Sikandar Box Office Day 2 ; ಈದ್ ಹಬ್ಬದಂದು ಹೇಗಿತ್ತು ಸಿಕಂದರ್ ಅಬ್ಬರ, ಎರಡನೇ ದಿನ ಚಿತ್ರ ಗಳಿಸಿದ್ದೆಷ್ಟು ?

ಸಲ್ಮಾನ್ ಖಾನ್ ಪಾಲಿಗೆ ಸಿಕಂದರ್ ತುಂಬಾನೇ ಮಹತ್ವದ್ದು. ಯಾಕೆಂದರೆ.. ಸಲ್ಮಾನ್ ಖಾನ್ ದೊಡ್ಡ ಮಟ್ಟದಲ್ಲಿ ಗೆದ್ದು ಬೀಗಿ ಅನೇಕ ವರ್ಷಗಳಾಗಿವೆ. ಇವರ ಹಿಂದಿನ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡಿಲ್ಲ. ಅಭಿಮಾನಿಗಳ ಹೃದಯವನ್ನು ಗೆದ್ದಿಲ್ಲ.

ನಿಜಾ. ಸಲ್ಮಾನ್ ಖಾನ್ ಅಭಿನಯದ ಹಿಂದಿನ ಚಿತ್ರ ಟೈಗರ್ 3 ₹285.52 ಕೋಟಿಯನ್ನು ಗಳಿಸಿತ್ತು. ಆದರೆ ಈ ಚಿತ್ರದ ಮೇಲೆ ಇನ್ನೂ ಹೆಚ್ಚಿನ ನಿರೀಕ್ಷೆ ಇತ್ತು. ಸಲ್ಮಾನ್ ಖಾನ್ ಸ್ಟಾರ್ ಪವರ್ ಮತ್ತು ಟೈಗರ್ ಫ್ರಾಂಚೈಸಿಯ ಖದರ್ ಲೆಕ್ಕಕ್ಕೆ ತೆಗೆದುಕೊಂಡರೆ ಈ ಗಳಿಕೆ ತುಂಬಾನೇ ಕಡಿಮೆ. ಇನ್ನು ಅದಕ್ಕೂ ಮೊದಲು ಬಂದ ಕಿಸಿ ಕಾ ಭಾಯಿ ಕಿಸಿ ಕೀ ಜಾನ್ ಗಳಿಸಿದ್ದು ಕೇವಲ ₹110.53 ಕೋಟಿ.

Sikandar box office collection on day 2 Salman Khan s film sees minimal growth on Eid

ಹೀಗಾಗಿ ಸಿಕಂದರ್ ಚಿತ್ರದ ಮೂಲಕ ಸಲ್ಮಾನ್ ಖಾನ್ ಮೈ ಕೊಡವಿ ಎದ್ದು ನಿಲ್ಲುತ್ತಾರೆ ಎಂದು ಎಲ್ಲರು ಅಂದುಕೊಂಡಿದ್ದರು. ಆದರೆ, ಗಲ್ಲಾಪೆಟ್ಟಿಗೆಯಲ್ಲಿ ಹೊಸ ಚರಿತ್ರೆ ಸೃಷ್ಟಿಸಬೇಕಿದ್ದ ಸಿಕಂದರ್ ತೆವಳುತ್ತಾ ಸಾಗಿದೆ. ಹೌದು, ಚಿತ್ರದ ಗಳಿಕೆಯ ಲೆಕ್ಕಾಚಾರವನ್ನು ಹಂಚಿಕೊಳ್ಳುವ ಸ್ಯಾಕ್ನಿಲ್ಕ್ ವೆಬ್ ಸೈಟ್ ಪ್ರಕಾರ ಸಿಕಂದರ್ ಭಾರತದ ಮಾರುಕಟ್ಟೆಯಲ್ಲಿ ಮೊದಲ ದಿನ ₹26 ಕೋಟಿಯನ್ನು ಮಾತ್ರ ಗಳಿಸುವಲ್ಲಿ ಯಶಸ್ವಿಯಾಯ್ತು.

ಇನ್ನು ನಿನ್ನೆ ಈದ್ ಹಬ್ಬ ಇದ್ದ ಕಾರಣ ಈ ನಂಬರ್ ಡಬಲ್ ಆಗುವ ನಿರೀಕ್ಷೆ ಅನೇಕರಲ್ಲಿತ್ತು. ಸಿಕಂದರ್ ಪುಟಿದೇಳುತ್ತಾನೆ ಎನ್ನುವ ವಿಶ್ವಾಸ ಇತ್ತು. ಆದರೆ ಸಿಕಂದರ್ ಎರಡನೇ ದಿನ ಹೆಚ್ಚುವರಿಯಾಗಿ ಕೇವಲ ₹3 ಕೋಟಿ ಹಣವನ್ನು ಮಾತ್ರ ಗಳಿಸಿದೆ. ಎರಡನೇ ದಿನದ ಆಟ ₹29 ಕೋಟಿಗೆ ಮುಕ್ತಾಯವಾಗಿದೆ ಎಂದು ಸ್ಯಾಕ್ನಿಲ್ ವರದಿ ಮಾಡಿದೆ. ಎರಡು ದಿನದ ಗಳಿಕೆಯನ್ನು ಸೇರಿಸಿದರೆ ಸಿಕಂದರ್ ಮೊದಲ ಎರಡು ದಿನದಲ್ಲಿ ₹55 ಕೋಟಿಯನ್ನು ಮಾತ್ರ ಗಳಿಸಿದೆ.

