ಆರಕ್ಷತೆಯಲ್ಲಿ ಕಿಯಾರಾ ಡ್ರೆಸ್ ನೋಡಿ ಇದು ಅವಾರ್ಡ್ ಶೋನಾ ಅಥವಾ ಆರಕ್ಷತೆಯಾ ಎಂದ ನೆಟ್ಟಿಗರು!

ಬಾಲಿವುಡ್ ಜೋಡಿ ಹಕ್ಕಿಗಳಾದ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಫೆಬ್ರವರಿ 7ರಂದು ರಾಜಸ್ಥಾನದ ಸೂರ್ಯಗಢ ಅರಮನೆಯಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಇವರಿಬ್ಬರ ಕಲ್ಯಾಣ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ನಡೆದಿತ್ತು. ಫೆಬ್ರವರಿ 12ರಂದು ಈ ಜೋಡಿ ಮುಂಬೈನಲ್ಲಿ ರಿಸೆಪ್ಶನ್ ಮಾಡಿಕೊಂಡಿದ್ದಾರೆ. ಇದೀಗ ಆರತಕ್ಷತೆಯಲ್ಲಿ ಕಿಯಾರಾ ಅಡ್ವಾಣಿ ಧರಿಸಿದ್ದ ಉಡುಗೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ನಟ-ನಟಿಯರು ತಮ್ಮ ಮದುವೆ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಧರಿಸುವ ಉಡುಗೆಯ ಬಗ್ಗೆ ಅವರ ಅಭಿಮಾನಿಗಳಿಗೆ ಸಖತ್ ಕ್ಯೂರಿಯಾಸಿಟಿ ಇರುತ್ತದೆ. ಸದ್ಯ ಮುಂಬೈನಲ್ಲಿ ನಡೆದ ಆರತಕ್ಷತೆ ಪಾರ್ಟಿಗೆ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಬ್ಲ್ಯಾಕ್ ಅಂಡ್ ವೈಟ್ ಥೀಮ್‌ ಕಾಸ್ಟ್ಯೂಮ್‌ನಲ್ಲಿ ರೆಡಿಯಾಗಿದ್ದರು. ಸಿದ್ದಾರ್ಥ್ ಬ್ಲ್ಯಾಕ್‌ ಕಲರ್ ಫುಲ್ ನೆಕ್ ಟಿ ಶರ್ಟ್ ಹಾಗೂ ಅದರ ಮೇಲೆ ಗ್ಲಿಟರ್ ಜಾಕೆಟ್ ತೊಟ್ಟು ಕಂಗೊಳಿಸಿದರು. ಕಿಯಾರಾ ಅಡ್ವಾಣಿ ಕಪ್ಪು ಮತ್ತು ಬಿಳಿ ಬಣ್ಣದ ವೆಲ್ವೆಟ್ ಡೀಪ್ ನೆಕ್ ಗೌನ್ ಜೊತೆಗೆ ಪಚ್ಚೆ ಬಣ್ಣದ ನೆಕ್ಲೆಸ್ ಧರಿಸುವ ಮೂಲಕ ಸಾಂಪ್ರದಾಯಕ ಲುಕ್ ಕೊಟ್ಟಿದ್ದರು. ಜೊತೆಗೆ ಸಿಂಪಲ್ ಮೇಕಪ್ ನೊಂದಿಗೆ ಪೋನಿ ಹಾಕಿದ್ದರು. ಇಬ್ಬರು ಪಕ್ಕಾ ಪಾರ್ಟಿ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಕಿಯಾರ ಧರಿಸಿದ್ದ ಡ್ರೆಸ್ ಟ್ರೊಲ್ಗೆ ಒಳಗಾಗಿದೆ.

sidharth and kiara advani reception

ಅವಾರ್ಡ್ ಶೋನಾ ಅಥವಾ ಆರಕ್ಷತೆಯಾ ಎಂದ ನೆಟ್ಟಿಗರು

ಕಿಯಾರಾ ಅಡ್ವಾಣಿ ತಮ್ಮ ಆರತಕ್ಷತೆಯಲ್ಲಿ ಸಿಂಧೂರ ಮತ್ತು ಮಂಗಳಸೂತ್ರ ಧರಿಸಿರಲಿಲ್ಲ. ಜೊತೆಗೆ ಬ್ಲ್ಯಾಕ್ ಆಂಡ್ ವೈಟ್ ಗೌನ್ ಧರಿಸಿದ್ದರು. ಇದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ಇದು ಅವಾರ್ಡ್ ಶೋನಾ ಅಥವಾ ಆರಕ್ಷತೆಯಾ? ಎಂದು ಪ್ರಶ್ನಿಸಿದ್ದಾರೆ. ಓರ್ವ ನಮ್ಮ ಸಂಪ್ರದಾಯ ಬಣ್ಣಗಳಿಂದ ಕೂಡಿದೆ. ಆದರೆ, ಕಿಯಾರಾ ಬ್ಲ್ಯಾಕ್ ಆಂಡ್ ವೈಟ್ ಗೌನ್ ಧರಿಸಿದ್ದಾರೆ. ನನ್ನ ಪ್ರಕಾರ ಅವರು ತಮ್ಮ ಡಿಸೈನರ್ ಅನ್ನು ಬದಲಿಸಬೇಕಿದೆ ಎಂದಿದ್ದಾನೆ. ಮತ್ತೋರ್ವ ಇದು ಆಸ್ಕರ್ ಅವಾರ್ಡ್ ಅಥವಾ ರಿಸೆಪ್ಷನ್ ಕಾರ್ಯಕ್ರಮವೋ ತಿಳಿಯುತ್ತಿಲ್ಲ. ಬಾಲಿವುಡ್ ಮಂದಿ ಏನು ಮತ್ತು ಯಾವಾಗ ಧರಿಸಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಿ ಎಂದಿದ್ದಾರೆ.

sidharth and kiara advani reception

ಆರತಕ್ಷತೆಯಲ್ಲಿ ತಾರೆಯರ ದಂಡು

ಸಿದ್ಧ್ ಕಿಯಾರಾ ರಿಸೆಪ್ಷನ್ ಪಾರ್ಟಿಗೆ ಆಲಿಯಾ ಭಟ್, ಅಜಯ್ ದೇವಗನ್ ಹಾಗೂ ಕಾಜೋಲ್ ದಂಪತಿ ರಾಶಿ ಖನ್ನಾ, ಕೃತಿ ಸನೂನ್, ರಕುಲ್ ಪ್ರೀತ್‌ಸಿಂಗ್, ವಿದ್ಯಾಬಾಲನ್, ನಟ ವಿವೇಕ್ ಒಬೆರಾಯ್ ದಂಪತಿ, ಹಿರಿಯ ನಟ ಅನುಪಮ್ ಖೇರ್ ಸೇರಿದಂತೆ ಸಾಕಷ್ಟು ಜನ ಬಾಲಿವುಡ್ ತಾರೆಯರು ಭಾಗಿಯಾಗಿದ್ದರು.

More from Filmibeat

English summary
idharth and kiara advani reception: Kiara Advani Gets Trolled For Her Black And White Dress,Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X