For Quick Alerts
  ALLOW NOTIFICATIONS  
  For Daily Alerts

  ಎರಡನೇ ಮದುವೆ ಮುರಿದು ಬಿದ್ದ ರಹಸ್ಯ ಬಿಚ್ಚಿಟ್ಟ 'ಬಿಗ್ ಬಾಸ್' ವಿನ್ನರ್ ಶ್ವೇತಾ

  |

  ಬಾಲಿವುಡ್ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿರುವ ನಟಿ ಶ್ವೇತಾ ತಿವಾರಿ. 'ಕಸೌತಿ ಝಿಂದಗಿ ಕೇ', 'ನಾಗಿನ್', 'ಬಾಲ್ ವೀರ್' ಮುಂತಾದ ಧಾರಾವಾಹಿಗಳಿಂದ ಹಿಂದಿ ಟಿವಿ ಲೋಕದಲ್ಲಿ ಪ್ರಖ್ಯಾತಿ ಗಳಿಸಿದವರು ಶ್ವೇತಾ ತಿವಾರಿ. 'ಬಿಗ್ ಬಾಸ್-4' ಕಾರ್ಯಕ್ರಮದಲ್ಲಿ ಗೆಲುವಿನ ನಗೆ ಬೀರಿದ್ದು ಕೂಡ ಇದೇ ಶ್ವೇತಾ ತಿವಾರಿ.

  ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸುತ್ತಿರುವ ಶ್ವೇತಾ ತಿವಾರಿ ಕಳೆದ ಕೆಲ ದಿನಗಳಿಂದ ಸದ್ದು ಮಾಡುತ್ತಿರುವುದು ವೈಯುಕ್ತಿಕ ವಿಚಾರಗಳಿಂದಾಗಿ. ಶ್ವೇತಾ ತಿವಾರಿಯ ಎರಡನೇ ಮದುವೆ ಮುರಿದು ಬಿದ್ದಿದೆ. ಕಿರುಕುಳದ ಆರೋಪದ ಮೇಲೆ ಎರಡನೇ ಪತಿ ಅಭಿನವ್ ಕೊಹ್ಲಿ ವಿರುದ್ಧ ಶ್ವೇತಾ ತಿವಾರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

  ಇದೀಗ ಅಭಿನವ್ ಕೊಹ್ಲಿಯಿಂದ ದೂರಾಗಿರುವ ಶ್ವೇತಾ ತಿವಾರಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ತಲೆಗೊಂದು ಕಾಮೆಂಟ್ ಬೀಳುತ್ತಿದೆ. ಶ್ವೇತಾ ತಿವಾರಿ ವಿರುದ್ಧ ಕೆಲವರಂತೂ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ಇದನ್ನೆಲ್ಲ ಗಮನಿಸಿದ ಶ್ವೇತಾ ತಿವಾರಿ ಪ್ರೆಸ್ ಮೀಟ್ ನಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

  ತಮ್ಮ ಎರಡನೇ ಮದುವೆ ಮುರಿದು ಬಿದ್ದ ರಹಸ್ಯವನ್ನ ಪತ್ರಿಕಾ ಮಿತ್ರರು ಮತ್ತು ಮಾಧ್ಯಮಗಳ ಮುಂದೆ ಶ್ವೇತಾ ತಿವಾರಿ ಬಹಿರಂಗ ಪಡಿಸಿದ್ದಾರೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ, ಓದಿರಿ...

  ವಿಷ ಮತ್ತು ಸೋಂಕು

  ವಿಷ ಮತ್ತು ಸೋಂಕು

  'ಮೇರೆ ಡ್ಯಾಡ್ ಕಿ ದುಲ್ಹನ್' ಎಂಬ ಶೋ ಆರಂಭವಾಗುತ್ತಿದೆ. ಇದರ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡ ಶ್ವೇತಾ ತಿವಾರಿಗೆ ವೈಯುಕ್ತಿಕ ಜೀವನದ ಕುರಿತು ಪ್ರಶ್ನೆಗಳು ಎದುರಾದವು. ಆಗ ಶ್ವೇತಾ ತಿವಾರಿ ಉತ್ತರ ಕೊಟ್ಟಿದ್ದು ಹೀಗೆ - ''ಈ ಸೋಂಕಿನಿಂದ (ಎರಡನೇ ಮದುವೆ) ನಾನು ತುಂಬಾ ಬಳಲಿದ್ದೆ. ಈಗ ಅದನ್ನ ಕಿತ್ತು ಹಾಕಿದ್ದೇನೆ. ಅದು (ಎರಡನೇ ಪತಿ) ತುಂಬಾ ವಿಷಕಾರಿ ಅಂತ ಜನ ಅರ್ಥ ಮಾಡಿಕೊಳ್ಳಬೇಕು. ಈಗ ಅದನ್ನ ತೆಗೆದು ಹಾಕಿದ ಮೇಲೆ ನಾನು ಖುಷಿಯಾಗಿದ್ದೇನೆ. ಸಂತೋಷವಾಗಿದ್ದೇನೆ ಅಂತ ಬಿಂಬಿಸಿಕೊಳ್ಳುತ್ತಿಲ್ಲ. ನಾನು ನಿಜಕ್ಕೂ ಸುಖವಾಗಿ ಇದ್ದೇನೆ''

  ಮಂಚು ಮನೋಜ್ ಸಂಸಾರದಲ್ಲಿ ಬಿರುಗಾಳಿ: ಪತ್ನಿಗೆ ವಿಚ್ಛೇದನ ನೀಡಿದ ನಟಮಂಚು ಮನೋಜ್ ಸಂಸಾರದಲ್ಲಿ ಬಿರುಗಾಳಿ: ಪತ್ನಿಗೆ ವಿಚ್ಛೇದನ ನೀಡಿದ ನಟ

  ಮಕ್ಕಳ ಒಳಿತು ಮುಖ್ಯ

  ಮಕ್ಕಳ ಒಳಿತು ಮುಖ್ಯ

  ''ಒಂದು ಕೈ ಕೆಲಸ ಮಾಡಲಿಲ್ಲ ಅಂದ್ರೆ ಜೀವನ ನಿಂತು ಹೋಗಲ್ಲ. ಇನ್ನೊಂದು ಕೈ ಬಳಸುತ್ತೇವೆ. ಹಾಗೆಯೇ, ಜೀವನದ ಒಂದು ಭಾಗದಲ್ಲಿ ತೊಂದರೆ ಆಯಿತು ಎಂಬ ಕಾರಣಕ್ಕೆ ನಾನು ಜೀವನ ಸಾಗಿಸುವುದನ್ನು ನಿಲ್ಲಿಸಲ್ಲ. ನನಗೆ ಇಬ್ಬರು ಮಕ್ಕಳಿದ್ದಾರೆ. ಇಬ್ಬರನ್ನೂ ಸಾಕಬೇಕು'' ಎಂದಿದ್ದಾರೆ ಶ್ವೇತಾ ತಿವಾರಿ. ''ಎರಡನೇ ಬಾರಿಯೂ ಮದುವೆ ಮುರಿದು ಬಿತ್ತು ಅಂತ ಜನ ಆಡಿಕೊಳ್ಳುತ್ತಿದ್ದಾರೆ. ಎರಡನೇ ಬಾರಿಯೂ ಸಮಸ್ಯೆ ಆಗಬಾರದು ಅಂತ ಏನಾದರೂ ಇದೆಯಾ.? ಕನಿಷ್ಟ ನಾನು ಹೊರಗೆ ಬಂದು ನನ್ನ ಸಮಸ್ಯೆಯನ್ನು ಹೇಳಿಕೊಂಡಿದ್ದೇನೆ. ನಾನು ಇಂದು ಏನೇ ನಿರ್ಧಾರ ತೆಗೆದುಕೊಂಡಿದ್ದರೂ, ಅದು ನನ್ನ ಕುಟುಂಬ ಮತ್ತು ಮಕ್ಕಳ ಒಳಿತಿಗಾಗಿ'' ಅಂತ ಶ್ವೇತಾ ತಿವಾರಿ ಹೇಳಿದ್ದಾರೆ.

  ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ ಖ್ಯಾತ ಗಾಯಕ ರಘುದೀಕ್ಷಿತ್ ದಂಪತಿವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ ಖ್ಯಾತ ಗಾಯಕ ರಘುದೀಕ್ಷಿತ್ ದಂಪತಿ

  ಮೊದಲ ಮದುವೆ ಮುರಿದು ಬಿದ್ದದ್ದು ಯಾಕೆ.?

  ಮೊದಲ ಮದುವೆ ಮುರಿದು ಬಿದ್ದದ್ದು ಯಾಕೆ.?

  1998 ರಲ್ಲಿ ರಾಜಾ ಚೌಧರಿ ಜೊತೆಗೆ ಶ್ವೇತಾ ತಿವಾರಿ ಮದುವೆ ಆಗಿದ್ದರು. ಇಬ್ಬರ ದಾಂಪತ್ಯದ ಫಲವಾಗಿ ಹೆಣ್ಣು ಮಗು ಜನಿಸಿತ್ತು. ಮದ್ಯ ಸೇವನೆ ಮಾಡಿ ದೈಹಿಕ ಕಿರುಕುಳ ನೀಡಿದ್ದ ಕಾರಣಕ್ಕೆ 2007 ರಲ್ಲಿ ರಾಜಾ ಚೌಧರಿಗೆ ಶ್ವೇತಾ ತಿವಾರಿ ವಿಚ್ಛೇದನ ನೀಡಿದ್ದರು. ಬಳಿಕ ಶ್ವೇತಾ ತಿವಾರಿ ಎರಡನೇ ಮದುವೆ ಆದರು.

  ವಿಚ್ಛೇದನ ಪಡೆದ ಅರ್ಜುನ್ ರಾಂಪಾಲ್ ಬಗ್ಗೆ ಕೇಳಿಬರ್ತಿದೆ ಹೊಸ ಗಾಸಿಪ್.!ವಿಚ್ಛೇದನ ಪಡೆದ ಅರ್ಜುನ್ ರಾಂಪಾಲ್ ಬಗ್ಗೆ ಕೇಳಿಬರ್ತಿದೆ ಹೊಸ ಗಾಸಿಪ್.!

  ಎರಡನೇ ಮದುವೆ ಕಥೆ

  ಎರಡನೇ ಮದುವೆ ಕಥೆ

  ಮೂರು ವರ್ಷಗಳ ಕಾಲ ಪ್ರೀತಿಸಿದ ನಂತರ 2013 ರಲ್ಲಿ ಅಭಿನವ್ ಕೊಹ್ಲಿ ಎಂಬುವರನ್ನ ಶ್ವೇತಾ ತಿವಾರಿ ವಿವಾಹವಾದರು. ಈ ದಂಪತಿಗೆ ಗಂಡು ಮಗು ಜನಸಿತ್ತು. ಎರಡನೇ ಮದುವೆಯಲ್ಲೂ ಶ್ವೇತಾ ತಿವಾರಿಗೆ ನೆಮ್ಮದಿ ಇರಲಿಲ್ಲ. ತಮಗೆ ಹಾಗೂ ತಮ್ಮ ಮಗಳಿಗೆ ಕಿರುಕುಳ ಕೊಟ್ಟ ಆರೋಪದ ಮೇಲೆ ಅಭಿನವ್ ಕೊಹ್ಲಿ ವಿರುದ್ಧ ಶ್ವೇತಾ ತಿವಾರಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಇದೀಗ ಶ್ವೇತಾ ತಿವಾರಿ ಮತ್ತು ಅಭಿನವ್ ಕೊಹ್ಲಿ ದಾಂಪತ್ಯ ಮುರಿದು ಬಿದ್ದಿದೆ.

  English summary
  Hindi TV Actress Shwetha Tiwari opens up about her second 'poisonous' marriage.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X