ಸ್ಯಾಕ್ನಿಲ್ಕ್ ವೆಬ್ ಸೈಟ್ ನಲ್ಲಿ ಉಲ್ಲೇಖಿಸಲಾದಂತೆ ಮೊದಲ ದಿನದಂತೆ ಎರಡನೇ ದಿನವೂ ಕೂಡ ಚೆನ್ನೈನ ಚಿತ್ರಮಂದಿರಗಳಲ್ಲಿ ಹೆಚ್ಚಿನ ಆಕ್ಯುಪೆನ್ಸಿ ಕಂಡು ಬಂದಿದೆ. ಮೊದಲ ದಿನ ಚೆನ್ನೈನಲ್ಲಿ 46.75% ಆಕ್ಯುಪೆನ್ಸಿ ಕಂಡು ಬಂದಿದ್ದರೆ, ನಿನ್ನೆ 45.75% ಆಕ್ಯುಪೆನ್ಸಿ ಚಿತ್ರಮಂದಿರದಲ್ಲಿ ಕಂಡು ಬಂದಿದೆ.

ಇನ್ನು ಮೊದಲ ದಿನಕ್ಕೆ ಹೋಲಿಸಿದರೆ ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ನಿನ್ನೆ ಈದ್ ಹಬ್ಬದ ಹಿನ್ನೆಲೆ ಸಿಕಂದರ್ ಚಿತ್ರವನ್ನು ಜನ ಹೆಚ್ಚು ನೋಡಿದ್ದಾರೆ. ಬೆಂಗಳೂರಿನಲ್ಲಿ ಮೊದಲ ದಿನ 28.50 % ಆಕ್ಯುಪೆನ್ಸಿ ಇತ್ತು. ಆದರೆ ನಿನ್ನೆ 34.75%ನಷ್ಟು ಚಿತ್ರಮಂದಿರಗಳು ಭರ್ತಿಯಾಗಿವೆ. ಹೈದರಾಬಾದ್‌ನಲ್ಲಿ ಮೊದಲ ದಿನ 23.25% ಆಕ್ಯುಪೆನ್ಸಿ ಕಂಡು ಬಂದಿದ್ದರೆ ನಿನ್ನೆ 33.50% ಆಕ್ಯುಪೆನ್ಸಿ ಕಂಡು ಬಂದಿದೆ.

ಸದ್ಯ ಎರಡು ದಿನದಲ್ಲಿ ₹55 ಕೋಟಿಯನ್ನು ಸಿಕಂದರ್ ಚಿತ್ರ ಗಳಿಸಿದ್ದು ಇಂದು ಚಿತ್ರದ ಗಳಿಕೆ ಕುಸಿಯುವ ಸಾಧ್ಯತೆ ಇದೆ.ಚಿತ್ರದ ಬಿಡುಗಡೆಗೆ ಮುನ್ನ ₹500 ಕೋಟಿ ಚಿತ್ರ ಗಳಿಸಿಯೇ ಗಳಿಸುತ್ತೆ ಎನ್ನುತ್ತಿದ್ದ ಬಾಲಿವುಡ್‌ ಪಂಡಿತರು ಈಗ ಹಾಕಿದ ಬಂಡವಾಳ ಕೂಡ ಮರಳಿ ಬರುವುದು ಕಷ್ಟ ಎನ್ನುತ್ತಿದ್ದಾರೆ. ಸಿಕಂದರ್ ಚಿತ್ರಮಂದಿರದಿಂದ ಎತ್ತಂಗಡಿಯಾಗುವದರೊಳಗೆ ಎಷ್ಟು ಹಣ ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

Disclaimer ; ಬಾಕ್ಸ್ ಆಫೀಸ್ ನ ಈ ಅಂಕಿ ಅಂಶಗಳನ್ನು ಸ್ಯಾಕ್ನಿಲ್ಕ್ ವೆಬ್ ಸೈಟ್ ಮತ್ತು ಬಾಲಿವುಡ್ ಹಂಗಾಮದಲ್ಲಿ ಉಲ್ಲೇಖವಾದ ಮಾಹಿತಿಗಳಿಂದ ಸಂಗ್ರಹಿಸಲಾಗಿದೆ. ಫಿಲ್ಮಿಬೀಟ್ ಕನ್ನಡ ಈ ಡೇಟಾದ ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X