For Quick Alerts
  ALLOW NOTIFICATIONS  
  For Daily Alerts

  'ಶೇರ್ ಷಾ' ಜೋಡಿಯ ಮದುವೆ ವದಂತಿ: ಸಿದ್ಧಾರ್ಥ್ ಮಲ್ಹೋತ್ರ ಹೇಳಿದ್ದೇನು?

  |

  ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರ ಮತ್ತು ಕಿಯಾರಾ ಅಡ್ವಾಣಿ ನಡುವೆ ಪ್ರೀತಿ-ಪ್ರೇಮದ ವಿಚಾರ ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಆದರೆ ಈ ಬಗ್ಗೆ ಕಿಯಾರಾ ಅಥವಾ ಸಿದ್ಧಾರ್ಥ್ ಎಲ್ಲಿಯೂ ಬಹಿರಂಗ ಪಡಿಸಿಲ್ಲ. ಇಬ್ಬರು ಫ್ರೆಂಡ್ಸ್ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಇತ್ತೀಚಿಷ್ಟೆ ಸಿದ್ಧಾರ್ಥ್ ಮತ್ತು ಕಿಯಾರಾ ನಟನೆಯ ಶೇರ್ ಷಾ ಸಿನಿಮಾ ಬಿಡುಗಡೆಯಾಗಿದ್ದು ಈ ಸಿನಿಮಾದಲ್ಲಿ ಇಬ್ಬರ ಕೆಮಿಸ್ಟ್ರಿ ಅಭಿಮಾನಿಗಳ ಹೃದಯ ಗೆದ್ದಿದೆ.

  ಈ ಸಿನಿಮಾ ಬಳಿಕ ಇಬ್ಬರ ಮದುವೆ ವದಂತಿಗೆ ಮತ್ತಷ್ಟು ಪುಷ್ಟಿಸಿಕ್ಕಿದೆ. ಆನ್ ಸ್ಕ್ರೀನ್ ಹಾಗೆ ಆಫ್ ಸ್ಕ್ರೀನ್‌ನಲ್ಲೂ ಇಬ್ಬರ ಕೆಮಿಸ್ಟ್ರಿ ಅಭಿಮಾನಿಗಳ ಗಮನಸೆಳೆದಿದ್ದು, ಇಬ್ಬರ ಮದುವೆ ಯಾವಾಗ ಎನ್ನುವ ಪ್ರಶ್ನೆ ಕೇಳಿಬರುತ್ತಿದೆ. ಸಿದ್ಧಾರ್ಥ್ ಮತ್ತು ಕಿಯಾರಾ ಇಬ್ಬರು ಎಲ್ಲೇ ಹೋದರು ಈ ಪ್ರಶ್ನೆ ಎದುರಾಗುತ್ತಿದೆ. ಆದರೆ ಈ ಬಗ್ಗೆ ಸಿದ್ಧಾರ್ಥ್ ಮತ್ತು ಕಿಯಾರಾ ಅವರನ್ನು ಪ್ರಶ್ನೆ ಮಾಡಿದರೆ ಇದು ಕೇವಲ ಗಾಸಿಪ್ ಅಷ್ಟೆ ಎಂದು ಹೇಳುತ್ತಿದ್ದಾರೆ. ಇತ್ತೀಗಷ್ಟೆ ಸಿದ್ಧಾರ್ಥ್ ಸಂದರ್ಶನದಲ್ಲಿ ತನ್ನ ಮದುವೆ ಬಗ್ಗೆ ಮಾತನಾಡಿದ್ದಾರೆ.

  ವಿವಾಹದ ಬಗ್ಗೆ ಕೇಳಿದಾಗ ಸಿದ್ಧಾರ್ಥ್, "ಈ ಬಗ್ಗೆ ಇನ್ನು ನನಗೆ ಗೊತ್ತಿಲ್ಲ. ನಾನು ಜ್ಯೋತಿಷಿ ಅಲ್ಲ. ಅದು ಯಾವಾಗ ಸಂಭವಿಸುತ್ತದೆಯೋ ಆಗ ನಾನೆ ಎಲ್ಲರಿಗೂ ತಿಳಿಸುತ್ತೇನೆ. ಇದಕ್ಕೆ ಯಾವುದೇ ಟೈಮ್ ಲೈನ್ ಇಲ್ಲ" ಎಂದು ಹೇಳಿದ್ದಾರೆ.

  ಸಿದ್ಧಾರ್ಥ್ ಜೊತೆಗಿನ ಬಾಂಧವ್ಯದ ಬಗ್ಗೆ ಈ ಹಿಂದೆ ಕಿಯಾರಾ, "ಸಿದ್ಧಾರ್ಥ್ ನನಗೆ ತುಂಬಾ ಕ್ಲೋಸ್ ಫ್ರೆಂಡ್. ತನ್ನ ಪಾತ್ರಕ್ಕಾಗಿ ಸಿಕ್ಕಾಪಟ್ಟೆ ಸಿದ್ಧತೆ ನಡೆಸುತ್ತಾರೆ. ಅವರ ಜೊತೆ ಇದ್ದರೆ ಸಿಕ್ಕಾಪಟ್ಟೆ ಫನ್ ಇರುತ್ತದೆ" ಎಂದು ಹೇಳಿದ್ದರು. ಮದುವೆ ವದಂತಿ ಜೋರಾಗಿ ಕೇಳಿಬರುತ್ತಿದ್ದರೂ ಇಬ್ಬರು ಸ್ನೇಹಿತರಷ್ಟೆ ಎಂದು ಹೇಳುವ ಈ ಜೋಡಿ ಯಾವಾಗ ಸಿಹಿ ಸುದ್ದಿ ಹಂಚಿಕೊಳ್ಳಲಿದ್ದಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

  ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೇ, ಕಿಯಾರಾ ಸದ್ಯ ಹಿಂದಿಯಲ್ಲಿ ಭೂಲ್ ಭುಲೈಯಾ 2ನಲ್ಲಿ ನಟಿಸುತ್ತಿದ್ದಾರೆ. ಕಾಮಿಡಿ ಸಿನಿಮಾ ಇದಾಗಿದ್ದು ನವೆಂಬರ್ 19ರಂದು ತೆರೆಗೆ ಬರಲು ಸಿದ್ಧವಾಗಿದೆ. ಇನ್ನು ರಾಮ್ ಚರಣ್ ಮತ್ತು ಖ್ಯಾತ ನಿರ್ದೇಶಕ ಶಂಕರ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಇನ್ನು ಹೆಸರಿಡದ 3ಡಿ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಕಿಯಾರಾ ನಾಯಕಿಯಾಗಿ ನಟಿಸುತ್ತಿದ್ದಾರೆ.

  ಸಿದ್ಧಾರ್ಥ್ ಮಲ್ಹೋತ್ರಾ ಇತ್ತೀಚಿಗಷ್ಟೆ ವಿಷನ್ ಮಜ್ನು ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಥ್ಯಾಂಕ್ ಗಾಡ್ ಸಿನಿಮಾ ಸೇರಿದಂತೆ ಇನ್ನು ಅನೇಕ ಸಿನಿಮಾಗಳು ಸಿದ್ಧಾರ್ಥ್ ಬಳಿ ಇವೆ.

  English summary
  Bollywood Actor Sidharth Malhotra talks about his marriage plan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X