ನಟಿ ಶ್ವೇತಾ ಮೇಲೆ ಮಗು ಅಪಹರಣದ ಆರೋಪ ಹೊರಿಸಿದ ಎರಡನೇ ಪತಿ

ಖ್ಯಾತ ನಟಿ, ಹಿಂದಿ ಬಿಗ್‌ಬಾಸ್ ವಿಜೇತೆ ಶ್ವೇತಾ ತಿವಾರಿ ಮೇಲೆ ಮಗುವನ್ನು ಅಪಹರಿಸಿದ ಆರೋಪ ಹೊರಿಸಲಾಗಿದೆ. ಆರೋಪ ಹೊರಿಸಿರುವುದು ಆಕೆಯ ಮಾಜಿ ಪತಿಯೇ!

ಹೌದು, ಪ್ರತಿಭಾನ್ವಿತ ನಟಿ ಶ್ವೇತಾ ತಿವಾರಿ ದಾಂಪತ್ಯದಲ್ಲಿ ಎಲ್ಲವೂ ಸರಿ ಇರಲಿಲ್ಲ. ಬಹುದಿನಗಳಿಂದಲೂ ಪತಿ-ಪತ್ನಿ ನಡುವೆ ಸಾಮರಸ್ಯವಿರಲಿಲ್ಲ. ಹಾಗಾಗಿ ಇಬ್ಬರೂ ವಿಚ್ಛೇಧನ ಪಡೆದಿದ್ದರು. ಈಗ ಏಕಾ-ಏಕಿ ಶ್ವೇತಾ ತಿವಾರಿ ವಿರುದ್ಧ ಮಗುವನ್ನು ಅಪಹರಿಸಿರುವ ಆರೋಪ ಮಾಡಿದ್ದಾರೆ.

ಶ್ವೇತಾ ಮಾಜಿ ಪತಿ ಅಭಿನವ್ ಕೊಹ್ಲಿ ಮಾಧ್ಯಮದೊಟ್ಟಿಗೆ ಮಾತನಾಡಿ, ಶ್ವೇತಾ ತಿವಾರಿ, ತಮ್ಮ ಮಗ ರಿಯಾಂಶ್‌ನನ್ನು ಕರೆದುಕೊಂಡು ಹೋಗಿದ್ದಾಳೆ. ಮಗುವನ್ನು ಯಾರಿಗೂ ತಿಳಿಯದ ಜಾಗದಲ್ಲಿ ಇರಿಸಿದ್ದಾಳೆ ಎಂದು ಆರೋಪಿಸಿದ್ದಾರೆ.

'ಅಕ್ಟೋಬರ್ 25 ರಂದು ಕರೆದುಕೊಂಡು ಹೋಗಿದ್ದಾಳೆ'

'ಅಕ್ಟೋಬರ್ 25 ರಂದು ಕರೆದುಕೊಂಡು ಹೋಗಿದ್ದಾಳೆ'

ಶ್ವೇತಾ ಗೆ ಕೊರೊನಾ ವೈರಸ್ ಆಗಿದ್ದ ಕಾರಣ ರಿಯಾಂಶ್ ಕಳೆದ ನಲವತ್ತು ದಿನಗಳಿಂದಲೂ ನನ್ನ ಜೊತೆಗೆ ಇದ್ದ. ಆದರೆ ಕಳೆದ ಭಾನುವಾರ ಅಕ್ಟೋಬರ್ 25 ರಂದು ಅವನನ್ನು ಇದ್ದಕ್ಕಿದ್ದಂತೆ ಶ್ವೇತಾ ಕರೆದುಕೊಂಡು ಹೋಗಿದ್ದಾಳೆ. ಆತ ಈಗ ಎಲ್ಲಿದ್ದಾನೋ ಗೊತ್ತಿಲ್ಲ ಎಂದಿದ್ದಾರೆ ಅಭಿನವ್ ಕೊಹ್ಲಿ.

