»   » ಬೆಂಗಳೂರಿಗೆ ಬಂದಿದ್ದರು ಬಾಲಿವುಡ್ ಕ್ವೀನ್ ಕಂಗನಾ ರಣಾವತ್

ಬೆಂಗಳೂರಿಗೆ ಬಂದಿದ್ದರು ಬಾಲಿವುಡ್ ಕ್ವೀನ್ ಕಂಗನಾ ರಣಾವತ್

Posted By:
Subscribe to Filmibeat Kannada
ಬೆಂಗಳೂರಿಗೆ ಬಂದಿದ್ದರು ಬಾಲಿವುಡ್ ಕ್ವೀನ್ ಕಂಗನಾ ರಣಾವತ್ | Oneindia Kannada

ಬಾಲಿವುಡ್ ನಟಿ ಕಂಗನಾ ರಣಾವತ್ ನಿನ್ನೆ( ಸಪ್ಟೆಂಬರ್ 12) ಬೆಂಗಳೂರಿಗೆ ಆಗಮಿಸಿದ್ದರು. ಅವರ 'ಸಿಮ್ರನ್' ಸಿನಿಮಾ ಇದೇ ವಾರ ತೆರೆಗೆ ಬರಲಿದ್ದು, ಈ ಚಿತ್ರದ ಪ್ರಚಾರಕ್ಕಾಗಿ ಕಂಗನಾ ಗಾರ್ಡನ್ ಸಿಟಿಗೆ ಬೇಟಿ ನೀಡಿದ್ದರು. ಖಾಸಗಿ ಹೋಟೆಲ್ ವೊಂದರಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಿನಿಮಾದ ಬಗ್ಗೆ ಕಂಗನಾ ಮಾತನಾಡಿದ್ದರು.

ಬಾಲಿವುಡ್ ಅಂಗಳದಲ್ಲಿ 'ಸಿಮ್ರನ್' ಸಿನಿಮಾ ಈಗಾಗಲೇ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ. ಸಿನಿಮಾದ ಟ್ರೇಲರ್ ಸೂಪರ್ ಹಿಟ್ ಆಗಿದೆ. 'ಫ್ಯಾಷನ್', 'ಕ್ವೀನ್', 'ತನು ವೆಡ್ಸ್ ಮನು ರಿಟನ್ಸ್' ರೀತಿಯ ಸಿನಿಮಾಗಳನ್ನು ಮಾಡಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಕಂಗನಾ ಈಗ ಮತ್ತೊಮ್ಮೆ ಒಂದು ವಿಶೇಷ ಪಾತ್ರದ ಮೂಲಕ ಬಂದಿದ್ದಾರೆ.

'Simran movie' is all set to release on september 15th.

ಪ್ರಫುಲ್ ಎಂಬ ಹುಡುಗಿಯ ಪಾತ್ರವನ್ನು ಮಾಡಿರುವ ಕಂಗನಾ ತಮ್ಮ ಕ್ಯೂಟ್ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ. ಕಂಗನಾಳ ಫನ್ನಿ ನಟನೆಯೇ ಈ ಚಿತ್ರದ ಜೀವಾಳವಾಗಿದೆ. ಹನ್ಸಲ್ ಮೆಹ್ತಾ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇದೊಂದು ನಾಯಕಿ ಪ್ರಧಾನವಾದ ಚಿತ್ರವಾಗಿದೆ. 'ಸಿಮ್ರನ್' ಚಿತ್ರ ಇದೇ ಶುಕ್ರವಾರ (ಸಪ್ಟೆಂಬರ್ 15) ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

English summary
Bollywood actress Kangana Ranaut starrer 'Simran movie' is all set to release on september 15th. The movie is directed by Hansal Mehta.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada