»   » 'ಪದ್ಮಾವತಿ' ವಿವಾದ ಬಗೆಹರಿಸಲಿದ್ದಾರೆ ಈ 'ಮಾಸ್ಟರ್ ಮೈಂಡ್' ಲೇಡಿ.!

'ಪದ್ಮಾವತಿ' ವಿವಾದ ಬಗೆಹರಿಸಲಿದ್ದಾರೆ ಈ 'ಮಾಸ್ಟರ್ ಮೈಂಡ್' ಲೇಡಿ.!

Posted By:
Subscribe to Filmibeat Kannada

ಸಂಜಯ್ ಲೀಲಾ ಬನ್ಸಾಲಿ ಚಿತ್ರದ ವಿವಾದವನ್ನ ಬಗೆಹರಿಸಲು ಯಾರಿಂದಲು ಸಾಧ್ಯವಾಗುತ್ತಿಲ್ಲ. ದಿನೇ ದಿನೇ ಈ ಬಿಸಿ ಹೆಚ್ಚಾಗುತ್ತಿದೆ. ಒಂದೆಡೆ ರಜಪೂತರು ತೀವ್ರ ಪ್ರತಿಭಟನೆ ಮಾಡುತ್ತಿದ್ದರೇ, ಮತ್ತೊಂದೆರಡೆ ರಾಜಕೀಯ ಪಕ್ಷಗಳು ಆರೋಪ-ಪ್ರತ್ಯಾರೋಪಕ್ಕೆ ಸೀಮಿತವಾಗಿದೆ.

ಇನ್ನೊಂದೆಡೆ ಚಿತ್ರತಂಡ ಪೊಲೀಸ್ ಭದ್ರತೆ ಪಡೆದುಕೊಂಡು ದಿಕ್ಕು ತೋಚದಂತಾಗಿದೆ. ಹೀಗಿರುವಾಗ, 'ಪದ್ಮಾವತಿ' ಚಿತ್ರದ ವಿವಾದವನ್ನ ಬಗೆಹರಿಸಲು ಬಾಲಿವುಡ್ ನಟಿ ಕಮ್ ನಿರೂಪಕಿಯೊಬ್ಬರು ಮುಂದಾಗಿದ್ದಾರೆ.

'ಲಂಡನ್'ನಲ್ಲೂ ಎದುರಾಯ್ತು 'ಪದ್ಮಾವತಿ' ಬಿಡುಗಡೆಗೆ ವಿಘ್ನ

ಈಕೆಯ ಮಧ್ಯಸ್ಥಿಕೆಯಲ್ಲಿ ಈ ವಿವಾದ ಅಂತ್ಯವಾಗಲಿದೆ ಎಂಬ ಆತ್ಮ ವಿಶ್ವಾಸವನ್ನ ಬಾಲಿವುಡ್ ಮಂದಿ ವ್ಯಕ್ತಪಡಿಸುತ್ತಿದ್ದಾರೆ. ಹಾಗಿದ್ರೆ, ಈಕೆ ಯಾರು? ಹೇಗೆ ವಿವಾದ ಬಗೆಹರಿಸಲಿದ್ದಾರೆ? ಎಂಬ ಪೂರ್ತಿ ವಿವರ ಮುಂದಿದೆ. ಓದಿ....

'ಪದ್ಮಾವತಿ' ವಿವಾದಕ್ಕೆ ನಟಿ ಸಿಮಿ ಗೇರವಾಲ್ ಎಂಟ್ರಿ

ಬಾಲಿವುಡ್ ನಟಿ ಕಮ್ ನಿರೂಪಕಿ ಸಿಮಿ ಗೇರವಾಲ್ ಜೈಪುರ ಮಹಾರಾಣಿ ಪದ್ಮಿನಿ ಮತ್ತು ಸಂಜಯ್ ಲೀಲಾ ಅವರ ಮಧ್ಯೆ ಸಂಧಾನದ ಮಾತುಕತೆ ನಡೆಸಲು ಮುಂದಾಗಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ರಾಣಿ ಪದ್ಮಿನಿ ಅವರ ಜೊತೆ ಈಗಾಗಲೇ ಮಾತನಾಡಿದ್ದಾರೆ ಎನ್ನಲಾಗಿದೆ.

'ಪದ್ಮಾವತಿ' ಎಕ್ಸ್ ಕ್ಲೂಸಿವ್ ವಿಮರ್ಶೆ: ವಿವಾದದ ಮಧ್ಯೆ ಸಿನಿಮಾ ನೋಡಿದ ಪತ್ರಕರ್ತ

ಮಹಾರಾಣಿ ಪದ್ಮಿನಿ ವಿರೋಧ ಚಿತ್ರಕ್ಕಲ್ಲ.!

