ಮುಗ್ಗರಿಸಿದ್ನಾ 'ಸಿಕಂದರ್'? ದಕ್ಷಿಣದ ನಿರ್ದೇಶಕನ ಜೊತೆ ಸಲ್ಲು ಮುಂದಿನ ಸಿನಿಮಾ

ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಆರ್ಭಟ ಈಗ ನಡೀತಿದೆ. ಭಾರೀ ನಿರೀಕ್ಷೆಯೊಂದಿಗೆ ತೆರೆಗೆ ಬಂದಿರುಬ 'ಸಿಕಂದರ್' ಸಿನಿಮಾ ನಿರಾಸೆ ಮೂಡಿಸಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೆಲ್ಲದರ ನಡುವೆ ಸಲ್ಲು ಮುಂದಿನ ಸಿನಿಮಾ ಬಗ್ಗೆ ಚರ್ಚೆ ಶುರುವಾಗಿದೆ.

ಎ. ಆರ್ ಮುರುಗದಾಸ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ಸಿಕಂದರ್' ಸಿನಿಮಾ ಈದ್ ಸಂಭ್ರಮದಲ್ಲಿ ತೆರೆಗೆ ಬಂದಿದೆ. ಚಿತ್ರದಲ್ಲಿ ಸಲ್ಲು ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಹಳೇ ಕಥೆಯನ್ನೇ ಹೊಸದಾಗಿ ಹೇಳಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಆದರೆ ಆ ಪ್ರಯತ್ನದಲ್ಲಿ ತಂಡ ವಿಫಲವಾಗಿದೆ. ಸಲ್ಮಾನ್ ಖಾನ್ ಸೋತಾಗಲೆಲ್ಲಾ ದಕ್ಷಿಣದ ನಿರ್ದೇಶಕರ ಮೊರೆ ಹೋಗುತ್ತಾರೆ. ಈ ಬಾರಿ ಕೂಡ ಅದೇ ಲೆಕ್ಕಾಚಾರದಲ್ಲಿದ್ದರು. ಆದರೂ ಯಾಕೋ ಗೆಲುವು ಕೈ ಹಿಡಿಯುವಂತೆ ಕಾಣ್ತಿಲ್ಲ.

Sikandar actor Salman Khan is in talks with Harish Shankar and Mythri for next film

ವಿಮರ್ಶಕರಿಂದಲೂ 'ಸಿಕಂದರ್' ಚಿತ್ರಕ್ಕೆ ನೆಗೆಟಿವ್ ಕಾಮೆಂಟ್ಸ್ ಬಂದಿದೆ. ಇದೆಲ್ಲದರ ಪರಿಣಾಮ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಡಲ್ಲಾಗಿದೆ. ಈದ್ ರಜೆ ಕೂಡ ಚಿತ್ರಕ್ಕೆ ಕೂಡಿ ಬರುವಂತೆ ಕಾಣ್ತಿಲ್ಲ. ಇನ್ನು ಸಿನಿಮಾ ಬಿಡುಗಡೆಗೂ ಮುನ್ನ ಪೈರಸಿ ಆಗಿತ್ತು. ಶನಿವಾರ ರಾತ್ರಿಯೇ ಆನ್‌ಲೈನ್‌ನಲ್ಲಿ ಸಿನಿಮಾ ಪ್ರಿಂಟ್‌ಗಳು ಹರಿದಾಡಲು ಆರಂಭವಾಗಿತ್ತು. ಹಾಗಾಗಿ ಸಹಜವಾಗಿಯೇ ಪ್ರೇಕ್ಷಕರ ಚಿತ್ರಮಂದಿರಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.

'ಸಿಕಂದರ್' ಸಿನಿಮಾ ರಿಲೀಸ್ ಬೆನ್ನಲ್ಲೇ ಸಲ್ಮಾನ್ ಖಾನ್ ನಟನೆಯ ಮುಂದಿನ ಸಿನಿಮಾ ಬಗ್ಗೆ ಚರ್ಚೆ ಶುರುವಾಗಿದೆ. ತೆಲುಗು ನಿರ್ದೇಶಕ ಹರೀಶ್ ಶಂಕರ್ ಸಾರಥ್ಯದ ಚಿತ್ರದಲ್ಲಿ ಸಲ್ಲು ನಟಿಸುತ್ತಾರೆ ಎನ್ನಲಾಗ್ತಿದೆ. 'ಪುಷ್ಪ' ರೀತಿಯ ಬ್ಲಾಕ್‌ಬಸ್ಟರ್ ಹಿಟ್‌ ಕೊಟ್ಟ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಚಿತ್ರವನ್ನು ನಿರ್ಮಾಣ ಮಾಡುತ್ತದೆ ಎನ್ನಲಾಗ್ತಿದೆ.

