Sikandar Box Office Collection Day 1 ; ಹೊಸ ಹುಡುಗನ ಚಿತ್ರವನ್ನು ಹಿಂದಿಕ್ಕುವಲ್ಲಿ ವಿಫಲವಾದ ಸಲ್ಮಾನ್ ಖಾನ್..!

ಸಲ್ಮಾನ್ ಖಾನ್ ಸಿನಿಮಾ ಅಂದರೆ ಮೊದಲು ಹಬ್ಬದ ವಾತಾವರಣ ನಿರ್ಮಾಣವಾಗುತ್ತಿತ್ತು. ಅದರಲ್ಲಿಯೂ ಈದ್ ಹಬ್ಬಕ್ಕೆ ಚಿತ್ರ ಬಂದರಂತೂ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟುತ್ತಿತ್ತು. ಬಾಕ್ಸಾಫೀಸ್‌ನಲ್ಲಿ ಕೂಡ ಹಣದ ಹೊಳೆ ಹರಿಯುತ್ತಿತ್ತು.

ಆಗೆಲ್ಲ ಸಲ್ಮಾನ್ ಖಾನ್ ಸ್ಟಾರ್ ಪವರ್‌ಗೆ ಮೊದಲ ದಿನ ಬಿಡುಗಡೆಯಾದ ಚಿತ್ರ ಕನಿಷ್ಠ ಪಕ್ಷ 35 ಕೋಟಿಯನ್ನಾದರೂ ಗಳಿಸುತ್ತಿತ್ತು. 2019ರಲ್ಲಿ ಬಿಡುಗಡೆಯಾದ ಭಾರತ್ ಫಸ್ಟ್ ಡೇ ₹ 42.30 ಕೋಟಿಯನ್ನು ಗಳಿಸಿತ್ತು. ಈ ಮೂಲಕ ಇತಿಹಾಸವನ್ನು ಸೃಷ್ಟಿಸಿತ್ತು. ಇನ್ನು ಇದಕ್ಕೂ ಮುನ್ನ ತೆರೆಗೆ ಬಂದ ಸಲ್ಮಾನ್ ಖಾನ್ ವೃತ್ತಿ ಬದುಕಿನ ಅತ್ಯಂತ ಕಳಪೆ ಚಿತ್ರ ರೇಸ್ 3 ಮೊದಲ ದಿನ ₹38.15 ಕೋಟಿಯನ್ನು ದೋಚಿತ್ತು. ಆದರೆ ಈಗ ಸಲ್ಮಾನ್ ಖಾನ್‌ಗೆ ಮೊದಲ ದಿನ ₹30 ಕೋಟಿಯ ಗಡಿಯನ್ನು ತಲುಪಲು ಕೂಡ ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣಗಳು ಹಲವು ಇರಬಹುದಾದರೂ ಸದ್ಯ ಸಿಕಂದರ್ ಬಾಲಿವುಡ್‌ಗೆ ನಿರಾಸೆ ಮಾಡಿದೆ.

Sikandar s Day 1 box office Salman Khan s starrer debuts with Rs 26 crore but falls short of Chhaava

ಹೌದು, ಚಿತ್ರದ ಗಳಿಕೆಯ ಮೇಲೆ ಹದ್ದಿನ ಕಣ್ಣಿಡುವ ಸ್ಯಾಕ್ನಿಲ್ಕ್ ವೆಬ್ ಸೈಟ್ ಪ್ರಕಾರ ಸಿಕಂದರ್ ಭಾರತದ ಮಾರುಕಟ್ಟೆಯಲ್ಲಿ ಮೊದಲ ದಿನ ₹26 ಕೋಟಿಯನ್ನು ಮಾತ್ರ ಗಳಿಸಿದೆ. ಇನ್ನು, ಸಿಕಂದರ್ ನೋಡಲು ಮುಂಬೈನಲ್ಲಿ ಹೆಚ್ಚಿನ ಉತ್ಸಾಹ ಕಂಡು ಬಂದಿಲ್ಲ. ಬದಲಿಗೆ ಚೆನ್ನೈನಲ್ಲಿ ಈ ಚಿತ್ರಕ್ಕೆ ಅದ್ಧೂರಿ ಸ್ವಾಗತ ಸಿಕ್ಕಿದೆ.

ಸ್ಯಾಕ್ನಿಲ್ಕ್ ವೆಬ್ ಸೈಟ್ ನಲ್ಲಿ ಉಲ್ಲೇಖಿಸಲಾದಂತೆ ನಿನ್ನೆ ಚೆನ್ನೈನ ಚಿತ್ರಮಂದಿರಗಳಲ್ಲಿ 46.75% ಆಕ್ಯುಪೆನ್ಸಿ ಕಂಡು ಬಂದಿದೆ. ಅದೇ ಮುಂಬೈನಲ್ಲಿ 21.50% ದೆಹಲಿಯಲ್ಲಿ 21.75% ಇದೆ. ಬೆಂಗಳೂರಿನಲ್ಲಿ 28.50% ಮತ್ತು ಹೈದರಾಬಾದ್‌ನಲ್ಲಿ 23.25% ಮಾತ್ರ ಚಿತ್ರಮಂದಿರಗಳು ತುಂಬಿವೆ.

ಇನ್ನು, ಬಾಲಿವುಡ್‌ನಲ್ಲಿ ಬಾಕ್ಸಾಫೀಸ್ ಸುಲ್ತಾನ್ ಎಂದೇ ಬಿರುದಾಂಕಿತರಾದವರು ಸಲ್ಮಾನ್ ಖಾನ್. ವಿಪರ್ಯಾಸ ಅಂದರೆ ವಿಕ್ಕಿ ಕೌಶಲ್ ಅವರನ್ನು ಕೂಡ ಬಾಕ್ಸಾಫೀಸ್‌ನಲ್ಲಿ ಹಿಂದಿಕ್ಕುವಲ್ಲಿ ಸಲ್ಮಾನ್ ಖಾನ್ ವಿಫಲರಾಗಿದ್ದಾರೆ. ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಛಾವಾ ಚಿತ್ರದ ಮೊದಲ ದಿನದ ಗಳಿಕೆ ₹31 ಕೋಟಿಯ ರೆಕಾರ್ಡ್ ಬ್ರೇಕ್ ಮಾಡುವಲ್ಲಿ ಸೋತಿದ್ದಾರೆ.

ಅಂದ್ಹಾಗೇ ಸಲ್ಮಾನ್ ಖಾನ್ ಅಭಿನಯದ ಯಾವ ಚಿತ್ರ ಕೂಡ ಭಾರತದಲ್ಲಿ ₹500 ಕೋಟಿಯನ್ನು ಗಳಿಸಿಲ್ಲ. ಟೈಗರ್ ಜಿಂದಾ ಹೈ ಚಿತ್ರ ಮಾತ್ರ ₹ 339.16 ಕೋಟಿಯನ್ನು ಗಳಿಸಿದೆ. ಈ ಚಿತ್ರದ ನಂತರ ಭಜರಂಗಿ ಭಾಯಿಜಾನ್ ಚಿತ್ರ ₹320 ಕೋಟಿಯನ್ನು ಗಳಿಸುವ ಮೂಲಕ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಸಿಕಂದರ್ ಭಾರತದಲ್ಲಿ ₹500 ಕೋಟಿಯನ್ನು ಗಳಿಸುವ ವಿಶ್ವಾಸ ಸಲ್ಮಾನ್ ಖಾನ್ ಅಭಿಮಾನಿಗಳಲ್ಲಿತ್ತು. ಬಾಲಿವುಡ್‌ ಪಂಡಿತರಿಗೆ ಕೂಡ ಇತ್ತು.

ಆದರೆ ಮೊದಲ ದಿನ ನಿರಾಶಾದಾಯಕ ಪ್ರದರ್ಶನವನ್ನು ಸಿಕಂದರ್ ನೀಡಿದೆ. ಬಿಡುಗಡೆಗೆ ಮುನ್ನವೇ ಚಿತ್ರದ HD ಪ್ರಿಂಟ್ ಆನ್‌ಲೈನ್‌ನಲ್ಲಿ ಲೀಕ್ ಆಗಿದ್ದು ಕೂಡ ಚಿತ್ರದ ಗಳಿಕೆ ಕುಸಿಯಲು ಕಾರಣವಾಗಿದ್ದರು ಆಗಿರಬಹುದು. ಇನ್ನುಳಿದಂತೆ ಈದ್ ಹಬ್ಬದ ಪ್ರಯುಕ್ತ ಈ ಹಿಂದೆ ತೆರೆಗೆ ಬಂದ ಸಲ್ಮಾನ್ ಖಾನ್ ಅಭಿನಯದ 07 ಚಿತ್ರಗಳ ಮೊದಲ ದಿನದ ಗಳಿಕೆ ಈ ಕೆಳಗಿನಂತೆ ಇದೆ.

ಸಲ್ಮಾನ್ ಖಾನ್ ಮತ್ತು ಈದ್

ಭಾರತ್ - ₹ 42.30 ಕೋಟಿ

ರೇಸ್ 3 - ₹38.15 ಕೋಟಿ

ಸುಲ್ತಾನ್ - ₹36.54 ಕೋಟಿ

ಏಕ್ ಥಾ ಟೈಗರ್ - ₹32.93 ಕೋಟಿ

ಭಜರಂಗಿ ಭಾಯಿಜಾನ್ - ₹27.25 ಕೋಟಿ

ಸದ್ಯ ಮೊದಲ ದಿನ ಸಿಕಂದರ್ ₹26 ಕೋಟಿ ಹಣವನ್ನು ಗಳಿಸಿದೆ. ಇಂದು ಈದ್ ಹಬ್ಬದ ಹಿನ್ನೆಲೆ ಚಿತ್ರದ ಗಳಿಕೆ ಹೆಚ್ಚಾಗುವ ನಿರೀಕ್ಷೆ ಇದೆ. ಇವತ್ತಿನ ಗಳಿಕೆಯ ಮೇಲೆ ಸಿಕಂದರ್ ಚಿತ್ರದ ಮುಂದಿನ ಭವಿಷ್ಯವೂ ನಿಂತಿದೆ.

Disclaimer ; ಬಾಕ್ಸ್ ಆಫೀಸ್ ನ ಈ ಅಂಕಿ ಅಂಶಗಳನ್ನು ಸ್ಯಾಕ್ನಿಲ್ಕ್ ವೆಬ್ ಸೈಟ್ ಮತ್ತು ಟೈಮ್ಸ್ ಆಫ್ ಇಂಡಿಯಾದ ವರದಿಯಿಂದ ಸಂಗ್ರಹಿಸಲಾಗಿದೆ. ಫಿಲ್ಮಿಬೀಟ್ ಕನ್ನಡ ಈ ಡೇಟಾದ ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X