ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಸಲ್ಮಾನ್ ಖಾನ್ ರಾಖಿ ಸಹೋದರಿ

ಬಾಲಿವುಡ್ ಅಂಗಳದಲ್ಲಿ ಸಲ್ಮಾನ್ ಖಾನ್ ಕ್ರೇಜ್ ಕಮ್ಮಿ ಆಗಿದೆ. ಸಿನಿಮಾ, ಶೂಟಿಂಗ್ ಬಿಟ್ಟು ಅತ್ತಿತ್ತ ಕದಲುತ್ತಿಲ್ಲ. ಬಿಷ್ಣೋವ್ ಗ್ಯಾಂಗ್ ಬೆದರಿಕೆ ಹಿನ್ನೆಲೆಯಲ್ಲಿ ಸಲ್ಲು ಮೈಯೆಲ್ಲಾ ಕಣ್ಣಾಗಿಸಿಕೊಂಡು ಸುತ್ತಾಡುವಂತಾಗಿದೆ. ತಮ್ಮ ಭದ್ರತೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಸದ್ಯ ಸಲ್ಮಾನ್ ಖಾನ್ ರಾಖಿ ಸಹೋದರಿ ಶ್ವೇತಾ ರೋಹಿರಾ ಅಪಘಾತದಲ್ಲಿ ಗಾಯಗೊಂಡಿದ್ದಾರೆ.

ಸ್ವತಃ ಶ್ವೇತಾ ಅಪಘಾತದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳ ಸಮೇತ ಮಾಹಿತಿ ಹಂಚಿಕೊಂಡಿದ್ದಾರೆ. ಆಕೆ ಬೇಗ ಚೇತರಿಸಿಕೊಳ್ಳಲಿ ಎಂದು ಆಪ್ತರು, ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ರಸ್ತೆ ಅಪಘಾತದಲ್ಲಿ ಶ್ವೇತಾ ಬಲಗಾಲಿಗೆ ಗಂಭೀರವಾಗಿ ಪೆಟ್ಟಾಗಿದೆ. ಇನ್ನು ತುಟಿ ಹರಿದಿದ್ದು ಹೊಲಿಗೆ ಹಾಕಿ ಬ್ಯಾಂಡೇಜ್ ಹಾಕಲಾಗಿದೆ. ಇನ್ನು ಅಪಘಾತದ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ನಾವು ಅಂದುಕೊಂಡಂತೆ ಯಾವುದು ನಡೆಯಲ್ಲ, ಜೀವನ ಬಹಳ ಸರ್‌ಪ್ರೈಸ್‌ಗಳಿಂದ ಕೂಡಿರುತ್ತದೆ ಎಂದಿದ್ದಾರೆ.

Shweta Rohira Salman Khan rakhi sister severely injured after she met with an accident

"ಕಲ್‌ಹೋನಾಹೋ ಎಂದು ಹಾಡುತ್ತಾ ಇವತ್ತು ಏನು ಮಾಡಬೇಕು ಎಂದು ಯೋಚಿಸುತ್ತಿರುತ್ತೀರಿ. ಅಷ್ಟರಲ್ಲಿ ಮತ್ತೇನೋ ಆಗುತ್ತದೆ. ಏಕಾಏಕಿ ಒಂದು ಬೈಕ್ ಬಂದು ಡಿಕ್ಕಿ ಹೊಡೆದು ವಿಶ್ರಾಂತಿಗೆ ಕಳುಹಿಸುತ್ತದೆ. ಮುಳೆಮುರಿತ, ಮೂಗೇಟು, ಹಾಸಿಗೆಯಲ್ಲಿ ಗಂಟೆಗಳ ಕಾಲ ವಿಶ್ರಾಂತಿ. ಇದನ್ನೆಲ್ಲಾ ನಾನು ಎಣಿಸಿರಲಿಲ್ಲ. ಯೂನಿವರ್ಸ್ ನನಗೆ ತಾಳ್ಮೆಯ ಪಾಠ ಕಲಿಸಲು ಬಯಸಿರಬಹುದು. ಜೀವನ ಒಮ್ಮೊಮ್ಮೆ ಸಂಪೂರ್ಣವಾಗಿ ಅಲುಗಾಡಿಸಿಬಿಡುತ್ತದೆ. ಅದು ನಮ್ಮನ್ನು ಮತ್ತಷ್ಟು ಗಟ್ಟಿಗೊಳಿಸಲು ಬಯಸುತ್ತದೆ. ವಿನಾಶ ಸೃಷ್ಟಿಗೆ ದಾರಿ ಮಾಡಿಕೊಡುತ್ತದೆ" ಎಂದು ಶ್ವೇತಾ ಬರೆದುಕೊಂಡಿದ್ದಾರೆ.

ಜೀವನದಲ್ಲಿ ಕಷ್ಟ ಬಂದಾಗ ಧೈರ್ಯದಿಂದ ಇರಬೇಕು, ನಾನು ಮತ್ತೆ ಕಂಬ್ಯಾಕ್ ಮಾಡ್ತೀನಿ ಎಂದು ಶ್ವೇತಾ ವಿವರಿಸಿದ್ದಾರೆ. ಅಂದಹಾಗೆ ಸಲ್ಮಾನ್ ಖಾನ್ ಸ್ವಂತ ಸಹೋದರಿ ಅಲ್ಲ ಶ್ವೇತಾ. ಬದಲಿಗೆ ರಾಖಿ ಸಹೋದರಿ. ಸೋಶಿಯಲ್ ಮೀಡಿಯಾದಲ್ಲಿ ಈಕೆ ಬಹಳ ಜನಪ್ರಿಯತೆ ಸಾಧಿಸಿದ್ದಾರೆ. ಸಲ್ಲು ಸಹೋದರಿ ಎಂದೇ ಬಾಲಿವುಡ್ ಅಂಗಳದಲ್ಲಿ ಗುರ್ತಿಸಿಕೊಂಡಿದ್ದಾರೆ. ನಟ ಪುಲ್ಕಿತ್ ಸಾಮ್ರಾಟ್ ಜತೆ ಮದುವೆ ಆಗಿ ವಿಚ್ಛೇದನ ಪಡೆದಿದ್ದಾರೆ.

ಸಲ್ಮಾನ್ ಖಾನ್ ಆತ್ಮೀಯ ಸ್ನೇಹಿತ ಸುನಿಲ್ ರೋಹಿರಾ ಮಗಳು ಶ್ವೇತಾ. ಚಿಕ್ಕಂದಿನಿಂದ ಸಲ್ಮಾನ್ ಖಾನ್‌ನ ನೋಡಿ ಬೆಳೆದಾಕೆ. ಆಗಾಗ್ಗೆ ಆತನಿಗೆ ರಾಖಿಯನ್ನು ಕಟ್ಟುತ್ತಿದ್ದರು. ಸುನಿಲ್ ನಿಧನದ ನಂತರ ಶ್ವೇತಾ ಹಾಗೂ ಆಕೆಯ ಸಹೋದರನ ಯೋಗಕ್ಷೇಮ ವಿಚಾರಿಸುತ್ತಿರುತ್ತಾರೆ. ಆದರೆ 4 ದಿನ ಕಳೆದರೂ ಯಾಕೆ ಸಲ್ಮಾನ್ ಖಾನ್ ಆಕೆಯ ಆರೋಗ್ಯ ವಿಚಾರಿಸಿಲ್ಲ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ಈಗಾಗಲೇ ಆಪ್ತರ ಮೂಲಕ ಫೋನ್ ಮಾಡಿ ಶ್ವೇತಾ ರೋಹಿರಾ ಆರೋಗ್ಯದ ಬಗ್ಗೆ ಸಲ್ಮಾನ್ ಖಾನ್ ಮಾಹಿತಿ ಪಡೆದಿದ್ದಾರೆ. ಭದ್ರತೆಯ ಕಾರಣಕ್ಕೆ ಆಸ್ಪತ್ರೆಗೆ ಹೋಗಿ ನೋಡಲು ಸಾಧ್ಯವಾಗುತ್ತಿಲ್ಲ. ಡಿಸ್ಚಾರ್ಜ್ ಬಳಿಕ ಖಂಡಿತ ಖುದ್ದಾಗಿ ಹೋಗಿ ಶ್ವೇತಾಳ ಯೋಗಕ್ಷೇಮ ವಿಚಾರಿಸುತ್ತಾರೆ ಎನ್ನಲಾಗ್ತಿದೆ. ಸದ್ಯ ಸಲ್ಮಾನ್ ಖಾನ್ 'ಸಿಕಂದರ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮರುಗದಾಸ್ ನಿರ್ದೇಶನದ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ಬಿಗ್‌ಬಾಸ್ 18 ಶೋ ಯಶಸ್ವಿಯಾಗಿ ಸಲ್ಲು ಮುಗಿಸಿದ್ದಾರೆ.

More from Filmibeat

English summary
Salman Khan rakhi sister Shweta Rohira Shares about her car accident
Read more about: bollywood salman khan hindi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X