Sikandar actor Salman Khan is in talks with Harish Shankar and Mythri for next film

ಸಲ್ಮಾನ್ ಖಾನ್, ಹರೀಶ್ ಶಂಕರ್ ಹಾಗೂ ಮೈತ್ರಿ ಸಂಸ್ಥೆಯ ನವೀನ್ ಯಾರ್ನೇನಿ ಭೇಟಿ ಆಗಿರುವ ಫೋಟೊಗಳು ವೈರಲ್ ಆಗುತ್ತಿದೆ. ಹಾಗಾಗಿ ಈ ಕಾಂಬಿನೇಷನ್‌ನಲ್ಲೇ ಸಲ್ಲು ಮುಂದಿನ ಸಿನಿಮಾ ಬರುತ್ತದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಬರಬೇಕಿದೆ. 'ಗಬ್ಬರ್ ಸಿಂಗ್', 'ಡಿಜೆ' ರೀತಿಯ ಹಿಟ್ ಸಿನಿಮಾಗಳನ್ನು ಹರೀಶ್ ಶಂಕರ್ ಕಟ್ಟಿಕೊಟ್ಟಿದ್ದಾರೆ.

ಪವನ್ ಕಲ್ಯಾಣ್ ನಟನೆಯ 'ಉಸ್ತಾದ್ ಭಗತ್‌ ಸಿಂಗ್' ಚಿತ್ರಕ್ಕೂ ಹರೀಶ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪವನ್ ಆಂಧ್ರ ಡಿಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಸಿನಿಮಾ ಚಿತ್ರೀಕರಣದಲ್ಲಿ ಅಷ್ಟಾಗಿ ಭಾಗವಹಿಸುತ್ತಿಲ್ಲ. ಹಾಗಾಗಿ ಆ ಸಿನಿಮಾ ನಿಂತು ಹೋಗಿದೆ. ಇನ್ನು ಈ ಹಿಂದೆ ಪ್ರಭುದೇವ, ಪ್ರಿಯದರ್ಶನ್, ಮುರಳಿ ಮೋಹನ್, ಸಿದ್ದಿಕಿ ರೀತಿಯ ದಕ್ಷಿಣದ ನಿರ್ದೇಶಕ ಸಿನಿಮಾಗಳಲ್ಲಿ ಸಲ್ಲು ಈ ಹಿಂದೆ ನಟಿಸಿದ್ದರು.

ಎ. ಆರ್‌ ಮುರುಗದಾಸ್‌ಗಿಂತ ಮುನ್ನ ದಕ್ಷಿಣದ 10 ಮಂದಿ ನಿರ್ದೇಶಕರ ಜೊತೆ ಸಲ್ಲು ಕೆಲಸ ಮಾಡಿದ್ದರು. ಅದರಲ್ಲಿ 4 ಚಿತ್ರಗಳು ಗೆದ್ದಿದ್ದರೆ 6 ಚಿತ್ರಗಳು ಸೋತಿವೆ. ಸಲ್ಲು ಮಾತ್ರವಲ್ಲ ಶಾರುಖ್ ಖಾನ್ ಹಾಗೂ ಆಮೀರ್ ಖಾನ್ ಕೂಡ ದಕ್ಷಿಣದ ಫಿಲ್ಮ್ ಮೇಕರ್ಸ್ ಕಾಂಬಿನೇಷನ್‌ನಲ್ಲಿ ಸಿನಿಮಾ ಮಾಡಿದ್ದಾರೆ. ಇದೀಗ ಹರೀಶ್ ಶಂಕರ್ ಕೂಡ ಬಾಲಿವುಡ್ ಪ್ರವೇಶಿಸುತ್ತಿದ್ದಾರೆ.

ಮಾಸ್ ಮಸಾಲಾ ಸಿನಿಮಾಗಳನ್ನು ಕಟ್ಟಿಕೊಡುವಲ್ಲಿ ನಿರ್ದೇಶಕ ಹರೀಶ್ ಶಂಕರ್ ನಿಸ್ಸೀಮರು. ಸಲ್ಲು ಕೂಡ ಮಾಸ್ ಸಿನಿಮಾಗಳಲ್ಲೇ ಹೆಚ್ಚು ಅಬ್ಬರಿಸಿದ್ದಾರೆ. ಹಾಗಾಗಿ ಇವರಿಬ್ಬರ ಕಾಂಬಿನೇಷನ್ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿದೆ. ಇತ್ತೀಚೆಗೆ ಸಲ್ಲು ನಟಿಸಿದ ಸಿನಿಮಾಗಳು ಹೇಳಿಕೊಳ್ಳುವ ಮಟ್ಟದಲ್ಲಿ ಗೆಲ್ಲುತ್ತಿಲ್ಲ. 'ಸಿಕಂದರ್' ಸಿನಿಮಾ ಮೊದಲ ದಿನ ವಿಶ್ವದಾದ್ಯಂತ 40 ಕೋಟಿ ರೂ. ಗಳಿಸಿರುವ ಅಂದಾಜಿದೆ. ಹಾಗಾಗಿ ಬಾಲಿವುಡ್ ಭಾಯಿಜಾನ್ ಕ್ರೇಜ್ ಕಮ್ಮಿ ಆಗಿದೆ. ಒಂದೊಳ್ಳೆ ಬ್ರೇಕ್‌ಗಾಗಿ ಸಲ್ಲುಮಿಯಾ ಕಾಯುವಂತಾಗಿದೆ.

More from Filmibeat

English summary
After Sikander Salman Khan to join hands with south director for massive project
Read more about: salman khan tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X