For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಜೊತೆಗಿನ ರಕ್ಷಾಬಂಧನದ ನೆನಪನ್ನು ಹಂಚಿಕೊಂಡ ಸಹೋದರಿ ಶ್ವೇತಾ ಸಿಂಗ್

  |

  ಇಂದು ರಕ್ಷಾಬಂಧನ. ಸಹೋದರಿಯರು ಅಣ್ಣತಮ್ಮಂದಿರಿಗೆ ರಾಕಿ ಕಟ್ಟಿ ಸಂಭ್ರಮಿಸುವ ಹಬ್ಬ. ಕೊರೊನಾ ಆತಂಕದ ನಡುವೆಯೂ ರಕ್ಷಾಬಂಧನ ಹಬ್ಬವನ್ನು ಅದ್ದೂರಿಯಾಗಿಯೆ ಆಚರಣೆ ಮಾಡಲಾಗುತ್ತಿದೆ. ಅಣ್ಣ ಅಥವಾ ತಮ್ಮನಿಗೆ ಆರತಿ ಮಾಡಿ ಸಿಹಿ ತಿನ್ನಿಸಿ, ರಿಕಿಯನ್ನು ಕಟ್ಟುತ್ತಿದ್ದಾರೆ. ಸದಾ ರಕ್ಷಣೆಗೆ ನೀಡುತ್ತೇನೆ ಎಂದು ಸಹೋದರರು ಸಹೋದರಿಯರಿಗೆ ಭರವಸೆ ನೀಡುವ ದಿನವಿದು.

  ಇನ್ಮುಂದೆ ಸೇನೆಯ ಬಗ್ಗೆ ಸಿನಿಮಾ ಮಾಡೋದು ಅಷ್ಟು ಸುಲಭ ಇಲ್ಲ | Filmibeat Kannada

  ಎಲ್ಲರೂ ರಕ್ಷಾಬಂಧನ ಆಚರಿಸುತ್ತಿದ್ದಾರೆ. ಆದರೆ ಪ್ರೀತಿಯ ಸಹೋದರನನ್ನು ಕಳೆದುಕೊಂಡು ನೋವಿನಲ್ಲಿರುವ ಸುಶಾಂತ್ ಸಿಂಗ್ ರಜಪೂತ್ ಸಹೋದರಿ ಶ್ವೇತಾ ಸಿಂಗ್ ರಕ್ಷಾಬಂಧನದ ದಿನ ಹಳೆಯ ನೆನಪನ್ನು ಹಂಚಿಕೊಂಡಿದ್ದಾರೆ. ಸುಶಾಂತ್ ಸಿಂಗ್ ಗೆ 5 ಜನ ಸಹೋದರಿಯರು. ಈ ಐದು ಜನ ಸಹೋದರಿಯರು ಒಟ್ಟಿಗೆ ಪ್ರೀತಿಯ ಸಹೋದರನಿಗೆ ರಾಕಿ ಕಟ್ಟುತ್ತಿದ್ದ ಸಂಭ್ರಮವನ್ನು ಭಾರವಾದ ಹೃದಯದಿಂದನೇ ನೆನಪಿಸಿಕೊಂಡಿದ್ದಾರೆ.

  ಪ್ರಧಾನಿ ಮೋದಿಗೆ ಬಹಿರಂಗ ಪತ್ರ ಬರೆದ ಸುಶಾಂತ್ ಸಹೋದರಿ ಶ್ವೇತಾ ಸಿಂಗ್ಪ್ರಧಾನಿ ಮೋದಿಗೆ ಬಹಿರಂಗ ಪತ್ರ ಬರೆದ ಸುಶಾಂತ್ ಸಹೋದರಿ ಶ್ವೇತಾ ಸಿಂಗ್

  5 ಜನ ಸಹೋದರಿಯರು ಸುಶಾಂತ್ ಸಿಂಗ್ ಗೆ ರಾಕಿ ಕಟ್ಟುತ್ತಿರುವ ಹಳೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುಶಾಂತ್ ಸಿಂಗ್ ಅನ್ನು ಮಧ್ಯದಲ್ಲಿ ಕೂರಿಸಿ ಐವರು ಸಹೋದರಿಯರು ಒಟ್ಟಾಗಿ ರಾಕಿ ಕಟ್ಟುತ್ತಿದ್ದಾರೆ. ವಿಶೇಷ ಅಂದರೆ ಸುಶಾಂತ್ ಸಿಂಗ್ ಕೂಡ ಈ ಫೋಟೋದಲ್ಲಿದ್ದಾರೆ.

  ಶ್ವೇತಾ ಸಿಂಗ್ ಈ ಫೋಟೋ ಶೇರ್ ಮಾಡಿ. ರಕ್ಷಾಬಂಧನದ ಶುಭಾಶಯಗಳು ನನ್ನ ಪ್ರೀತಿಯ ಬೇಬಿ. ನೀನು ಯಾವಾಗಲು ನಮ್ಮ ಹೆಮ್ಮೆ ಎಂದು ಬರೆದುಕೊಂಡಿದ್ದಾರೆ. ಬಾಲಿವುಡ್ ನಲ್ಲಿ ಸ್ಟಾರ್ ನಟನಾಗಿ ಗುರುತಿಸಿಕೊಂಡಿದ್ದ ಸುಶಾಂತ್ ಸಿಂಗ್ ಜೂನ್ 14ರಂದು ಮುಂಬೈನ ಬಾಂದ್ರ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.

  ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ಇನ್ನೂ ತನಿಖೆಯಾಗುತ್ತಿದ್ದು, ಸಾಕಷ್ಟು ಮಂದಿಯನ್ನು ವಿಚಾರಣೆ ಮಾಡಲಾಗುತ್ತಿದೆ. ಸಹೋದರಿ ಶ್ವೇತಾ ಸಿಂಗ್, ಸುಶಾಂತ್ ಸಿಂಗ್ ಪ್ರಕರಣದ ಕಡೆ ಸ್ವಲ್ಪ ಗಮನ ಹರಿಸುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು.

  English summary
  Sushant Singh sister Shweta Singh remember rakshabandhan with her sweet brother Sushanth.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X