ಅಂದ್ಹಾಗೆ, ಜೈಪುರ ಮಹಾರಾಣಿ ಪದ್ಮಿನಿ ಅವರ ವಿರೋಧ ಚಿತ್ರಕ್ಕಲ್ಲ. ಗೂಮರ್ ಹಾಡಿನಲ್ಲಿ ಪದ್ಮಾವತಿ ನೃತ್ಯ ಮಾಡಿರುವುದನ್ನ ಆಕ್ಷೇಪಿಸಿದ್ದಾರೆ. ಯಾಕಂದ್ರೆ, ಪದ್ಮಾವತಿ ನೃತ್ಯ ಮಾಡುತ್ತಿರಲಿಲ್ಲ. ಅದು ಸಾರ್ವಜನಿಕವಾಗಿ ನೃತ್ಯ ಮಾಡುತ್ತಿರಲಿಲ್ಲವಂತೆ. ಅದನ್ನ ಬಿಟ್ಟರೇ ಬೇರೆ ಏನೂ ಆಕ್ಷೇಪವಿಲ್ಲ ಎಂಬ ಮಾತು ಹೇಳಿದ್ದಾರೆ ಎನ್ನಲಾಗಿದೆ.

ಬಾಲಿವುಡ್ 'ಪದ್ಮಾವತಿ' ಬಗ್ಗೆ ಸ್ಯಾಂಡಲ್ ವುಡ್ 'ಪದ್ಮಾವತಿ' ಹೇಳಿದ್ದೇನು?

ಸಂಜಯ್ ಲೀಲಾ ಮತ್ತು ರಾಣಿ ಪದ್ಮಿನಿ ಸಭೆ

ಸಂಜಯ್ ಲೀಲಾ ಬನ್ಸಾಲಿ ಅವರ ಜೊತೆ ಮಹಾರಾಣಿ ಪದ್ಮಿನಿ ಅವರ ನಡುವೆ ನೇರ ಮಾತುಕತೆ ಏರ್ಪಡಿಸುವುದು ಸಿಮಿ ಅವರ ಉದ್ದೇಶ. ಪದ್ಮಿನಿ ಅವರಿಗೆ ಪ್ರತ್ಯೇಕವಾಗಿ ಸಿನಿಮಾ ತೋರಿಸಲು ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ.

ಉಗ್ರರೂಪ ತಾಳಿದ 'ಪದ್ಮಾವತಿ' ಚಿತ್ರದ ವಿರುದ್ಧ ಪ್ರತಿಭಟನೆ

ಕರಣಿ ಸೇನಾ ಜೊತೆ ಸಂಧಾನ

ಅದೇ ರೀತಿ ಪದ್ಮಾವತಿ ಚಿತ್ರದ ವಿರುದ್ಧ ನಿಷೇಧಕ್ಕೆ ಒತ್ತಾಯಿಸಿ ಹೋರಾಟ ನಡೆಸುತ್ತಿರುವ ಕರಣಿ ಸೇನಾ ಜೊತೆಗೆ ಶಾಂತಿ ಮಾತುಕತೆ ನಡೆಸಲು ಸಿಮಿ ಗೇರವಾಲ್ ಮುಂದಾಗಿದ್ದಾರೆ. ಒಂದು ವೇಳೆ ಮಹಾರಾಣಿ ಪದ್ಮಿನಿ ಒಪ್ಪಿಕೊಂಡರೇ ರಜಪೂತರ ಹೋರಾಟ ತಾನಾಗಿಯೇ ತಣ್ಣಗಾಗುತ್ತೆ ಎಂಬ ಲೆಕ್ಕಾಚಾರ ಸಿಮಿಯದ್ದು.

ಬಗೆಹರಿಯುವ ನಿರೀಕ್ಷೆ ಇದೆ

ಸಂಜಯ್ ಲೀಲಾ ಬನ್ಸಾಲಿ ಅವರ ಚಿತ್ರಗಳ ಅಭಿಮಾನಿಯಾಗಿರುವ ಸಿಮಿ ಗೇರವಾಲ್, ಮತ್ತೊಂದೆಡೆ ಮಹಾರಾಣಿ ಪದ್ಮಿನಿ ಅವರಿಗೂ ಆತ್ಮೀಯರಂತೆ. ಹೀಗಾಗಿ, ಈ ಸಂಧಾನ ಯಶಸ್ವಿಯಾಗಬಹುದು ಎಂಬ ನಿರೀಕ್ಷೆ ಬಾಲಿವುಡ್ ವಲಯದಲ್ಲಿದೆ.

ಲಂಡನ್ ಸೆನ್ಸಾರ್ ಮಂಡಳಿಯಿಂದ 'ಪದ್ಮಾವತಿ'ಗೆ ಕ್ಲೀನ್ ಚಿಟ್

English summary
Actress and TV host Simi Garewal steps in to mediate for Padmavati with Maharani Padmini Devi of Jaipur. ನಟಿ ಹಾಗೂ ನಿರೂಪಕಿ ಸಿಮಿ ಗರೇವಾಲ್ ಪದ್ಮಾವತಿ ವಿವಾದಕ್ಕೆ ಮಧ್ಯಸ್ಥಿಕೆ ವಹಿಸಲು ಮುಂದಾಗಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada