ಸಲ್ಲು- ರಶ್ಮಿಕಾ ನಟನೆಯ 'ಸಿಕಂದರ್' ಆ ಸೂಪರ್ ಹಿಟ್ ಸಿನಿಮಾ ರೀಮೆಕಾ?

ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಸಿಕಂದರ್' ಸಿನಿಮಾ ಟೀಸರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ತಮಿಳು ನಿರ್ದೇಶನ ಎ. ಆರ್ ಮುರುಗದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅದ್ಧೂರಿ ಮೇಕಿಂಗ್ ಹಾಗೂ ಜಬರ್ದಸ್ತ್‌ ಆಕ್ಷನ್ ಸೀಕ್ವೆನ್ಸ್‌ನಿಂದ ಟೀಸರ್ ಗಮನ ಸೆಳೆಯುತ್ತಿದೆ. ಇದೆಲ್ಲದರ ನಡುವೆ ಇದು ರೀಮೆಕ್ ಸಿನಿಮಾ ಎನ್ನುವ ಚರ್ಚೆ ಶುರುವಾಗಿದೆ.

ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಒಂದೊಳ್ಳೆ ಬ್ರೇಕ್‌ಗಾಗಿ ಕಾಯುತ್ತಿದ್ದಾರೆ. ಬಿಟೌನ್ ಫಿಲ್ಮ್ ಮೇಕರ್ಸ್ ಬಿಟ್ಟು ಸೌತ್ ನಿರ್ದೇಶಕನ ಜೊತೆ ಕೈ ಜೋಡಿಸಿದ್ದಾರೆ. ಸದ್ಯ ಬಾಲಿವುಡ್‌ನಲ್ಲಿ ಕ್ರೇಜ್ ಸೃಷ್ಟಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಒಂದ್ಕಾಲದಲ್ಲಿ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದ ಮುರುಗದಾಸ್ ಕೂಡ ಈಗ ಒಳ್ಳೆ ಸಕ್ಸಸ್‌ಗಾಗಿ ಕಾಯುವಂತಾಗಿದೆ.

Sikandar teaser Is Salman khan starrer a remake of This Tamil film

'ಸಿಕಂದರ್' ಟೀಸರ್ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿಬರ್ತಿದೆ. ಚಿತ್ರದಲ್ಲಿ ಸಂಜಯ್ ರಾಜ್‌ಕೊಟ್ ಹಾಗೂ ಸಿಕಂದರ್ ಹೀಗೆ ಎರಡು ಪಾತ್ರಗಳಲ್ಲಿ ಸಲ್ಲು ನಟಿಸುತ್ತಿದ್ದಾರೆ ಎನ್ನಲಾಗ್ತಿದೆ. ಟೀಸರ್‌ನಲ್ಲಿ ಕೂಡ ಅದರ ಸುಳಿವು ಸಿಗುತ್ತಿದೆ. ಭರ್ಜರಿ ಡೈಲಾಗ್ಸ್ ಜೊತೆಗೆ ಸಲ್ಮಾನ್ ಖಾನ್ ಸ್ಟೈಲ್, ಸ್ವ್ಯಾಗ್ ಸೇರಿಸಿ ಸಿಕಂದರ್ ಪಾತ್ರ ಡಿಸೈನ್ ಮಾಡಲಾಗಿದೆ.

ಕಾಜಲ್ ಅಗರ್‌ವಾಲ್, ಸತ್ಯರಾಜ್, ಕನ್ನಡ ನಟ ಕಿಶೋರ್ ಸಹ 'ಸಿಕಂದರ್' ಚಿತ್ರದಲ್ಲಿ ನಟಿಸಿದ್ದಾರೆ. ತಿರು ಛಾಯಾಗ್ರಹಣ, ಪ್ರೀತಮ್ ಹಾಗೂ ಸಂತೋಷ್ ನಾರಾಯಣ್ ಸಂಗೀತ ಚಿತ್ರಕ್ಕಿದೆ. ಸಾಜಿದ್ ನಾಡಿಯಾವಾಲ ಚಿತ್ರಕ್ಕೆ ಹಣ ಹೂಡಿದ್ದಾರೆ. ಇನ್ನು ಟೀಸರ್ ನೋಡಿ ಇದು ತಮಿಳಿನ 'ಸರ್ಕಾರ್' ಚಿತ್ರದ ರೀಮೆಕ್ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

Sikandar teaser Is Salman khan starrer a remake of This Tamil film

7 ವರ್ಷಗಳ ಹಿಂದೆ ತಮಿಳಿನಲ್ಲಿ ಎ. ಆರ್ ಮುರುಗದಾಸ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದ 'ಸರ್ಕಾರ್' ಸಿನಿಮಾ ಹಿಟ್ ಆಗಿತ್ತು. ದಳಪತಿ ವಿಜಯ್, ಕೀರ್ತಿ ಸುರೇಶ್ ಚಿತ್ರದ ಲೀಡ್ ರೋಲ್‌ಗಳಲ್ಲಿ ನಟಿಸಿದ್ದರು. ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿ ಗೆದ್ದಿತ್ತು. ಅದೇ ಕಥೆಯನ್ನು ಕೊಂಚ ಬದಲಿಸಿ ಮುರುಗದಾಸ್ 'ಸಿಕಂದರ್' ಸಿನಿಮಾ ಮಾಡಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ.

ಎರಡೂ ಸಿನಿಮಾಗಳ ಕಥೆ ಒಂದೇ, ಅದೇ ಕಾರಣಕ್ಕೆ ಟೀಸರ್‌ನಲ್ಲಿ ಕಥೆಯನ್ನು ಸುಳಿವು ಕೊಟ್ಟಿಲ್ಲ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ 'ಸಿಕಂದರ್' ರೀಮೆಕ್ ಅಲ್ಲ, ಒರಿಜಿನಲ್ ಸಿನಿಮಾ. ಮುರುಗದಾಸ್ ಬಹಳ ಹಿಂದೆ ಬರೆದುಕೊಂಡಿದ್ದ ಕಥೆಯನ್ನು ಈಗ ಸಿನಿಮಾ ಮಾಡುತ್ತಿದ್ದಾರೆ ಎಂದು ಬಾಲಿವುಡ್ ಮಾಧ್ಯಮಗಳಲ್ಲಿ ವರದಿಯಾಗಿದೆ.

ಈದ್ ಸಂಭ್ರಮದಲ್ಲಿ 'ಸಿಕಂದರ್' ಸಿನಿಮಾ ತೆರೆಗೆ ಬರಲಿದೆ. ಈದ್ ವಿಶೇಷವಾಗಿ ತೆರೆಗೆ ಬರುವ ಸಲ್ಮಾನ್ ಖಾನ್ ಸಿನಿಮಾಗಳು ಬಾಕ್ಸಾಫೀಸ್ ಶೇಕ್ ಮಾಡಿವೆ. ಹಾಗಾಗಿ ಪ್ರತಿವರ್ಷ ಹಬ್ಬಕ್ಕೆ ಸಿನಿಮಾ ರಿಲೀಸ್ ಮಾಡಲು ಸಲ್ಲು ಪ್ರಯತ್ನಿಸುತ್ತಾರೆ. ಮಾರ್ಚ್ 28ಕ್ಕೆ ಸಿನಿಮಾ ತೆರೆಗೆ ಬರಲಿದೆ.

ಮುಂಬೈ, ಹೈದರಾಬಾದ್ ಸೇರಿದಂತೆ ಹಲವು ಭಾಗಗಳಲ್ಲಿ 'ಸಿಕಂದರ್' ಸಿನಿಮಾ ಚಿತ್ರೀಕರಣ ನಡೆದಿದೆ. 5000 ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್ ಮಾಡುವ ಮಾಡುವ ಪ್ರಯತ್ನ ನಡೀತಿದೆ. ಬಾಲಿವುಡ್‌ನಲ್ಲಿ ದೊಡ್ಡ ಸಿನಿಮಾಗಳ ಅಭಾವ ಎದ್ದು ಕಾಣುತ್ತಿದೆ. ಸಲ್ಲು ಸಿನಿಮಾ ಆ ಬರವನ್ನು ನೀಗಿಸಲು ಶೀಘ್ರದಲ್ಲೇ ತೆರೆಗೆ ಬರಲಿದೆ.

More from Filmibeat

English summary
Is Sikandar, featuring Salman Khan and directed by AR Murugadoss, inspired by this successful film?;
Read more about: salman khan rashmika mandanna
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X