Don't Miss!
- News
ಫೋಟೊ, ಪೂಜೆಗಾಗಿ 2 ಗಂಟೆ ಆಕ್ಸಿಜನ್ ಟ್ಯಾಂಕರ್ ತಡೆಹಿಡಿದ ರಾಜಕೀಯ ಮುಖಂಡರು!
- Automobiles
ಪ್ರೀಮಿಯಂ ಫೀಚರ್ಸ್ಗಳೊಂದಿಗೆ ಬಿಡುಗಡೆಯಾಗಲಿದೆ 2021ರ ಮಾರುತಿ ಸುಜುಕಿ ಸೆಲೆರಿಯೊ
- Sports
ಐಪಿಎಲ್: ಚೆನ್ನೈ vs ರಾಜಸ್ಥಾನ್, ಆಗಲಿರುವ ದಾಖಲೆಗಳ ಇಣುಕು ನೋಟ
- Lifestyle
ಕೋವಿಡ್ 19 ಎರಡನೇ ಅಲೆ: ಹೊಸ ಕೊರೊನಾವೈರಸ್ನ ಲಕ್ಷಣಗಳಿವು
- Education
Sports Authority Of India Recruitment 2021: 320 ಕೋಚ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಏಪ್ರಿಲ್ 19ರ ಬಿಟ್ಕಾಯಿನ್ ರೇಟ್ ಎಷ್ಟಿದೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಾನ ಕಳೆಯುವುದಾಗಿ ಬೆದರಿಕ ಹಾಕಿದ್ದ: ಪತಿಯ ಬಗ್ಗೆ ನಟಿ ಆರೋಪ
ಹಿಂದಿ ಧಾರಾವಾಹಿ, ಭೋಜ್‌ಪುರಿ ಸಿನಿಮಾಗಳ ಪರಿಚಯ ಇರುವವರಿಗೆ ನಟಿ ಶ್ವೇತಾ ತಿವಾರಿ ಹೆಸರು ಗೊತ್ತಿರುತ್ತದೆ. ಈಕೆ ಕನ್ನಡ ಸಿನಿಮಾವೊಂದರಲ್ಲಿ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಈ ಪ್ರತಿಭಾವಂತ ನಟಿ, ನಟನೆಯಿಂದ ಸುದ್ದಿಯಾಗಿದ್ದಕ್ಕಿಂತಲೂ ಹೆಚ್ಚು ವೈಯಕ್ತಿಕ ಜೀವನದಿಂದ ಸುದ್ದಿಯಾದವರು.
ಮೊದಲ ಪತಿ ಕುಡಿದು ಹಾದಿ-ಬೀದಿ ರಂಪಾಟ ಮಾಡಿ, ಹಿಂಸೆ, ದೌರ್ಜನ್ಯ ಮಾಡಿದ ಬಳಿಕ ಎರಡನೇ ಮದುವೆಯಾದರು ಶ್ವೇತಾ ತಿವಾರಿ. ಆದರೆ ಎರಡನೇ ಮದುವೆಯೂ ಕೈಕೊಟ್ಟಿತು. ಶ್ವೇತಾರ ಎರಡನೇ ಪತಿ ಅಭಿನವ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಶ್ವೇತಾರ ಮಾನಹಾನಿಗೆ ಇಳಿದಿದ್ದಾರೆ.
ಶ್ವೇತಾ ತಿವಾರಿಯ ಕೆಲವು ವಿಡಿಯೋಗಳನ್ನು ಪ್ರಕಟಿಸಿರುವ ಅಭಿನವ್, 'ಶ್ವೇತಾ, ನನ್ನ ಮಗನನ್ನು ಬಂಧಿ ಮಾಡಿಕೊಂಡಿದ್ದಾಳೆ' ಎಂದೂ, ಯಾವುದೊ ಹೋಟೆಲ್‌ನಲ್ಲಿ ಬೇರೆಯವರ ಹೆಸರಿನಲ್ಲಿ ರೂಂ ಮಾಡಿಕೊಂಡು ಇದ್ದಾಳೆ ಎಂದು ಆರೋಪಗಳನ್ನು ಮಾಡಿದ್ದಾರೆ. ಶ್ವೇತಾರ ಮನೆಗೆ ಹೋಗಿ ಜೋರಾಗಿ ಕಿರುಚಾಡಿ ಬಾಗಿಲು ತೆಗೆಯುವಂತೆ ಒತ್ತಾಯ ಮಾಡುತ್ತಿರುವ ವಿಡಿಯೋವನ್ನು ಸಹ ಅಭಿನವ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಅಭಿನವ್‌ರ ಈ ವರ್ತನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಶ್ವೇತಾ ತಿವಾರಿ, 'ನನ್ನ ಮಾನಹಾನಿ ಮಾಡುವುದಾಗಿ ಕೆಲವು ದಿನಗಳ ಹಿಂದಷ್ಟೆ ಆತ (ಅಭಿನವ್) ನನಗೆ ಬೆದರಿಕೆ ಹಾಕಿದ್ದ' ಎಂದಿದ್ದಾರೆ.
