ಟಿಂಗ್ಮ ಮಾಹಿತಿಯನ್ನು ಬಹಿರಂಗ ಪಡಿಸಿದ್ದರು. ಐಶ್ವರ್ಯಾ ರೈ ಅವರ ಯಾವ ಗುಣಗಳು ಇಷ್ಟ ಆಗುತ್ತೆ ಮತ್ತು ಯಾವ ಗುಣಗಳು ಇಷ್ಟ ಆಗುವುದಿಲ್ಲ ಎನ್ನುವ ಬಗ್ಗೆ ಶ್ವೇತಾ ಮಾತನಾಡಿದ್ದಾರೆ.

ಐಶ್ವರ್ಯಾ ಅವರ ಈ ಗುಣ ಅವರ ಅತ್ತಿಗೆ ಇಷ್ಟವಿಲ್ಲವಂತೆ

ಐಶ್ವರ್ಯಾ ಅವರ ಈ ಗುಣ ಅವರ ಅತ್ತಿಗೆ ಇಷ್ಟವಿಲ್ಲವಂತೆ

ಐಶ್ವರ್ಯಾ ರೈ ಅವರ ಕೆಲವು ಗುಣಗಳು ಶ್ವೇತಾ ನಂದ ಅವರಿಗೆ ಇಷ್ಟವಾಗುವುದಿಲ್ಲವಂತೆ. ಈ ಬಗ್ಗೆ ಶ್ವೇತಾ ಬಹಿರಂಗ ಪಡಿಸಿದ್ದಾರೆ. ಐಶ್ವರ್ಯೈ ರೈ ಅವರ ಫೋನ್ ಮತ್ತು ಮೆಸೇಜ್ ಗಳ ಬಗ್ಗೆ ಶ್ವೇತಾ ಅವರಿಗೆ ಹೆಚ್ಚು ಅಸಮಾಧಾನ ಇರುವುದಾಗಿ ಹೇಳಿಕೊಂಡಿದ್ದಾರೆ.

ಫೋನ್ ಮತ್ತು ಮೆಸೇಜ್ ಗಳ ಬಗ್ಗೆ ಅಸಮಾಧಾನ

ಫೋನ್ ಮತ್ತು ಮೆಸೇಜ್ ಗಳ ಬಗ್ಗೆ ಅಸಮಾಧಾನ

ಐಶ್ವರ್ಯ ರೈ ಅವರಲ್ಲಿ ನಿಮಗೆ ಇಷ್ಟವಾಗದ ಗುಣ ಯಾವುದು? ಎಂದು ಕರಣ್ ಜೋಹರ್ ಕೇಳಿದ ಪ್ರಶ್ನೆಗೆ ಶ್ವೇತಾ, 'ನಮ್ಮ ಫೋನ್ ಕರೆಗಳಿಗೆ ಮತ್ತು ಮಸೇಜ್ ಗಳಿಗೆ ಪ್ರತಿಕ್ರಿಯೆ ನೀಡಲು ತುಂಬಾ ಸಮಯ ತೆಗೆದುಕೊಳ್ಳುತ್ತಾರೆ. ಅದನ್ನು ನಾನು ದ್ವೇಷಿಸುತ್ತೇನೆ' ಎಂದು ಹೇಳಿದ್ದಾರೆ.

ಐಶ್ವರ್ಯಾ ಒಳ್ಳೆಯ ತಾಯಿ ಎಂದ ಶ್ವೇತಾ

ಐಶ್ವರ್ಯಾ ಒಳ್ಳೆಯ ತಾಯಿ ಎಂದ ಶ್ವೇತಾ

ಅಂದಹಾಗೆ ಐಶ್ವರ್ಯಾ ಅವರನ್ನು ತುಂಬಾ ಇಷ್ಟಪಡುತ್ತಾರೆ ಶ್ವೇತಾ. ಅದೇ ಸಮಯದಲ್ಲಿ ತನ್ನ ನಾದಿನಿಯನ್ನು ಹಾಡಿ ಹೊಗಳಿದ್ದಾರೆ ಶ್ವೇತಾ. ಐಶ್ವರ್ಯಾ ಅವರು ಕುಟುಂಬವನ್ನು ತುಂಬಾ ಪ್ರೀತಿಸುತ್ತಾರೆ ಎಂದಿದ್ದಾರೆ. ಐಶ್ವರ್ಯಾ ತನ್ನ ಪ್ರತಿಭೆ ಮತ್ತು ಕಠಿಣ ಪರಿಶ್ರಮದಿಂದ ಬೆಳೆದು ಬಂದಿದ್ದಾರೆ. ಅವರು ಸ್ವಾವಲಂಬಿ ಮತ್ತು ತುಂಬಾ ಸ್ಟ್ರಾಂಗ್ ಮಹಿಳೆ ಮತ್ತು ಒಳ್ಳೆಯ ತಾಯಿ ಎಂದು ಹಾಡಿ ಹೊಗಳಿದ್ದಾರೆ.

Recommended Video

ಸಂಜಯ್ ದತ್ ದಾಂಪತ್ಯದಲ್ಲಿ ಮತ್ತೆ ಬಿರುಕು ಮೂಡಿದ್ಯಾ..? | Sanjay Dutt | Manyata Sanjay Dutt
ನಾನೀಗ ಎಲ್ಲಿದ್ದೇನೋ ಅಲ್ಲಿ ಸಂತೋಷವಾಗಿದ್ದೀನಿ- ಶ್ವೇತಾ

ನಾನೀಗ ಎಲ್ಲಿದ್ದೇನೋ ಅಲ್ಲಿ ಸಂತೋಷವಾಗಿದ್ದೀನಿ- ಶ್ವೇತಾ

ಅಮಿತಾಬ್ ಬಚ್ಚನ್ ಪುತ್ರಿ ಶ್ವೇತಾ ಫ್ಯಾಷನ್ ಡಿಸೈನರ್ ಆಗಿ ಗುರುತಿಸಿ ಕೊಂಡಿದ್ದಾರೆ. ಕ್ಯಾಮರಾಗಳಿಗೆ ಭಯ ಪಡುತ್ತೇನೆ ಎಂದು ಹೇಳಿದ್ದರು. ಸಿನಿಮಾದಲ್ಲಿ ನಟಿಸುವ ಬಗ್ಗೆ ಮಾತನಾಡಿದ್ದ ಶ್ವೇತಾ, 'ನಾನು ನಾಯಕಿಯಾಗುವ ಮುಖ ಮತ್ತು ಪ್ರತಿಭೆ ಹೊಂದಿದ್ದೇನೆ ಎಂದು ನಾನು ಭಾವಿಸಿಲ್ಲ. ನಾನು ಈಗ ಎಲ್ಲಿದ್ದೇನೋ ಅಲ್ಲಿ ಸಂತಸದಿಂದ ಇದ್ದೀನಿ' ಎಂದು ಹೇಳಿದ್ದಾರೆ.

More from Filmibeat

English summary
Shweta Nanda revealed What she hates about Aishwarya Rai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X