ವಿಜಯ್‌ ದೇವರಕೊಂಡ, ರಶ್ಮಿಕಾ ಜೋಡಿ ಸಿನಿಮಾ ರೀಮೆಕ್; ನಾಯಕ-ನಾಯಕಿ ಯಾರಂದ್ರೆ?

ದಕ್ಷಿಣ ಭಾರತದ ಸಿನಿಮಾಗಳು ಇತ್ತೀಚಿನ ವರ್ಷಗಳಲ್ಲಿ ಇಡೀ ದೇಶವನ್ನೇ ಆಳುತ್ತಿವೆ. ಅದರಲ್ಲೂ ಪ್ರೇಮಕಥೆ ಹಾಗೂ ಎಮೋಷನಲ್ ಡ್ರಾಮಾಗಳಿಗೆ ಸಿಗುವ ರೆಸ್ಪಾನ್ಸ್ ಅಷ್ಟಿಷ್ಟಲ್ಲ. ಸಿನಿಪ್ರಿಯರು ಮೆಚ್ಚಿಕೊಂಡ ಒಂದು ಸುಂದರ ಕಥೆ ಈಗ ಹೊಸ ರೂಪ ಪಡೆದುಕೊಳ್ಳಲು ಸಜ್ಜಾಗಿದೆ. ಈ ಸುದ್ದಿಯು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸೌಂಡ್ ಮಾಡುತ್ತಿದೆ.

ಬಾಲಿವುಡ್ ಮಂದಿ ಸದಾ ಸೌತ್ ಸಿನಿಮಾಗಳ ಮೇಲೆ ಕಣ್ಣಿಟ್ಟಿರುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಕಥೆಯಲ್ಲಿ ಧಮ್ಮಿದ್ದರೆ ಸಾಕು, ಅದನ್ನು ತಮ್ಮ ಭಾಷೆಗೆ ತಕ್ಕಂತೆ ಬದಲಾಯಿಸಿ ಪ್ರೇಕ್ಷಕರ ಮುಂದೆ ತರುತ್ತಾರೆ.

Siddhant Chaturvedi and Pratibha Ranta to star in hindi remake of Dear Comrade

ಯಾವಾಗಲೂ ಬಿಗ್ ಬಜೆಟ್ ಸಿನಿಮಾಗಳು ಅಂದಮೇಲೆ ಅಲ್ಲಿ ಸ್ಟಾರ್ ನಟರ ಹೆಸರೇ ಮುಂಚೂಣಿಯಲ್ಲಿರುತ್ತದೆ. ಪ್ಯಾನ್‌ ಇಂಡಿಯಾ ಟ್ರೆಂಡ್ ಶುರುವಾದ ಬಳಿಕ ರೀಮೆಕ್ ಸಿನಿಮಾಗಳ ಹಾವಳಿ ಕಮ್ಮಿ ಆಗಿದೆ. ಆದರೂ ಆಗೊಮ್ಮೆ ಈಗೊಮ್ಮೆ ಇಂತಹ ಪ್ರಯತ್ನ ನಡೆಯುತ್ತದೆ. ಈ ಬಾರಿ ಬಾಲಿವುಡ್‌ನ ಪ್ರತಿಭಾವಂತ ನಟರೊಬ್ಬರು ಈ ಚಿತ್ರದ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ತಯಾರಾಗಿದ್ದಾರೆ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೇ ನಾಯಕಿಯ ಆಯ್ಕೆಯೂ ಕೂಡ ಅಚ್ಚರಿ ಮೂಡಿಸುವಂತಿದೆ.

'ಡಿಯರ್ ಕಾಮ್ರೇಡ್' ರಿಮೇಕ್

ಹೌದು ಟಾಲಿವುಡ್ ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡ ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಟನೆಯ ಸೂಪರ್ ಹಿಟ್ ಸಿನಿಮಾ 'ಡಿಯರ್ ಕಾಮ್ರೇಡ್' ಈಗ ಹಿಂದಿಯಲ್ಲಿ ಮರು ನಿರ್ಮಾಣವಾಗುತ್ತಿದೆ. 6 ವರ್ಷಗಳ ಹಿಂದೆ ತೆರೆಗೆ ಬಂದಿದ್ದ ಸಿನಿಮಾ ದೊಡ್ಡದಾಗಿ ಗೆಲ್ಲಲಿಲ್ಲ. ಆದರೆ ಬಾಬಿ-ಲಿಲ್ಲಿ ಪಾತ್ರಗಳು ಯುವಜನತೆಯ ಮನಗೆದ್ದಿತ್ತು. ಈಗ ಈ ಎಮೋಷನಲ್ ಲವ್ ಸ್ಟೋರಿಯನ್ನು ಹಿಂದಿ ಪ್ರೇಕ್ಷಕರಿಗೆ ಉಣಬಡಿಸಲು ಬಾಲಿವುಡ್ ನಿರ್ಮಾಣ ಸಂಸ್ಥೆಗಳು ಮುಂದಾಗಿವೆ.

