ಸಿದ್ದಾರ್ಥ್- ಕಿಯಾರಾ ಅದ್ಧೂರಿ ರಿಸೆಪ್ಷನ್ ಪಾರ್ಟಿ: ಧರೆಗಿಳಿದ ಬಾಲಿವುಡ್ ತಾರಾಲೋಕ

ರಾಜಸ್ಥಾನದ ಜೈಸಲ್ಮೇರ್‌ನ ಪ್ಯಾಲೆಸ್‌ ಸೂರ್ಯಗಢದಲ್ಲಿ ಇತ್ತೀಚೆಗೆ ಬಾಲಿವುಡ್ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅದ್ವಾನಿ ಹಸೆಮಣೆ ಏರಿದ್ದರು. ಮದುವೆ ವಿಚಾರವನ್ನು ಬಹಳ ರಹಸ್ಯವಾಗಿಯೇ ಇಟ್ಟಿದ್ದ ಜೋಡಿ ಕೊನೆಗೆ ಫೋಟೊಗಳನ್ನು ಶೇರ್ ಮಾಡಿ ವಿವಾಹ ಬಂಧನಕ್ಕೆ ಒಳಗಾಗಿರುವ ಸುದ್ದಿಯನ್ನು ಬಹಿರಂಗಪಡಿಸಿದ್ದರು. ಮುಂಬೈನಲ್ಲಿ ಕಳೆದ ರಾತ್ರಿ ಸಿದ್ದ್‌ಕಿಯಾರಾ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ನಡೆದಿದೆ.

'ಶೇರ್ಷಾ' ಸಿನಿಮಾದಲ್ಲಿ ಜೋಡಿ ಒಟ್ಟಿಗೆ ನಟಿಸಿತ್ತು. ಆದರೆ ಅದಕ್ಕೂ ಮೊದಲು ಪಾರ್ಟಿಯೊಂದರಲ್ಲಿ ಮೊದಲ ಬಾರಿಗೆ ಸಿದ್ದ್‌ಕಿಯಾರಾ ಭೇಟಿ ಆಗಿದ್ದರು. ಆ ಪರಿಚಯ ಮದುವೆವರೆಗೂ ಕರೆದುಕೊಂಡು ಬಂದಿದೆ. ಬಹಳ ಅದ್ಧೂರಿಯಾಗಿ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟಿತ್ತು. ಚಿತ್ರರಂಗದ ಆಪ್ತರು ಹಾಗೂ ಕುಟುಂಬ ಸದಸ್ಯರು ವಿವಾಹ ಮಹೋತ್ಸವದಲ್ಲಿ ಭಾಗಿ ಆಗಿದ್ದರು. ಆ ಫೋಟೊಗಳು, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಇನ್ನು ನಿನ್ನೆ ನಡೆದ ರಿಸೆಪ್ಷನ್‌ ಪಾರ್ಟಿಗೂ ಬಾಲಿವುಡ್ ತಾರೆಯರು ಹಾಜರಾಗಿ ನವ ಜೋಡಿಗೆ ಶುಭ ಹಾರೈಸಿದ್ದಾರೆ.

ಭಾರೀ ಆರ್ಭಟ ಇಲ್ಲದೇ ಕೆಲವೇ ಆಪ್ತರ ಸಮ್ಮುಖದಲ್ಲಿ ಹಸೆಮಣೆ ಏರಿದ್ದ ಜೋಡಿ ರಿಸೆಪ್ಷನ್‌ಗೆ ಮಾತ್ರ ಚಿತ್ರರಂಗದ ಗಣ್ಯರಿಗೆಲ್ಲಾ ಆಹ್ವಾನ ನೀಡಿತ್ತು. ಆಲಿಯಾ ಭಟ್, ಕಾಜೋಲ್ - ಅಜಯ್ ದೇವಗನ್ ದಂಪತಿ ಸೇರಿದಂತೆ ಸಾಕಷ್ಟು ಗಣ್ಯರು ಕಾರ್ಯಕ್ರಮದಲ್ಲಿ ಹಾಜರಾಗಿದ್ದರು.

