ನೂರಾರು ಕೋಟಿ ಗಳಿಸುವ ನಿರ್ಮಾಪಕರು ಗಾಯಕರಿಗೆ ಸಂಭಾವನೆ ಕೊಡುವುದಿಲ್ಲ!
ಬಾಲಿವುಡ್ ಗಾಯಕರಿಗೆ ಸಂಭಾವನೆ ಹೆಚ್ಚು ಎಂಬುದೇ ಬಹುತೇಕರ ನಂಬಿಕೆ, ನಿಜವೆಂದರೆ ಬಾಲಿವುಡ್ ಸಿನಿಮಾಗಳಿಗೆ ಹಾಡು ಹಾಡಿದರೆ ಗಾಯಕರಿಗೆ ಸಂಭಾವನೆಯನ್ನೇ ಕೊಡುವುದಿಲ್ಲವಂತೆ!
ಸ್ವತಃ ಖ್ಯಾತ ಗಾಯಕಿಯೊಬ್ಬರು ಈ ವಿಷಯವನ್ನು ಹೊರಗೆಡವಿದ್ದು, ''ಬಾಲಿವುಡ್ ಸಿನಿಮಾಗಳಿಗೆ ಹಾಡಿದರೆ ಹಣ ಕೊಡುವುದಿಲ್ಲ'' ಎಂದು ಸತ್ಯ ಬಿಚ್ಚಿಟ್ಟಿದ್ದಾರೆ.
ಸ್ವತಃ ಗಾಯಕಿಯಾಗಿ ಸಾಕಷ್ಟು ಖ್ಯಾತಿ ಗಳಿಸಿರುವ ನೇಹಾ ಕಕ್ಕರ್ ಈ ವಿಷಯವನ್ನು ಹೇಳಿರುವುದು ಹಲವರ ಹುಬ್ಬೇರಿಸಿದೆ. ಕೋಟ್ಯಂತರ ಖರ್ಚು, ನೂರಾರು ಕೋಟಿ ಗಳಿಸುವ ಬಾಲಿವುಡ್ ಸಿನಿಮಾಗಳ ನಿರ್ಮಾಪಕರು ಗಾಯಕರಿಗೆ ಹಣ ನೀಡುವುದಿಲ್ಲವೇ ಎಂದು ಸಿನಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ.

ಹಾಡಿದ ಹಾಡಿಗೆ ಸಂಭಾವನೆ ಕೊಡಲ್ಲ: ನೇಹಾ
''ಗಾಯಕರು ರಿಯಾಲಿಟಿ ಶೋ ನಲ್ಲಿ ಹಣ ಮಾಡುತ್ತೇವೆ, ಲೈವ್ ಕಾನ್ಸರ್ಟ್‌ಗಳಲ್ಲಿ ಹಣ ಮಾಡುತ್ತೇವೆ ಎಂದು ನಾವು ಹಾಡಿದ ಹಾಡಿಗೆ ಸಂಭಾವನೆ ಕೊಡುವುದಿಲ್ಲ' ಎಂದು ನೇಹಾ ಹೇಳಿದ್ದಾರೆ.

ಹಾಡು ಹಿಟ್ ಆದರೂ ಸಂಭಾವನೆ ಕೊಡಲ್ಲ: ಗಾಯಕಿ
'ಹಾಡು ಹಿಟ್ ಆದರೆ ಆ ಹಾಡನ್ನು ಕಾನ್ಸರ್ಟ್‌ಗಳಲ್ಲಿ ಹಾಡಿ ಹಣ ಮಾಡಿಕೊಳ್ಳುತ್ತಾರೆ, ರಿಯಾಲಿಟಿ ಶೋಗಳಿಂದಲೂ ಗಾಯಕರಿಗೆ ಹಣ ಬರುತ್ತೆ ಎಂಬುದು ನಿರ್ಮಾಪಕರ ನಿಲವು'' ಎಂದು ನೇಹಾ ಅಸಮಾಧಾನ ಹೊರಹಾಕಿದ್ದಾರೆ.

ಲೈವ್ ಶೋ ನಿಂದ ಹಣ ಬರುವುದು ನಿಜವೇ: ನೇಹಾ
ಲೈ ಶೋ ಗಳಿಂದ ಹಾಗೂ ರಿಯಾಲಿಟಿ ಶೋಗಳಿಂದ ಗಾಯಕರು ಹಣ ಮಾಡುವುದು ನಿಜವೆಂದು ಸಹ ನೇಹಾ ಕಕ್ಕರ್ ಒಪ್ಪಿಕೊಂಡಿದ್ದಾರೆ. ಆದರೆ ಹಾಡಿದ ಹಾಡಿಗೆ ಸಂಭಾವನೆ ನೀಡದೇ ಇರುವ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಸುದ್ದಿ ಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಇದನ್ನು ಹೇಳಿದ್ದಾರೆ.

ಸಾಕಷ್ಟು ಅಭಿಮಾನಿಗಳ ಹೊಂದಿರುವ ನೇಹಾ ಕಕ್ಕರ್
ನೇಹಾ ಕಕ್ಕರ್ ಅವರು ಹಾಡಿನ ರಿಯಾಲಿಟಿ ಶೋ ಒಂದರ ಜಡ್ಜ್ ಸಹ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಹ ಸಕ್ರಿಯರಾಗಿರುವ ಅವರು, ಇತ್ತೀಚೆಗಷ್ಟೆ ಕುಟುಂಬದೊಂದಿಗೆ ತಾವಿದ್ದ ಸಣ್ಣ ಬಾಡಿಗೆ ಮನೆ ಹಾಗೂ ಈಗ ಇರುವ ದೊಡ್ಡ ಮನೆಯ ಚಿತ್ರಗಳನ್ನು ಕೊಲ್ಯಾಜ್ ಮಾಡಿ ಹಂಚಿಕೊಂಡಿದ್ದರು. ಇದು ಭಾರಿ ವೈರಲ್ ಆಗಿತ್ತು.


Click it and Unblock the Notifications