Siddhant Chaturvedi and Pratibha Ranta to star in hindi remake of Dear Comrade

ವಿಜಯ್ ಪಾತ್ರದಲ್ಲಿ ಸಿದ್ದಾಂತ್

ವಿಜಯ್ ದೇವರಕೊಂಡ ನಿರ್ವಹಿಸಿದ್ದ ಆ ರಗಡ್ ಮತ್ತು ಎಮೋಷನಲ್ 'ಬಾಬಿ' ಪಾತ್ರಕ್ಕೆ ಈಗ ಬಾಲಿವುಡ್ನ ಸಿದ್ದಾಂತ್ ಚತುರ್ವೇದಿ ಆಯ್ಕೆ ಆಗುತ್ತಾರೆ ಎನ್ನಲಾಗ್ತಿದೆ. 'ಗಲ್ಲಿ ಬಾಯ್' ಖ್ಯಾತಿಯ ಸಿದ್ದಾಂತ್ ತಮ್ಮ ನಟನಾ ಕೌಶಲದಿಂದ ಈಗಾಗಲೇ ಗುರುತಿಸಿಕೊಂಡಿದ್ದಾರೆ. ವಿಜಯ್ ಅವರ ಆ ಆವೇಶ ಮತ್ತು ಪ್ರೀತಿಯನ್ನು ಸಿದ್ದಾಂತ್ ಹೇಗೆ ನಿಭಾಯಿಸಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿ ಮೂಡಿದೆ.

ರಶ್ಮಿಕಾ ಜಾಗಕ್ಕೆ ಪ್ರತಿಭಾ

ಕ್ರಿಕೆಟ್ ಆಟಗಾರ್ತಿಯಾಗಿ ರಶ್ಮಿಕಾ ಮಂದಣ್ಣ 'ಲಿಲ್ಲಿ' ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದರು. ಈಗ ಈ ಪಾತ್ರಕ್ಕೆ ಪ್ರತಿಭಾ ರಂತಾ ಅವರನ್ನು ಪರಿಗಣಿಸಲಾಗುತ್ತಿದೆ. ಇತ್ತೀಚೆಗಷ್ಟೇ 'ಲಾಪತಾ ಲೇಡಿಸ್' ಸಿನಿಮಾ ಮೂಲಕ ದೇಶಾದ್ಯಂತ ಸದ್ದು ಮಾಡಿದ್ದ ಪ್ರತಿಭಾ, ಈಗ ಸ್ಟಾರ್ ನಟಿಯಾಗಿ ಹೊರಹೊಮ್ಮುತ್ತಿದ್ದಾರೆ. ಪ್ರತಿಭಾ ಅವರ ಮನ್ಮೋಹಕ ನಟನೆ ಮತ್ತು ಮುಗ್ಧತೆ ಈ ಸಿನಿಮಾಗೆ ಪ್ಲಸ್ ಪಾಯಿಂಟ್ ಆಗಲಿದೆ ಎಂದು ಚಿತ್ರತಂಡ ನಂಬಿದೆ ಎನ್ನಲಾಗಿದೆ.

ಭಾರೀ ನಿರೀಕ್ಷೆ

ಬಾಲಿವುಡ್‌ನ ಖ್ಯಾತ ನಿರ್ಮಾಣ ಸಂಸ್ಥೆಯೊಂದು ಈ ಚಿತ್ರದ ರೀಮೆಕ್ ಹಕ್ಕುಗಳನ್ನು ಪಡೆದುಕೊಂಡಿದ್ದು, ಸ್ಕ್ರಿಪ್ಟ್ ಕೆಲಸಗಳು ಭರದಿಂದ ಸಾಗುತ್ತಿವೆ. ಮೂಲ ಕಥೆಗೆ ಯಾವುದೇ ಧಕ್ಕೆ ಬಾರದಂತೆ ಹಿಂದಿ ನೇಟಿವಿಟಿಗೆ ತಕ್ಕಂತೆ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ವಿಜಯ್ ದೇವರಕೊಂಡ ಅವರ 'ಅರ್ಜುನ್ ರೆಡ್ಡಿ' ಸಿನಿಮಾ ಹಿಂದಿಯಲ್ಲಿ 'ಕಬೀರ್ ಸಿಂಗ್' ಆಗಿ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಈಗ ಅದೇ ಹಾದಿಯಲ್ಲಿ 'ಡಿಯರ್ ಕಾಮ್ರೇಡ್' ಸಿನಿಮಾ ಸಾಗುತ್ತದೆಯೇ ಎಂದು ಕಾದು ನೋಡಬೇಕು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X