ಮಿರಿ ಮಿರಿ ಮಿಂಚಿದ ನವಜೋಡಿ

ಮಿರಿ ಮಿರಿ ಮಿಂಚಿದ ನವಜೋಡಿ

ಮದುವೆ ನಂತರ ದೆಹಲಿಯಲ್ಲಿ ಸೊಸೆಯನ್ನು ಮನೆಗೆ ತುಂಬಿಸಿಕೊಳ್ಳುವ ಶಾಸ್ತ್ರವೂ ಇತ್ತೀಚೆಗೆ ನಡಯಿತು. ಅದೇ ದಿನ ಅಲ್ಲಿ ಕೆಲ ಆಪ್ತರಿಗೆ ರಿಸೆಪ್ಷನ್ ಪಾರ್ಟಿ ಏರ್ಪಡಿಸಲಾಗಿತ್ತು. ಮುಂಬೈನಲ್ಲಿ ನಡೆದ ರಿಷೆಪ್ಷನ್‌ ಪಾರ್ಟಿಗೆ ಬ್ಲ್ಯಾಕ್ ಅಂಡ್ ವೈಟ್ ಥೀಮ್‌ ಕಾಸ್ಟ್ಯೂಮ್‌ನಲ್ಲಿ ಸಿದ್ದ್‌ಕಿಯಾರಾ ಜೋಡಿ ರೆಡಿ ಆಗಿತ್ತು. ಕಿಯಾರಾ ವೈಟ್ ಅಂಡ್ ಬ್ಲ್ಯಾಕ್ ಫಿಟ್ಟಿಂಗ್ ಗೌನ್‌ನಲ್ಲಿ ಮಿಂಚಿದ್ರೆ, ಸಿದ್ದಾರ್ಥ್ ಬ್ಲ್ಯಾಕ್‌ ಕಲರ್ ಜಾಕೆಟ್ ತೊಟ್ಟು ಕಂಗೊಳಿಸಿದರು. ಇನ್ನು ಪಾರ್ಟಿಗೆ ಬಂದ ಅತಿಥಿಗಳಿಗೆ ಬಗೆ ಬಗೆಯ ಭಕ್ಷ್ಯ ಭೋಜನ ಸಿದ್ಧವಾಗಿತ್ತು.

ರಿಸೆಪ್ಷನ್ ಪಾರ್ಟಿಗೆ ಆಲಿಯಾ ಭಟ್

ರಿಸೆಪ್ಷನ್ ಪಾರ್ಟಿಗೆ ಆಲಿಯಾ ಭಟ್

ನವ ಜೋಡಿ ಮುಂದೆ ನಿಂತು ಮುಂಬೈನ ಸ್ಟಾರ್ ಹೋಟೆಲ್‌ನಲ್ಲಿ ನಡೆದ ರಿಸೆಪ್ಷನ್ ಪಾರ್ಟಿ ಏರ್ಪಡಿಸಿದ್ದರು. ಅದಕ್ಕಾಗಿ ಒಂದು ದಿನ ಮೊದಲೇ ದೆಹಲಿಯಿಂದ ಮುಂಬೈಗೆ ಬಂದಿತ್ತು ಜೋಡಿ. ಇನ್ನು ರಿಸೆಪ್ಷನ್ ಪಾರ್ಟಿಗೆ ಆಲಿಯಾ ಭಟ್ ಬಂದಿದ್ದರು. ಇತ್ತೀಚೆಗೆ ಒಂದು ಮಗುವಿನ ತಾಯಿಯಾಗಿರುವ ಆಲಿಯಾ ಮಗಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಪಾರ್ಟಿಗೆ ಪಾರದರ್ಶಕ ಸೀರೆಯಲ್ಲಿ ಆಕೆ ಬಂದಿದ್ದರು. ಪತಿ ರಣ್‌ಬೀರ್ ಬಂದಿರಲಿಲ್ಲ. ಸ್ನೇಹಿತ ನಿರ್ದೇಶಕ ಆಯಾನ್ ಮುಖರ್ಜಿ ಜೊತೆ ಆಲಿಯಾ ಕ್ಯಾಮರಾಗೆ ಪೋಸ್ ನೀಡಿದ್ದಾರೆ.