'ಮಹಿಳೆಯ ಮಾನ ಕಳೆಯುವುದು ಎಷ್ಟು ಹೊತ್ತು. ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಹಾಕಿದರೆ ಸಾಕು' ಎಂದು ಆತ ನನಗೆ ಹೇಳಿದ್ದ. ಹೀಗೆ ಹೇಳಿದ ಐದಾರು ದಿನಗಳ ನಂತರದಿಂದ ನನ್ನ ವಿಡಿಯೋಗಳನ್ನು ಪ್ರಕಟಿಸಲು ಆರಂಭಿಸಿದ' ಎಂದಿದ್ದಾರೆ ಶ್ವೇತಾ ತಿವಾರಿ.
'ಯಾವುದೇ ವ್ಯಕ್ತಿಯ ಬಗ್ಗೆ ಒಳ್ಳೆಯದನ್ನು ಮಾತನಾಡಿದಾಗ ಜನರು ಹೆಚ್ಚು ಪ್ರತಿಕ್ರಿಯಿಸುವುದಿಲ್ಲ, ಅದೇ ಕಟ್ಟದು ಮಾತನಾಡಿದ ಕೂಡಲೇ ನಂಬಲು, ಅದರ ಬಗ್ಗೆ ಚರ್ಚಿಸಲು, ಜಡ್ಜ್ ಮಾಡಲು ಆರಂಭಿಸುತ್ತಾರೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಶ್ವೇತಾ ತಿವಾರಿ.
'ಆ ವ್ಯಕ್ತಿ (ಅಭಿನವ್) ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದ ಕೂಡಲೇ ಆತ ಹೇಳುತ್ತಿರುವುದು ಸರಿ ಎಂದು ನಿರ್ಣಯ ಮಾಡುತ್ತಿದ್ದಾರೆ. ಆತ ಹೇಳುತ್ತಿರುವುದು ಸುಳ್ಳು ಎಂದೂ ಸಹ ಯೋಚಿಸಬಹುದಲ್ಲವೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ನೋಡುತ್ತಿರುವವರು ಮೂರನೇಯವರು ನಿಜವಾದ ಘಟನೆ, ಹಿನ್ನೆಲೆ ಅವರಿಗೆ ತಿಳಿದಿಲ್ಲ' ಎಂದಿದ್ದಾರೆ ಶ್ವೇತಾ.
'ಆತನ ಬಗ್ಗೆ ಹೇಳಲಿಕ್ಕೆ ನನ್ನ ಬಳಿಯೂ ಸಾಕಷ್ಟು ಸಂಗತಿಗಳಿವೆ ಆದರೆ ಉದ್ದೇಶಪೂರ್ವಕವಾಗಿ ನಾನು ಆ ಕಾರ್ಯವನ್ನು ಮಾಡುತ್ತಿಲ್ಲ. ಆತ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುವುದು ನನಗೆ ಗೊತ್ತಿತ್ತು ಆದರೆ ನಾನು ತಡೆಯಲು ಹೋಗಲಿಲ್ಲ. ಆದರೆ ನಂತರ ನನಗೆ ಗೊತ್ತಾಯಿತು ನಾನು ಸಹ ವಿಡಿಯೋ ರೆಕಾರ್ಡ್ ಮಾಡಿಕೊಳ್ಳಬೇಕೆಂದು, ಇನ್ನು ಮುಂದೆ ಹಾಗೆಯೇ ಮಾಡುತ್ತೇನೆ' ಎಂದಿದ್ದಾರೆ ಶ್ವೇತಾ ತಿವಾರಿ.
ಹಿಂದಿ ಬಿಗ್‌ಬಾಸ್ ವಿಜೇತೆ ಸಹ ಆಗಿರುವ ಶ್ವೇತಾ ತಿವಾರಿ, ಹಲವು ಹಿಂದಿ ಹಾಗೂ ಭೋಜ್‌ಪುರಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವಾರು ಹಿಂದಿ ಧಾರಾವಾಹಿಗಳಲ್ಲಿ, ಕಾಮಿಡಿ ಸರ್ಕಸ್, ಕಾಮಿಡಿ ನೈಟ್ಸ್ ವಿತ್ ಕಪಿಲ್ ಶೋ ನಲ್ಲಿ ಭಾಗವಹಿಸಿದ್ದಾರೆ. ಜೊತೆಗೆ ದುನಿಯಾ ವಿಜಯ್ ಅಭಿನಯದ 'ದೇವ್ರು' ಸಿನಿಮಾದಲ್ಲಿ ಹಾಡೊಂದರಲ್ಲಿ ನರ್ತಿಸಿದ್ದಾರೆ ಶ್ವೇತಾ ತಿವಾರಿ.