ಬಿಟೌನ್‌ಗೆ ಹಾರಿದ ರಶ್ಮಿಕಾ ಮಂದಣ್ಣ: ಸಿದ್ಧಾರ್ಥ್ ಮಲ್ಹೋತ್ರ ಹೇಳಿದ್ದೇನು?
ಸೌತ್ ಇಂಡಸ್ಟ್ರಿಯಲ್ಲಿ ಮೋಡಿ ಮಾಡುತ್ತಿರುವ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌ಗೆ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ದಕ್ಷಿಣದ ಸ್ಟಾರ್ ನಟರ ಜೊತೆ ನಟಿಸಿ ಸೈ ಎನಿಸಿಕೊಂಡ ನಟಿ ಈಗ ಬಿಗ್ ಇಂಡಸ್ಟ್ರಿಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
Recommended Video
ಸಿದ್ಧಾರ್ಥ್ ಮಲ್ಹೋತ್ರ ನಟಿಸುತ್ತಿರುವ ಥ್ರಿಲ್ಲರ್ ಸಿನಿಮಾ ಮಿಷನ್ ಮಜ್ನುದಲ್ಲಿ ನಾಯಕಿಯಾಗಿ ರಶ್ಮಿಕಾ ನಟಿಸುತ್ತಿದ್ದಾರೆ. ಈ ಸುದ್ದಿಯನ್ನು ಸ್ವತಃ ರಶ್ಮಿಕಾ ತಮ್ಮ ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.
ರಶ್ಮಿಕಾ ಮಂದಣ್ಣ ಬಾಲಿವುಡ್ ಪ್ರವೇಶಿಸುತ್ತಿರುವುದಕ್ಕೆ ದಕ್ಷಿಣ ಇಂಡಸ್ಟ್ರಿಯ ಕೆಲವು ನಟ-ನಟಿಯರು ಶುಭಕೋರಿದ್ದಾರೆ. ಮೊದಲ ಬಾರಿಗೆ ಹಿಂದಿ ಚಿತ್ರದಲ್ಲಿ ನಟಿಸುತ್ತಿರುವ ರಶ್ಮಿಕಾಗೆ ಸಿದ್ಧಾರ್ಥ್ ಮಲ್ಹೋತ್ರ ಸಹ ಸ್ವಾಗತಿಸಿದ್ದು, ಮಿಷನ್ ಮಜ್ನು ತಂಡದ ಜೊತೆ ನಿಮ್ಮನ್ನು ನೋಡಲು ಖುಷಿಯಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

''ಸ್ವಾಗತ ರಶ್ಮಿಕಾ....ಮಿಷನ್ ಮಜ್ನು ತಂಡದ ಜೊತೆ ನಿಮ್ಮ ನೋಡಲು ಖುಷಿಯಾಗುತ್ತದೆ. ಆದಷ್ಟೂ ಬೇಗ ಸಿಗೋಣ'' ಎಂದು ಸಿದ್ಧಾರ್ಥ್ ಮಲ್ಹೋತ್ರಾ ಟ್ವೀಟ್ ಮಾಡಿದ್ದಾರೆ.
ಅಂದ್ಹಾಗೆ, 'ಮಿಷನ್ ಮಜ್ನು' ಸಿನಿಮಾ ನೈಜ ಘಟನೆ ಆಧಾರಿತ ಸಿನಿಮಾ ಇದಾಗಿದ್ದು, ಶಾಂತನು ಬಾಗ್ಚಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶಾಂತನು ಮೊದಲ ಸಿನಿಮಾ ಇದು. ಮತ್ತೊಂದೆಡೆ ಚೊಚ್ಚಲ ಸಿನಿಮಾಗೂ ಮೊದಲೇ ಹಿಂದಿಯ ಆಲ್ಬಂ ಹಾಡೊಂದರಲ್ಲಿ ರಶ್ಮಿಕಾ ಹೆಜ್ಜೆ ಹಾಕಿದ್ದಾರೆ. ಹಿಂದಿಯ ಖ್ಯಾತ Rapper ಬಾದ್‌ಶಾ ನಿರ್ಮಾಣದ ಹೊಸ ಹಾಡಿನಲ್ಲಿ ರಶ್ಮಿಕಾ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಾಡಿನ ಚಿತ್ರೀಕರಣ ಚಂಢೀಗಡದಲ್ಲಿ ನಡೆಯುತ್ತಿದೆ.


Click it and Unblock the Notifications











