58ನೇ ವಯಸ್ಸಿನಲ್ಲಿ ಗರ್ಭಿಣಿಯಾದ ಸಿಧು ಮೂಸೆವಾಲಾ ತಾಯಿ ? ಬದಾಯೊ ಹೋ ಎಂದ ಬಣ್ಣದ ಲೋಕ..!
ಭಾರತದಂತಹ ರಾಷ್ಟ್ರದಲ್ಲಿ ಲೈಂಗಿಕತೆಯ ಕುರಿತಾಗಿ, ಕುಟುಂಬ ಯೋಜನೆಯ ಕುರಿತಾಗಿ ಮುಕ್ತವಾಗಿ ಮಾತನಾಡುವ ಪರಿಸ್ಥಿತಿ ಅಗತ್ಯಕ್ಕಿಂತ ಹೆಚ್ಚೇ ಇದೆ. ಇಂಥದ್ದೇ ಸಂದಿಗ್ಧ ಸಮಸ್ಯೆಯಲ್ಲಿ ಸಿಲುಕುವ ಕುಟುಂಬವೊಂದರ ಕಥೆಯನ್ನು ಬದಾಯಿ ಹೋ ಸಿನಿಮಾದಲ್ಲಿ ತೋರಿಸಲಾಗಿತ್ತು. ಇದೀಗ ಆ ಚಿತ್ರದ ಕಥೆಯನ್ನೇ ಹೋಲುವಂತಹ ಘಟನೆ ನಡೆದಿದೆ. ಅದು ಖ್ಯಾತ ಗಾಯಕ ಸಿಧು ಮೂಸೆ ವಾಲಾ ಕುಟುಂಬದಲ್ಲಿ ಅನ್ನುವುದು ಇಂಟ್ರೆಸ್ಟಿಂಗ್ ವಿಷ್ಯ.
ಹೌದು, ಗಾಯನದಿಂದ ರಾಜಕೀಯದತ್ತ ಮುಖ ಮಾಡಿದ್ದವರು ಸಿಧು ಮೂಸೆವಾಲಾ. ತನ್ನ ಚಿನ್ನದಂತ ಕಂಠದ ಮೂಲಕ ಕೇವಲ ಭಾರತದಲ್ಲಿ ಅಷ್ಟೇ ಅಲ್ಲ ದೇಶ ವಿದೇಶದೆಲ್ಲೆಡೆ ಅಭಿಮಾನಿಗಳನ್ನ ಹೊಂದಿದ್ದ ಸಿಧು ಮೂಸೆವಾಲಾ ಅವರನ್ನ 2022 ರ ಮೇ 29 ರಂದು ಕೊಲೆ ಮಾಡಲಾಗಿತ್ತು.

ಇನ್ನೂ ಅದೇ ವರ್ಷ ಮಾನ್ಸಾದಿಂದ ಸಿಧು ಕಾಂಗ್ರೆಸ್ ನಿಂದ ಚುನಾವಣೆ ಅಖಾಡಕ್ಕೆ ಇಳಿದಿದ್ದರು. ಪಂಜಾಬಿ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಆದರೆ ಸೋತಿದ್ದರು. ಸಿಧು ಮೂಸೆವಾಲಾ ಅಕಾಲಿಕ ಮರಣದ ನಂತರವೂ ಕೂಡ ಅನೇಕ ಹಾಡುಗಳು ಬಿಡುಗಡೆಗೊಂಡು ಚಾರ್ಟ್ ಬಸ್ಟರ್ ಲಿಸ್ಟ್ ಸೇರಿಕೊಂಡಿದ್ದವು. ಅತ್ಯಲ್ಪ ಅವಧಿಯಲ್ಲಿಯೇ ಖ್ಯಾತಿಯ ತುತ್ತ ತುದಿಗೆ ತಲುಪಿ, ಕಣ್ಮರೆಯಾದ ಸಿದ್ದು ತಮ್ಮ ಕುಟುಂಬಕ್ಕೆ ಏಕೈಕ ಆಸರೆಯೂ ಆಗಿದ್ದರು.
ಆದರೆ ಈಗ ಸಿದ್ದು ಇಲ್ಲ. ಅವರ ತಾಯಿ ಚರಣ್ ಕೌರ್ ಗೆ ಈಗ 58ರ ಪ್ರಾಯ. ಇನ್ನೂ ತಂದೆ ಬಲ್ಕರ್ ಸಿಂಗ್ ವಯಸ್ಸು 60ರ ಗಡಿಯನ್ನ ದಾಟಿದೆ. ಮಗನ ನೆನಪಿನಲ್ಲಿಯೇ ಬದುಕಿನ ಬಂಡಿಯನ್ನ ಎಳೆಯುತ್ತಿರುವ ಇವರಿಬ್ಬರೂ ಈಗ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗೊಂದು ಸುದ್ದಿ ಸದ್ಯಕ್ಕೆ ಪಂಜಾಬ್ ನಲ್ಲಿ ಕೇಳಿ ಬರುತ್ತಿದೆ

ಸಿದ್ದು ಮೂಸ್ ವಾಲಾ ಅವರ ಪೋಷಕರು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡದಿದ್ದರೂ, ಶೀಘ್ರದಲ್ಲೇ ಹೆರಿಗೆಯ ನಿರೀಕ್ಷೆಯಿದೆ ಎಂಬ ಮಾತು ವ್ಯಾಪಕವಾಗಿ ಹಬ್ಬಿದೆ. ಇನ್ನೂ ಸಿದ್ದು ತಾಯಿ ಚರಣ್ ಕೌರ್ ಕಳೆದ 06 ತಿಂಗ್ಳಿಂದ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿಲ್ಲ. ಈ ಕಾರಣಕ್ಕೆ ಅನುಮಾನ ಇನ್ನೂ ದಟ್ಟವಾಗಿದೆ.
2017ರಲ್ಲಿ ಸಂಚಲನ ಸೃಷ್ಟಿಸಿದ್ದ ಸಿದ್ದು..!
2017 ರಲ್ಲಿ, ಸಿದ್ದು ಮೂಸೆವಾಲಾ ತಮ್ಮ ಮೊದಲ ಹಾಡು 'ಜಿ ವ್ಯಾಗನ್' ನೊಂದಿಗೆ ಸಂಗೀತ ಉದ್ಯಮಕ್ಕೆ ಪಾದಾರ್ಪಣೆ ಮಾಡಿದ್ದರು. ಅಲ್ಲಿಂದಾಚೆ ಹಿಂದೆ ತಿರುಗಿ ನೋಡದ ಸಿದ್ದು ಅಪಾರ ಜನಪ್ರಿಯತೆ ಗಳಿಸಿದರು. 'ಲೆಜೆಂಡ್', 'ಸೋ ಹೈ', '295' ಮತ್ತು 'ದಿ ಲಾಸ್ಟ್ ರೈಡ್' ಮುಂತಾದ ಇವರ ಕೆಲವು ಅತ್ಯುತ್ತಮ ಹಾಡುಗಳು


Click it and Unblock the Notifications