ಅಜಯ್- ಕಾಜೋಲ್ ದಂಪತಿ

ಅಜಯ್- ಕಾಜೋಲ್ ದಂಪತಿ

ಅಜಯ್ ದೇವಗನ್ ಹಾಗೂ ಕಾಜೋಲ್ ದಂಪತಿ ಕೂಡ ಆಗಮಿಸಿ ಸಿದ್ಧ್ ಕಿಯಾರಾ ಜೋಡಿಗೆ ಶುಭ ಹಾರೈಸಿದರು. ಅಜಯ್ ಸೂಟ್‌ನಲ್ಲಿ ಮಿಂಚಿದರೆ ಕಾಜೋಲ್ ಬಿಳಿ ಬಣ್ಣದ ಪಾರದರ್ಶನ ಸೀರೆಯಲ್ಲಿ ಗಮನ ಸೆಳೆದರು. ಇನ್ನು ಕರೀನಾ ಕಪೂರ್, ನಿರ್ಮಾಪಕ ನಿರ್ದೇಶಕ ಕರಣ್‌ ಜೋಹರ್ ಜೊತೆ ಕಾಣಿಸಿಕೊಂಡರು. ಆದರೆ ಬಾಲಿವುಡ್‌ ಸೂಪರ್ ಸ್ಟಾರ್‌ಗಳ ಅನುಪಸ್ಥಿತಿ ಮಾತ್ರ ಎದ್ದು ಕಾಣುತ್ತಿತ್ತು.

ಕಿಯಾರಾ ಆಪ್ತ ಗೆಳತಿಯರು

ಕಿಯಾರಾ ಆಪ್ತ ಗೆಳತಿಯರು

ಸಿದ್ಧ್- ಕಿಯಾರಾ ರಿಸೆಪ್ಷನ್‌ ಪಾರ್ಟಿಗೆ ನಟಿಯರಾದ ರಾಶಿ ಖನ್ನಾ, ಕೃತಿ ಸನೂನ್, ರಕುಲ್ ಪ್ರೀತ್‌ಸಿಂಗ್, ವಿದ್ಯಾಬಾಲನ್, ನಟ ವಿವೇಕ್ ಒಬೆರಾಯ್ ದಂಪತಿ, ಹಿರಿಯ ನಟ ಅನುಪಮ್ ಖೇರ್ ಸೇರಿದಂತೆ ಸಾಕಷ್ಟು ಜನ ಬಾಲಿವುಡ್ ತಾರೆಯರು ಭಾಗಿ ಆಗಿದ್ದರು. ರಾಶಿ ಕೆಂಪು ಬಣ್ಣದ ಸೀರೆಯಲ್ಲಿ ಮಿಂಚಿದರು. ಕೃತಿ ಸನೂನ್ ಚಿನ್ನದ ಬಣ್ಣದ ಸೀರೆಯಲ್ಲಿ ಕಂಗೊಳಿಸಿದರು. ಸಿಕ್ಕಾಪಟ್ಟೆ ಅದ್ಧುರಿಯಾಗಿ ಅಷ್ಟೇ ಕಲರ್‌ಫುಲ್ ಆಗಿ ಈ ಕಾರ್ಯಕ್ರಮ ನೆರವೇರಿದೆ.

More from Filmibeat

English summary
Sidharth Malhotra and and Kiara Advani’s wedding reception: bollywood stars gracing the occasion. Kiara and Sidharth married in Rajasthan on February 7. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X