ಶಾಶ್ವತವಾಗಿ ಬುಕ್ ಆಗೋದ್ವಿ ಎನ್ನುತ್ತಾ ತನ್ನ ಮದುವೆ ಫೋಟೊಗಳನ್ನು ಹಂಚಿಕೊಂಡ ನಟಿ ಕಿಯಾರಾ ಅಡ್ವಾಣಿ

Sidharth Malhotra and Kiara Advani married; New couple shared their marriage pics on social media

ನಟಿ ಕಿಯಾರಾ ಅಡ್ವಾಣಿ ಹಾಗೂ ನಟ ಸಿದ್ಧಾರ್ಥ್ ಮಲ್ಹೋತ್ರ ಇಬ್ಬರೂ ಲವ್‌ ಮಾಡ್ತಿದ್ದಾರಂತೆ, ಡೇಟ್ ಮಾಡ್ತಿದ್ದಾರಂತೆ ಎಂಬ ಅಂತೆ ಕಂತೆಗಳ ಮೂಲಕ ಶುರುವಾದ ಈ ಬಾಲಿವುಡ್ ನಟ - ನಟಿಯ ಲವ್ ಮ್ಯಾಟರ್ ನಿಜವಾಗಿದ್ದು, ಈಗ ಮದುವೆಯ ಹಂತಕ್ಕೆ ಬಂದು ತಲುಪಿದೆ. ಹೌದು, ರಾಜಸ್ಥಾನದ ಜೈಪುರದಲ್ಲಿನ ಸೂರ್ಯಘರ್ ಪ್ಯಾಲೇಸ್‌ನಲ್ಲಿ ಕಳೆದ ಮೂರು ದಿನಗಳಿಂದ ಸಿದ್ಧಾರ್ಥ್ ಮಲ್ಹೋತ್ರ ಹಾಗೂ ಕಿಯಾರಾ ಅಡ್ವಾಣಿ ವಿವಾಹ ಮಹೋತ್ಸವ ಜರುಗುತ್ತಿದೆ.

ನಿನ್ನೆ ( ಫೆಬ್ರವರಿ 7 ) ಸಿದ್ಧಾರ್ಥ್ ಮಲ್ಹೋತ್ರ ತನ್ನ ಪ್ರೇಯಸಿ ಕಿಯಾರಾ ಅಡ್ವಾಣಿ ಕುತ್ತಿಗೆಗೆ ತಾಳಿ ಕಟ್ಟಿದ್ದು, ಬಾಲಿವುಡ್‌ನ ಈ ಕ್ಯೂಟ್ ಜೋಡಿ ಸಪ್ತಪದಿ ತುಳಿದಿದೆ. ಇಬ್ಬರ ಮದುವೆ ಕುರಿತಾದ ಹಲವು ಫೋಟೊಗಳನ್ನು ಹಂಚಿಕೊಂಡು ಹಲವು ಸೆಲೆಬ್ರಿಟಿಗಳು ಶುಭ ಕೋರಿದರೂ ಸಹ ನವಜೋಡಿ ಯಾವಾಗ ತಮ್ಮ ಮದುವೆ ಫೋಟೊಗಳನ್ನು ಹಂಚಿಕೊಳ್ಳಲಿದೆ ಎಂದು ಕಿಯಾರಾ ಹಾಗೂ ಸಿದ್ಧಾರ್ಥ್ ಅಭಿಮಾನಿಗಳು ಮತ್ತು ಬಾಲಿವುಡ್ ಸಿನಿ ರಸಿಕರು ಕಾಯುತ್ತಿದ್ದರು.

ಕೆಲ ಸಮಯದ ಕಾಯುವಿಕೆಯ ನಂತರ ಸಿದ್ಧಾರ್ಥ್ ಮಲ್ಹೋತ್ರ ಹಾಗೂ ಕಿಯಾರಾ ಅಡ್ವಾಣಿ ತಮ್ಮ ಮದುವೆ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, "ನಾವು ಇದೀಗ ಶಾಶ್ವತವಾಗಿ ಬುಕ್ ಆಗೋದ್ವಿ. ನಮ್ಮ ಮುಂದಿನ ಪಯಣಕ್ಕೆ ನಿಮ್ಮ ಪ್ರೀತಿ ಹಾಗೂ ಆಶೀರ್ವಾದದ ಅಗತ್ಯತೆ ಇದೆ" ಎಂದು ಬರೆದುಕೊಂಡಿದ್ದಾರೆ. ಸದ್ಯ ನವದಂಪತಿ ಹಂಚಿಕೊಂಡಿರುವ ಈ ಫೋಟೊಗ ಎಂಟು ಮಿಲಿಯನ್ ಲೈಕ್ಸ್ ಬಂದಿದ್ದು, ಶೀಘ್ರದಲ್ಲಿಯೇ ಕೋಟಿ ಲೈಕ್ಸ್ ಮುಟ್ಟಲಿದೆ.

ಈ ಫೋಟೊಗಳನ್ನು ಕಂಡು ಖುಷಿ ವ್ಯಕ್ತಪಡಿಸಿರುವ ಬಾಲಿವುಡ್ ಸಿನಿ ರಸಿಕರು ಕಾಮೆಂಟ್ ಮಾಡುತ್ತಿದ್ದು, ಇಬ್ಬರು ಇದೇ ರೀತಿ ಅನ್ಯೋನ್ಯವಾಗಿ ಸುಖ ಸಂಸಾರ ಮಾಡಿ ಎಂದು ಹಾರೈಸುತ್ತಿದ್ದಾರೆ.

More from Filmibeat

English summary
Sidharth Malhotra and Kiara Advani married; New couple shared their marriage pics on social media
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X