ಶ್ವೇತಾ ತಿವಾರಿ ಎಲ್ಲಿದ್ದಾಳೆಯೋ ಗೊತ್ತಿಲ್ಲ: ಅಭಿನವ್

ಶ್ವೇತಾ ತಿವಾರಿ ಎಲ್ಲಿದ್ದಾಳೆಯೋ ಗೊತ್ತಿಲ್ಲ: ಅಭಿನವ್

ಕಳೆದ ಭಾನುವಾರದಿಂದ ಶ್ವೇತಾ ತಿವಾರಿಯನ್ನು ಸಂಪರ್ಕಿಸಲು ಯತ್ನಿಸುತ್ತಿದ್ದೇನೆ, ಆದರೆ ಆಕೆ ನನ್ನ ಕರೆಗಳನ್ನು ಬ್ಲಾಕ್ ಮಾಡಿದ್ದಾಳೆ. ಆಕೆಯ ಮನೆಗೂ ನಾನು ಭೇಟಿ ನೀಡಿದ್ದೆ, ಅಲ್ಲಿಯೂ ಆಕೆ ಇಲ್ಲ, ನನ್ನ ಸಂಪರ್ಕಕ್ಕೂ ಆಕೆ ಸಿಗುತ್ತಿಲ್ಲ ಎಂದಿದ್ದಾರೆ ಅಭಿನವ್ ಕೊಹ್ಲಿ.

ರಾಜಾ ಚೌಧರಿಯೊಂದಿಗೆ ವಿವಾಹ

ರಾಜಾ ಚೌಧರಿಯೊಂದಿಗೆ ವಿವಾಹ

ನಟಿ ಶ್ವೇತಾ ತಿವಾರಿ 1998 ರಲ್ಲಿ ರಾಜಾ ಚೌಧರಿ ಎಂಬುವರನ್ನು ವಿವಾಹವಾಗಿದ್ದರು ಆತನೊಂದಿಗೆ ಹೆಣ್ಣು ಮಗುವನ್ನು ಸಹ ಪಡೆದರು. ಕುಡಿತದ ದಾಸನಾಗಿದ್ದ ರಾಜಾ ಚೌಧರಿ, ಶ್ವೇತಾ ಮೇಲೆ ಗೃಹ ದೌರ್ಜನ್ಯ ಸಹ ಮಾಡುತ್ತಿದ್ದ ಹಾಗಾಗಿ ಆತನೊಟ್ಟಿಗೆ 2007 ರಲ್ಲಿ ವಿಚ್ಛೇಧನ ಪಡೆದರು ಶ್ವೇತಾ.

Recommended Video

Shivanna, Prabhudeva ಬಿಗ್ ಬಜೆಟ್ ಸಿನಿಮಾಗೆ ಭಟ್ಟರ ಸಾರಥ್ಯ | Filmibeat Kannada
ಅಭಿನವ್‌ ಜೊತೆ 2013 ರಲ್ಲಿ ವಿವಾಹ

ಅಭಿನವ್‌ ಜೊತೆ 2013 ರಲ್ಲಿ ವಿವಾಹ

ನಂತರ ನಟ ಅಭಿನವ್ ಕೊಹ್ಲಿಯನ್ನು 2013 ರಲ್ಲಿ ವಿವಾಹವಾದರು. ಮೂರು ವರ್ಷ ದಾಂಪತ್ಯದ ನಂತರ ಅಭಿನವ್, ತನ್ನ ಹಾಗೂ ಮಗಳು ಪಲಕ್ ಮೇಲೆ ದೌಜನ್ಯ ಎಸಗಿದ್ದಾರೆ ಎಂದು ದೂರು ನೀಡಿ ಆತನಿಂದಲೂ ವಿಚ್ಛೇಧನ ಪಡೆದರು.

More from Filmibeat

English summary
Shweta Tiwari's ex husband alleged that Shweta Tiwari kidnaped their son Reyaansh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X