ಇಲ್ಲ ಇಲ್ಲ ಎನ್ನುತ್ತಲೇ ಹಸೆಮಣೆ ಏರಲು ಸಜ್ಜಾದ ಕಿಯಾರಾ-ಸಿದ್ಧಾರ್ಥ್
ಬಾಲಿವುಡ್‌ನಲ್ಲಿ ಸಾಲು ಸಾಲು ವಿವಾಹಗಳು ಕಳೆದ ವರ್ಷದಿಂದಲೂ ನಡೆಯುತ್ತಿವೆ. ಆಲಿಯಾ ಭಟ್- ರಣ್ಬೀರ್ ಕಪೂರ್, ಬಳಿಕ ಇತ್ತಿಚೆಗೆ ಅಥಿಯಾ ಶೆಟ್ಟಿ-ಕೆಎಲ್ ರಾಹುಲ್. ಇದೀಗ ಕಿಯಾರಾ ಅಡ್ವಾಣಿ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ವಿವಾಹಕ್ಕೆ ಸಜ್ಜಾಗಿದ್ದಾರೆ.
ಕಳೆದ ಎರಡು ಮೂರು ವರ್ಷಗಳಿಂದಲೂ ಸಿದ್ಧಾರ್ಥ್ ಹಾಗೂ ಕಿಯಾರಾ ಅಡ್ವಾಣಿ ಪ್ರೀತಿಯಲ್ಲಿದ್ದರು. ಆದರೆ ತಮ್ಮ ಪ್ರೀತಿಯ ಬಗ್ಗೆ ಎಲ್ಲೂ ಬಹಿರಂಗವಾಗಿ ಹೇಳಿರಲಿಲ್ಲ. ಸಂದರ್ಶನಗಳಲ್ಲಿಯಂತೂ ನಾವಿಬ್ಬರು ಗೆಳೆಯರಷ್ಟೆ ಎಂದೇ ಹೇಳಿಕೊಂಡಿದ್ದರು. ಆದರೆ ಈಗ ಅವರಿಬ್ಬರ ಪ್ರೇಮ ಪ್ರಕರಣ ವಿವಾಹ ಮಂಟಪದ ಬಳಿ ಬಂದು ನಿಂತಿದೆ.
ಸಿದ್ಧಾರ್ಥ್ ಹಾಗೂ ಕಿಯಾರಾ ಅಡ್ವಾಣಿಯ ವಿವಾಹಕ್ಕೆ ಸಕಲ ಸಿದ್ಧತೆ ಆಗಿದ್ದು, ಅತಿಥಿಗಳ ಆಹ್ವಾನವಷ್ಟೆ ಬಾಕಿ ಇದೆ ಎನ್ನಲಾಗುತ್ತಿದೆ. ರಾಜಸ್ಥಾನದ ಜೈಸಲ್ಮೇರ್‌ನ ಐಶಾರಾಮಿ ಅರಮನೆ ಹೋಟೆಲ್‌ನಲ್ಲಿ ಕಿಯಾರಾ-ಸಿದ್ಧಾರ್ಥ್ ವಿವಾಹ ನಡೆಯಲಿದೆ. ಆ ಬಳಿಕ ಮುಂಬೈನ ಐಶಾರಾಮಿ ಹೋಟೆಲ್‌ನಲ್ಲಿ ಅದ್ಧೂರಿ ರಿಸೆಪ್ಷನ್ ನಡೆಯಲಿದೆ.

ಕಿಯಾರಾ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ಹಲವು ವರ್ಷಗಳಿಂದಲೂ ಬಾಲಿವುಡ್‌ನಲ್ಲಿ ಸಕ್ರಿಯವಾಗಿದ್ದು ಇಬ್ಬರ ಮದುವೆಗೆ ಇಡೀ ಬಾಲಿವುಡ್ ಆಗಮಿಸಲಿದೆ ಎನ್ನಲಾಗುತ್ತಿದೆ.
ಇಷ್ಟು ದಿನ ತಮ್ಮ ಪ್ರೀತಿಯನ್ನು ಮುಚ್ಚಿಟ್ಟಂತೆ ಮದುವೆಯನ್ನೂ ಸಹ ಹೆಚ್ಚು ಪ್ರಚಾರವಿಲ್ಲದೆ ಸರಳವಾಗಿ ಮುಗಿಸಲು ಕಿಯಾರಾ-ಸಿದ್ಧಾರ್ಥ್ ಯೋಚಿಸಿದ್ದಾರೆ. ಅಂತೆಯೇ ಮದುವೆಯ ದಿನಾಂಕ ಇತ್ಯಾದಿಗಳನ್ನು ಬಹಿರಂಗಪಡಿಸಿಲ್ಲ. ಆದರೆ ಮೂಲಗಳ ಪ್ರಕಾರ ಇನ್ನು ಕೆಲವೇ ದಿನಗಳಲ್ಲಿ ಈ ಜೋಡಿಯ ವಿವಾಹ ನಡೆಯಲಿದೆ.
ಮದುವೆಯ ಅರಿಶಿಣ, ಮೆಹಂದಿ ಕಾರ್ಯಕ್ರಮಗಳಿಗೆ ಬಾಲಿವುಡ್‌ನ ಜನಪ್ರಿಯ ಗಾಯಕರನ್ನು ಬುಕ್ ಮಾಡಲಾಗಿದೆ. ಕಾಕ್‌ಟೇಲ್ ಪಾರ್ಟಿ ಹಾಗೂ ಇನ್ನಿತರ ಪಾರ್ಟಿಗಳನ್ನು ಒಳಗೊಂಡಿರುವ ಈ ಮದುವೆ ಸುಮಾರು ಮೂರು ದಿನ ಜೈಸ್ಮೆಲರ್‌ನಲ್ಲಿ ನಡೆಯಲಿದೆ.


Click it and Unblock the Notifications











